BigTv News
February 3, 2025
Breaking News, ಬೆಂಗಳೂರು
ಬೆಂಗಳೂರು : ಡಾ.ಬಿ.ಆರ್.ಅಂಬೇಡ್ಕರ್ ಅವರು ಬರೆದ ಸಂವಿಧಾನ ಭಗವದ್ಗೀತೆ ಇದ್ದಂತೆ. ಅದನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ. ನಗರದ ಗಾಂಧಿಭವನದಲ್ಲಿ ಕರ್ನಾಟಕ ರಕ್ಷಣಾ ಸಮಿತಿಯ ವಾರ್ಷಿಕೋತ್ಸವ ಸಮಾರಂಭ ಹಾಗೂ ಕನ್ನಡ ಪರ ಹೋರಾಟಗಾರ ಡಾ.ಚಿ.ನಾ.ರಾಮು ಅಭಿನಂದನೆ ಮತ್ತು ವಿವಿಧ ಕ್ಷೇತ್ರದಲ್ಲಿನ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಂಬೇಡ್ಕರ್ ಕೇವಲ ಒಂದು ವರ್ಗಕ್ಕೆ ಸೀಮಿತವಾಗಿಲ್ಲ, ಅವರು ದೇಶದ ವಿಶ್ವಮಾನವ ಎಂದು ಬಣ್ಣಿಸಿದರು. …
Read More »
BigTv News
February 3, 2025
Breaking News, ಬೆಂಗಳೂರು
ಬೆಂಗಳೂರು : ಅಂಗನವಾಡಿ ನೌಕರರು ಪ್ರತಿಭಟನೆ ಕೈ ಬಿಟ್ಟ ಒಂದೆರೆಡು ದಿನದಲ್ಲಿ ಸರ್ಕಾರಕ್ಕೆ ದೊಡ್ಡ ತಲೆಬಿಸಿ ಶುರುವಾಗಿದೆ. ಇವತ್ತಿನಿಂದ ಆಶಾ ಕಾರ್ಯಕರ್ತೆಯರ ಮುಷ್ಕರ ಆರಂಭವಾಗಿದೆ. ಇಂದು ರಾಜ್ಯದ ವಿವಿಧ ಭಾಗಗಳಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ಗೆ ಆಗಮಿಸುವ ಆಶಾ ಕಾರ್ಯಕರ್ತೆಯರು , ವೇತನ ಪರಿಷ್ಕರಣೆ ಸೇರಿದಂತೆ ತಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಲಿದ್ದಾರೆ . ಕೈ ಸರ್ಕಾರ ಅಸ್ತಿತ್ವಕ್ಕೆ ಬರುವ ಮುನ್ನ ಆಶಾ ಕಾರ್ಯಕರ್ತರ ಸಮಸ್ಯೆಗೆ ಸ್ಪಂದಿಸುವ ಭರವಸೆ …
Read More »
BigTv News
February 3, 2025
Breaking News, ಬೆಂಗಳೂರು
ಬೆಂಗಳೂರು : ರಾಜ್ಯ ಸರ್ಕಾರವು ರೈತರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ರೈತರ ಕೃಷಿ ಪಂಪ್ ಸೆಟ್ ಗಳಿಗೆ ಹಗಲು ಹೊತ್ತಿನಲ್ಲಿ ಉಚಿತ ವಿದ್ಯುತ್ ನೀಡಲು ಸೋಲಾರ್ ಪಾರ್ಕ್ ಸ್ಥಾಪಿಸಲಾಗುತ್ತಿದೆ. ರಾಜ್ಯದ ರೈತರ ಕೃಷಿ ಮತ್ತು ನೀರಾವರಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಕೊರತೆ ನೀಗಿಸುವ ನಿಟ್ಟಿನಲ್ಲಿ ಕುಸುಮ ಯೋಜನೆ ರೈತರಿಗೆ ವರದಾನವಾಗಲಿದೆ. ರೈತರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಕುಸುಮ್ ಬಿ ಮತ್ತು ಸಿ. ಯೋಜನೆಗೆ ರಾಜ್ಯದಲ್ಲಿ ಈಗಾಗಲೇ …
Read More »
BigTv News
February 3, 2025
Breaking News, ಹೈದರಾಬಾದ್
ಹೈದರಾಬಾದ್ : ತೆಲಂಗಾಣ ಸರ್ಕಾರ ಕೈಗೊಂಡ ಮಹತ್ವಾಕಾಂಕ್ಷೆಯ ಜಾತಿ ಜನಗಣತಿ ಸಮೀಕ್ಷೆ ಪೂರ್ಣಗೊಂಡಿದೆ. ಅಂತಿಮ ವರದಿಯನ್ನು ಯೋಜನಾ ಆಯೋಗದ ಸಚಿವ ಸಂಪುಟ ಉಪಸಮಿತಿಗೆ ಸಲ್ಲಿಸಲಾಯಿತು. ಸಚಿವ ಉತ್ತಮ್ ಕುಮಾರ್ ರೆಡ್ಡಿ ಈ ಬಗ್ಗೆ ವಿವರಗಳನ್ನು ಬಹಿರಂಗಪಡಿಸಿದ್ದಾರೆ. ರಾಜ್ಯದಲ್ಲಿ ಕಲ್ಯಾಣ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಇನ್ನು ಮುಂದೆ ಯಾವುದೇ ತೊಂದರೆ ಇರುವುದಿಲ್ಲ ಎಂದು ಅವರು ಹೇಳಿದರು. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಉದ್ಯೋಗ, ರಾಜಕೀಯ ಮತ್ತು ಜಾತಿ ಸಂಬಂಧಿತ ಸಮಸ್ಯೆಗಳನ್ನು ಅಧ್ಯಯನ ಮಾಡಲು ತೆಲಂಗಾಣ …
Read More »
Shaikh BigTv
February 2, 2025
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ಶ್ರೀ ಆ್ಯಂಡ್ ಶ್ರೀ ಗೋಲ್ಡ್ ಪ್ಯಾಲೇಸ್ ಇಲ್ಲಿನ ಗೋಕುಲರಸ್ತೆಯ ಸಿಲ್ವರ್ ಟೌನ್ ‘ನಲ್ಲಿ ತೆರೆದು ಅತಿ ಕಡಿಮೆ ಮೇಕಿಂಗ್ ಜಾರ್ಜ್ ನೊಂದಿಗೆ ಚಿನ್ನಾಭರಣ ನೀಡುತ್ತಿದೆ ಎಂದು ಗೋಲ್ಡ್ ಪ್ಯಾಲೇಸ್ ವ್ಯವಸ್ಥಾಪಕ ಹಾಗೂ ಸಂಸ್ಥಾಪಕರಾದ ಶ್ರೀಧರ ದಾವಸ್ಕರ ಹೇಳಿದರು. ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2005 ರಿಂದ ರಾಜ್ಯದ ಜನರಿಗೆ ಅತಿ ಕಡಿಮೆ ಮೇಕಿಂಗ್ ಚಾರ್ಜ್ ಜೊತೆಗೆ ಚಿನ್ನಾಭರಣ ನೀಡುತ್ತಿರುವ ಶ್ರೀ ಆ್ಯಂಡ್ ಶ್ರೀ ಗೋಲ್ಡ್ ಪ್ಯಾಲೇಸ್ 40 ಕ್ಕೂ …
Read More »
BigTv News
February 2, 2025
Breaking News, ಚಿತ್ರದುರ್ಗ
ಚಿತ್ರದುರ್ಗ : ಗ್ಯಾರಂಟಿ ಯೋಜನೆಗಳ ಪ್ರಚಾರ ಸಂದರ್ಭದಲ್ಲಿ ವಿರೋಧ ಪಕ್ಷದವರು ಗೇಲಿ ಮಾಡಿದ್ದರು. ಆದರೆ ರಾಜ್ಯದ ಜನತೆ ನಮ್ಮ ಪಕ್ಷವನ್ನು ನಂಬಿ ಚುನಾವಣೆಯಲ್ಲಿ ನಮ್ಮನ್ನು ಗೆಲ್ಲಿಸಿದರು. ಅಧಿಕಾರಕ್ಕೆ ಬಂದ 3 ತಿಂಗಳ ಒಳಗಾಗಿ ಪಂಚ ಗ್ಯಾರಂಟಿಗಳನ್ನು ಜಾರಿ ಮಾಡಲಾಯಿತು. 19 ತಿಂಗಳಿಂದ ನಿರಾಂತಕವಾಗಿ ಯೋಜನೆಗಳು ಮುಂದುವರೆದಿವೆ. ಗೇಲಿ ಮಾಡಿದವರ ಬಾಯಿಂದಲೇ ಪ್ರಶಂಸೆ ಮಾತುಗಳು ಕೇಳಿ ಬರುತ್ತಿವೆ ಎಂದು ಯೋಜನೆ ಮತ್ತು ಸಾಂಖ್ಯಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು. …
Read More »
BigTv News
February 2, 2025
Breaking News, ಮೈಸೂರು
ಮೈಸೂರು: ಸಮುದಾಯ ಆರೋಗ್ಯ ಅಧಿಕಾರಿ(ಸಿಎಚ್‌ಒ)ಗಳಿಗೆ ಬಾಕಿ ಉಳಿದಿರುವ 2022-23ನೇ ಸಾಲಿನ ಶೇ 5ರಷ್ಟು ವೇತನ ಹೆಚ್ಚಿಸಲಾಗುವುದು. 3 ಹಾಗೂ 5 ವರ್ಷ ಸೇವಾವಧಿ ಪೂರ್ಣಗೊಳಿಸಿದವರಿಗೆ ಮಾರ್ಗಸೂಚಿ ಅನ್ವಯ ಬೋನಸ್ ನೀಡಲಾಗುವುದು ಮತ್ತು ಅಂತರಜಿಲ್ಲಾ ವರ್ಗಾವಣೆಗೆ ಅವಕಾಶ ಕಲ್ಪಿಸಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು. ಆರು ವರ್ಷ ಸೇವೆ ಪೂರೈಸಿದವರ ಕೆಲಸ ಕಾಯಂಗೊಳಿಸಬೇಕು’ ಎಂಬ ಪ್ರಮುಖ ಬೇಡಿಕೆ ಮುಂದಿಟ್ಟುಕೊಂಡು ಅಖಿಲ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ (ಎನ್‌ಎಚ್‌ಎಂ) ಗುತ್ತಿಗೆ ನೌಕರರ ಸಂಘದಿಂದ …
