Breaking News

ಪರಮಾಣು ಕ್ಷಿಪಣಿ ನೆಲೆಗಳ ರಕ್ಷಣೆಗೆ ಚೀನಾ ಭಾರಿ ಸಿದ್ಧತೆ- ಉಪಗ್ರಹ ಚಿತ್ರಗಳಿಂದ ಲೀಕ್ ಆಯ್ತು ಸೀಕ್ರೆಟ್!

ಅಮೆರಿಕಾದೊಂದಿಗೆ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆಯೇ ಚೀನಾ ತನ್ನ ಪರಮಾಣು ಕ್ಷಿಪಣಿ ನೆಲೆಗಳ ಭದ್ರತೆಯನ್ನು ಬಲಪಡಿಸುತ್ತಿರುವುದು ಉಪಗ್ರಹ ಚಿತ್ರಗಳಿಂದ ಬೆಳಕಿಗೆ ಬಂದಿದೆ. ಪಶ್ಚಿಮ ಚೀನಾದ ಶಿಂಜಿಯಾಂಗ್ ಮರುಭೂಮಿ ಪ್ರದೇಶದಲ್ಲಿ ಬೃಹತ್ ಸೇನಾ ಸಂಕೀರ್ಣಗಳನ್ನು ನಿರ್ಮಿಸಲಾಗುತ್ತಿದ್ದು, ಕ್ಷಿಪಣಿ ಉಡಾವಣಾ ಕೇಂದ್ರಗಳು, ಭೂಗತ ಗೋದಾಮುಗಳು ಹಾಗೂ ಸಂಪರ್ಕ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ತಜ್ಞರ ಪ್ರಕಾರ, ಮೊದಲ ದಾಳಿಯ ಬಳಿಕವೂ ತಿರುಗೇಟು ನೀಡುವ ಸಾಮರ್ಥ್ಯ ಉಳಿಸಿಕೊಳ್ಳುವ ಉದ್ದೇಶದಿಂದ ಈ ಕಾಮಗಾರಿ ನಡೆಯುತ್ತಿದೆ. ಕಳೆದ ಆರು ವರ್ಷಗಳಿಂದ ನಿರ್ಮಾಣವಾಗುತ್ತಿರುವ ಈ ನೆಲೆಗಳ ಸುತ್ತ 80ಕ್ಕೂ ಹೆಚ್ಚು ಕ್ಷಿಪಣಿ ಉಡಾವಣಾ ವೇದಿಕೆಗಳು ನಿರ್ಮಾಣವಾಗಿವೆ. ತೈವಾನ್ ವಿಚಾರವಾಗಿ ಅಮೆರಿಕಾ-ಚೀನಾ ಭಿನ್ನಾಭಿಪ್ರಾಯಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಚೀನಾ ತನ್ನ ಪರಮಾಣು ಶಕ್ತಿಯನ್ನು ವೇಗವಾಗಿ ವಿಸ್ತರಿಸುತ್ತಿದೆ ಎಂದು ವರದಿಗಳು ತಿಳಿಸಿವೆ. ಈ ಬೃಹತ್ ನಿರ್ಮಾಣ ಕಾರ್ಯ ಅಂತರರಾಷ್ಟ್ರೀಯ ರಕ್ಷಣಾ ತಜ್ಞರ ಗಮನ ಸೆಳೆದಿದೆ.

Share News

About BigTv News

Check Also

ಯುವತಿ ಕುತ್ತಿಗೆಗೆ ಚಾಕು ಇಟ್ಟು ಸರ ದರೋಡೆ ಯತ್ನ: ಕಿಡಿಗೇಡಿ ಬಂಧನ

ಬೆಂಗಳೂರು: ಇಂದಿರಾನಗರದ ಅಂಗಡಿಯೊಂದಕ್ಕೆ ನುಗ್ಗಿ ಯುವತಿಯ ಕುತ್ತಿಗೆಗೆ ಚಾಕು ಇಟ್ಟು ಚಿನ್ನದ ಸರ ದರೋಡೆಗೆ ಯತ್ನಿಸಿದ ಪ್ರಭುರಾಜ್ (40) ಎಂಬಾತನನ್ನು …

Leave a Reply

Your email address will not be published. Required fields are marked *