Breaking News

Breaking News

ಆಸ್ತಿ ವಿಷಯ ಅಳಿಯನಿಂದಲ್ಲೇ ಮಾವನ ಕೊಲೆ, ಸಿಸಿ ಕ್ಯಾಮೆರಾದಲ್ಲಿ ಸೆರೆ

ಹುಬ್ಬಳ್ಳಿ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಸ್ವಂತ ಅಳಿಯನೇ ಮಾವನನ್ನು ಭೀಕರವಾಗಿ 20 ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಸುಳ್ಳ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದ್ದು ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಸುಳ್ಳದ ಗ್ರಾಮದ ಶಿವಪ್ಪ ಎಂಬಾತನ ಜೊತೆ ಆತನ ಅಳಿಯ ಆಸ್ತಿಯ ವಿಚಾರಕ್ಕೆ ಜಗಳ ತೆಗೆದಿದ್ದ ಇದೇ ವೇಳೆ ಊರಿನಲ್ಲಿರುವ ಹಾಲಿನ ಕೇಂದ್ರದ ಮುಂದೆಯೇ ಚಾಕುವಿನಿಂದ 22 ಕ್ಕೂ ಹೆಚ್ಚು ಬಾರಿ ಇರಿದು ಕೊಲೆ ಮಾಡಿದ್ದಾನೆ …

Read More »

ಪೆಟ್ರೋಲ್ ಟ್ಯಾಂಕರ್ ಏಕಾಏಕಿ ವ್ಯಕ್ತಿಯೋರ್ವನಿಗೆ ಡಿಕ್ಕಿ, ವ್ಯಕ್ತಿ ಸ್ಥಳದಲ್ಲಿಯೇ ಸಾವು

ಹುಬ್ಬಳ್ಳಿ: ತಾಲೂಕಿನ ಕುಸುಗಲ್ ಗ್ರಾಮದ ಬಳಿಯ ನವಲಗುಂದ ರಸ್ತೆಯಲ್ಲಿ ಪೆಟ್ರೋಲ್ ಟ್ಯಾಂಕರ್ ವೊಂದು ಏಕಾಏಕಿ ವ್ಯಕ್ತಿಯೋರ್ವನಿಗೆ ಡಿಕ್ಕಿ ಪಡಿಸಿದ ಪರಿಣಾಮ ಸ್ಥಳದಲ್ಲಿಯೇ ಅಸುನೀಗಿದ ಘಟನೆ ಇಂದು ಬೆಳಿಗ್ಗೆ ನಡೆದಿದೆ. ನೂರಸಾಬ್ ಕಿರೇಸೂರ ಎಂಬ ವ್ಯಕ್ತಿಯೇ ಮೃತ ದುರ್ದೈವಿ ಎಂದು ತಿಳಿದು ಬಂದಿದೆ. ಈತ ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಅತಿ ವೇಗವಾಗಿ ಬಂದ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ಜರುಗಿದ್ದು, ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ …

Read More »

ಲಕ್ಷ್ಮೀ ಹೆಬ್ಬಾಳ್ಕರ್ ಕ್ಷೇತ್ರದ ಸುಳೇಭಾವಿಯಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಮಾವೇಶ

ಬೆಳಗಾವಿ :  ಲಕ್ಷ್ಮೀ ಹೆಬ್ಬಾಳ್ಕರ್ ಕ್ಷೇತ್ರದ ಸುಳೇಭಾವಿಯಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಮಾವೇಶ ನಡೆಸಿದ್ದು, ಸಮಾವೇಶದಲ್ಲಿ ಪರೋಕ್ಷವಾಗಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪಕ್ಕದಲ್ಲೇ ಮೊದಗಾ ಗ್ರಾಮದಲ್ಲಿ ಒಂದು ಪೆಂಡಾಲ್ ಹಾಕಿ ಕುಕ್ಕರ್ ಕೊಡುತ್ತಿದ್ದಾರೆ ಎಂದು ಹೇಳಿದರು. ಈ ವೇಳೆ ಕುಕ್ಕರ್ ಅಲ್ಲ ಮಿಕ್ಸರ್ ಅಂತಾ ಜನ ಹೇಳಿದರು. ಒಂದು ಡಬ್ಬಿ ಕೊಟ್ಟಿದ್ದು ಅದು 70 ರಿಂದ 80 ರೂ. ಇರಬಹುದು.  ಮಿಕ್ಸರ್ ಒಂದು ಆರು ಏಳೂ …

