BigTv News
May 11, 2022
Breaking News
ಧಾರವಾಡದಿಂದ ಯಾದವಾಡ ಗ್ರಾಮದ ಕಡೆಗೆ ಹೊರಟಿದ್ದ ಬೈಕ್ ಸ್ಕಿಡ್ ಆಗಿ ಬಿದ್ದ ಪರಿಣಾಮ ಇಬ್ಬರಿಗೆ ಗಂಭೀರ ಸ್ವರೂಪದ ಗಾಯಗಳಾದ ಘಟನೆ ಧಾರವಾಡ ತಾಲೂಕಿನ ದಾಸನಕೊಪ್ಪ ಗ್ರಾಮದ ಬಳಿ ಸಂಭವಿಸಿದೆ. ಗಾಯಗೊಂಡವರನ್ನು ಯಾದವಾಡ ಗ್ರಾಮದ ಬೀಬಿಜಾನ್ ಹಾಗೂ ಅವರ ಅಳಿಯ ಎಂದು ಗುರುತಿಸಲಾಗಿದೆ . ಸ್ಕಿಡ್ ಆಗಿ ಬಿದ್ದ ನಂತರ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರನ್ನು ಚಿಕಿತ್ಸೆಗೆಂದು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು , ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ .
Read More »
BigTv News
May 11, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ : ತಾಲೂಕಿನ ಕುಸುಗಲ್ ನಿಂದ ಎ.ಪಿ.ಎಂ.ಸಿ ರಸ್ತೆ ಮಾರ್ಗದಲ್ಲಿರುವ ವಿದ್ಯುತ್ ಕಂಬ ರಸ್ತೆ ಮೇಲೆ ಬಿಳ್ಳುವ ಹಂತಕ್ಕೆ ತಲುಪಿದ್ದು ಈಗ ವಾಹನ ಸವಾರರು ದಿನನಿತ್ಯ ಭಯದಿಂದ ಓಡಾಡುತ್ತಿದ್ದಾರೆ . ಈ ಮಾರ್ಗವಾಗಿ ನೂರಾರು ಜನರು ತಮ್ಮವಾಹನ ರೈತರು ತಮ್ಮಚಕ್ಕಡಿ ಮೂಲಕ ಜಮೀನಿಗೆ ಹೋಗುತ್ತಾರೆ , ಮೊನ್ನೆ ಸುರಿದ ಗಾಳಿ ಮಳೆಗೆ ವಿದ್ಯುತ್ ಕಂಬ ರಸ್ತೆ ಮೇಲೆ ಬಾಗಿದೆ.ಇದರಿಂದಾಗಿ ಹೆಸ್ಕಾಮ್ ಅಧಿಕಾರಿಗಳ ಕೂಡಲೇ ಕಂಬ ತೆರವುಗೊಳಿಸಿ ಸಮಸ್ಯೆ ಬಗೆಹರಿಸುವ ಕೆಲಸ …
Read More »
BigTv News
May 11, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ನಗರದ ನಾಗಶೆಟ್ಟಿಕೋಪ್ಪಶ್ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಎಸ್.ಎಸ್.ಶೆಟ್ಟರ್ ಫೌಂಡೇಶನ್ ವತಿಯಿಂದ ಹಾಗೂ ಮಾಜಿ ಸಿಎಮ್ ಅವರ ಪುತ್ರ ಸಂಕಲ್ಪ ಶೆಟ್ಟರ್ ಭೇಟಿ ನೀಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು . ಈ ಸಂದರ್ಭದಲ್ಲಿ ಉಮಾ ಮುಕುಂದ , ಶಪವನ್ ಹಳಿಯಾಳ ಹಾಗೂ ಪ್ರಮುಖರು ಉಪಸ್ಥಿತರಿದ್ದರು.
