ಅಣ್ಣಿಗೇರಿ: ಕಲಘಟಗಿ ತಾಲೂಕಿನ ಬೇಗೂರು ಗ್ರಾಮದ ಕಲ್ಲಪ್ಪ ಹರಿಜನ್ ಎಂಬುವರ ಮೇಲೆ ಕಲ್ಲಪ್ಪ ಮೂಗಣ್ಣವರ್ ಎಂಬುವರು ಕೊಡಲಿಯಿಂದ ಕೊಲೆ ಮಾಡಲು ಯತ್ನ ತಪ್ಪಿ ಕಾಲು ಹಿಮ್ಮಡಿಗೆ ಹಲ್ಲೆ ಮಾಡಿದ್ದು ಹಾಗೂ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮದ ಯಮನೂರಪ್ಪ ಈರಪ್ಪ ಬಂಡಿಹಾಳ ಎಂಬುವರು ಕಟಿಂಗ್ ಮಾಡಿಸಿಕೊಳ್ಳಲು ಹೋದಾಗ ಮುದುಕಪ್ಪ ಅಂದಪ್ಪ ಹಡಪದ ಎಂಬುವವರು ನೀನು ಕೆಳಜಾತಿ ಕಟಿಂಗ್ ಮಾಡುವುದಿಲ್ಲ ಎಂದು ನಿರಾಕರಣೆ ಮಾಡಿದ್ದನ್ನು ಪ್ರಶ್ನೆ ಮಾಡಿದ್ದಕ್ಕೆ ಸಲೂನ್ ಮಾಲಿಕ ಕತ್ತರಿಯಿಂದ ಚುಚ್ಚಿ ಕೊಲೆ ಮಾಡಿದ್ದನ್ನು ಖಂಡಿಸಿ ಕರ್ನಾಟಕ ದಲಿತ ವಿಮೋಚನಾ ಸಮಿತಿ ಅಣ್ಣಿಗೇರಿ ತಾಲೂಕು ಅಧ್ಯಕ್ಷರಾದ ರಾಘವೇಂದ್ರ ರಾಮಗಿರಿ ಹಾಗೂ ರಾಜು ಹಳ್ಳಿಕೇರಿ ಅವರ ನೇತೃತ್ವದಲ್ಲಿ ತಹಶೀಲ್ದಾರ್ ಮುಕಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಈ ಸಂಧರ್ಭದಲ್ಲಿ ತಾಲೂಕು ಸಮಿತಿಯ ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