Read More »

ಪಾರ್ಕಿಂಗ್ ಮಾಫಿಯಾ- ಟಿಕೆಟ್ ಜೊತೆಗೆ ಸಾರ್ವಜನಿಕರ ಜೇಬಿಗೆ ಕತ್ತರಿ

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಪಾರ್ಕಿಂಗ್ ಸಮಸ್ಯೆ ಸಾರ್ವಜನಿಕರನ್ನು ಹೈರಾಣ ಮಾಡಿದೆ. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ನಿಗದಿ ಮಾಡಿರುವ ದರ ಒಂದಾದರೇ ವಸೂಲಿ ಮಾಡುವ ದರವೇ ಬೇರೆಯಾಗಿದ್ದು, ಸಾರ್ವಜನಿಕರೇ ಸ್ಪೋಟಕ ಮಾಹಿತಿ ಹೊರಹಾಕಿದ್ದು, ಹಾಡಹಗಲೇ ನಡೆಯುತ್ತಿರುವ ಪಾರ್ಕಿಂಗ್ ಮಾಫಿಯಾ ಬಯಲಿಗೆ ಎಳೆದಿದ್ದಾರೆ. ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಸಾಕಷ್ಟು ಕಟ್ಟಡಗಳು ಪಾರ್ಕಿಂಗ್ ಜಾಗೆಯನ್ನು ನುಂಗಿ ನೀರು ಕುಡಿದಿವೆ. ಅಲ್ಲದೇ ವಾಹನ ಸವಾರರಿಗೆ ರಸ್ತೆಯಲ್ಲಿ ಕರವನ್ನು ವಸೂಲಿ ಮಾಡಿ ಪಾರ್ಕಿಂಗ್ ಮಾಡಲು ಟೆಂಡರ್ …

Read More »

ಕಾಂಗ್ರೆಸ್‌ನವರು ಐಸಿಯುನಿಂದ ಹೊರಗೆ ಬರಬೇಕು-ಮಾಜಿ ಸಿಎಂ ಶೆಟ್ಟ‌ರ್

ಹುಬ್ಬಳ್ಳಿ: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ನೋಡಿದ್ರೆ ಒಂದು ಸಣ್ಣ ಹುಡುಗ ಕೂಡಾ ಭಯ ಪಡುವುದಿಲ್ಲ, ಅದರಲ್ಲಿ ವಿಶ್ವದ ನಂಬರ್ ಒನ್ ನಾಯಕ ನರೇಂದ್ರ ಮೋದಿ ಅವರು ಭಯ ಪಡುತ್ತಾರೆಂದರೆ ಇದು ಈ ವರ್ಷದ ಜೋಕ್ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಲೇವಡಿ ಮಾಡಿದ್ದಾರೆ. ನಗರದಲ್ಲಿಂದು ಮಾತನಾಡಿದ ಅವರು, ಸಿದ್ದರಾಮಯ್ಯ ಅವರನ್ನು ನೋಡಿದ್ರೆ ನರೇಂದ್ರ ಮೋದಿ ಹಾಗೂ ಆರ್‌ಎಸ್‌ಎಸ್‌ನವರಿಗೆ ಭಯ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ನರೇಂದ್ರ …

Read More »

