Breaking News

Breaking News

ಪ್ರಧಾನಿಗೆ ಧನ್ಯವಾದ ತಿಳಿಸಿದ ವೊಲೊಡಿಮಿರ್ ಝಲೆನ್ಸಿ

ಕೈವ್: ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ(ಆಗಸ್ಟ್ 17) ಯೂಕ್ರೇನ್ ಸರ್ಕಾರಕ್ಕೆ ನಾಲ್ಕು BHISHM ಕ್ಯೂಬ್‌ಗಳನ್ನು ನೀಡಿದ್ದಾರೆ. ಕ್ಯೂಬ್‌ಗಳನ್ನು ಸ್ವೀಕರಿಸಿದ ಮಾನವೀಯ ನೆರವಿಗಾಗಿ ಅಧ್ಯಕ್ಷ ವೊಲೊಡಿಮಿರ್ ಝಲೆನ್ಸಿ ಧನ್ಯವಾದ ತಿಳಿಸಿದ್ದಾರೆ. ರಷ್ಯಾದೊಂದಿಗೆ ನಡೆಯುತ್ತಿರುವ ಯುದ್ದದ ಸಮಯದಲ್ಲಿ BHISHM ಕ್ಯೂಬ್‌ಗಳು ಯೂಕ್ರೇನ್‌ಗೆ ಸಹಕಾರಿಯಾಗಲಿದೆ. ಏಕೆಂದರೆ ಇದು ಗಾಯಗೊಂಡವರಿಗೆ ತುರ್ತು ವೈದ್ಯಕೀಯ ಆರೈಕೆಯನ್ನು ಒದಗಿಸುತ್ತದೆ. BHISHM ಕ್ಯೂಬ್‌ಗಳು ವಿಪತ್ತು ನಿರ್ವಹಣೆಗಾಗಿ ವಿಶೇಷವಾದ ‘ಮೇಡ್ ಇನ್ ಇಂಡಿಯಾ’ ಮೊಬೈಲ್ ಆಸ್ಪತ್ರೆಯಾಗಿದ್ದು, ಇದನ್ನು ಏರ್‌ಲಿಫ್ಟ್ …

Read More »

ನಟಿ ಪಾಯಲ್ ಮುಖರ್ಜಿ ಮೇಲೆ ದುಷ್ಕರ್ಮಿಗಳು ಹಲ್ಲೆ

ಕೋಲ್ಕತ್ತಾ: ಬಂಗಾಳಿ ನಟಿ ಪಾಯಲ್ ಮುಖರ್ಜಿ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿರುವ ಘಟನೆ ಕೋಲ್ಕತ್ತಾದ ಸದರ್ನ್ ಅವೆನ್ಯೂ ಪ್ರದೇಶದಲ್ಲಿ ನಡೆದಿದೆ. ನಡೆದಿದೆ. ಶುಕ್ರವಾರದಂದು ಕಾರಿನಲ್ಲಿ ಸಂಚರಿಸುವ ವೇಳೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಮೃಗೀಯ ರೀತಿ ವರ್ತಿಸಿದ್ದಾರೆ. ಸದ್ಯ ಈ ಘಟನೆಯಿಂದ ನೊಂದ ನಟಿ ವಿಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ದುಷ್ಕರ್ಮಿಗಳು ಕಾರಿನ ಗಾಜನ್ನು ಒಡೆದಿದ್ದಾರೆ. ನಟಿ ವಿಡಿಯೋದಲ್ಲಿ ದುಷ್ಕರ್ಮಿಗಳ ದಾಳಿಯಿಂದ ಡ್ಯಾಮೇಜ್ ಆದ ಕಾರಿನ ದೃಶ್ಯವನ್ನು ತೋರಿಸಿದ್ದಾಳೆ. …

Read More »