Read More »
BigTv News
May 11, 2022
Breaking News
ಕುಂದಗೋಳ : ತಾಲೂಕಿನಲ್ಲಿ ಮುಂಬರುವ ಚುನಾವಣೆಗೂ ಮುನ್ನ ಕಾರ್ಯಕರ್ತರು ಪಕ್ಷ ಸಂಘಟನೆ ಮಾಡುವಂತೆ ಜಿಲ್ಲಾ ಗ್ರಾಮೀಣ ಅಧ್ಯಕ್ಷ ಬಸವರಾಜ ಕುಂದಗೋಳಮಠ ಹೇಳಿದ್ದಾರೆ . ಈ ಕುರಿತು ಮಾತಾನಾಡಿ ದೂರದಲ್ಲಿ ಬಿಜೆಪಿಯ ಇನ್ನಷ್ಟು ಬಲಗಳ ಬೇಕಾದರೆ ಕಾರ್ಯಕರ್ತರು ತಮ್ಮ ಆಸಕ್ತಿಯಿಂದ ಪಕ್ಷದ ಸಂಘಟನೆ ಮಾಡಬೇಕೆಂದು ಸಲಹೆ ನೀಡಿದರು . ಒಗ್ಗಟ್ಟಾಗಿ ಪಕ್ಷ ಸಂಘಟನೆ ಮಾಡುವುದರ ಮೂಲಕ ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಬರುವಂತೆ ಮಾಡಬೇಕೆಂದು ಕರೆ ನೀಡಿದರು .
Read More »
BigTv News
May 11, 2022
Breaking News, ಬೆಂಗಳೂರು
ಮೈಸೂರು: ಸ್ಯಾಂಡಲ್ ವುಡ್ ಖ್ಯಾತ ನಟ, ನಿರ್ಮಾಪಕರಾಗಿದ್ದಂತ ದಿವಂಗತ ಎಂ.ಪಿ ಶಂಕರ್ ಅವರ ಪತ್ನಿ ಮಂಜುಳಾ ಶಂಕರ್ (75) ಹೃದಯಾಘಾತದಿಂದ ಮಂಗಳವಾರ ನಿಧನರಾಗಿದ್ದಾರೆ. ಮೈಸೂರಿನ ವಿಜಯನಗರದ ತಮ್ಮ ಸ್ವಗೃಹದಲ್ಲಿ ಕೆಲ ದಿನಗಳ ಹಿಂದೆಯೂ ಹೃದಯಾಘಾತಕ್ಕೆ ಒಳಗಾಗಿದ್ದರು.ಇದೀಗ ವಿಧಿವಶರಾದರು.
Read More »
BigTv News
May 11, 2022
Breaking News, ಬೆಂಗಳೂರು
ಬೆಂಗಳೂರು: ರಾಜ್ಯ ಪೊಲೀಸ್ ತರಬೇತಿ ವಿಭಾಗದ ಡಿಜಿಪಿ ಡಾ.ಪಿ. ರವೀಂದ್ರನಾಥ್ ಅವರು ತಮ್ಮ ಹುದ್ದೆಗೆ ಮಂಗಳವಾರ ರಾಜೀನಾಮೆ ನೀಡಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಅವರಿಗೆ ಪತ್ರ ಸಲ್ಲಿಸಿದ್ದಾರೆ. ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ (ಡಿಸಿಆರ್‌ಇ) ಡಿಜಿಪಿ ಆಗಿದ್ದ ರವೀಂದ್ರನಾಥ್ ಅವರನ್ನು ಪೊಲೀಸ್ ತರಬೇತಿ ವಿಭಾಗಕ್ಕೆ ಇತ್ತೀಚೆಗಷ್ಟೇ ವರ್ಗಾಯಿಸಲಾಗಿತ್ತು.
Read More »
BigTv News
May 11, 2022
Breaking News, ಬೆಂಗಳೂರು
ಬೆಂಗಳೂರು: ಕೊರೋನಾ ಕಾರಣದಿಂದಾಗಿ ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದಂತ ಮಾವು ಮೇಳಕ್ಕೆ ಮತ್ತೆ ಜೀವ ಬಂಧಿದೆ. ಇದೇ ಮೇ.26ರಿಂದ ನಗರದ ಲಾಲ್ ಬಾಗ್ ಮತ್ತು ಕಬ್ಬನ್ ಉದ್ಯಾನವನದಲ್ಲಿ ಮಾವು ಮೇಳವನ್ನು ಆಯೋಜಿಸಲಾಗಿದೆ. ಈ ಕುರಿತು ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಅಧ್ಯಕ್ಷ ಕೆ.ವಿ ನಾಗರಾಜ್, ವ್ಯವಸ್ಥಾಪಕ ನಿರ್ದೇಶಕ ಸಿ.ಜಿ ನಾಗರಾಜ್ ಮತ್ತು ರಾಜ್ಯ ತೋಟಗಾರಿಕೆ ಇಲಾಖೆ ನಿರ್ದೇಶಕ ನಾಗೇಂದ್ರ ಪ್ರಸಾದ್ ನೇತೃತ್ವದಲ್ಲಿ ನಡೆದಂತ ಸಭೆಯಲ್ಲಿ, ಈ ತೀರ್ಮಾನ ಕೈಗೊಳ್ಳಲಾಗಿದೆ.
