Breaking News

ಬಳ್ಳಾರಿ: ಮೊಹರಂ ಅಲಾಯಿ ಕುಣಿಗೆ ಬಿದ್ದು ಯುವಕ ಸಾವು

ಕುರುಗೋಡು (ಬಳ್ಳಾರಿ): ಮೊಹರಂ ಆಚರಣೆಗಾಗಿ ನಿರ್ಮಿಸಿದ್ದ ಅಲಾಯಿ ಕುಣಿಗೆ ಬಿದ್ದು ಯುವಕನೊಬ್ಬ ಮೃತಪಟ್ಟ ಘಟನೆ ಬಳ್ಳಾರಿ ಜಿಲ್ಲೆ ಕುರುಗೋಡು ತಾಲೂಕಿನ ಕ್ಯಾದಿಗೆಹಾಳ್‌ನಲ್ಲಿ ಸಂಭವಿಸಿದೆ. ಮೊಹರಂ ಆಚರಣೆಗಾಗಿ ಪೀರಲು ದೇವರ ಪ್ರತಿಷ್ಠಾಪಿಸಿ ಅಲಾಯಿ ಕುಣಿ (ಬೆಂಕಿ ಉರಿಸುವ ಹೊಂಡ) ತೋಡಿ ಬೆಂಕಿ ಹಾಕಲಾಗಿತ್ತು. ಶುಕ್ರವಾರ ಹಬ್ಬದ ಆಚರಣೆ ಸಂದರ್ಭ ಈ ಕುಣಿಯ ಬೆಂಕಿಗೆ ಬಿದ್ದು ಮಡಿವಾಳ ದೇವರಾಜ್ (28) ಗಂಭೀರವಾಗಿ ಗಾಯಗೊಂಡಿದ್ದ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಶನಿವಾರ ಮೃತಪಟ್ಟಿದ್ದಾನೆ. ಮೃತನಿಗೆ ತಂದೆ ತಾಯಿ, ಪತ್ನಿ ಇದ್ದಾರೆ.

Share News

About BigTv News

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *