BigTv News
January 11, 2023
Breaking News, ಹುಬ್ಬಳ್ಳಿ-ಧಾರವಾಡ
ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮದ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸುತ್ತಿದ್ದು, ವಾಣಿಜ್ಯನಗರಿ ಹುಬ್ಬಳ್ಳಿ ಸಜ್ಜಾಗುತ್ತಿದೆ. ನಗರದ ರೈಲ್ವೆ ಮೈದಾನದಲ್ಲಿ ಬೃಹತ್ ವೇದಿಕೆ ತಯಾರಾಗಿದ್ದು, ಪೆಂಡಲ್ ಹಾಕಿ ತಯಾರಿ ಮಾಡಿದ್ದಾರೆ. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಿಂದ ಕ್ರಿಮಿಕೀಟಗಳ ನಾಶ ಮಾಡಲು, ಮೈದಾನದ ಸುತ್ತ ಮತ್ತು ವೇದಿಕೆಯ ಸುತ್ತಲೂ ಫಾಗಿಂಗ್ ಮಾಡುತ್ತಿದ್ದಾರೆ. ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.
Read More »
BigTv News
January 11, 2023
Breaking News, ಹುಬ್ಬಳ್ಳಿ, ಹುಬ್ಬಳ್ಳಿ-ಧಾರವಾಡ
ಧಾರವಾಡ ತಾಲೂಕ ತಡಕೋಡ ಗ್ರಾಮ ಪಂಚಾಯಿತಿಯ ಗ್ರಾಮ ವ್ಯಾಪ್ತಿಯಲ್ಲಿ ಬೂತ್ ವಿಜಯ ಅಭಿಯಾನವನ್ನು ಮಾಜಿ ಶಾಸಕಿ ಸೀಮಾ ಮಸೂತಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದರು.ವಾರ್ಡ್ ನಂಬರ್ 5 ಮತ್ತು 6 ಮತ್ತು ೩ಬೂತ್ ನಂಬರ್ 8,9,11,12 ರಲ್ಲಿ ಅಧ್ಯಕ್ಷರಾದ ಈರಣ್ಣಮೆಟಗುಡ್ಡಿ, ಅರ್ಜುನ್ ಕರಿಕಟ್ಟಿ, ಮಡಿವಾಳಪ್ಪ ಕಾದ್ರೋಳ್ಳಿ, ರುದ್ರಪ್ಪ ತಾವರೆನ್ನವರ್, ಬೂತಿನ ಅಧ್ಯಕ್ಷರು ಹಾಗೂ ಪೇಜ್ ಪ್ರಮುಖರು ಬೂತ್ ಸಮಿತಿಯ ಸದಸ್ಯರು ಗ್ರಾಮಸ್ಥರು ಪ್ರಮುಖರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಹಾಜರಿದ್ದರು.
Read More »
BigTv News
January 11, 2023
Breaking News, ಹುಬ್ಬಳ್ಳಿ-ಧಾರವಾಡ
ಧಾರವಾಡ : ಧಾರವಾಡದಲ್ಲಿ ನಾಳೆ 12 ರಿಂದ 16 ರ ವರೆಗೆ ನಡೆಯಲಿರುವ ರಾಷ್ಟ್ರೀಯ ಯುವಜನೋತ್ಸವ ಹಿನ್ನೆಲೆ ಧಾರವಾಡದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಅವರು ಮಾಧ್ಯಮಗೋಷ್ಠಿ ನಡೆಸಿದರು. ಯುವಜನೋತ್ಸವದ ತಯಾರಿ ಬಗ್ಗೆ ಮಾತನಾಡಿದ ಅವರು, ಭದ್ರತೆ ಸೇರಿ, ಆಹಾರ ಹಾಗೂ ಮಾರ್ಗಗಳ ಬದಲಾವಣೆ ವ್ಯವಸ್ಥೆ ಮಾಡಲಾಗಿದೆ. ಸಂಜೆ ಒಳಗೆ ಎಲ್ಲ ಕಾರ್ಯ ಮುಗಿಯಲಿವೆ. ಪ್ರಧಾನಿ ಕಾರ್ಯಕ್ರಮ ಹಿನ್ನೆಲೆ ಹುಬ್ಬಳ್ಳಿಯ ರೈಲ್ವೆ ಮೈದಾನದಲ್ಲಿ 25 ಸಾವಿರ ಜನರು …
Read More »
BigTv News
January 11, 2023
Breaking News, News, ಬೆಳಗಾವಿ
ಬೆಳಗಾವಿ: ಸ್ಯಾಂಟ್ರೋ ರವಿ ಇಂಥವರೆಲ್ಲಾ ಬಿಜೆಪಿ ಸರ್ಕಾರದ ಮುತ್ತು ರತ್ನಗಳು, ತನಿಖೆ ಮುಗಿಯದೇ ಬಹುತೇಕ್ ಕೇಸ್ಗಳನ್ನು ಕ್ಲೋಸ್ ಮಾಡ್ತಿದ್ದಾರೆ ಎಂದು ಬೆಳಗಾವಿಯಲ್ಲಿ ಬಿಜೆಪಿ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು.ರಾಜ್ಯದಲ್ಲಿರೋದು ಬಿ ರಿಪೋರ್ಟ್ ಸರ್ಕಾರ ಎಂದು ಡಿಕೆಶಿ ಗುಡುಗಿದ್ದಾರೆ. ಈ ಬಗ್ಗೆ ಮಾತನಾಡಿದ ಡಿಕೆಶಿ, ಡಿಸಿಸಿ ಬ್ಯಾಂಕ್ನಲ್ಲಿ 600 ಕೋಟಿ ಸಾಲ ಪಡೆದವರನ್ನು ಸುಮ್ಮನೆ ಬಿಟ್ಟಿದ್ದಾರೆ, ನೋಟಿಸ್ ಕೊಟ್ಟು ನಾಟಕ ಆಡುತ್ತಿದ್ದಾರೆ ಅಷ್ಟೇ, 600 ಕೋಟಿ ಸಾಲ ಕಟ್ಟದವರ …
Read More »
Shaikh BigTv
January 10, 2023
Breaking News, ಅಪರಾಧ, ಹುಬ್ಬಳ್ಳಿ-ಧಾರವಾಡ
BigTv News
January 10, 2023
Breaking News, ಅಪರಾಧ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಹೆಚ್ಚಿದ ಕಳ್ಳರ ಕೈಚಳಕ ಜೋರಾಗಿದೆ. ನಗರದಲ್ಲಿ ಮತ್ತೆ ಸರಣಿ ಕಳ್ಳತನ ಪ್ರಕರಣ ನಡೆದಿದೆ. ಕೇಶ್ವಾಪುರ, ಮಯೂರಿ ಎಸ್ಟೇಟ್ ಮತ್ತಿತರ ಕಡೆ ಸರಣಿ ಕಳ್ಳತನ ನಡೆದಿದೆ. ರಾತ್ರಿ ಹೊತ್ತು ಖದೀಮರು ರಾಜಾರೋಷವಾಗಿ ಬಂದು ಕಳ್ಳತನ ಮಾಡ್ತಿದ್ದಾರೆ. ಮನೆಗಳಿಗೆ ನುಗ್ಗಿ ಚಿನ್ನ, ಬೆಳ್ಳಿ, ನಗದು ಕದಿಯುತ್ತಿದ್ದಾರೆ. ಯಾರೂ ಇಲ್ಲದ ಮನೆಗಳೇ ಕಳ್ಳರ ಟಾರ್ಗೆಟ್ ಆಗಿವೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮನೆಯ ಸಮೀಪದ ಮನೆಯಲ್ಲಿಯೂ ಕಳ್ಳತನ ನಡೆದಿದೆ. …
Read More »
BigTv News
January 10, 2023
Breaking News, ಸುದ್ದಿ, ಹುಬ್ಬಳ್ಳಿ-ಧಾರವಾಡ
ಧಾರವಾಡ: ಜಿಲ್ಲಾಧಿಕಾರಿಗಳ ಕಚೇರಿಯ ಮುಂಬಾಗದಲ್ಲಿ ರಾಜ್ಯದಲ್ಲಿ ಬೆಲೆ ಏರಿಕೆಯಿಂದ ಸಾಮಾನ್ಯ ಬಡಜನರಲ್ಲೂ ಮಧ್ಯಮವರ್ಗದ ಜನರಿಗೆ ಜೀವನ ನಡೆಸುವುದು ತುಂಬಾ ಕಷ್ಟವಾಗಿದೆ ಎಂದು ಇಂದಿನ ದಿನಮಾನದಲ್ಲಿ ಸಿಲೆಂಡರ್,ಪೆಟ್ರೋಲ್, ಡಿಸೇಲ್ ಹಾಗೂ ದಿನ ಬಳಕೆಯ ದಿನಸಿ ಪದಾರ್ಥಗಳ ಬೆಲೆಗಳು ಗಗನಕ್ಕೆ ಏರಿದ್ದು, ಜನಸಾಮಾನ್ಯರು ತಮ್ಮ ಜೀವನವನ್ನು ನಡೆಸುವುದು ತುಂಬಾ ಚಿಂತಾಜನಕವಾಗಿದೆ, ಆದ್ದರಿಂದ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಈ ಎಲ್ಲಾ ಬೆಲೆ ಏರಿಕೆಯನ್ನು ಇಳಿಮುಖ ಮಾಡಿ ಆದೇಶ ಹೂರಡಿಸಬೇಕೆಂದು ಒತ್ತಾಯಿಸಿ …
Read More »
BigTv News
January 10, 2023
Breaking News, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ : ಜನೆವರಿ ೧೨ ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಷ್ಟ್ರೀಯ ಯುವ ಜನೋತ್ಸವ ಕಾರ್ಯಕ್ರಮಕ್ಕೆ ಹುಬ್ಬಳ್ಳಿ-ಧಾರವಾಡಕ್ಕೆ ಆಗಮಿಸಲಿದ್ದು, ಅವರು ಸಂಚರಿಸುವ ಮಾರ್ಗಗಳನ್ನು ಹಾಗೂ ರ್ಯಾಲಿ ನಡೆಸುವ ಮಾರ್ಗಗಳಲ್ಲಿ ಸ್ಮಾರ್ಟ್ ಸಿಟಿ ಮಾಡಿದ ಕಳಪೆ ಕಾಮಗಾರಿಯನ್ನು ಮುಚ್ಚಿಡಲು ತೆಪೆ ಹಚ್ಚುವ ಕಾರ್ಯವನ್ನು ರಾತ್ರೋ ರಾತ್ರಿ ಮಹಾನಗರ ಪಾಲಿಕೆಯ ಅಧಿಕಾರಿಗಳು ನಡೆಸುತ್ತಿದ್ದಾರೆ ಎಂದು ಹು-ಧಾ ಪಾಲಿಕೆ ವಿರೋಧ ಪಕ್ಷದ ನಾಯಕ ದೊರಾಜ್ ಮನ್ನೆಕುಂಟ್ಲಾ ಆರೋಪಿಸಿದರು. ನಗರದ ಪಾಲಿಕೆಯ ವಿರೋಧ ಪಕ್ಷದ ಕಚೇರಿಯಲ್ಲಿ …
Read More »
BigTv News
January 10, 2023
Breaking News, ಹುಬ್ಬಳ್ಳಿ-ಧಾರವಾಡ
ಧಾರವಾಡ: ದಿಕ್ಕಿಲ್ಲದೇ ಮಲಗಿದ್ದ ಭಿಕ್ಷುಕಿ ಮೇಲೆ ನಾಯಿಯ ಗುಪೊಂದು ದಾಳಿ ಮಾಡಿರುವ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ. ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದ ಖಬರಸ್ತಾನ್ ಬಳಿ ಘಟನೆ ನಡೆದಿದೆ. ಭಿಕ್ಷುಕಿಯನ್ನು ಕಚ್ಚಿ ಎಳೆದಾಡಿದ ಬೀದಿ ನಾಯಿಗಳು, ಮಲಗಿದ್ದ ಭಿಕ್ಷುಕಿಯನ್ನು ಎಳೆದೊಯ್ದು ತಿಂದು ಹಾಕಿವೆ. ಇದರಿಂದ ಭಿಕ್ಷುಕಿ ಸ್ಥಳದಲ್ಲೇ ಸಾವನಾಪ್ಪಿದ್ದಾರೆ. ಘಟನೆ ನಡೆದ ಹಿನ್ನೆಲೆಯಲ್ಲಿ ಬೀದಿ ನಾಯಿಗಳ ಹಾವಳಿ ತಪ್ಪಿಸಲು ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ. ಮೃತಪಟ್ಟ ಮಹಿಳೆಯ ಹೆಸರು, ವಿಳಾಸ …
Read More »
BigTv News
January 10, 2023
Breaking News, SPECIAL NEWS
ಬೆಂಗಳೂರು: ರಿಷಬ್ ಶೆಟ್ಟಿ ನಟನೆಯ ‘ಕಾಂತಾರ’ ಸಿನಿಮಾ ಸೂಪರ್ ಹಿಟ್ ಆಗಿದ್ದು ಆಯ್ತು. ಈ ಚಿತ್ರ ಈಗ ಹೊಸ ಮೈಲಿಗಲ್ಲು ಸ್ಥಾಪಿಸುವ ಸೂಚನೆಯನ್ನು ಸಹ ನೀಡಿದೆ. ಆಸ್ಕರ್ ಅಂಗಳಕ್ಕೆ ಕಾಂತಾರ ಸಿನಿಮಾ ಕಾಲಿಟ್ಟಿದ್ದು, ಕಾಂತಾರ 2023ನೇ ಸಾಲಿನ ಆಸ್ಕರ್ ಪ್ರಶಸ್ತಿ ಸ್ಪರ್ಧೆಯಲ್ಲಿದೆ. ಎರಡು ವಿಭಾಗದಲ್ಲಿ ಕಾಂತಾರ ಸಿನಿಮಾಗೆ ನಾಮ ನಿರ್ದೇಶನವಾಗಿದೆ. ಈ ಬಗ್ಗೆ ಹೊಂಬಾಳೆ ಫಿಲಂಸ್ ಟ್ವೀಟ್ನಲ್ಲಿ ಸಂತಸ ಹಂಚಿಕೊಂಡಿದೆ. ಆಸ್ಕರ್ ಸದಸ್ಯರು ಮತ ಚಲಾಯಿಸಿದರೆ ‘ಕಾಂತಾರ’ ಸಿನಿಮಾ ಮುಖ್ಯ ನಾಮಿನೇಷನ್ಗೆ ಎಂಟ್ರಿ …
Read More »