25 ಕೆ .ಜಿ ಚಿನ್ನದ ಒಡವೆ ಧರಿಸಿಕೊಂಡ ಬಂದ ಭಕ್ತ : ವಿಡಿ

ತಿರುಪತಿಯ ತಿರುಮಲ ಶ್ರೀವೆಂಕಟೇಶ್ವರ ಸ್ವಾಮಿ ಶ್ರೀಮಂತ ದೇವರೆಂದೆ ಖ್ಯಾತಿ ಪಡೆದಿದ್ದಾನೆ. ಈ ಶ್ರೀಮಂತ ದೇವರಿಗೆ ಭಕ್ತರು ಬರೋಬ್ಬರಿ 25 ಕೆ.ಜಿಯ ಚಿನ್ನದ ಒಡವೆಗಳನ್ನ ಧರಿಸಿಕೊಂಡು ಬಂದಿದ್ದಾರೆ. ಮಹಾರಾಷ್ಟ್ರದ ಪುಣೆ ಮೂಲದ ಕುಟುಂಬವೊಂದು ತಿರುಮಲ ಶ್ರೀವೆಂಕಟೇಶ್ವರ ಸ್ವಾಮಿ ದರ್ಶನಕ್ಕೆಂದು ತಿರುಪತಿಗೆ ಭೇಟಿ ನೀಡಿದೆ. ಕುಟುಂಬದ ಮಹಿಳೆ ಸೀರೆ ಧರಿಸಿದ್ರೆ, ಇಬ್ಬರು ವ್ಯಕ್ತಿಗಳು ಬನಿಯನ್ ಹಾಗೂ ಪಂಚೆ ಹಾಕಿದ್ದರು. ಈ ವೇಳೆ ದೇವರ ದರ್ಶನ ಪಡೆಯಲು ತೆರಳುವಾಗ ಆ ಕುಟುಂಬದ ಇಬ್ಬರು ವ್ಯಕ್ತಿಗಳು, …

Read More »

ಲಾರಿ ಚಾಲಕನ ನಿರ್ಲಕ್ಷ್ಯ:ಉರುಳಿದ 20ಕ್ಕೂ ಹೆಚ್ಚು ವಿದ್ಯುತ್ ಕಂಬಗಳು

ಬೆಂಗಳೂರು: ಲಾರಿ ಚಾಲಕನ ನಿರ್ಲಕ್ಷ್ಯದಿಂದ 20ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿದ ಘಟನೆ ಇಂದು ನಸುಕಿನ ಜಾವ 1:30ರ ವೇಳೆಗೆ ಚಿಕ್ಕಬಾಣಾವರ-ಹೆಸರಘಟ್ಟ ಮುಖ್ಯರಸ್ತೆಯಲ್ಲಿ ನಡೆದಿದೆ. ಎಂ ಸ್ಯಾಂಡ್ ಲಾರಿ ಚಾಲಕ ನಿದ್ದೆ ಕಣ್ಣಿನಲ್ಲಿ ಟಿಪ್ಪರ್ ಎತ್ತಿದ್ದಾನೆ. ಈ ವೇಳೆ ಲಾರಿ ಟಾಪ್‌ಗೆ ವಿದ್ಯುತ್ ವೈರ್ ಸಿಕ್ಕಿಹಾಕಿಕೊಂಡಿದೆ. ಇದನ್ನು ಗಮನಿಸದೆ ಚಾಲಕ ಲಾರಿ ಚಲಾಯಿಸಿದ್ದಾನೆ. ಈ ಪರಿಣಾಮ 20ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಜಖಂಗೊಂಡು ನೆಲಕ್ಕುರಿಳಿವೆ. ಚಿಕ್ಕಬಾಣಾವರ ಮುಖ್ಯರಸ್ತೆಯಲ್ಲೇ ಕಂಬಗಳು ಬಿದ್ದಿದ್ದು, …

Read More »