11 ನೇ ಒಣಮೆಣಸಿನಕಾಯಿ ಮೇಳ ಉದ್ಘಾಟನೆ

ಹುಬ್ಬಳ್ಳಿ ಜನೇವರಿ 20 ರಿಂದ 22 ರವರೆಗೆ 3 ದಿನಗಳ ಕಾಲ ಒಣಮೆಣಸಿನಕಾಯಿ ಮೇಳ ನಡೆಯಲಿದೆ. ಒಣಮೆಣಸಿನಕಾಯಿ ಮೇಳದಿಂದ‌ ಮೆಣಸಿನಕಾಯಿ ಬೆಳೆದ ರೈತರಿಗೆ ಯೋಗ್ಯ ಮಾರುಕಟ್ಟೆ ದೊರೆತಂತಾಗಿದೆ ಎಂದು ಮಾಜಿ ಮುಖ್ಯಮಂತ್ರಿ, ಶಾಸಕ ಜಗದೀಶ್ ಶೆಟ್ಟರ್ ಹೇಳಿದರು‌. ಇಂದು ಹುಬ್ಬಳ್ಳಿಯ ಮೂರು ಸಾವಿರ ಮಠದ ಹೈಸ್ಕೂಲ್ ಮೈದಾನದಲ್ಲಿ ಕರ್ನಾಟಕ ರಾಜ್ಯ ಸಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ, ತೋಟಗಾರಿಕೆ ಇಲಾಖೆ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಅಮರಶಿವ …

Read More »

ಜಿಲ್ಲಾ ರಸ್ತೆ ಸುರಕ್ಷತಾ ಮತ್ತು ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಸಭೆ

ಅವಳಿನಗರದ ಕಾಮಗಾರಿಗಳಿಗೆ ಖುದ್ದು ಭೇಟಿ, ಪರಿಶೀಲನೆ; ನಿಗಧಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ: ಜ.26 ರಿಂದ ಡಿಜಿಟಲ್ ಪೇರ್ ಮೀಟರ್ ಅಳವಡಿಕೆ ಪರಶೀಲನಾ ಅಭಿಯಾನ, ತಪ್ಪಿದವರಿಗೆ ರೂ. 5 ಸಾವಿರ ದಂಡ: ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಧಾರವಾಡ : ಅವಳಿನಗರದಲ್ಲಿ ದಿನದಿಂದ ದಿನಕ್ಕೆ ಸಂಚಾರ ದಟ್ಟಣೆ ಹೆಚ್ಚುತ್ತಿದೆ.ಲೋಕೋಪಯೋಗಿ, ರಾಷ್ಟ್ರೀಯ ಹೆದ್ದಾರಿ, ಮಹಾನಗರಪಾಲಿಕೆ ಮತ್ತು ಸ್ಮಾರ್ಟ್ ಸಿಟಿ ಯೋಜನೆಯಡಿ ಗುರುತಿಸಿ, ಕೈಗೊಂಡಿರುವ ಕಾಮಗಾರಿಗಳನ್ನು ನಿಗಧಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು. ಸದ್ಯದಲ್ಲಿಯೇ ಸಂಭಂದಿಸಿದ ಅಧಿಕಾರಿ ಮತ್ತು …

Read More »

ಸಂಚಾರಿ ಪೊಲೀಸರಿಂದ ರಾಷ್ಟ್ರೀಯ ರಸ್ತೆ ಸುರಕ್ಷಿತ ಸಪ್ತಾಹ

ಧಾರವಾಡ: ಧಾರವಾಡ ಸಂಚಾರಿ ಪೊಲೀಸರಿಂದ ರಾಷ್ಟ್ರೀಯ ರಸ್ತೆ ಸುರಕ್ಷಿತ ಸಪ್ತಾಹ ಕಾರ್ಯಕ್ರಮವನ್ನು ಇಂದು ಧಾರವಾಡದ ಕಲಾಭವನದಿಂದ ಆರಂಭಿಸಲಾಯಿತು. ವಿವೇಕಾನಂದ ಸರ್ಕಲ್ ಮಾರ್ಗವಾಗಿ ಅಕ್ಕಿಪೇಟೆ ವರೆಗೂ ಸಂಚರಿಸಿ ಸಾರ್ವಜನಿಕರಿಗೆ ಸಂಚಾರಿ ಸುರಕ್ಷತಾ ಬಗ್ಗೆ ತಿಳುವಳಿಕೆ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಧಾರವಾಡ ಸಂಚಾರಿ ಸಿಬ್ಬಂದಿ ರಸ್ತೆ ಸುರಕ್ಷತಾ ಬಗ್ಗೆ ಮಾಹಿತಿ ನೀಡಿ ಎಲ್ಲಾ ವಿದ್ಯಾರ್ಥಿಗಳಿಗು ಕೂಡ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಧಾರವಾಡ ಸಂಚಾರಿ ಪೊಲೀಸ್ ಎಸಿಪಿ ವಿನೋದ್ ಮುಕ್ತದಾರ್, ಸಂಚಾರಿ ಠಾಣೆ ಸಿಪಿಐ …

