Breaking News

ಧಾರವಾಡ

ಕೆಲ ಪ್ರಕರಣಗಳ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಕೆ

ಅಣ್ಣಿಗೇರಿ: ಕಲಘಟಗಿ ತಾಲೂಕಿನ ಬೇಗೂರು ಗ್ರಾಮದ ಕಲ್ಲಪ್ಪ ಹರಿಜನ್ ಎಂಬುವರ ಮೇಲೆ ಕಲ್ಲಪ್ಪ ಮೂಗಣ್ಣವರ್ ಎಂಬುವರು ಕೊಡಲಿಯಿಂದ ಕೊಲೆ ಮಾಡಲು ಯತ್ನ ತಪ್ಪಿ ಕಾಲು ಹಿಮ್ಮಡಿಗೆ ಹಲ್ಲೆ ಮಾಡಿದ್ದು ಹಾಗೂ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮದ ಯಮನೂರಪ್ಪ ಈರಪ್ಪ ಬಂಡಿಹಾಳ ಎಂಬುವರು ಕಟಿಂಗ್ ಮಾಡಿಸಿಕೊಳ್ಳಲು ಹೋದಾಗ ಮುದುಕಪ್ಪ ಅಂದಪ್ಪ ಹಡಪದ ಎಂಬುವವರು ನೀನು ಕೆಳಜಾತಿ ಕಟಿಂಗ್ ಮಾಡುವುದಿಲ್ಲ ಎಂದು ನಿರಾಕರಣೆ ಮಾಡಿದ್ದನ್ನು ಪ್ರಶ್ನೆ ಮಾಡಿದ್ದಕ್ಕೆ ಸಲೂನ್ ಮಾಲಿಕ …

Read More »

ಗಣೇಶ ವಿಗ್ರಹಗಳ ಉತ್ಪಾದನೆ, ಮಾರಾಟ ಅಂಗಡಿಗಳಿಗೆ ತಹಶಿಲ್ದಾರ ಭೇಟಿ

ಧಾರವಾಡ : ನಗರದಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿ.ಓ.ಪಿ) ಹಾಗೂ ರಾಸಾಯನಿಕ ಗುಣಗಳುಳ್ಳ ವಸ್ತುಗಳನ್ನು ಬಳಸಿ ತಯಾರಿಸಲಾದ ಗಣೇಶ ವಿಗ್ರಹಗಳ ಉತ್ಪಾದನೆ, ಮಾರಾಟ ಅಂಗಡಿಗಳಿಗೆ ಧಾರವಾಡ ತಹಶಿಲ್ದಾರ ಡಿ.ಎಚ್.ಹೂಗಾರ ಅವರ ನೇತೃತ್ವದಲ್ಲಿ ಪಾಲಿಕೆ, ಪೆÇಲೀಸ್ ಇಲಾಖೆ ಅಧಿಕಾರಿಗಳು ಜಂಟಿಯಾಗಿ, ಧಾರವಾಡ ಶಹರದಲ್ಲಿ ಭೇಟಿ ನೀಡಿ ಪರಿಶೀಲನೆ ಮಾಡಿದರು.

Read More »

ಶ್ರೀ ಏಳುಮಕ್ಕಳ ತಾಯಿ ಜಾತ್ರಾ ಮಹೋತ್ಸವ

ಕಲಘಟಗಿ : ಪಟ್ಟಣದ ಮಚಿಗಾರ ಓಣಿಯಲ್ಲಿ ಇರುವ ಶ್ರೀ ಏಳುಮಕ್ಕಳ ತಾಯಿ ಜಾತ್ರಾ ಮಹೋತ್ಸವ ಇಂದು ಜರುಗಲಿದೆ. ಮುಂಜಾನೆ ಎಂಟುಘಂಟೆಗೆ ದೇವಿಗೆ ಅಭಿಷೇಕ ಹಾಗೂ ಉಡಿ ತುಂಬುವ ಕಾರ್ಯಕ್ರಮ ಜರುಗಲಿದೆ.ಮದ್ಯಾಹ್ನ ಒಂದು ಘಂಟೆಗೆ ಅನ್ನ ಪ್ರಸಾದ ಜರುಗಲಿದ್ದು ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದು ಪ್ರಸಾದವನ್ನು ಸ್ವೀಕರಿಸಬೇಕೆಂದು ದೇವಸ್ಥಾನದ ಟ್ರಸ್ಟ್‌ ಕಮಿಟಿಯವರು ತಿಳಿಸಿದ್ದಾರೆ.

Read More »

ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ ಆಕ್ರೋಶ

ಕಲಘಟಗಿ:: ನಗರದಲ್ಲಿ ಬಿಜೆಪಿ ಗ್ರಾಮಾಂತರ ಜಿಲ್ಲೆಯ ವತಿಯಿಂದ ಮೂಡಾ ಹಗರಣ ರೂವಾರಿ ಭ್ರಷ್ಟ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ವಿರುದ್ಧ ಬೃಹತ್ ಪ್ರತಿಭಟನೆಯಲ್ಲಿ ಅಳ್ಳಾವರ ಸರ್ಕಲ್ ನಿಂದ ತಹಶೀಲ್ದಾರ ಕಛೇರಿಯವರೆಗೆ ಪಾದಯಾತ್ರೆ ಮಾಡಿ ತಹಶೀಲ್ದಾರಿಗೆ ಮನವಿ ಸಲ್ಲಿಸಿದರು. ಎನ್. ಪಾಟೀಲ, ಬಸವರಾಜ್ ಶೆರೆವಾಡ, ಕಲ್ಮಶ ಬೇಲೂರ, ಚಂದ್ರಗೌಡ ಪಾಟೀಲ, ಆಯ್, ಸಿ, ಗೋಕುಲ, ಡಾ. ಮಹೇಶ ತಿಪ್ಪಣ್ಣವರ, ಪಾಟೀಲ, ಮಹಾಂತೇಶ ತಹಶೀಲ್ದಾರ, ಫಕಿರೇಶ ನೇಸ್ತೆಕರ, ಬಸವರಾಜ ಕರಡಿಕೊಪ್ಪ, ಕಾರ್ಯಕರ್ತರ ಉಪಸ್ಥಿತರಿದ್ದರು.

Read More »

ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಮಾರಾಮಾರಿ

ಧಾರವಾಡ: ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಮಾರಾಮಾರಿ ಹೊಡೆದುಕೊಂಡಿರುವ ಘಟನೆ, ಹಳೇ ಬಸ್ ಸ್ಟ್ಯಾಂಡ್ ಸಾಯಿ ಲಾಡ್ಜ್ ಹತ್ತಿರ ಈಗಷ್ಟೇ ನಡೆದಿದೆ. ಅಪರಿಚಿತರಿಬ್ಬರು ಕ್ಷುಲ್ಲಕ ಕಾರಣಕ್ಕೆ ಮಾತಿಗೆ ಮಾತು ಬೆಳೆದು ಹೊಡೆದಾಡಿಕೊಂಡಿದ್ದಾರೆ. ಒಬ್ಬ ವ್ಯಕ್ತಿಗೆ ಕಲ್ಲಿನಿಂದ ಹೊಡೆದು ಇನ್ನೊಬ್ಬ ವ್ಯಕ್ತಿ ಪರಾರಿಯಾಗಿದ್ದಾನೆ. ಪೊಲೀಸರು ಬಂದು ಗಾಯಗೊಂಡಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಕಳಸಿದ್ದಾರೆ.

Read More »

ಪೌರಕಾರ್ಮಿಕರ ಆರೋಗ್ಯ ತಪಾಸಣೆ ಶಿಬಿರ

ಧಾರವಾಡ: ಪೌರಕಾರ್ಮಿಕರ ಆರೋಗ್ಯ ತಪಾಸಣೆ ಶಿಬಿರ ಹಾಗೂ ಘನತ್ಯಾಜ್ಯ ವಸ್ತು ನಿರ್ವಹಣೆ ಕಾರ್ಯಾಗಾರ ಕಾರ್ಯಕ್ರಮದಲ್ಲಿ ಪಾಲಿಕೆ ಆಯುಕ್ತರಾದ ಡಾ. ಈಶ್ವರ. ಉಳ್ಳಾಗಡ್ಡಿ ಪಾಲಿಕೆಯ ಮೇಯರ್ ರಾಮಣ್ಣ ಬಡಗೇರ ಭಾಗಿಯಾಗಿ ಚಾಲನೆ ನೀಡಿದರು. ಪಾಲಿಕೆಯ ಮುಖ್ಯ ವೈದ್ಯಾಧಿಕಾರಿಗಳು ಡಾ. ಶ್ರೀಧರ. ದಂಡಪ್ಪನವರ, ಜಿಲ್ಲಾ ಸಮೀಕ್ಷಣಾ ಅಧಿಕಾರಿಗಳು ಡಾ. ಪರಶುರಾಮ, ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಅಧ್ಯಕ್ಷರು ಬಾಪುಗೌಡ. ಬಿರಾದಾರ, ಕಾರ್ಯದರ್ಶಿಗಳು ಎ. ವಿ. ಸಂಕನೂರ ಇದ್ದರು.

Read More »

ಅಹವಾಲು ಸ್ವೀಕರಿಸಿ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಕೋನರಡ್ಡಿ

ನವಲಗುಂದ : ನವಲಗುಂದ ವಿಧಾನಸಭಾ ಮತಕ್ಷೇತ್ರ-69 ನವಲಗುಂದ ನಗರದ ತಾಲೂಕ ಪಂಚಾಯತ ಆವರಣದಲ್ಲಿರುವ ಜನಸಂಪರ್ಕ ಕಾರ್ಯಾಲಯದಲ್ಲಿ ಇಂದು ಶಾಸಕ ಎನ್. ಎಚ್. ಕೋನರೆಡ್ಡಿ ಅವರು ಜನತಾ ದರ್ಶನ ನಡೆಸುವ ಮೂಲಕ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಸಮಸ್ಯೆಗಳಿಗೆ ಸ್ಪಂದಿಸಿದರು. ನಂತರ ರೈತರು ಹೆಸರು ಬೆಳೆ ಪರಿಹಾರ ಹಾಗೂ ಬೆಂಬಲ ಕುರಿತು ಮಾಹಿತಿಯನ್ನು ನೀಡಿದರು. ಆದಷ್ಟು ಬೇಗ ತಾಲ್ಲೂಕಿನಲ್ಲಿ ಬೆಂಬಲ ಬೆಲೆ ಕೇಂದ್ರ ಆರಂಭಿಸುವಂತೆ ಒತ್ತಾಯ ಮಾಡಿದರು.

Read More »

ತಾಲೂಕು ಮಟ್ಟಕ್ಕೆ ಆಯ್ಕೆಯಾದ ಜೆ.ಎಸ್.ಎಸ್ ಶಾಲೆ ಮಕ್ಕಳ್ಳು

ಕುಂದಗೋಳ : ಪಟ್ಟಣದ ಜೆ.ಎಸ್.ಎಸ್ ಶಾಲೆಯ ಮಕ್ಕಳು ವಲಯ ಮಟ್ಟದ ಕಬಡ್ಡಿ ಪಂದ್ಯಾವಳಿ ಗೆಲ್ಲುವ ಮೂಲಕ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕುಂದಗೋಳ ಪಟ್ಟಣದ ಜೆ.ಎಸ್.ಎಸ್.ವಿದ್ಯಾಪಪೀಠದ ಗಂಡು ಮತ್ತು ಹೆಣ್ಣು ಮಕ್ಕಳು ಪ್ರತ್ಯೇಕ ವಿಭಾಗದಲ್ಲಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಅವರಿಗೆ ಶಾಲಾ ಆಡಳಿತ ಮಂಡಳಿ ಹಾಗೂ ಮುಖ್ಯೋಪಾಧ್ಯಾಯರ ನೇತೃತ್ವದಲ್ಲಿ ಸಹ ಶಿಕ್ಷಕರು ಅಭಿನಂದನೆ ಸಲ್ಲಿಸಿದ್ದಾರೆ.

Read More »

10 ಜನರ ತಂಡದಿಂದ ಯುವಕನ ಮೇಲೆ ಹಲ್ಲೆ

ಧಾರವಾಡ: 10 ಜನರ ತಂಡವೊಂದು ಯುವಕನೊಬ್ಬನ ಮೇಲೆ ತಮ್ಮ ಮನೆಯ ಮಹಿಳೆಯ ಜೊತೆ ಫೋನಿನಲ್ಲಿ ಮಾತನಾಡಿದ್ದಾನೆಂದು ಆರೋಪಿಸಿ ಮೂಳೆ ಮುರಿಯುವಂತೆ ಹೊಡೆದ ಘಟನೆ ತಾಲೂಕಿನ ವೆಂಕಟಾಪುರ ಗ್ರಾಮದ ಮಾವಿನ ತೋಪೊಂದರಲ್ಲಿ ನಡೆದಿದೆ. ಇಮಾಮ್‌ಸಾಬ್ ದೇವರಮನಿ (34) ಎಂಬ ವ್ಯಕ್ತಿಯೇ ಹಲ್ಲೆಗೆ ಒಳಗಾದವನು. ಈತ ವೃತ್ತಿಯಿಂದ ಟಂಟಂ ಚಾಲಕನಾಗಿದ್ದಾನೆ. ಇಮಾಮ್‌ಸಾಬ್ ತಮ್ಮ ಮನೆಯ ಹೆಣ್ಣು ಮಗಳೊಂದಿಗೆ ಫೋನಿನಲ್ಲಿ ಮಾತನಾಡಿದ್ದಾನೆಂದು ಆರೋಪಿಸಿ ಕೋಟೂರು ಗ್ರಾಮದ ಅಗಸಿಮನಿ ಎಂಬ ಕುಟುಂಬದ ಅಸ್ಲಾಂ, ಇಸಾಕ್, ಶಕೀಲ್, …

Read More »

ಪಶ್ಚಿಮ ಘಟ್ಟ ಪರಿಸರ ಪರಿಣಿತರ ಸಮಿತಿಯ ವರದಿ ಜಾರಿಗೊಳಿಸುವಂತೆ ಪ್ರತಿಭಟನೆ

ಧಾರವಾಡ: ಪ್ರಕೃತಿ ವಿಕೋಪ ತಡೆಗಟ್ಟಲು ಹಾಗೂ ಮಾನವ ಕುಲದ ರಕ್ಷಣೆಗಾಗಿ ”ಪಶ್ಚಿಮ ಘಟ್ಟ ಪರಿಸರ ಪರಿಣಿತರ ಸಮಿತಿಯ (ಮಾಧವ ಗಾಡೀಳ್) ವರದಿ” ಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಪರಿಸರಕ್ಕಾಗಿ ಪ್ರತಿಭಟನೆ ನಡೆಸಿದರು. ನಗರದ ಕಡಪಾ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಕೆ ಮಾಡಲಾಯಿತು.

Read More »