Breaking News

ಧಾರವಾಡ

ಹೆಲಿಕಾಪ್ಟರ್ ಮೂಲಕ ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮಾಜಿ ಸಿಎಂ ಸಿದ್ದರಾಮಯ್ಯ

ಹುಬ್ಬಳ್ಳಿ : ಚುನಾವಣೆ ಪ್ರಚಾರ ನಿಮಿತ್ತ ಗೋಕಾಕ ಹೋಗುವ ಸಂದರ್ಭದಲ್ಲಿ ಹೆಲಿಕಾಪ್ಟರ್ ಮೂಲಕ ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮಾಜಿ ಮುಖ್ಯಮಂತ್ರಿಗಳು ಹಾಗೂ ವಿರೋಧ ಪಕ್ಷದ ನಾಯಕರಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಕ್ಷಣ. ಈ ಸಂದರ್ಭದಲ್ಲಿ ಧಾರವಾಡ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಅನೀಲ್ ಕುಮಾರ್ ಪಾಟೀಲ್, ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಶ್ರೀ ಅಲ್ತಾಫ್ ಹಳ್ಳೂರ್, ಶ್ರೀ ಸದಾನಂದ ಡಂಗನವರ್, ಅರ್ಜುನ್ ಪಾಟೀಲ್ …

Read More »

ನನ್ನ ರಾಜಕೀಯ ಜೀವನದಲ್ಲಿ ಸಾಕಷ್ಟು ನೆಗೆಟೀವ್ ಕ್ಯಾಂಪೇನ್ ಎದುರಿಸಿದ್ದೇನೆ- ಜಗದೀಶ್ ಶೆಟ್ಟರ್

ಹುಬ್ಬಳ್ಳಿ: ರಾಹುಲ್ ಗಾಂಧಿ ಹುಬ್ಬಳ್ಳಿಗೂ ಪ್ರಚಾರಕ್ಕೆ ಬರಬಹುದು.ಉತ್ತರ ಕರ್ನಾಟಕದ ಪ್ರವಾಸಕ್ಕೆ ನಿಮ್ಮನ್ನು ಜೋಡಣೆ ಮಾಡ್ತೀವಿ. ಪ್ರವಾಸಕ್ಕೆ ಅಂತಾ ಕೆ.ಸಿ. ವೇಣುಗೋಪಾಲ ಹೇಳಿದ್ದಾರೆ. ಇತ್ತೀಚೆಗೆ ನಡೆದ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ಆಗಿದೆ. ಚುನಾವಣೆ ಅಂದ ಮೇಲೆ ನೆಗೆಟೀವ್, ಪಾಜಿಟೀವ್ ಕ್ಯಾಂಪೇನ್ ಇದ್ದೆ ಇರುತ್ತೆ. ನನ್ನ ರಾಜಕೀಯ ಜೀವನದಲ್ಲಿ ಸಾಕಷ್ಟು ನೆಗೆಟೀವ್ ಕ್ಯಾಂಪೇನ್ ಎದುರಿಸಿದ್ದೇನೆ. ಸೋಷಿಯಲ್ ಮೀಡಿಯಾದಲ್ಲಿ ಇರುವವರು ಮನೆಯಲ್ಲಿ ಕುಳಿತು ಬರೆಯುತ್ತಾರೆ. ಅದು ಜನರ ಮೇಲೆ ಇಂಪ್ಯಾಕ್ಟ್ ಆಗಲ್ಲಾ. ಜನರ …

Read More »

