BigTv News
June 3, 2022
Breaking News
ಬಾಗಲಕೋಟೆ : ರಸ್ತೆಯಲ್ಲಿ ನಿಂತಿದ್ದವರಿಗೆ ವಾಹನ ಡಿಕ್ಕಿಯಾಗಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಬಾಡಗಂಡಿ ಗ್ರಾಮದ ಬಳಿ ನಡೆದಿದೆ. ಬಾಡಗಂಡಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 218 ರಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಕ್ಯಾಂಟರ್ ಟೈರ್ ಪಂಚರ್ ಆಗಿದ್ದ ವೇಳೆ ರಸ್ತೆ ಬದಿ ನಿಂತಿದ್ದವರ ಮೇಲೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
Read More »
BigTv News
June 3, 2022
Breaking News, ಬೆಂಗಳೂರು
ಬೆಂಗಳೂರು: ಬೈಕ್ ಮತ್ತು ಲಾರಿ ನಡುವೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಆನೇಕಲ್ ತಾಲೂಕಿನ ಸೂಳಗಿರಿ ಮೇಳುಮಲೈ ಬಳಿ ನಡೆದಿದೆ. 29 ವರ್ಷದ ವರ್ಷದ ರಾಜು ಮೃತಪಟ್ಟ ದುರ್ದೈವಿ ಎಂದು ಗುರುತಿಸಲಾಗಿದೆ. ರಾಜು ಬೆಂಗಳೂರಿನಲ್ಲಿ ದ್ವಿಚಕ್ರವಾಹನದ ಮೆಕ್ಯಾನಿಕ್ ವಿಭಾಗದಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಕೆಲಸ ಮುಗಿಸಿ ಮನೆಗೆ ಹೋಗುವಾಗ ಬೈಕ್ ಹಾಗೂ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. …
Read More »
BigTv News
June 3, 2022
Breaking News
ಬೆಂಗಳೂರು: ರಸ್ತೆಬದಿಯಲ್ಲಿ ಬ್ಯಾರಿಕೇಡ್ ಕಡೆ ಡಿಕ್ಕಿಹೊಡೆದ ಶಾಲಾ ಬಸ್ ಒಂದು ಅಪಘಾತಕ್ಕೀಡಾಗಿ, ಬಸ್ ಚಾಲಕನಿಗೆ ಗಂಭೀರ ಗಾಯಗಳಾಗಿರುವ ಘಟನೆ ಬೊಮ್ಮನಹಳ್ಳಿ ಸಮೀಪದ ಕೂಡ್ಲು ಬಳಿ ನಡೆದಿದೆ.ಹೆಚ್‌ಎಸ್‌ಆರ್ ಲೇಔಟ್‌ನ ಫ್ರೀಡಂ ಇಂಟರ್‌ನ್ಯಾಷನಲ್ ಸ್ಕೂಲ್‌ಗೆ ಸೇರಿದ ಬಸ್, ಬೆಳಗ್ಗೆ ವಿದ್ಯಾರ್ಥಿಗಳನ್ನು ಕರೆತರಲು ಹೋಗಿತ್ತು. ಈ ವೇಳೆ ಕೂಡ್ಲು ಬಳಿ ಇದ್ದ ಬಂಡೆ ಹಳ್ಳಕ್ಕೆ ಶಾಲಾ ಬಸ್ ಬಿದ್ದಿದೆ. ಕೂಡ್ಲು ಬಳಿಯ ರಸ್ತೆ ಪಕ್ಕ ಇರುವ ಬಂಡೆ ಹಳ್ಳ 100 ಅಡಿಗೂ ಹೆಚ್ಚು ಆಳವಿದೆ. …
Read More »
BigTv News
June 3, 2022
Breaking News, ಬೆಂಗಳೂರು
ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಹಂಗಾಮಿಗೆ ಬಿತ್ತನೆ ಬೀಜ ಹಾಗೂ ಗೊಬ್ಬರದ ಕೊರತೆಯಾಗದಂತೆ ಹಿರಿಯ ಅಧಿಕಾರಿಗಳು ಖುದ್ದು ನಿಗಾ ವಹಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಇಂದು ಕೃಷಿ ಇಲಾಖೆಯ ಆಯವ್ಯಯ ಅನುಷ್ಠಾನದ ಪ್ರಗತಿ ಪರಿಶೀಲನೆ ಸಭೆ ನಡೆಸಿದರು. ರಾಜ್ಯದಲ್ಲಿ ಮೇ 31ರ ಮಾಹಿತಿಯಂತೆ 1.26 ಲಕ್ಷ ಮೆಟ್ರಿಕ್ ಟನ್ ಡಿಎಪಿ ಲಭ್ಯವಿದ್ದು, ಒಟ್ಟಾರೆ, 7.64 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಲಭ್ಯವಿದೆ. ರಾಜ್ಯದ ಬೇಡಿಕೆ …
Read More »
BigTv News
June 3, 2022
Breaking News, ದೆಹಲಿ
ನವದೆಹಲಿ: ಇನ್ನು ಕೆಲ ದಿನಗಳಲ್ಲಿ ನೈರುತ್ಯ ಮುಂಗಾರು ಅಪ್ಪಳಿಸಲಿದ್ದು, ಕೆಲ ರಾಜ್ಯಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ನೈಋತ್ಯ ಮಾನ್ಸೂನ್ ಕೇರಳ, ತಮಿಳುನಾಡು ಮತ್ತು ಕರ್ನಾಟಕದ ಭಾಗಗಳಲ್ಲಿ ಅಬ್ಬರಿಸಲಿದೆ. ಆದರೆ ಉತ್ತರ ಭಾರತದಲ್ಲಿ ಮೊದಲ ಮಾನ್ಸೂನ್ ಮಳೆ ಸುರಿಯುವುದು ಜೂನ್ ಅಂತ್ಯದ ವೇಳೆಗೆ ಎಂದು ಹೇಳಲಾಗುತ್ತಿದೆ. “ಮಧ್ಯ ಅರೇಬಿಯನ್ ಸಮುದ್ರದ ಕೆಲವು ಭಾಗಗಳು, ಕರ್ನಾಟಕದ ಕೆಲವು ಭಾಗಗಳು, ಕೊಂಕಣ ಮತ್ತು ಗೋವಾದ …
Read More »
BigTv News
June 2, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ : ವಾಣಿಜ್ಯ ನಗರಿಯಲ್ಲಿ ಕಳೆದ ಹಲವು ದಿನಗಳಿಂದಲು ಶಾಂತವಾಗಿದ್ದ ವರುಣ ಮತ್ತೆ ತನ್ನ ಆರ್ಭಟವನ್ನು ಇಂದು ಗುರುವಾರ ಮತ್ತೆ ಶುರುಮಾಡಿದ್ದಾನೆ. ಬೆಳಿಗ್ಗೆಯಿಂದಲು ಸಹಜವಾಗಿದ್ದ ವಾತಾವರಣವು ಇಂದು ಸಾಯಂಕಾಲ ದಿಡಿರಣೆ ಮೋಡಕಟ್ಟಿದ ವಾತಾವರಣವಾಗಿ ಬದಲಾಗಿ ಮಳೆ ಸುರಿದಿದ್ದು ವಾಣಿಜ್ಯ ನಗರಿಗೆ ವರುಣ ತಂಪು ಏರದಿದ್ದಾನೆ.
Read More »
BigTv News
June 2, 2022
Breaking News, ಮಂಡ್ಯ
ಮಂಡ್ಯ: ಜಿಲ್ಲೆಯಲ್ಲೊಂದು ಲವ್ ಸೆಕ್ಸ್ ದೋಖ ನಡೆದಿದೆ. ಮದುವೆ ಆಗುವ ನೆಪದಲ್ಲಿ ವಿದ್ಯಾರ್ಥಿನಿಯ ಬಾಳಲ್ಲಿ ವಾರ್ಡನ್ ಚೆಲ್ಲಾಟವಾಡಿದ್ದಾನೆ. ಹಾಸ್ಟೆಲ್ ವಾರ್ಡನ್ ಬಣ್ಣದ ಮಾತಿಗೆ ಸೋತು ವಿದ್ಯಾರ್ಥಿನಿ ಜೀವನ ಹಾಳು ಮಾಡಿಕೊಂಡಿರುವ ಘಟನೆ ಮದ್ದೂರು ತಾಲೂಕಿನಲ್ಲಿ ನಡೆದಿದೆ. ಮದುವೆ ಆಗೋ ಆಸೆ ಹುಟ್ಟಿಸಿ ಕಾಮ ತೃಷೆ ವಾರ್ಡನ್ ಸತೀಶ್ ತೀರಿಸಿಕೊಂಡಿದ್ದಾರೆ. ಓಬಿಸಿ ಹಾಸ್ಟಲ್ ನಲ್ಲಿ ಸತೀಶ್ ವಾರ್ಡನ್ ಆಗಿದ್ದರು. ನಿಶ್ಚಿತಾರ್ಥ ಮಾಡಿ ಕೊಂಡು ಪದೇ ಪದೇ ದೈಹಿಕ ಸಂಪರ್ಕ ಬೆಳೆಸಿದ್ದರು. ಸತೀಶ್ …
Read More »
BigTv News
June 2, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ; ಮಸೀದಿಗಳಲ್ಲಿ ಅಳವಡಿಸಲಾಗಿರುವ ಮೈಕ್‌ಗಳನ್ನು ತೆರವುಗೊಳಿಲ್ಲ ಸರ್ಕಾರದ ವಿರುದ್ಧ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಸಮರ ಸಾರಿದ್ದು ಭಾರತೀಯ ಜನತಾ ಪಕ್ಷದ ಶಾಸಕರ ಕಚೇರಿ ಮುಂದೆ ಧರಣಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ನಗರದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು,ಮಸೀದಿಗಳ ಮೇಲೆ ಅಳವಡಿಸಲಾಗಿರುವ ಮೈಕ್ ನಿಷೇಧ ಮಾಡಿ ಆದೇಶ ಹೊರಡಿಸಿ ಹಲವು ದಿನಗಳು ಕಳೆದಿವೆ. ಆದರೆ, ಸುಪ್ರೀಂ ಕೋರ್ಟ್ ಆದೇಶ ಇದುವರೆಗೆ ಪಾಲನೆ ಆಗುತ್ತಿಲ್ಲ. ಬೆಳ್ಳಂಬೆಳಗ್ಗೆ ಮಸೀದಿಗಳ ಮೇಲೆ ಮೈಕ್ …
Read More »
BigTv News
June 2, 2022
Breaking News
ಹಾವೇರಿ: ಜಿಲ್ಲೆಯ ಶಿಗ್ಗಾವಿ ಪಟ್ಟಣದ ಎಪಿಎಂಸಿ ಮಾರುಕಟ್ಟೆ ಬಳಿ ಚಿನ್ನಿದಾಂಡು ಆಡುತ್ತಿದ್ದ ಐವರು ಹಾಗೂ ವಾಹನ ಮಾಲೀಕನ ನಡುವೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ ಕಂಡಿದೆ. ಉಮೇಶ್ ಶಿವಜೋಗಿ ಮಠ (40) ಮೃತ ವ್ಯಕ್ತಿ.ಎಪಿಎಂಸಿ ಬಳಿಯ ವೇ ಬ್ರಿಡ್ಜ್ ಹತ್ತಿರ ಕೆಲವು ಹುಡುಗರು ಚಿನ್ನಿದಾಂಡು ಆಡುತ್ತಿದ್ದರು. ಈ ವೇಳೆ ಚಿನ್ನಿ, ಉಮೇಶನ ಟಿಪ್ಪರ್ಗೆ ಬಂದು ಬಡಿದಿದ್ದು, ಜಗಳ ಶುರುವಾಗಿದೆ. ಕೋಪಗೊಂಡು ಐದಾರು ಜನ ಉಮೇಶ್ ಮೇಲೆ ಹಲ್ಲೆ ನಡೆಸಿದ್ದಾರೆ. ಪರಿಣಾಮ …
Read More »
BigTv News
June 2, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ಇಷ್ಟು ದಿನ ಸಾರ್ವಜನಿಕರಲ್ಲಿ ಹತ್ತು ರೂಪಾಯಿ ಹಾಗೂ ಇಪ್ಪತ್ತು ರೂಪಾಯಿ ಕ್ವಾಯಿನ್ ಬಗ್ಗೆ ಒಂದು ಆತಂಕ ಇತ್ತು. ಆದರೆ ಹುಬ್ಬಳ್ಳಿಯ ಹೊಟೇಲ್ ವರ್ತಕರು ಈ ಆತಂಕಕ್ಕೆ ಬ್ರೇಕ್ ಹಾಕಿದ್ದು, ಈಗ 10,20 ರೂಪಾಯಿ ಮುಖ ಬೆಲೆಯ ನಾಣ್ಯಗಳನ್ನು ಯಾವುದೇ ಆಕ್ಷೇಪಣೆ ಇಲ್ಲದೆ ಪಡೆಯುತ್ತಿದ್ದಾರೆ. ಕೆಲವು ತಿಂಗಳು ಹಿಂದೆಯಷ್ಟೆ ಚಾಲ್ತಿಯಲ್ಲಿದ್ದ ಹತ್ತು ರೂಪಾಯಿ ನಾಣ್ಯ ಇತ್ತಿಚಿನ ದಿನಗಳಲ್ಲಿ ಚಲಾವಣೆಯೇ ಕಾಣುತ್ತಿರಲಿಲ್ಲ. ಅಲ್ಲದೇ ಜನರು ಕೂಡ ಹತ್ತು ರೂಪಾಯಿ ನಾಣ್ಯ ನೋಡಿದರೇ …
Read More »