Read More »

ಜ. ೨೧,೨೨ ರಂದು ಅಂತರಾಷ್ಟ್ರೀಯ ಗಾಳಿಪಟ, ಸಾಂಸ್ಕೃತಿಕ ಉತ್ಸವ

ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಸಾಂಸ್ಕೃತಿಕ ಮಹೋತ್ಸವ ಹಾಗೂ ಕ್ಷಮತಾ ಸೇವಾ ಸಂಸ್ಥೆ ಸಹಯೋಗದಲ್ಲಿ ಜ. ೨೧,೨೨ ಎರಡು ದಿನಗಳ ಕಾಲ ಅಂತರಾಷ್ಟ್ರೀಯ ಗಾಳಿಪಟ ಹಾಗೂ ಸಾಂಸ್ಕೃತಿಕ ಉತ್ಸವ ಜೆ.ಕೆ. ಶಾಲೆ ಮಾರ್ಗ ವೆಂಕಟರಮಣ ದೇವಸ್ಥಾನ ಎದುರಿಗೆ ಹಮ್ಮಿಕೊಳ್ಳಲಾಗಿದೆ ಎಂದು ಕ್ಷಮತಾ ಸೇವಾ ಸಂಸ್ಥೆಯ ಸಂಚಾಲಕ ಗೋವಿಂದ ಜೋಶಿ ಹೇಳಿದರು. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ನಾಲ್ಕು ವರ್ಷದಿಂದ ಗಾಳಿಪಟ ಉತ್ಸವ ಮಾಡಲಾಗುತ್ತಿದೆ. ಇದರ ಜೊತೆ …

Read More »

ಐಐಟಿಯಲ್ಲಿ ಕಳ್ಳತನ, ತಡವಾಗಿ ಬೆಳಕಿಗೆ ಬಂದ ಪ್ರಕರಣ, ಆರೋಪಿಗಳ ಬಂಧನ

ಧಾರವಾಡ : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡಬೇಕಾಗಿರುವ ಧಾರವಾಡ ಐಐಟಿ ಕೇಂದ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಕಳ್ಳತನವೊಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಧಾರವಾಡ ತಾಲೂಕಿನ ಚಿಕ್ಕಮಲ್ಲಿಗವಾಡ ಹದ್ದಿನಲ್ಲಿ ಬರುವ ಐಐಟಿ ಕಟ್ಟಡದ ಕಾಮಗಾರಿ ಈಗಾಗಲೇ ಮುಗಿಯುವ ಹಂತದಲ್ಲಿದೆ. ಯುವಜನೋತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಹುಬ್ಬಳ್ಳಿಗೆ ಬಂದಾಗಲೇ ಇದರ ಉದ್ಘಾಟನೆಯಾಗಬೇಕಿತ್ತು. ಆದರೆ, ಕೆಲ ಕಾಮಗಾರಿ ಬಾಕಿ ಇದ್ದಿದ್ದರಿಂದ ಇದರ ಉದ್ಘಾಟನೆ ಇದೀಗ ಫೆಬ್ರವರಿ ತಿಂಗಳಿಗೆ ಮುಂದೂಡಲ್ಪಟ್ಟಿದೆ.  ಈ …

Read More »