ರಾಹುಲ್ ಗಾಂಧಿಯವರ ಜೊತೆ ರಾಜ್ಯ ರಾಜಕಾರಣದ ಬಗ್ಗೆ ಬಹಳಷ್ಟು ಚರ್ಚೆ

ಹುಬ್ಬಳ್ಳಿ: ರಾಹುಲ್ ಗಾಂಧಿಯವರ ಜೊತೆ ರಾಜ್ಯ ರಾಜಕಾರಣದ ಬಗ್ಗೆ ಬಹಳಷ್ಟು ಚರ್ಚೆ. ನಮ್ಮಿಂದ ಎಲ್ಲಾ ವಿಚಾರ ತಿಳಿದುಕೊಂಡರು. ಅವರಿಗೂ ಬಹಳಷ್ಟು ವಿಚಾರಗಳು ಗೊತ್ತಿವೆ. ಬಿಜೆಪಿಯಲ್ಲಿ ಲಿಂಗಾಯತ ನಾಯಕರ ಕಡೆಗಣನೆ ಬಗ್ಗೆ ಮುಕ್ತವಾಗಿ ಚರ್ಚಿಸಿದ್ದೇವೆ. ಯಾಕೆ ಹೀಗಾಯ್ತು ಲಿಂಗಾಯತರಿಗೆ ಬಿಜೆಪಿಯವರು ಯಾಕೆ ಕಡೆಗಣನೆ ಮಾಡಿದ್ರು ಅಂತಾ ಚರ್ಚಿಸಿದ್ರು ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿಕೆ.

Read More »

ಹುಬ್ಬಳ್ಳಿಗೆ ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ಆಗಮನ, ಶೆಟ್ಟರ್ ನೇತೃತ್ವದಲ್ಲಿ ಅದ್ದೂರಿ ಸ್ವಾಗತ

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಗೆ ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ಆಗಮಿಸಿದ್ದು, ಮಾಜಿ ಸಿಎಂ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ರಾಹುಲ್ ಗಾಂಧಿಯವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು. ಹುಬ್ಬಳ್ಳಿಗೆ ಬಂದಿಳಿದ ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿಯನ್ನು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ನಾಯಕರು ಸ್ವಾಗತಿಸಿದರು. ಶಾಸಕ ಪ್ರಸಾದ್ ಅಬ್ಬಯ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಿಲ ಕುಮಾರ್ ಪಾಟೀಲ್ ಸೇರಿ ಹಲವು ನಾಯಕರು ಭಾಗವಹಿಸಿದ್ದು, ಶೆಟ್ಟರ ಜೊತೆ ರಾಹುಲ್ ಗಾಂಧಿ ಮಾತುಕತೆ ನಡೆಸಿದ್ದಾರೆ. …

Read More »

ಹುಬ್ಬಳ್ಳಿಯಲ್ಲಿ ಮುಸ್ಲಿಂ ಧರ್ಮದ ಪವಿತ್ರ ರಂಜಾನ್ ಅದ್ದೂರಿ ಆಚರಣೆ

ಹುಬ್ಬಳ್ಳಿ: ಹಬ್ಬ ಯಾವುದೇ ಇರಲಿ ಹುಬ್ಬಳ್ಳಿಯಲ್ಲಿ ಆಚರಣೆ ಅಂದರೆ ನಿಜಕ್ಕೂ ಅದೊಂದು ವಿಶೇಷವೇ ಸರಿ. ಸಣ್ಣ ಹಬ್ಬವಿದ್ದರೂ ಅದ್ದೂರಿಯಾಗಿ ಆಚರಣೆ ಮಾಡುವ ಹುಬ್ಬಳ್ಳಿಯಲ್ಲಿ ಮುಸ್ಲಿಂ ಧರ್ಮದ ಪವಿತ್ರ ರಂಜಾನ್ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು. ಹುಬ್ಬಳ್ಳಿಯ ಪ್ರತಿಷ್ಠಿತ ಈದ್ಗಾ ಮೈದಾನ ಸೇರಿದಂತೆ ಲ್ಯಾಮಿಂಗ್ಟನ್ ರೋಡ್, ಚೆನ್ನಮ್ಮ ಸರ್ಕಲ್, ಸಂಗೊಳ್ಳಿ ರಾಯಣ್ಣ ಸರ್ಕಲ್ ಆವರಣದಲ್ಲಿ ಲಕ್ಷಾಂತರ ಮುಸ್ಲಿಂ ಬಾಂಧವರು ರಂಜಾನ್ ಕೊನೆಯ ದಿನದ ಪ್ರಾರ್ಥನೆ ಸಲ್ಲಿಸಿದರು. ಮುಸ್ಲಿಮರ ಪವಿತ್ರ ಮಾಸ ರಂಜಾನ್ …

Read More »