Read More »
BigTv News
May 11, 2022
Breaking News
ಸಮಾಜದಲ್ಲಿ ಬೆಂಕಿ ಇಡುವ ಕೆಲಸ ಮಾಡ್ತಿರೋ ಪ್ರಮೋದ್ ಮುತಾಲಿಕ್ ಅಂತವರನ್ನ ಮೊದಲು ಒದ್ದು ಒಳಗೆ ಹಾಕಬೇಕು. ಆಗ ಎಲ್ಲವೂ ಸರಿ ಹೋಗುತ್ತೆ ಅಂತ ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರೋ ಮುತಾಲಿಕ್, ನಿಮ್ಗೆ ಹುಚ್ಚು ಹಿಡಿದಿದೆ. ನೀವು ಹೀಗೆ ಹೇಳಿದ್ರೆ ಮುಸ್ಲಿಮರು ವೋಟ್ ಹಾಕ್ತಾರೆ ಅನ್ಕೋಬೇಡಿ ಎಂದಿದ್ದಾರೆ. ಜೊತೆಗೆ ಧ್ವನಿವರ್ಧಕ ಬಗ್ಗೆ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಬೇಕು. ಆಗ ಎಲ್ಲರಿಗೂ ರೂಲ್ಸ್ ಏನು ಅನ್ನೋದು ಗೊತ್ತಾಗುತ್ತೆ ಅಂತಾನೂ …
Read More »
BigTv News
May 11, 2022
Breaking News, ಬೆಂಗಳೂರು
ಬೆಂಗಳೂರು: ಆಜಾನ್ ಮತ್ತು ಸುಪ್ರಭಾತ ವಿವಾದಕ್ಕೆ ತೆರೆ ಎಳೆಯಲು ಧ್ವನಿವರ್ಧಕ ವಿಚಾರದಲ್ಲಿ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಸುಪ್ರೀಂ ಕೋರ್ಟ್ 2002ರ ಆದೇಶದಂತೆ ಯಾವ ಪ್ರದೇಶದಲ್ಲಿ ಎಷ್ಟು ಡೆಸಿಬಲ್ ಧ್ವನಿವರ್ಧಕ ಬಳಸಬೇಕೆಂದು ರಾಜ್ಯ ಸರ್ಕಾರ ತನ್ನ ಮಾರ್ಗಸೂಚಿಯಲ್ಲಿ ತಿಳಿಸಿದೆ ಕರ್ನಾಟಕ ಶಬ್ದ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಾರ ಬೆಳಗ್ಗೆ 10 ರಿಂದ ಸಂಜೆ 6ವರೆಗೆ ಇಂತಿಷ್ಟೇ ಡೆಸಿಬಲ್ ಹಾಗೂ ರಾತ್ರಿ 10 ರಿಂದ ಬೆಳಗ್ಗೆ 6 ರವರಗೆ …
Read More »
BigTv News
May 11, 2022
Breaking News, ಬೆಂಗಳೂರು
ಬೆಂಗಳೂರು: ನಗರದ ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದ ಮಹಾನುಭಾವನಿಗೆ ಎರಡು ಬಾರಿ ಟಿಕೆಟ್ ಕೊಟ್ಟೆ. ನನಗೆ ಟೋಪಿ ಹಾಕಿ ಹೋದ ಎಂದು ಅಬಕಾರಿ ಸಚಿವ ಗೋಪಾಲಯ್ಯ ಹೆಸರು ಪ್ರಸ್ತಾಪಿಸದೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಮಹಾಲಕ್ಷ್ಮೀ ಲೇಔಟ್‌ನಲ್ಲಿ ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸ್ವಾಮಿಜಿಯೊಬ್ಬರು ಏನೋ ತಪ್ಪು ಮಾಡಿಕೊಂಡಿದ್ದಾನೆ. ಒಂದು ಬಾರಿ ಟಿಕೆಟ್ ಕೊಡಿ ಎಂದಿದ್ದರು. ಅವರ ಸಲಹೆ ಮೇರೆಗೆ ಟಿಕೆಟ್ ಕೊಟ್ಟೆ. ಆಮೇಲೆ ಸಾವಿರಾರು ಕೋಟಿ …
Read More »