BigTv News
June 28, 2026
Breaking News
ಬೆಂಗಳೂರು: ಜೆಪಿ ನಗರದ ಐಜಿ ಸರ್ಕಲ್‌ನಲ್ಲಿ ರೌಡಿಶೀಟರ್ ರಾಜು ಅಲಿಯಾಸ್ ಹಲ್ಮುರ್ಕ್ ರಾಜಾ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ರಾಜು ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ, ಹಳೆಯ ದ್ವೇಷವೇ ಕೊಲೆಗೆ ಕಾರಣವಾಗಿರಬಹುದು ಎನ್ನಲಾಗಿದೆ. ರಾಜು ಹಲವು ಕೊಲೆ ಹಾಗೂ ಕೊಲೆ ಯತ್ನ ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಸುಮಾರು 10 ವರ್ಷಗಳ ಹಿಂದಿನ ಕೊಲೆ ಪ್ರಕರಣದಲ್ಲೂ ಭಾಗಿಯಾಗಿದ್ದ ಎಂದು …
Read More »
BigTv News
June 28, 2026
Breaking News
ಹುಬ್ಬಳ್ಳಿ: ರೈಲ್ವೆ ಟೆಂಡರ್‌ನಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಪಡೆಯಬಹುದು ಎಂದು ನಗರದ ವಿಲ್ಸನ್ ತಲಪತಿ ಅವರನ್ನು ನಂಬಿಸಿ, ₹86.06 ಲಕ್ಷ ಪಡೆದು ವಂಚಿಸಿದ ವ್ಯಕ್ತಿಯ ವಿರುದ್ಧ ಹುಬ್ಬಳ್ಳಿ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳೀಯ ನಿವಾಸಿ ರಮೇಶ ವೈ.ವಿರುದ್ಧ ದೂರು ನೀಡಲಾಗಿದೆ. ರೈಲ್ವೆ ಟೆಂಡರ್‌ಗಳಲ್ಲಿ ಹೂಡಿಕೆ ಮಾಡಿದರೆ ಶೇ 18ರಿಂದ ಶೇ 28ರವರೆಗೆ ಲಾಭಾಂಶ ನೀಡುವುದಾಗಿ ಹೇಳಿ ಆರೋಪಿಯು, 2024ರಿಂದ ಫೆಬ್ರುವರಿ 2025ರವರೆಗೆ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾನೆ …
Read More »
BigTv News
June 28, 2026
Breaking News
ಕುರುಗೋಡು (ಬಳ್ಳಾರಿ): ಮೊಹರಂ ಆಚರಣೆಗಾಗಿ ನಿರ್ಮಿಸಿದ್ದ ಅಲಾಯಿ ಕುಣಿಗೆ ಬಿದ್ದು ಯುವಕನೊಬ್ಬ ಮೃತಪಟ್ಟ ಘಟನೆ ಬಳ್ಳಾರಿ ಜಿಲ್ಲೆ ಕುರುಗೋಡು ತಾಲೂಕಿನ ಕ್ಯಾದಿಗೆಹಾಳ್‌ನಲ್ಲಿ ಸಂಭವಿಸಿದೆ. ಮೊಹರಂ ಆಚರಣೆಗಾಗಿ ಪೀರಲು ದೇವರ ಪ್ರತಿಷ್ಠಾಪಿಸಿ ಅಲಾಯಿ ಕುಣಿ (ಬೆಂಕಿ ಉರಿಸುವ ಹೊಂಡ) ತೋಡಿ ಬೆಂಕಿ ಹಾಕಲಾಗಿತ್ತು. ಶುಕ್ರವಾರ ಹಬ್ಬದ ಆಚರಣೆ ಸಂದರ್ಭ ಈ ಕುಣಿಯ ಬೆಂಕಿಗೆ ಬಿದ್ದು ಮಡಿವಾಳ ದೇವರಾಜ್ (28) ಗಂಭೀರವಾಗಿ ಗಾಯಗೊಂಡಿದ್ದ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ …
Read More »
BigTv News
June 28, 2026
Breaking News