ಪಿಯುಸಿಯಲ್ಲಿ 3ನೇ ರ‍್ಯಾಂಕ್‌ ಪಡೆದ ಹುಬ್ಬಳ್ಳಿಯ ಸಾಯೀಶ್‌ ಗೋಣಿ

ಹುಬ್ಬಳ್ಳಿ: ಪಾಲಕರ ಬೆಂಬಲ, ಶಿಕ್ಷಕರ ಪ್ರೋತ್ಸಾಹದಿಂದಲೇ ಈ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಪಿಯು ವಿಜ್ಞಾನ ವಿಭಾಗದಲ್ಲಿ ರಾಜ್ಯ ಮಟ್ಟದಲ್ಲಿ 3ನೇ ರ‍್ಯಾಂಕ್‌ ಗಳಿಸಿರುವ ಸಾಯೀಶ್ ಗೋಣಿ ಹೇಳಿದರು. ಹುಬ್ಬಳ್ಳಿಯ ಚೌಗಲಾ ಎಜ್ಯುಕೇಷನ್‌ ಸೊಸೈಟಿಯ ವಿದ್ಯಾನಿಕೇತನ ಪಿಯು ಕಾಲೇಜಿನ ವಿದ್ಯಾರ್ಥಿಯಾಗಿದ್ದಾರೆ. ಇಂಗ್ಲಿಷ್‌– 96, ಸಂಸ್ಕೃತ– 100, ಭೌತವಿಜ್ಞಾನ– 99, ರಸಾಯನವಿಜ್ಞಾನ– 99, ಗಣಿತ– 100, ಜೀವವಿಜ್ಞಾನ– 100. ಒಟ್ಟು 594/600 ಅಂಕ ಪಡೆದಿದ್ದಾರೆ. ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಿದ್ದೆ. ರ‍್ಯಾಂಕ್‌ ಬರುತ್ತದೆ …

Read More »

ಶ್ರೀ ಸಾಯಿ ಮಹಿಳಾ ಸೇವಾ ಸಂಘ ರಾಜನಗರ ಗುಲಗಂಜಿಕೊಪ್ಪ ವಾರ್ಷಿಕೋತ್ಸವ

ಧಾರವಾಡ: ಶ್ರೀ ಸಾಯಿ ಮಹಿಳಾ ಸೇವಾ ಸಂಘ ರಾಜನಗರ ಗುಲಗಂಜಿಕೊಪ್ಪ ವಾರ್ಷಿಕೋತ್ಸವ ಭಾರತ ಹೈಸ್ಕೂಲ್ ನ ಸಭಾ ಭವನದಲ್ಲಿ ಜರುಗಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮಾಜಿ ರೇಷ್ಮೆ ಮಾರಟ ಮಂಡಳಿ ಅಧ್ಯಕ್ಷೆ ಶ್ರೀಮತಿ ಸವಿತಾ ಅಮರಶೆಟ್ಟಿ ಅಗಮಿಸಿ ಕಾರ್ಯ ಕ್ರಮ ಉದ್ಘಾಟಿಸಿ, ನಮ್ಮ ಸಂಘದ ಕಾರ್ಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿ ಹೆಣ್ಣು ಮಕ್ಕಳು ಇನ್ನೂ ಮುಂದೆ ಎಲ್ಲರಂಗದಲ್ಲಿಯೂ ಬರಬೇಕಿದೆ ಎಂದು ಹೇಳಿದರು. ನಮ್ಮ ಸಂಘದ ಎಲ್ಲಾ ಕಾರ್ಯಕ್ಕು …

Read More »