ಸಾಮೂಹಿಕ ಅತ್ಯಾಚಾರ : ಒಬ್ಬ ಆರೋಪಿ ಕೆರೆಗೆ ಹಾರಿ ಸಾವು

ದಿಸ್‌ಪುರ್: 14 ವರ್ಷದ ಬಾಲಕಿಯ ಮೇಲೆ ಅಸ್ಸಾಂನ ಧಿಂಗ್ ನಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದ ಮೂವರು ಆರೋಪಿಗಳ ಪೈಕಿ ಓರ್ವ ಇಂದು ಬೆಳಿಗ್ಗೆ ಕೆರೆಗೆ ಹಾರಿ ಸಾವನ್ನಪ್ಪಿದ್ದಾನೆ. ಪೊಲೀಸ್ ತಂಡವು ಆತನ ಕೈಗೆ ಕೋಳ ತೊಡಿಸಿ ಕೃತ್ಯ ಎಸಗಿದ ಸ್ಥಳಕ್ಕೆ ಕರೆದೊಯ್ಯುತ್ತಿದ್ದಾಗ ಕೆರೆಗೆ ಹಾರಿ ಸತ್ತಿದ್ದಾನೆ ಎಂದು ಮೂಲಗಳು ತಿಳಿಸಿವೆ. ಶುಕ್ರವಾರ (ಆಗಸ್ಟ್ 23) ಬಂಧಿಸಲ್ಪಟ್ಟ ಪ್ರಮುಖ ಆರೋಪಿ ತಫಾಜುಲ್ ಇಸ್ಲಾಂ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡು ಕೊಳಕ್ಕೆ ಹಾರಿ ಸಾವನ್ನಪ್ಪಿದ್ದಾನೆ …

Read More »

ವಿಷ ಸೇವಿಸಿ ಗೃಹಿಣಿ ಆತ್ಮಹತ್ಯೆ

ಚಿಕ್ಕಬಳ್ಳಾಪುರ: ವಿಷ ಸೇವಿಸಿ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ತಾಲೂಕಿನ ಲಕ್ಕೇಪಲ್ಲಿ ಗ್ರಾಮದಲ್ಲಿ ಘಟನೆ ನಡೆದಿದೆ. ಅಕ್ರಮ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಲಾವಣ್ಯ (30) ಆತ್ಮಹತ್ಯೆಗೆ ಶರಣಾದವರು. ವಿಷ ಸೇವಿಸಿ ಅಸ್ವಸ್ಥಳಾಗಿದ್ದ ಲಾವಣ್ಯಳನ್ನು ಚಿಂತಾಮಣಿ ತಾಲೂಕು ಆಸ್ಪತ್ರೆಗೆ ಕುಟುಂಬಸ್ಥರು ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೇ ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಲಾವಣ್ಯ ಮಂಜುನಾಥ್ ಎಂಬುವರ ಜತೆ ವಿವಾಹವಾಗಿದ್ದರು. 13 ವರ್ಷಗಳ ದಾಂಪತ್ಯಕ್ಕೆ ಇಬ್ಬರು …

Read More »

ಹೈಬ್ರಿಡ್ ರಾಕೆಟ್ ‘RHUMI-1’ ಯಶಸ್ವಿಯಾಗಿ ಉಡಾವಣೆ

ಚೆನ್ನೈ: ಜಾಗತಿಕ ತಾಪಮಾನ, ಹವಾಮಾನ ಬದಲಾವಣೆಯ ಕುರಿತು ದತ್ತಾಂಶ ಸಂಗ್ರಹಿಸಲು ಭಾರತವು ತನ್ನ ಮೊದಲ ಮರುಬಳಕೆ ಮಾಡಬಹುದಾದ ಹೈಬ್ರಿಡ್ ರಾಕೆಟ್ ‘RHUMI-1’ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಶನಿವಾರ ಚೆನ್ನೈನ ತಿರುವಿದಂದೈನಿಂದ ರಾಕೆಟ್ ಉಡಾವಣೆ ಮಾಡಲಾಯಿತು. ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಭಾರತದ ಸಾಧನೆಗೆ ಇದು ಮತ್ತೊಂದು ಗರಿಯಾಗಿದೆ. ಮಾರ್ಟಿನ್ ಗ್ರೂಪ್‌ನೊಂದಿಗೆ ತಮಿಳುನಾಡು ಮೂಲದ ಸ್ಟಾರ್ಟ್-ಅಪ್ ಸ್ಪೇಸ್ ಝೂನ್ ಇಂಡಿಯಾ ಅಭಿವೃದ್ಧಿಪಡಿಸಿದ ಮೂರು ಕ್ಯೂಬ್ ಉಪಗ್ರಹಗಳು ಮತ್ತು 50 PICO ಉಪಗ್ರಹಗಳನ್ನು ಹೊತ್ತ …

Read More »

ಚರಂಡಿ ನೀರಿಗೆ ಬಿದ್ದು ಬಾಲಕ ಸಾವು

ಬಳ್ಳಾರಿ: ಚರಂಡಿ ನೀರಿಗೆ ಬಿದ್ದು 4 ವರ್ಷದ ಬಾಲಕ ಮೃತಪಟ್ಟ ಘಟನೆ ಹೊಸಪೇಟೆ ನಗರದ ಅನಂತಶಯನ ಗುಡಿ ಬಡಾವಣೆಯಲ್ಲಿ ನಡೆದಿದೆ. ವಿರಾಟ್.ಜೆ (4) ಮೃತ ಬಾಲಕ. ಬಾಲಕನ ಮನೆ ಹತ್ತಿರದ ಖಾಲಿ ಜಾಗದಲ್ಲಿ ಚರಂಡಿ ನೀರು ನಿಂತಿತ್ತು. ಆಟವಾಡಲು ಹೋದ ಸಂದರ್ಭ ನೀರು ನಿಂತಿರುವುದನ್ನು ಗಮನಿಸದೇ ಬಾಲಕ ನೀರು ತುಂಬಿದ್ದ ಗುಂಡಿಗೆ ಬಿದ್ದಿದ್ದಾನೆ. ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಬಾಲಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಮೃತ ಬಾಲಕನ ಕುಟುಂಬಸ್ಥರ …

Read More »

ರಾಜ್ಯ ಸರ್ಕಾರದ ಮೇಲೆ ರಾಜ್ಯಪಾಲರಿಗೆ ವಿಶ್ವಾಸದ ಕೊರತೆ ಇದೆ : ಡಾ.ಜಿ.ಪರಮೇಶ್ವರ

ಬೆಂಗಳೂರು: ರಾಜ್ಯ ಸರ್ಕಾರದ ಮೇಲೆ ರಾಜ್ಯಪಾಲರಿಗೆ ವಿಶ್ವಾಸದ ಕೊರತೆ ಇದೆ. ಆದ್ದರಿಂದಲೇ 11 ಮಸೂದೆಗಳನ್ನು ವಾಪಸ್ ಕಳುಹಿಸಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಅಸಮಾಧಾನ ವ್ಯಕ್ತಪಡಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಸ್ಪಷ್ಟಿಕರಣ ಕೇಳಿ ಒಂದೆರಡು ಮಸೂದೆಗಳನ್ನು ವಾಪಸ್ ಕಳುಹಿಸುತ್ತಿದ್ದರು. ಆದರೆ, ಈವರೆಗೆ ಸಾರಸಗಟಾಗಿ ಇಷ್ಟೊಂದು ಮಸೂದೆಗಳನ್ನು ವಾಪಸ್ ಕಳುಹಿಸಿರುವ ಉದಾಹರಣೆಗಳಿರಲಿಲ್ಲ. 11 ಬಿಲ್‌ಗಳನ್ನು ವಾಪಸ್ ಕಳಿಸಿರುವುದು ನೋಡಿದರೆ, ರಾಜ್ಯಪಾಲರಿಗೆ ನಮ್ಮ ಸರ್ಕಾರದ ಮೇಲೆ ವಿಶ್ವಾಸದ ಕೊರತೆ ಆಗಿದೆಯೆಂಬ …

Read More »

ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಬಳಕೆ ಮಾಡಬೇಕು ಎಂದು ಕರೆ ಕೊಟ್ಟ ಖಂಡ್ರೆ

ಗಣೇಶ ಹಬ್ಬದಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಬಳಕೆ ಮಾಡಬೇಕು ಮತ್ತು ಪ್ಲಾಸ್ಟರ್ ಆಫ್ ಪ್ಯಾರಿಸ್ ಮೂರ್ತಿಗಳ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಸೂಚನೆ ಕೊಟ್ಟಿದ್ದಾರೆ. ಇಲ್ಲಿಯವರೆಗೆ ಕೇವಲ ನಿರ್ದೇಶನಗಳನ್ನು ನೀಡಲಾಗುತ್ತಿದೆ. ಆದರೆ ಇದೀಗ ಈ ಆದೇಶವನ್ನು ಉಲ್ಲಂಘಿಸುವ ಮತ್ತು ಜಲಮೂಲಗಳನ್ನು ಕಲುಷಿತಗೊಳಿಸುವವರ ವಿರುದ್ಧ ವಾಯು ಮತ್ತು ಜಲ ಕಾಯ್ದೆಯಡಿ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

Read More »