ಬೆಂಗಳೂರು: ನಗರದ ಕುರುಬರಹಳ್ಳಿಯ ಕೈಗಾರಿಕಾ ಶೆಡ್‌ನಲ್ಲಿ ದಾಖಲೆಗಳಿಲ್ಲದ ₹2.98 ಕೋಟಿ ನಗದನ್ನು ಮಹಾಲಕ್ಷ್ಮಿ ಲೇಔಟ್ ಪೊಲೀಸರು ಜಪ್ತಿ ಮಾಡಿದ್ದಾರೆ. ನಾಲ್ಕು ಬ್ಯಾಗ್‌ಗಳಲ್ಲಿ ಬಚ್ಚಿಟ್ಟಿದ್ದ ಹಣ ಜೂನ್ 2ರಂದು ಗಸ್ತಿನ ವೇಳೆ ದೊರೆತ ಖಚಿತ ಮಾಹಿತಿಯ ಮೇರೆಗೆ ಪತ್ತೆಯಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಈ ಹಣ ತಾವರೆಕೆರೆ ನಿವಾಸಿ ನಾಗರಾಜ್‌ಗೆ ಸೇರಿದ್ದು, ಐಟಿ ಅಧಿಕಾರಿಗಳ ಕಣ್ಣು ತಪ್ಪಿಸಲು ಸ್ನೇಹಿತ ವೆಂಕಟೇಶ್‌ಗೆ ಸೇರಿದ ಶೆಡ್‌ನಲ್ಲಿ ಇಡಲಾಗಿತ್ತು ಎಂದು ಪೊಲೀಸರು ಶಂಕಿಸಿದ್ದಾರೆ. ಪ್ರಕರಣದ ಕುರಿತು ಆದಾಯ …
Read More »
BigTv News
June 27, 2026
Breaking News
ಕಿತ್ತೂರು : ಇಲ್ಲಿನ ವಿವಿಧ ಗ್ರಾಮಗಳಲ್ಲಿ ಸರಣಿ ಕಳ್ಳತನ ಎಸಗಿ ತಲೆಮರೆಸಿಕೊಂಡಿದ್ದಇಬ್ಬರು ಆರೋಪಿಗಳನ್ನು ಕಿತ್ತೂರು ಠಾಣೆಯ ಪೊಲೀಸರು ಯಶಸ್ವಿ ಕಾರ್ಯಾಚರಣೆಯ ಮೂಲಕ ಸೆರೆಹಿಡಿದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಂಗೋಳ್ಳಿ ಹಾಗೂ ಅವರಾದಿ ಗ್ರಾಮಗಳ ಮನೆಗಳಲ್ಲಿ ನಡೆದಿದ್ದ ಕಳವು ಪ್ರಕರಣಗಳನ್ನು ಭೇದಿಸುವಲ್ಲಿ ಕೊನೆಗೂ ಪೊಲೀಸ್ ತಂಡ ಯಶಸ್ವಿಯಾಗಿದೆ. ಈ ಬಂಧಿತ ಆರೋಪಿಗಳನ್ನು ಹೊಳಿ ನಾಗಲಾಪುರದ ಪತ್ರಯ್ಯ ನಿಂಗಯ್ಯ ಹಿರೇಮಠ ಮತ್ತು ಬೈಲಹೊಂಗಲದ ಅನಿಲಕುಮಾರ ಹಿರೇಮಠ ಎಂದು ಗುರುತಿಸಲಾಗಿದ್ದು, ಸದ್ಯ ಇವರನ್ನು ತೀವ್ರ ವಿಚಾರಣೆಗೆ …
Read More »
BigTv News
June 27, 2026
Breaking News
ಮಂಗಳೂರು: ಪೊಲೀಸರ ಮೇಲೆ ಹಲ್ಲೆ ಮಾಡಿ ನಟೋರಿಯಸ್ ಕ್ರಿಮಿನಲ್ ಕೈಕೋಳದೊಂದಿಗೆ ಪರಾರಿ ಆಗಿರುವಂತಹ ಘಟನೆ ಮಂಗಳೂರು ನಗರದ ರೋಜಾರಿಯೋ ಚರ್ಚ್ ರಸ್ತೆಯಲ್ಲಿ ನಡೆದಿದೆ. ಬಾಗಲಕೋಟೆ ಮೂಲದ ಅಲ್ತಾಫ್ ಹುಸೇನ್ ಪರಾರಿಯಾದ ಕ್ರಿಮಿನಲ್. ಇತ ಪರಾರಿ ಆಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿದೆ. ವಾಹನ ಕಳ್ಳತನ, ಸರಗಳ್ಳತನ, ಸುಲಿಗೆ ಕೃತ್ಯದಲ್ಲಿ ಅಲ್ತಾಫ್ ಹುಸೇನ್ ತೊಡಗಿಸಿಕೊಂಡಿದ್ದ. ಉತ್ತರ ಪ್ರದೇಶ ಮೂಲದ ಮಹಮ್ಮದ್ ಸಿದ್ದಿಕ್, ರವಿ ಬೌರ ಎಂಬ ಇಬ್ಬರು ಸಹಚರರ ಜೊತೆ ಸೇರಿ …
Read More »
BigTv News
June 27, 2026
Breaking News
ನವದೆಹಲಿ ಕೆಂಪುಕೋಟೆ ಸಮೀಪ ನಡೆದ ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ಮೂವರು ಆರೋಪಿಗಳ ವಿರುದ್ಧ ಹೆಚ್ಚುವರಿ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದೆ. ಜಮೀರ್ ಅಹ್ಮದ್ ಆಲಂಗೀರ್, ತುಫೈಲ್ ಅಹ್ಮದ್ ಬಟ್ ಹಾಗೂ ತಲೆಮರೆಸಿಕೊಂಡಿರುವ ಮುಜಫರ್ ಅಹ್ಮದ್ ಹೆಸರು ಆರೋಪಪಟ್ಟಿಯಲ್ಲಿ ಸೇರಿದೆ. ಇದರೊಂದಿಗೆ ಪ್ರಕರಣದಲ್ಲಿ ಆರೋಪಪಟ್ಟಿ ಸಲ್ಲಿಸಿರುವ ಆರೋಪಿಗಳ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ಈ ಹಿಂದೆ ಪ್ರಮುಖ ಸಂಚುಕೋರ ಡಾ. ಉಮರ್ ಉನ್ ನಬಿ ಸೇರಿ 10 ಮಂದಿಯ ವಿರುದ್ಧ ಎನ್‌ಐಎ …
Read More »
BigTv News
June 27, 2026
Breaking News
ಎಟಿಎಂ ಕೇಂದ್ರದೊಳಗೆ ಹೊಕ್ಕು ಹಣ ದೋಚಲು ಬಂದಿದ್ದ ದರೋಡೆಕೋರರನ್ನು ಮಹಾರಾಷ್ಟ್ರ ಪೊಲೀಸರು ಬರಿಗೈಯಿಂದಲೇ ಹಿಡಿದ ರೋಚಕ ಕಾರ್ಯಾಚರಣೆಯ ವಿಡಿಯೋ ಇಲ್ಲಿದೆ. ನಮ್ಮ ದೇಶದಲ್ಲಿ ಇತ್ತೀಚೆಗೆ ದರೋಡೆ ಪ್ರಕರಣಗಳು ಹೆಚ್ಚಾಗುತ್ತಿವೆ. ಅದರಲ್ಲೂ ಎಟಿಂಎ ದರೋಡೆ ಮಾಡಿ ಸುಳಿವೂ ಸಿಗದಂತೆ ಓಡಿ ಹೋಗುವ ಪ್ರಕರಣಗಳು ಸಾಕಷ್ಟು ನಡೆದಿದೆ. ಆದರೆ ಇಲ್ಲಿ ದರೋಡೆಕೋರರು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ದರೋಡೆ ಮಾಡಲು ಒಳ ಹೊಕ್ಕಾಗ ಯಾರೋ ಹೊರಗಿನಿಂದ ಶಟರ್ ಕ್ಲೋಸ್ ಮಾಡಿದ್ದಾರೆ. ಹೀಗಾಗಿ ಖದೀಮರು …
Read More »
BigTv News
June 27, 2026
Breaking News
ಬೆಂಗಳೂರು: ದುಷ್ಕರ್ಮಿಗಳ ದಾಳಿಗೆ ಒಳಗಾಗಿದ್ದ ರೌಡಿಶೀಟರ್ ಮೃತಪಟ್ಟಿದ್ದಾನೆ. ರಾಜು ಭಾಯ್ ಮೃತಪಟ್ಟ ರೌಡಿಶೀಟರ್ ಎಂದು ಹೇಳಲಾಗಿದೆ. ಬೆಂಗಳೂರಿನ ಜೆಪಿ ನಗರದ ಐಜಿ ಸರ್ಕಲ್ ನಲ್ಲಿ ಇಂದು ಸಂಜೆ ಘಟನೆ ನಡೆದಿತ್ತು, ಸಂಜೆ 5.30ರ ವೇಳೆಗೆ ಟೀ ಕುಡಿದು ಬರುತ್ತಿದ್ದ ರಾಜು ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ರಾಜುನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ರಾಜು ಅಲಿಯಾಸ್ ಅಲ್ ಮುರ್ಕ ಮೃತಪಟ್ಟಿದ್ದಾನೆ. 10 ವರ್ಷಗಳ …
Read More »
BigTv News
June 27, 2026
Breaking News
ಚಿಕ್ಕಮಗಳೂರು: ಬಾಳೂರು ವ್ಯಾಪ್ತಿಯ ಕಾಫಿತೋಟದಲ್ಲಿ ಕೆಲಸ ಮಾಡುತ್ತಿದ್ದ ಅಸ್ಸಾಂ ಮೂಲದ ಹಬೀವರ್ ಇಸ್ಲಾಂ ಎಂಬ ವಲಸೆ ಕಾರ್ಮಿಕ ಬಾಲಕಿಯನ್ನು ಅಪಹರಿಸಿ ಮತಾಂತರಕ್ಕೆ ಯತ್ನಿಸಿದ ಆರೋಪದ ಹಿನ್ನೆಲೆಯಲ್ಲಿ ಬಾಳೂರು ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಾಗಿದೆ. ಆತನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ತಿಳಿಸಿದ್ದಾರೆ. ಬಾಲಕಿಯ ಕುಟುಂಬ ಮಧ್ಯಪ್ರದೇಶ ಮೂಲದ್ದಾಗಿದ್ದು ಇಲ್ಲಿಗೆ ಕೂಲಿ ಕೆಲಸಕ್ಕೆ ಬಂದಿದ್ದರು. ಆರೋಪಿ ಯುವಕನ ಕುಟುಂಬವು ಅಸ್ಸಾಂನಿಂದ …
Read More »