ಲಿಂಗಾಯತ ಸಮಾಜದ ಮೇಲೆ ಬಿಜೆಪಿ ದ್ವೇಷ ಸಾಧನೆ ಮಾಡ್ತಿದೆ-ಎಂ.ಬಿ.ಪಾಟೀಲ‌

ಹುಬ್ಬಳ್ಳಿ: ಶೆಟ್ಟರ್ ಗೆ ಟಿಕೇಟ್ ನಿರಾಕರಿಸಿರೋದಕ್ಕೆ ಸಕಾರಣವಿಲ್ಲ. 75 ವರ್ಷ ವಯಸ್ಸಾದವರಿಗೂ ಬಿಜೆಪಿ‌ ಟಿಕೇಟ್ ಕೊಟ್ಟಿದೆ. ಜನ ಸಂಘದಿಂದ ಅವರ ರಾಜಕಾರಣ ಆರಂಭಗೊಂಡಿತ್ತು. ಟಿಕೇಟ್ ನಿರಾಕರಿಸಿರೋದು‌ ಸಮುದಾಯಕ್ಕೆ ಅಪಮಾನ. ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಕಾಂಗ್ರೆಸ್ ಗೆ ಬಂದಿದ್ದಾರೆ. ಇದೊಂದು ಷಡ್ಯಂತ್ರ. ಯಡಿಯೂರಪ್ಪ ಅವರನ್ನು ಉಪಯೋಗಿಸಿಕೊಂಡು ನಡು ನೀರಲ್ಲಿ‌ ಕೈಬಿಟ್ಟರು. ಲಕ್ಷ್ಮಣ ಸವದಿ ನಂತರ ಶೆಟ್ಟರ್ ಗೆ ಅನ್ಯಾಯ ಮಾಡಲಾಗಿದೆ. ಇದೊಂದು‌ ದೊಡ್ಡ ಅಪಮಾನ ಮಾಡಲಾಗಿದೆ. ಲಿಂಗಾಯತ ಸಮಾಜದ ಮೇಲೆ ಬಿಜೆಪಿ …

Read More »

ಮೋದಿಯವರ ಕಾರ್ಯವೈಖರಿಯನ್ನು ಕೊಂಡಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ

ಹುಬ್ಬಳ್ಳಿ: ಬಿಜೆಪಿಯನ್ನು ಭದ್ರಗೋಳಿಸಲು ಆಯೋಜಿಸಲಾಗಿದ್ದ ಸಂವಾದ ಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕಾರ್ಯವೈಖರಿಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಕೊಂಡಾಡಿದ್ದಾರೆ. ಮೋದಿಯವರ ನೇತ್ರತ್ವದಲ್ಲಿ ದೇಶ ಒಂದು ದೀರ್ಘ ನೆಗೆತ ಕಂಡಿದೆ. ಕಾಂಗ್ರೆಸ್‌ ಎಪ್ಪತ್ತು ವರ್ಷದಲ್ಲಿ ಸಮಾಜವನ್ನು ಒಡೆದಿದೆ. ಸಮಾಜ ಒಡೆಯುತ್ತಾ ಒಡೆಯುತ್ತಾ ತಾವೇ ಒಡೆದು ಹೋಗಿದ್ದಾರೆ. ತಮಿಳುನಾಡು, ಆಂಧ್ರ, ತೆಲಂಗಾಣದಲ್ಲಿ ಒಡೆದು ಹೋಗಿದ್ದಾರೆ. ಕಾಂಗ್ರೆಸ್‌ನವರು ಕರ್ನಾಟಕದಲ್ಲೂ ವಿಭಜನೆಯಾಗಿದ್ದಾರೆ ಎಂದರು. ಪ್ರಧಾನಿಗಳು ಎಲ್ಲರನ್ನೂ ಒಗ್ಗಟ್ಟಾಗಿ, ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ. ಭಾರತದ ರಾಜಕೀಯದ …

Read More »

ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ರಣತಂತ್ರ ರೂಪಿಸಿದ ಭಗವಂತ್ ಮಾನ್

ಹುಬ್ಬಳ್ಳಿ: ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಕಣಕ್ಕೆ ಇಳಿದಿದ್ದರು. ಬೆಳಗ್ಗೆ ನಗರಕ್ಕೆ ಆಗಮಿಸಿದ್ದ ಭಗವಂತ್ ಮಾನ್ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ರಣತಂತ್ರ ರೂಪಿಸಿದರು. ಬಳಿಕ ಸಾಯಂಕಾಲ ಟೆಂಪಲ್ ರನ್ ನಡೆಸಿದರು. ದೇಶಪಾಂಡೆ ನಗರದಲ್ಲಿರುವ ಗುರಯದ್ವಾರಕ್ಕೆ ಭೇಟಿ ನೀಡಿ‌ ಪ್ರಾರ್ಥನೆ ಸಲ್ಲಿಸಿದರು‌. ಬಳಿಕ ಸಿದ್ದಾರೂಢ ಮಠಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಹಳೇ ಹುಬ್ಬಳ್ಳಿಯ ಪತೇಶಾವಲಿ …

Read More »