Breaking News

ಮದುವೆ ಆಗೋಕೆ ನಿರಾಕರಿಸಿದ್ದಕ್ಕೆ ಈ ರೀತಿ ಮಾಡೋದಾ ? ಆಟೋ,ಮನೆಗೆ ಬೆಂಕಿ ಇಟ್ಟ ಮಹಿಳೆ

ಬೀದರ್: ಮದುವೆಯಾಗಲು ನಿರಾಕರಿಸಿದ ವ್ಯಕ್ತಿಯ ಮನೆ ಹಾಗೂ ಆಟೋಗೆ ಮಹಿಳೆ ಬೆಂಕಿ ಹಚ್ಚಿದ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಬಾಗ್ ಹಿಪ್ಪರಗಾ ಗ್ರಾಮದಲ್ಲಿ ನಡೆದಿದೆ.

ಭೀಮರಾವ್ ಎಂಬಾತ ಸುಮಾ ಎಂಬ ಮಹಿಳೆಯನ್ನು ಮದುವೆಯಾಗಲು ನಿರಾಕರಿಸಿದ್ದರು. ಈ ಸಿಟ್ಟಿನಿಂದ ಊರು ಬಿಟ್ಟರೂ ವ್ಯಕ್ತಿ ನೆಲೆಸಿದ್ದ ಸ್ಥಳಕ್ಕೆ ಹೋಗಿ ಮಹಿಳೆ ಮನೆ ಹಾಗೂ ಆಟೋಗೆ ಬೆಂಕಿ ಹಾಕಿದ್ದಾಳೆ.

ಮೂಲತಃ ಚಿಕನಾಗಾಂವ್ ಗ್ರಾಮದ ನಿವಾಸಿಯಾಗಿದ್ದ ಭೀಮರಾವ್ ಕೆಲವು ದಿನಗಳಿಂದ ಸಸ್ತಾಪೂರ್ ಗ್ರಾಮದ ಸಮೀಪದ ಅಡವಿಯಲ್ಲಿ ಕುಟುಂಬ ಸಮೇತ ವಾಸವಾಗಿದ್ದ. ಈ ವೇಳೆ ಸುಮಾ ಎಂಬ ಮಹಿಳೆ ಪರಿಚಯವಾಗಿದ್ದಾಳೆ. ತನ್ನನ್ನು ಮದುವೆಯಾಗುವಂತೆ ಭೀಮರಾವ್‌ನನ್ನು ಸುಮಾ ಒತ್ತಾಯಿಸಿದ್ದಾಳೆ. ಆಕೆಯ ಕಾಟ ತಾಳಲಾರದೇ ಭೀಮರಾವ್ ತನ್ನ ತಾಯಿ ತವರು ಬಾಗ್ ಹಿಪ್ಪರಗಾ ಗ್ರಾಮದಲ್ಲಿ ವಾಸವಾಗಿದ್ದ.

ಈ ವಿಷಯ ತಿಳಿದು ಮಹಿಳೆ ಬಾಗ್ ಹಿಪ್ಪರಗಾ ಗ್ರಾಮಕ್ಕೆ ತೆರಳಿ ಮದುವೆ ಮಾಡಿಕೊಳ್ಳಬೇಕು ಎಂದು ಸತಾಯಿಸಿದ್ದಾಳೆ. ಇಲ್ಲದಿದ್ದರೆ ನಾನು ನೀಡಿರುವ 4 ಲಕ್ಷ ರೂ. ವಾಪಸ್‌ ಕೊಡುವಂತೆ ಒತ್ತಾಯಿಸಿದ್ದಾಳೆ. ಇದಕ್ಕೆ ಭೀಮರಾವ್‌ ಒಪ್ಪದೇ ಇದ್ದಾಗ ಇಬ್ಬರ ಸಹಾಯದಿಂದ ಮನೆ ಹಾಗೂ ಆಟೋಗೆ ಮಹಿಳೆ ಬೆಂಕಿ ಹಾಕಿದ್ದಾಳೆ. ಈ ಕುರಿತು ಮುಡಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About admin

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *