Breaking News

ಅಪರಾಧ

Featured Video Play Icon

ಹಾಡು ಹಾಗಲೇ ಬ್ಯಾಂಕ್ ದರೋಡೆ ಎಸ್ಕೇಪ್ : ಕಳ್ಳನ ಬಂಧನ

ಹುಬ್ಬಳ್ಳಿ :ವಾಣಿಜ್ಯನಗರಿಯಲ್ಲಿ ಹಾಡುಹಗಲೇ ಬ್ಯಾಂಕ್ ರಾಬರಿ ಮಾಡಿಕೊಂಡು ಪರಾರಿಯಾಗುತ್ತಿದ್ದ ಆರೋಪಿಯನ್ನ ಪೊಲೀಸರು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಮೂಲತಃ ವಿಜಯಪುರದ.ಪ್ರವೀಣಕುಮಾರ ಅಪ್ಪಾಸಾಹೇಬ್ ಪಾಟೀಲ ಎಂಬಾತನೇ ಸಿಕ್ಕಿ ಬಿದ್ದ ಕಳ್ಳನಾಗಿದ್ದು. ಮೈಸೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರವೀಣ, ಕಳೆದ ಎರಡು ದಿನದ ಹಿಂದೆ ಹುಬ್ಬಳ್ಳಿಗೆ ಬಂದು ಭಾರತಿ ಲಾಡ್ಜ್ ನಲ್ಲಿ ತಂಗಿದ್ದ.ಇಂದು ಕೊಪ್ಪಿಕರ ರಸ್ತೆಯಲ್ಲಿರುವ ಎಸ್ ಬಿಐ ಬ್ಯಾಂಕಿನೊಳಗೊಗಿ ಕ್ಯಾಷಿಯರ್ ಗೆ ಚಾಕು ತೋರಿಸಿ, ಬ್ಯಾಗಿನಲ್ಲಿ ಸುಮಾರು 7ಲಕ್ಷಕ್ಕೂ ಹೆಚ್ಚು ಹಣವನ್ನ ಹಾಕಿಸಿಕೊಂಡಿದ್ದಾನೆ. …

Read More »

ಹಾಡಹಗಲೇ ಮನೆ ಕೀಲಿ ಮುರಿದು ಕಳ್ಳತನ-ಆದರ್ಶ ಲೇಔಟ್‌ನಲ್ಲಿ ಘಟನೆ

ಹುಬ್ಬಳ್ಳಿ: ಹಾಡಹಗಲೇ ಕೇಶ್ವಾಪುರ ಆದರ್ಶ ಲೇಔಟ್‌ನ ಮನೆಯೊಂದರ ಕೀಲಿ ಮುಂದು 45 ಗ್ರಾಂ ಚಿನ್ನಾಭರಣ ಹಾಗೂ 6,400 ರೂ. ನಗದು ಕಳವು ಮಾಡಿರುವ ಘಟನೆ ಇತ್ತೀಚೆಗೆ ನಡೆದಿದೆ. ರೈಲ್ವೆ ಉದ್ಯೋಗಿ ಪುಷ್ಪಲತಾ ಮೋಚರಲ ಡಿ .28 ರಂದು ಮನೆಗೆ ಕೀಲಿ ಹಾಕಿಕೊಂಡು ಕೆಲಸಕ್ಕೆ ಹೋಗಿದ್ದಾಗ ಕಳವಾಗಿದೆ . ಕುರಿತು ಕೇಶ್ವಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Read More »

ಆಟೋ – ಕಾರ್‌ ನಡುವಿನ ಅಪಘಾತದಲ್ಲಿ ಮಹಿಳೆ, ಮಗು ಸಾವು

ಚಿತ್ರದುರ್ಗ: ಆಟೋ ಹಾಗೂ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದ್ದರ ಪರಿಣಾಮ ಮಗು ಹಾಗೂ ಮಹಿಳೆ ಸಾವನ್ನಪ್ಪಿ, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ದಾರುಣ ಘಟನೆ ಸಂಭವಿಸಿದೆ. ಈ ಘಟನೆ ಹೊಸದುರ್ಗ ತಾಲೂಕಿನ ನೀರಗುಂದ ಪೀಲಾಪುರ ಗೇಟ್ ಹತ್ತಿರ ನಡೆದಿದ್ದು, ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಾರು ತರೀಕೆರೆ ತಾಲೂಕಿನ ತೀರು ಮುರುಡಿ ದೇವಸ್ಥಾನಕ್ಕೆ ತೆರಳಿ, ಜವಳ ಕಾರ್ಯಕ್ರಮ ಮುಗಿಸಿಕೊಂಡು ಮರಳಿ ಬರುತ್ತಿತ್ತು. ಈ ಸಂದರ್ಭದಲ್ಲಿಯೇ ಆಟೋಗೆ ಡಿಕ್ಕಿ ಹೊಡೆದಿದೆ. …

Read More »

ಕುಡಿದ ಮತ್ತಿನಲ್ಲಿ ಓರ್ವ ವ್ಯಕ್ತಿಯ ಬರ್ಬರ ಹತ್ಯೆ..!

ವಿಜಯಪುರ : ವ್ಯಕ್ತಿಯೊರ್ವನನ್ನ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿ ನಡೆದಿದೆ .. ಇಂಡಿ ಪಟ್ಟಣದ ವಿಜಯಪುರ ರಸ್ತೆಯ ಅಮೃತ ಡಾಭಾ ಹತ್ತಿರ ಸೊಲ್ಲಾಪುರ ನಿವಾಸಿ ನಿತಿನ್ ಸಂತೋಷ ಮಾಷಾಳಕರ ಕೊಲೆಯಾದ ದುರ್ದೈವಿ , ನಿತೀನ್ ಇಂಡಿಯ ಮಾವನ ಮನೆಗೆ ಬಂದಿದ್ದ ಎನ್ನಲಾಗಿದ್ದು ನಿನ್ನೆ ತಡರಾತ್ರಿ ಕುಡಿದ ಮತ್ತಿನಲ್ಲಿ ಕಿರಿಕ್ ಮಾಡಿದ್ದು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ , ಇನ್ನೂ ಮಾತಿನಲ್ಲಿ …

Read More »
Featured Video Play Icon

ನೇಣಿಗೆ ಕೊರಳೊಡ್ಡಿದ ಹುಬ್ಬಳ್ಳಿಯ ವ್ಯಾಪಾರಸ್ಥ: ಸಾಲವೇ ಶೂಲವಾಯಿತೇ…?

Read More »

ನೈಟ್ ಕಫ್ರ್ಯೂ ಇದ್ದರು ಬೈಕ್ ರೈಡಿಂಗ್: ಸವಾರ ದುರ್ಮರಣ

ಬೆಂಗಳೂರು:– ಸ್ನೇಹಿತರಿಬ್ಬರು ಬೈಕ್‍ನಲ್ಲಿ ಹೋಗುತ್ತಿದ್ದಾಗ ಅತಿವೇಗದಿಂದಾಗಿ ನಿಯಂತ್ರಣ ತಪ್ಪಿ ಫ್ಲೈಓವರ್ ಬ್ರಿಡ್ಜ್‍ಗೆ ಡಿಕ್ಕಿ ಹೊಡೆದ ಪರಿಣಾಮ ಒಬ್ಬಾತ ಮೃತಪಟ್ಟಿರುವ ಘಟನೆ ಕೆಜಿ ಹಳ್ಳಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗಿನ ಜಾವ ನಡೆದಿದೆ ಹೆಬ್ಬಾಳ ನಿವಾಸಿ ಕುಶಾಲ್(27) ಮೃತಪಟ್ಟವರು. ಈತ ಇಂಟೀರಿಯಲ್ ಡೆಕೋರೇಟ್ ವೃತ್ತಿ ಮಾಡುತ್ತಿದ್ದರು. ನೈಟ್ ಕಫ್ರ್ಯೂ ಜಾರಿಯಲ್ಲಿದ್ದರೂ ಸಹ ಕುಶಾಲ್ ತನ್ನ ಸ್ನೇಹಿತನನ್ನು ಕರೆದುಕೊಂಂಡು ಅಪಾಚಿ ಬೈಕ್‍ನಲ್ಲಿ ಇಂದು ಬೆಳಗಿನ ಜಾವ 1 ಗಂಟೆ ಸುಮಾರಿನಲ್ಲಿ …

Read More »

ಬೈಕ್‌ಗಳ ಮಧ್ಯೆ ಮುಖಾಮುಖಿ ಡಿಕ್ಕಿ: ಧಾರವಾಡದ ಛಾಯಾಗ್ರಾಹಕ ಸಾವು

ಧಾರವಾಡ: ಎರಡು ಬೈಕ್‌ಗಳ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ ಧಾರವಾಡದ ಛಾಯಾಗ್ರಾಹಕರೊಬ್ಬರು ಅಸುನೀಗಿರುವ ಘಟನೆ ನುಗ್ಗಿಕೇರಿ ಬಳಿ ಸಂಭವಿಸಿದೆ. ಧಾರವಾಡದ ಅಮಿತ್ ಸಿಂಗ್ ಎಂಬುವವರೇ ಈ ಅಪಘಾತದಲ್ಲಿ ಸಾವನ್ನಪ್ಪಿದವರು. ಎರಡು ಬೈಕ್‌ಗಳ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಗಂಭೀರವಾಗಿ ಗಾಯಗೊಂಡ ಅಮಿತ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಇನ್ನೊಬ್ಬರು ಗಾಯಗೊಂಡಿದ್ದಾರೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ

Read More »

ಪೆಟ್ರೋಲ್ ಬಂಕ್‌ದಲ್ಲಿ ತಲ್ವಾರದಿಂದ ಸರ್ದಾರನ ಮೇಲೆ ಹಲ್ಲೆ! ಕಿಮ್ಸ್ ಆಸ್ಪತ್ರೆಗೆ ದಾಖಲು

ಹುಬ್ಬಳ್ಳಿ: ಪೆಟ್ರೋಲ್ ಬಂಕ್ ನಲ್ಲಿ ಲಾರಿಯ ಚಾಲಕನೋರ್ವನಿಗೆ ತಲ್ವಾರ ಹಾಗೂ ರಾಡಿನಿಂದ ಇರಿದು ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ, ತಾಲೂಕಿನ ಅಂಚಟಗೇರಿ ನಡೆದಿದೆ. ಅಂಚಟಗೇರಿಯ ಪರಶುರಾಮ ಪೆಟ್ರೋಲ್ ಬಂಕ್ ಸಮೀಪದಲ್ಲಿಯೇ ದುರ್ಘಟನೆ ನಡೆದಿದೆ. ಸುನೀಲ ಚೆಲವರಂ ಎಂಬ ಸರ್ದಾರಜಿಗೆ ಹೊಡೆಯಲಾಗಿದೆ. ಯಾವ ಕಾರಣಕ್ಕೆ ಹೀಗೆ ಮಾಡಲಾಗಿದೆ ಎಂಬುದು ಇನ್ನು ತಿಳಿದು ಬಂದಿಲ್ಲ. ಕೆಲವರ ಪ್ರಕಾರ ಸರ್ದಾರಜಿಯನ್ನ ಹೊಡೆದು ಹಣವನ್ನ ದೋಚಿಕೊಂಡು ಪರಾರಿಯಾಗಿದ್ದಾರೆಂದು ಹೇಳಲಾಗುತ್ತಿದೆ. ಅತೀವ ರಕ್ತಸ್ರಾವದಿಂದ ಬಳಲುತ್ತಿದ್ದ ಗಾಯಾಳುವನ್ನ ಹುಬ್ಬಳ್ಳಿಯ ಕಿಮ್ಸಗೆ …

Read More »

ಹುಬ್ಬಳ್ಳಿಯ ರಾಯನಾಳ ಬಳಿ ಕಾರು ಪಲ್ಟಿ- ಓರ್ವನ ಸಾವು, ನಾಲ್ವರಿಗೆ ಗಂಭೀರ ಗಾಯ

ಹುಬ್ಬಳ್ಳಿ : ವೇಗವಾಗಿ ಹೋಗುತ್ತಿದ್ದ ಕಾರೊಂದು ಪಲ್ಟಿಯಾದ ಪರಿಣಾಮ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಗರದ ಹೊರವಲಯದ ರಾಯನಾಳ ಕ್ರಾಸ್ ಬಳಿ ನಡೆದಿದೆ. ಕಾರಿನಲ್ಲಿ ಒಟ್ಟು ಐದು ಜನರಿದ್ದು, ಅದರಲ್ಲಿದ್ದ ಓರ್ವ ಯುವಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು ಉಳಿದ ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಗೆ ರವಾನೆ ಮಾಡಲಾಗಿದೆ. ಕಾರು ಲಕ್ಷ್ಮೀಕಾಂತ ಕಾಟವಾಟೆ ಎನ್ನುವವರ ಹೆಸರಿನಲ್ಲಿದೆ. ಮೃತ ಯುವಕನನ್ನ ಹುಬ್ಬಳ್ಳಿ ಮಹಾವೀರಗಲ್ಲಿಯ ಗಣೇಶ ಬಂಡಿ ಎಂದು ಗುರುತಿಸಲಾಗಿದ್ದು, ಗಾಯಾಳುಗಳ ಮಾಹಿತಿಯನ್ನ ಕಲೆ ಹಾಕುತ್ತಿದ್ದಾರೆ. …

Read More »

ಚಿಟ್ ಫಂಡ್ ಹೆಸರಿನಲ್ಲಿ 6 ಕೋಟಿಗೂ ಹೆಚ್ಚು ಹಣ ದೋಖಾ – ಆರೋಪಿ ಅರೆಸ್ಟ್

ಹೊಸಕೋಟೆ: ಚಿಟ್ ಫಂಡ್ ಹೆಸರಿನಲ್ಲಿ 6 ಕೋಟಿಗೂ ಹೆಚ್ಚು ಹಣ ವಂಚಿಸಿದ್ದ ಆರೋಪಿಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಸೂಲಿಬೆಲೆಯಲ್ಲಿ ಬಂಧಿಸಲಾಗಿದೆ. ಆಂಧ್ರದ ಮದನಪಲ್ಲಿ ಮೂಲದ ಪಾಪಣ್ಣ ಅಲಿಯಾಸ್ ರೆಡ್ಡಿ 400ಕ್ಕೂ ಹೆಚ್ಚು ಜನರಿಗೆ ಉಂಡೆನಾಮ ತಿಕ್ಕಿ ಪರಾರಿಯಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ. ಪಾಪಣ್ಣ ಸೂಲಿಬಲೆಯಲ್ಲಿ ಚಿಟ್ ಫಂಡ್ ವ್ಯವಹಾರ ನಡೆಸುತ್ತಿದ್ದು, ಪ್ರತಿ ತಿಂಗಳು 2 ಸಾವಿರ ರೂಪಾಯಿಯಂತೆ 30 ತಿಂಗಳು ಹಣ ಕಟ್ಟಿದವರಿಗೆ 10 ಸಾವಿರ ಸೇರಿಸಿ 70 …

Read More »