Read More »
BigTv News
February 2, 2025
Breaking News, ಬೆಳಗಾವಿ
ಬೆಳಗಾವಿ: ಸಾಲ ವಸೂಲಿ ಕಾನೂನಿನ ಚೌಕಟ್ಟಿನ ಮೂಲಕ ನೋಟಿಸ್ ನೀಡಿ ಪ್ರಕ್ರಿಯೆ ನಡೆಸಬೇಕು. ಹೊರತು ಯಾವುದೇ ಕಾರಣಕ್ಕೂ ಕಿರುಕುಳಕ್ಕೆ ಮುಂದಾಗಬಾರದು. ಸರ್ಕಾರದಿಂದ ಸಾಲಗಾರರ ಕಿರುಕುಳ ತಪ್ಪಿಸುಬಹದು ಹೊರತು ಸಾಲ ಮನ್ನಾ ಅಸಾಧ್ಯ, ಸಾಲವನ್ನುಕಡ್ಡಾಯವಾಗಿ ತುಂಬಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಹೇಳಿದರು. ಜಿಲ್ಲಾ ಪಂಚಾಯತಿ ಸಭಾಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಯಾವ ಉದ್ದೇಶ ಸಾಲ ನೀಡಲಾಗುತ್ತಿದೆ ಅದನ್ನು ಸರಿಯಾಗಿ ಪರಿಶೀಲನೆ ಮಾಡುವ ಅಗತ್ಯವಿದೆ. ಮೈಕ್ರೋ ಫೈನಾನ್ಸ್ …
Read More »
BigTv News
February 2, 2025
Breaking News, ಕಲಬುರಗಿ
ಕಲಬುರಗಿ: ನಿನ್ನೆ ಶನಿವಾರ ಮಂಡಿಸಲಾದ ಕೇಂದ್ರ ಬಜೆಟ್ ಕಲ್ಯಾಣ ಕರ್ನಾಟಕದ ರಾಜಕೀಯ ಪಕ್ಷಗಳು, ವಿಶೇಷವಾಗಿ ಕಲಬುರಗಿ ಜಿಲ್ಲೆಯ ಬಹುತೇಕ ಎಲ್ಲಾ ಸಂಘಟನೆಗಳನ್ನು ನಿರಾಶೆಗೊಳಿಸಿತು. ಅಭಿವೃದ್ಧಿ ಕಾರ್ಯಗಳನ್ನು ವೇಗಗೊಳಿಸಲು ರಾಜ್ಯ ಸರ್ಕಾರದ 5,000 ಕೋಟಿ ರೂಪಾಯಿಗಳ ಅನುದಾನಕ್ಕೆ ಸಮನಾಗಿ ಕಲ್ಯಾಣ ಕರ್ನಾಟಕಕ್ಕೆ ಬಜೆಟ್‌ನಲ್ಲಿ 5,000 ಕೋಟಿ ರೂಪಾಯಿಗಳನ್ನು ಘೋಷಿಸುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಾ.ಅಜಯ್ ಸಿಂಗ್ ಅವರು …
Read More »
BigTv News
February 1, 2025
Breaking News, ಮೈಸೂರು
ಮೈಸೂರು: ಮೈಸೂರು ಕಾರ್ಯಕ್ರಮದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಬೆಳಗ್ಗೆ ಅಗ್ರಹಾರದಲ್ಲಿರುವ ಮೈಲಾರಿ ಹೋಟೆಲ್ ಗೆ ಭೇಟಿ ನೀಡಿ ಉಪಹಾರ ಸೇವಿಸಿದರು. ಇಡ್ಲಿ, ಮಸಾಲೆ ದೋಸೆ ಸವಿದ ಸೇವಿಸಿ ಸಂತಸಪಟ್ಟರು. ಮುಖ್ಯಮಂತ್ರಿಯ ಜೊತೆ ಪುತ್ರ, ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ, ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಶಾಸಕ ಎ.ಆರ್.ಕೃಷ್ಣಮೂರ್ತಿ, ವಿಧಾನ ಪರಿಷತ್ ಮಾಜಿ ಸದಸ್ಯ ಸಂದೇಶ್ ನಾಗರಾಜ್ ಜೊತೆಯಲ್ಲಿದ್ದು ಉಪಹಾರ ಸೇವಿಸಿದರು. ಮುಖ್ಯಮಂತ್ರಿ ಉಪಹಾರಕ್ಕೆ ಆಗಮಿಸಿರುವ ವಿಷಯ ತಿಳಿಯುತ್ತಿದ್ದಂತೆ ಸಾರ್ವಜನಿಕರು ಕಿಕ್ಕಿರಿದು …
Read More »