Breaking News

ಮೊಬೈಲ್ ಕದ್ದಿದ್ದಕ್ಕೆ ಬಾಲಕಿಗೆ ಹಿಗ್ಗಾಮುಗ್ಗ ಥಳಿಸಿದ ಯುವಕರು

ಲಕ್ನೋ: ಫೋನ್ ಕದ್ದಳೆಂದು ಬಾಲಕಿಯನ್ನು ಅಂಗಡಿ ಮಾಲೀಕನ ಮನೆಗೆ ಕರೆದುಕೊಂಡು ಹೋಗಿ ಹಿಗ್ಗಾಮುಗ್ಗ ಥಳಿಸಿದ ಘಟನೆ ಅಮೇಥಿಯ ರಾಯ್‌ಪುರ ಫುಲ್ವಾರಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ನಿವಾಸಿ ಸೂರಜ್ ಸೋನಿ ಅವರ ಮೊಬೈಲ್ ಅಂಗಡಿಯಿಂದ ಅಪ್ರಾಪ್ತೆ ಮೊಬೈಲ್ ಫೋನ್‌ಗಳನ್ನು ಕಳವು ಮಾಡುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಳಿಕ ಈ ವಿಷಯ ತಿಳಿದ ಮಾಲೀಕ ಸೋನಿ, ಇದನ್ನು ಪೊಲೀಸರ ಗಮನಕ್ಕೆ ತರುವ ಬದಲು, ಆತನ ಸ್ನೇಹಿತನ ಜೊತೆ ಸೇರಿ ಬಾಲಕಿಯನ್ನು ಹಿಡಿದು ಸೋನಿಯ ಮನೆಗೆ ಕರೆದೊಯ್ದು ಚೆನ್ನಾಗಿ ಥಳಿಸಿದ್ದಾರೆ. ಅಲ್ಲದೆ ಆಕೆಯ ಕೂದಲು ಹಿಡಿದು ಎಳೆದಾಡಿದ್ದಾರೆ. ಯುವಕನೊಬ್ಬ ಕೋಲು ಹಿಡಿದು ಬಾಲಕಿಯನ್ನು ನೆಲದ ಮೇಲೆ ಮಲಗಿಸಿ, ಅವಳ ಕಾಲುಗಳ ಮೇಲೆ ಬೀಸುತ್ತಾರೆ. 

Share News

About admin

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *