Breaking News

ಅಪರಾಧ

Featured Video Play Icon

ರಾಷ್ಟೀಯ ಹೆದ್ದಾರಿಯಲ್ಲಿ ಸರಣಿ ಅಪಘಾತ ವಾಹನಗಳು ಜಖಂ

Read More »

ಧಾರವಾಡದ ಎಸ್‌ಡಿಎಂ ಬಳಿ‌ ಟೈರ್ ಬ್ಲಾಸ್ಟ್‌ ಆಗಿ ಕಾರು ಅಪಘಾತ-ತಪ್ಪಿದ ಭಾರಿ ಅನಾಹುತ

ಧಾರವಾಡ :ಕಾರೊಂದು ಅಪಘಾಕ್ಕಿಡಾದ ಪರಿಣಾಮ ಓರ್ವ ಮಹಿಳೆ ಗಾಯಗೊಂಡ ಘಟನೆ ಎಸಡಿಎಂ ಆಸ್ಪತ್ರೆಯ ಎದುರು ನಡೆದಿದೆ .ಬೆಳಗಾವಿ ಮೂಲದ ಶೋಯೇಬ್ ನಧಾಫ ಎಂಬುವವರಿಗೆ ಸೇರಿದ ಕಾರು ಇದಾಗಿದೆ. ಇದರಲ್ಲಿ ಮಹ್ಮದಲಿ ನದಾಫ್ ಕುಟುಂಬ ಸದಸ್ಯರು ಪ್ರಯಾಣಿಸುತ್ತಿದ್ದರು. ನವಲಗುಂದದ ಸಂಬಂಧಿಕರ ಗೃಹ ಪ್ರವೇಶ ಮುಗಿಸಿಕೊಂಡು ಧಾರವಾಡದ ಕಡೆ ಪ್ರಯಾಣ ಬೆಳೆಸಿದ್ದರು. ಆದರೆ ಎಸ ಡಿ ಎಂ ಆಸ್ಪತ್ರೆಯ ಎದುರು ಕಾರಿನ ಬಲಗಡೆಯ ಟಯರ್ ಬ್ಲಾಸ್ಟ್ ಆದ ಕಾರಣ ಬಲಬದಿಯ ರಸ್ತೆ ವಿಭಜಕಕ್ಕೆ …

Read More »

ಮೊಬೈಲ್ ಕದ್ದಿದ್ದಕ್ಕೆ ಬಾಲಕಿಗೆ ಹಿಗ್ಗಾಮುಗ್ಗ ಥಳಿಸಿದ ಯುವಕರು

ಲಕ್ನೋ: ಫೋನ್ ಕದ್ದಳೆಂದು ಬಾಲಕಿಯನ್ನು ಅಂಗಡಿ ಮಾಲೀಕನ ಮನೆಗೆ ಕರೆದುಕೊಂಡು ಹೋಗಿ ಹಿಗ್ಗಾಮುಗ್ಗ ಥಳಿಸಿದ ಘಟನೆ ಅಮೇಥಿಯ ರಾಯ್‌ಪುರ ಫುಲ್ವಾರಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿ ಸೂರಜ್ ಸೋನಿ ಅವರ ಮೊಬೈಲ್ ಅಂಗಡಿಯಿಂದ ಅಪ್ರಾಪ್ತೆ ಮೊಬೈಲ್ ಫೋನ್‌ಗಳನ್ನು ಕಳವು ಮಾಡುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಳಿಕ ಈ ವಿಷಯ ತಿಳಿದ ಮಾಲೀಕ ಸೋನಿ, ಇದನ್ನು ಪೊಲೀಸರ ಗಮನಕ್ಕೆ ತರುವ ಬದಲು, ಆತನ ಸ್ನೇಹಿತನ ಜೊತೆ ಸೇರಿ ಬಾಲಕಿಯನ್ನು ಹಿಡಿದು ಸೋನಿಯ ಮನೆಗೆ …

Read More »

ಕುಡಿದ ಮತ್ತಿನಲ್ಲಿ ಕಟ್ಟಡದಿಂದ ಬಿದ್ದ ಎಂಬಿಬಿಎಸ್‌ ವಿದ್ಯಾರ್ಥಿ

ಹುಬ್ಬಳ್ಳಿ: ಕುಡಿದ ಅಮಲಿನಲ್ಲಿ ಎಂಬಿಬಿಎಸ್ ಅಂತಿಮ ವರ್ಷದ ವಿದ್ಯಾರ್ಥಿಯೊಬ್ಬ ತಾನು ವಾಸವಿದ್ದ ಹಾಸ್ಟೆಲ್​​ನ ಎರಡನೇ ಮಹಡಿಯಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಕಿಮ್ಸ್ ವೈದ್ಯಕೀಯ ಮಹಾ ವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ಪುನೀತ್​​​ ಎಂಬ ವಿದ್ಯಾರ್ಥಿ ಕುಡಿದ ಮತ್ತಿನಲ್ಲಿ ಕಿಮ್ಸ್ ಆವರಣದಲ್ಲಿನ ಆನಂದ ಹಾಸ್ಟೆಲ್​​​ನ ಎರಡನೆಯ ಮಹಡಿಯಿಂದ ಬಿದ್ದಿದ್ದಾನೆ.ವಿದ್ಯಾರ್ಥಿಯ ಸ್ಥಿತಿ ಚಿಂತಾಜನಕವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳುಹಿಸುವ ಸಲುವಾಗಿ ವೈದ್ಯರು ಸಮಾಲೋಚನೆ ನಡೆಸುತ್ತಿದ್ದಾರೆ. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Read More »

ಮದುವೆ ಆಗೋಕೆ ನಿರಾಕರಿಸಿದ್ದಕ್ಕೆ ಈ ರೀತಿ ಮಾಡೋದಾ ? ಆಟೋ,ಮನೆಗೆ ಬೆಂಕಿ ಇಟ್ಟ ಮಹಿಳೆ

ಬೀದರ್: ಮದುವೆಯಾಗಲು ನಿರಾಕರಿಸಿದ ವ್ಯಕ್ತಿಯ ಮನೆ ಹಾಗೂ ಆಟೋಗೆ ಮಹಿಳೆ ಬೆಂಕಿ ಹಚ್ಚಿದ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಬಾಗ್ ಹಿಪ್ಪರಗಾ ಗ್ರಾಮದಲ್ಲಿ ನಡೆದಿದೆ. ಭೀಮರಾವ್ ಎಂಬಾತ ಸುಮಾ ಎಂಬ ಮಹಿಳೆಯನ್ನು ಮದುವೆಯಾಗಲು ನಿರಾಕರಿಸಿದ್ದರು. ಈ ಸಿಟ್ಟಿನಿಂದ ಊರು ಬಿಟ್ಟರೂ ವ್ಯಕ್ತಿ ನೆಲೆಸಿದ್ದ ಸ್ಥಳಕ್ಕೆ ಹೋಗಿ ಮಹಿಳೆ ಮನೆ ಹಾಗೂ ಆಟೋಗೆ ಬೆಂಕಿ ಹಾಕಿದ್ದಾಳೆ. ಮೂಲತಃ ಚಿಕನಾಗಾಂವ್ ಗ್ರಾಮದ ನಿವಾಸಿಯಾಗಿದ್ದ ಭೀಮರಾವ್ ಕೆಲವು ದಿನಗಳಿಂದ ಸಸ್ತಾಪೂರ್ ಗ್ರಾಮದ ಸಮೀಪದ ಅಡವಿಯಲ್ಲಿ …

Read More »

ಪತಿ ಬಿಟ್ಟಾಕೆ ಪ್ರಿಯಕರನೊಂದಿಗೂ ಜಗಳ ಮಾಡಿಕೊಂಡು ಕೊಲೆಯಾದ್ಲು!

ಆನೇಕಲ್: ಪತಿಯಿಂದ ದೂರವಾಗಿದ್ದ ಮಹಿಳೆ ಆಸ್ತಿ ವಿಚಾರಕ್ಕೆ ಪ್ರಿಯಕರನೊಂದಿಗೆ ಜಗಳ ಮಾಡಿಕೊಂಡು ಆತನಿಂದಲೇ ಕೊಲೆಯಾಗಿರುವ ಘಟನೆ ಬೆಂಗಳೂರು ಹೊಸೂರು ಮುಖ್ಯ ರಸ್ತೆ ಹೊಸರೋಡ್ ಬಳಿ ನಡೆದಿದೆ. ಅರ್ಚನಾ ರೆಡ್ಡಿ ಕೊಲೆಯಾದ ಮಹಿಳೆ. ಪ್ರಿಯಕರ ನವೀನ್ ಕುಮಾರ್ ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಇವರು ಆನೇಕಲ್ ತಾಲೂಕಿನ ಜಿಗಣಿ ನಿವಾಸಿಯಾಗಿದ್ದರು.ಅರ್ಚನಾ ರೆಡ್ಡಿ 5 ವರ್ಷಗಳ ಹಿಂದೆ ಪತಿಯಿಂದ ದೂರವಾಗಿದ್ದು, ನಂತರದ ದಿನಗಳಲ್ಲಿ ಪ್ರಿಯಕರ ನವೀನ್ ಕುಮಾರ್ ಜೊತೆ ಇದ್ದಳು. ಇತ್ತೀಚೆಗೆ ಚನ್ನಪಟ್ಟಣ ಬಳಿಯ ಆಸ್ತಿಯೊಂದರ …

Read More »

ACB ಬಲೆಗೆ ಬಿದ್ದ ಇಬ್ಬರು ಅರಣ್ಯ ಇಲಾಖೆಯ ಅಧಿಕಾರಿಗಳು…

ಹುಬ್ಬಳ್ಳಿ : ಲಂಚ ಸ್ವೀಕರಿಸಿವಾಗ ಎಸಿಬಿ ಬಲೆಗೆ ಇಬ್ಬರು ಅರಣ್ಯ ಇಲಾಖೆಯ ಸಿಬ್ಬಂದಿ ಬಿದಿದ್ದಾರೆ. ವಲಯ ಅರಣ್ಯ ಅಧಿಕಾರಿ ಅನ್ನದಾನಯ್ಯ ನೀಲಗುಂದಮಠ ಮತ್ತು ಕಂಪ್ಯೂಟರ್ ಆಪರೇಟರ್ ಶಿವಶಂಕರ ಹಿರೇಮಠ ಬಲೆಗೆ ಬಿದ್ದವರು. ಮೃತ ವಾಚರ್ ಮನೊಬ್ಬರು ಪರಿಹಾರ ಹಣವನ್ನು ಬಿಡುಗಡೆ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. 15 ಸಾವಿರ ರೂಪಾಯಿ ಲಂಚ ತಗೆದುಕೊಳ್ಳುವಾಗ ಇಬ್ಬರು ರೆಡ್ ಹ್ಯಾಂಡ್ ಆಗಿ ಬಲೆಗೆ ಬಿದಿದ್ದಾರೆ. ಡಿವೈಎಸ್ಪಿ ಮಹಾಂತೇಶ ಜಿದ್ದಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

Read More »

ಕೆಲಗೇರಿ ಕೆರೆಯಲ್ಲಿ ಹಾರಿ ಗೃಹಿಣಿಯೊರ್ವಳು ಆತ್ಮಹತ್ಯೆ

ಧಾರವಾಡ: ಧಾರವಾಡದ ಕೆಲಗೇರಿ ಕೆರೆಗೆ ಹಾರಿ ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಬೆಳಗಿನ ಜಾವ ನಡೆದಿದೆ. ಧಾರವಾಡ ಸಂತೋಷನಗರದ ನಿವಾಸಿ ಅನಿತಾ ಹೆಗಡೆ ಎಂಬುವವರೇ ಸಾವನ್ನಪ್ಪಿದವರು. ಅನಿತಾ ಹಲವು ವರ್ಷಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು. ಅಲ್ಲದೇ ಹಲವು ದಿನಗಳಿಂದ ಧಾರವಾಡದ ಡಿಮಾನ್ಸ್‌ನಲ್ಲಿ ಚಿಕಿತ್ಸೆ ಕೂಡ ಪಡೆಯುತ್ತಿದ್ದರು. ಇಂದು ಬೆಳಗಿನಜಾವ ಏಕಾಏಕಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರು ಭೇಟಿ ನೀಡಿ ದೂರು ದಾಖಲಿಸಿಕೊಂಡಿದ್ದಾರೆ.

Read More »

ಮನೆಗೆ ಆಕಸ್ಮಿಕ ಬೆಂಕಿ: ಸಜೀವ ದಹನಗೊಂಡ ವ್ಯಕ್ತಿ

ಧಾರವಾಡ: ಮನೆಗೆ ಆಕಸ್ಮಿಕ ಬೆಂಕಿ ತಗುಲಿ ಮನೆಯಲ್ಲಿದ್ದ ವ್ಯಕ್ತಿಯೋರ್ವ ಸಜೀವ ದಹನಗೊಂಡಿರುವ ಘಟನೆ ಧಾರವಾಡದ ನಗರೇಶ್ವರ ದೇವಸ್ಥಾನದ ಹಿಂಭಾಗದಲ್ಲಿ ನಿನ್ನೆ ತಡರಾತ್ರಿ ನಡೆದಿದೆ. ವಿನಾಯಕ ಚಿನಿವಾಲರ (36) ಎಂಬ ವ್ಯಕ್ತಿಯೇ ಸಜೀವ ದಹನಗೊಂಡವನು. ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ವಿನಾಯಕ ದೀಪ ಹಚ್ಚಲು ಹೋಗಿ ಯಡವಟ್ಟು ಸಂಭವಿಸಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ವಿನಾಯಕ ವಿಪರೀತ ಮದ್ಯವೆಸನಿಯಾಗಿದ್ದ ತಾನೇ ಬೆಂಕಿ ಹಚ್ಚಿಕೊಂಡಿದ್ದಾನೋ ಅಥವಾ ಆಕಸ್ಮಿಕವಾಗಿ ಬೆಂಕಿ ತಗುಲಿದೆಯೋ ಎಂಬುದರ ಬಗ್ಗೆ …

Read More »

ವಾಣಿಜ್ಯ ನಗರಿಯಲ್ಲಿ ಬೆಳ್ಳಂಬೆಳಗ್ಗೆ ಚಾಕು‌ ಸದ್ದು- ಹರಿಯಿತು ನೆತ್ತರು

ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಬೆಳ್ಳಂಬೆಳಿಗ್ಗೆ ಚಾಕು ಸದ್ದು ಮಾಡಿ ರಕ್ತ ಹರಿಸಿದ ಘಟನೆ ಇಂದು ಮುಂಜಾನೆ ಸಂಭವಿಸಿದೆ. ಚಾಕು ಇರಿತಕ್ಕೊಳಗಾದವ.. ಹಳೇ ಹುಬ್ಬಳ್ಳಿಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಹೆಗ್ಗೇರಿ ಬಳಿಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದ್ದು. ಆಶೀಪ್ ಎಂಬಾತನ ಮೇಲೆ ಎರಡು ಜನ ಚಾಕುವಿನಿಂದ ಇರಿದಿದ್ದು,ಕೈ ಹಾಗೂ ಹೊಟ್ಟೆ ಭಾಗಕ್ಕೆ ಮೂರು ಕಡೆ ಚಾಕುವಿನಿಂದ ಇರಿಯಲಾಗಿದ್ದು,ಗಾಯಗೊಂಡ ಆಶೀಪ್ ನನ್ನು ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕೀಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು. ಹಳೇ …

Read More »