Breaking News

ಅಬ್ಕಾರಿ ಇಲಾಖೆಯ ಕ್ರಮವನ್ನು ಖಂಡಿಸಿ ನೀತಿಮಂಗಲ ಗ್ರಾಮಸ್ಥರು ಪ್ರತಿಭಟನೆ

ಮಂಡ್ಯ ; ಮಂಡ್ಯ ಜಿಲ್ಲೆ ಮಂಡ್ಯ ಪಟ್ಟಣದ ಕೆ.ಆರ್. ಪೇಟೆ ತಾಲ್ಲೂಕಿನ ಶೀಳನೆರೆ
ಹೋಬಳಿಯ ನೀತಿಮಂಗಲ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿರುವುದು ಹಾಗೂ ಎಂ.ಎಸ್.ಐ.ಎಲ್
ಮಧ್ಯದಂಗಡಿಯನ್ನು ಸ್ಥಾಪನೆ ಮಾಡಲು ಹೊರಟಿರುವ ಅಬ್ಕಾರಿ ಇಲಾಖೆಯ ಕ್ರಮವನ್ನು ಖಂಡಿಸಿ ನೀತಿಮಂಗಲ
ಗ್ರಾಮಸ್ಥರು ಹಾಗೂ ಮಹಿಳಾ ಪ್ರತಿನಿಧಿಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ನೀತಿಮಂಗಲ ಗ್ರಾಮವು ಸುಸಂಸ್ಕೃತ ಸಾಂಸ್ಕೃತಿಕ ಗ್ರಾಮವಾಗಿದೆ. ಗ್ರಾಮದಲ್ಲಿ
ಮಧ್ಯದಂಗಡಿ ಆರಂಭವಾದರೆ ಯುವಜನರು ಮದ್ಯದ ದಾಸರಾಗಿ ಹಾಳಾಗುತ್ತಾರೆ. ಗ್ರಾಮದ ಶಾಲೆಗೆ ಹೋಗುವ
ಮಕ್ಕಳು ಹಾಲಿನ ಡೈರಿಗೆ ಹಾಲು ಹಾಕಲು ಹೋಗುವ ಮಹಿಳೆಯರು ಕಿರಿಕಿರಿಯನ್ನು ಅನುಭವಿಸ
ಬೇಕಾಗುತ್ತದೆಯಲ್ಲದೇ ಗ್ರಾಮದ ಜನರ ನೆಮ್ಮದಿಯು ಹಾಳಾಗುತ್ತದೆ. ಆದ್ದರಿಂದ ನಮ್ಮ ಗ್ರಾಮಕ್ಕೆ
ವೈನ್ ಶಾಪ್ ಬೇಡವೇ ಬೇಡ
, ಮಧ್ಯದಂಗಡಿ ನಮಗೆ ಬೇಕಾಗಿಲ್ಲ
ಎಂದು ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು… ಪ್ರತಿಭಟನೆಯಲ್ಲಿ ನೂರಾರು
ಮಹಿಳೆಯರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

Share News

About admin

Check Also

ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟ ‘ASI’ ಮಗಳು.ದುರಂತ ಕಾರಣ.!

ಬಂದೀಗೌಡ ಬಡಾವಣೆ ಸಮೀಪ ಈ ಒಂದು ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ಸುಹಾನ ಎಂದು ಗುರುತಿಸಲಾಗಿದೆ. ಮಂಡ್ಯದಲ್ಲಿ ಘೋರ …

Leave a Reply

Your email address will not be published. Required fields are marked *