Breaking News

Breaking News

ರೈತ ವಿರೋಧಿ ಕೃಷಿ ಕಾಯಿದೆಗಳನ್ನು ರದ್ದುಗೊಳಿಸಬೇಕೆಂದು ಮಾ.1ರಿಂದ ಜಾಥಾ ಪ್ರಾರಂಭ

ಹುಬ್ಬಳ್ಳಿ: ರೈತ ವಿರೋಧಿ ಕೃಷಿ ಕಾಯಿದೆಗಳನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿ ಜನಾಂದೋಲನಗಳ ಮಹಾಮೈತ್ರಿ ನೇತೃತ್ವದಲ್ಲಿ ಮಾ.1 ರಿಂದ 15 ರವರೆಗೆ ಬಸವ ಕಲ್ಯಾಣದಿಂದ ಬೆಂಗಳೂರುವರೆಗೆ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜ ಪರಿವರ್ತನ ಸಮೂದಾಯದ ಸಂಚಾಲಕ ಎಸ್.ಆರ್.ಹಿರೇಮಠ ತಿಳಿಸಿದರು. ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ಕೃಷಿ ಕಾಯಿದೆಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸುದಿಲ್ಲ ಎಂದು ಪ್ರಧಾನಿಯವರು ಘೋಷಿಸಿದ್ದಾರೆ ಆದರೂ ಕೂಡಾ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಮಾತ್ರ ಈ ಕಾಯಿದೆಗಳನ್ನು ರದ್ದುಗೊಳಸಿಲು ಹಿಂದೆಟ್ಡು …

Read More »

ಸಬ್ ಇನ್ಸ್ಪೆಕ್ಟರ್ ಹುದ್ದೆಯ ಎಕ್ಸಾಂನಲ್ಲಿ ಅಕ್ರಮ ಖಂಡಿಸಿ ಪ್ರತಿಭಟನೆ

ಧಾರವಾಡ : ಸಬ್ ಇನ್ಸ್ಪೆಕ್ಟರ್ ಹುದ್ದೆಯ ಎಕ್ಸಾಂ ನಲ್ಲಿ ಅಕ್ರಮ ನಡೆದಿರುವ ಘಟನೆ ಖಂಡಿಸಿ ಸಬ್ ಇನ್ಸ್ಪೆಕ್ಟರ್ ಪರೀಕ್ಷಾರ್ಥಿಗಳು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು. ಪರೀಕ್ಷೆಯಲ್ಲಿ ಬ್ಲೂಟೂತ್ ಸೇರಿದಂತೆ ಇನ್ನಿತರ ಹೈಟೆಕ್ ತಂತ್ರಜ್ಞಾನ ಬಳಸಿ ಪರೀಕ್ಷೆಯಲ್ಲಿ ಹಲವು ಸಬ್ ಇನ್ಸ್ಪೆಕ್ಟರ್ ಪರೀಕ್ಷಾರ್ಥಿಗಳು ಪಾಸಾಗಿದ್ದು ಅಕ್ರಮ ಎಸಗಿದ್ದಾರೆ. ಕೂಡಲೇ ಈ ಕುರಿತು ಉನ್ನತ ಮಟ್ಟದ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ವಿದ್ಯಾರ್ಥಿಗಳು ಆಗ್ರಹಿಸಿದರು. …

Read More »

ಅಡುಗೆ ಅನಿಲ ಪೈಪ್ ಲೈನ್‌ನಲ್ಲಿ ಸೋರಿಕೆ: ರಸ್ತೆಯ ಅಗ್ನಿಯ ರೌದ್ರ ನರ್ತನ

ಹುಬ್ಬಳ್ಳಿ: ಅಡುಗೆ ಅನಿಲದ ಪೈಪ್ ಲೈನ್‌ನಲ್ಲಿ ಸೋರಿಕೆ ಉಂಟಾದ ಪರಿಣಾಮ ಏಕಾಏಕಿ ಬೆಂಕಿ ಕಾಣಿಕೊಂಡು ಅಗ್ನಿಯ ರೌದ್ರ ನರ್ತನ ತಾಳಿದ ಘಟನೆ ಹುಬ್ಬಳ್ಳಿಯ ತೆಂಗಿನಕಾಯಿ ಲೇಔಟ್‌ನಲ್ಲಿ ನಡೆದಿದೆ. ಗ್ಯಾಸ್ ಲಿಕೇಜ್ ಆಗಿರುವ ಪರಿಣಾಮ ಜನರ ಆತಂಕಗೊಂಡು ಮನೆಯಿಂದ ಹೊರ ಬಂದಿದ್ದಾರೆ. ಇನ್ನೂ ಜನರು ಹೊರ ಬರುತ್ತಿದ್ದಂತೆಯೇ ಬೆಂಕಿ ಹತ್ತಿಕೊಂಡು ಉರಿದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಮನೆ ಮನೆಗೆ ಸಂಪರ್ಕ ಕಲ್ಪಿಸುವ ಅಡುಗೆ ಅನಿಲದ ಪೈಪ್ ಲೈನ್ ಇದಾಗಿದೆ. …

Read More »

ಕ್ಷುಲ್ಲಕ ಕಾರಣಕ್ಕೆ ಎಎಸ್‌ಐ ಮೇಲೆ ಹಲ್ಲೆ

ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ಪಕ್ಕದ ಮನೆಯವರು ಎಎಸ್ಐವೊಬ್ಬರಿಗೆ ಇಟ್ಟಿಗೆಯಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಹಳೇ ಹುಬ್ಬಳ್ಳಿಯ ಸಹದೇವನಗರದಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಹುಬ್ಬಳ್ಳಿ ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪುರಾಣಿಕಮಠ ಎಂಬ ಎಎಸ್ಐ ಅವರ ಮೇಲೆ ಹಲ್ಲೆ ನಡೆದಿದ್ದು, ತಲೆಯೊಡೆದು ತೀವ್ರ ರಕ್ತಸ್ರಾವವಾಗಿದೆ. ಸಹದೇವನಗರದಲ್ಲಿನ ಪುರಾಣಿಕಮಠ ಅವರ ಮನೆಯ ಪಕ್ಕದಲ್ಲಿರುವ ಭರತೇಶ ಎಂಬಾತನೇ ಇಟ್ಟಿಗೆಯಿಂದ ಹೊಡೆದಿದ್ದು, ಎಎಸ್ಐ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಘಟನೆಯ ಬಗ್ಗೆ ಇನ್ನಷ್ಟು ಮಾಹಿತಿ …

Read More »

ರಾಷ್ಟ್ರಧ್ವಜದ ಈಶ್ವರಪ್ಪ ಹೇಳಿಕೆ : 5ನೇ ದಿನಕ್ಕೆ ಕಾಲಿಟ್ಟ ಅಹೋರಾತ್ರಿ ಹೋರಾಟ

ಬೆಂಗಳೂರು: ಭವಿಷ್ಯದಲ್ಲಿ ಕೆಂಪುಕೋಟೆ ಮೇಲೆ ಕೇಸರಿ ಧ್ವಜ ಹಾರಾಡಬಹುದು ಎಂಬುದಾಗಿ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ, ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದಂತ ಸಚಿವ ಈಶ್ವರಪ್ಪ ಅವರನ್ನು ಸಂಪುಟದಿಂದ ಕೈ ಬಿಡುವಂತೆ ಒತ್ತಾಯಿಸಿ, ಕಾಂಗ್ರೆಸ್‌ ನಾಯಕರ ಅಹೋರಾತ್ರಿ ಧರಣಿ ಮುಂದುವರೆಸಿದ್ದಾರೆ. ಸಚಿವ ಕೆ ಎಸ್‌ ಈಶ್ವರಪ್ಪರನ್ನು ವಜಾಗೊಳಿಸಲು ಕಳೆದ ಗುರುವಾರದಿಂದ ಅಹೋರಾತ್ರಿ ಧರಣಿ ನಡೆಸುತ್ತಿರುವ ಕಾಂಗ್ರೆಸ್ ಶಾಸಕರ ಹೋರಾಟ 5ನೇ ದಿನಕ್ಕೂ ಕಾಲಿಟ್ಟಿದೆ. ರಾಷ್ಟ್ರಧ್ವಜ ಕುರಿತು ಸಚಿವ ಕೆ.ಎಸ್.ಈಶ್ವರಪ್ಪ ಅವರ ವಿವಾದಾತ್ಮಕ ಹೇಳಿಕೆ …

Read More »

ಬಜರಂಗದಳ ಕಾರ್ಯಕರ್ತನ ಬರ್ಬರವಾಗಿ ಹತ್ಯೆ : ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ ಡಿಸಿ

ಶಿವಮೊಗ್ಗ: ನಗರದಲ್ಲಿ ಬಜರಂಗದಳ ಕಾರ್ಯಕರ್ತನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ಹಿನ್ನೆಲೆ, ಮುನ್ನಚ್ಚರಿಕಾ ಕ್ರಮವಾಗಿ ಇಂದು ನಗರದ ಶಾಲಾ ಕಾಲೇಜುಗಳಿಗೆ ಡಿಸಿ ಡಾ. ಸೆಲ್ವಮಣಿ ರಜೆ ಘೋಷಿಸಿದ್ದಾರೆ. ನಗರದ ಸೀಗೆಹಟ್ಟಿ ನಿವಾಸಿ ಹರ್ಷ (24) ನ ಮೇಲೆ ಮಾರಕಾಸ್ತ್ರಗಳಿಂದ ಹತ್ಯೆಗೈದು ನಾಲ್ವರು ದುಷ್ಕರ್ಮಿಗಳು ಕಾರಿನಲ್ಲಿ ಪರಾರಿಯಾಗಿದ್ದಾರೆ.ಹಲ್ಲೆ ನಡೆಯುತ್ತಿದ್ದಂತೆ ಎರಡು ಗುಂಪುಗಳ ನಡುವೆ ನಗರದಲ್ಲಿ ಕಲ್ಲು ತೂರಾಟ ನಡೆದಿದೆ. ಈ ವೇಳೆ ನಗರದ ದೊಡ್ಡಪೇಟೆ ಪೊಲೀಸ್‌ ಠಾಣಾ ಪೊಲೀಸರು ಲಾಠಿ ಚಾರ್ಜ್‌ …

Read More »

ಕುಮಾರಸ್ವಾಮಿಗೆ ಟಾಂಗ್ ಕೊಟ್ಟ ಡಿ.ಕೆ. ಸುರೇಶ್

ರಾಮನಗರ: ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವ್ಯಂಗ್ಯವಾಡಿರುವುದಕ್ಕೆ ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಟಾಂಗ್ ಕೊಟ್ಟಿದ್ದಾರೆ. ಕುಮಾರಸ್ವಾಮಿ ಅವರು ಪ್ರಧಾನಮಂತ್ರಿ ಕುಟುಂಬದವರು. ಅವರಿಗೆ ಇರುವಷ್ಟು ಬುದ್ಧಿ, ತಿಳಿವಳಿಕೆ ರಾಜ್ಯದಲ್ಲಿ ಯಾರಿಗೂ ಇಲ್ಲ. ರಾಜ್ಯಕ್ಕಾಗಿ, ರಾಷ್ಟ್ರಕ್ಕಾಗಿ ಕುಮಾರಸ್ವಾಮಿಯವರು ಏನು ಹೇಳುತ್ತಾರೆಯೋ ಅದನ್ನು ಕೇಳಬೇಕು. ಪ್ರಶ್ನಿಸಬಾರದು ಎಂದು ಟಾಂಗ್ ಕೊಟ್ಟಿದ್ದಾರೆ.

Read More »

ಇತಿಮಿತಿಯಲ್ಲಿ ಬಜೆಟ್ ಮಂಡನೆ : ಬೊಮ್ಮಾಯಿ

ದಾವಣಗೆರೆ: ಕೋವಿಡ್‌ನಿಂದ ಆರ್ಥಿಕ ಹಿಂಜರಿತ ಹೆಚ್ಚಾಗಿದೆ. ಇತಿಮಿತಿಯಲ್ಲಿ, ಆರ್ಥಿಕ ಚೌಕಟ್ಟಿನಲ್ಲಿ ಎಷ್ಟು ಸಾಧ್ಯವೋ ಅಷ್ಟು ಬೇಡಿಕೆ ಈಡೇರಿಸಲು ಪ್ರಯತ್ನ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಸುದ್ದಿಗಾರರ ಜತೆ ಮಾತನಾಡಿ, ಬಜೆಟ್‌ ಮಂಡನೆ ಹಿನ್ನೆಲೆಯಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ ದಾವಣಗೆರೆ ಜಿಲ್ಲೆಯ ಬೇಡಿಕೆಗಳ ಪಟ್ಟಿ ನೀಡಿದ್ದಾರೆ. ಈ ಬಾರಿಯ ಬಜೆಟ್‌ ಗಾತ್ರ ಕುರಿತು ಬಜೆಟ್‌ ಮಂಡನೆ ದಿನವೇ ಹೇಳುವುದಾಗಿ ಗೌಪ್ಯತೆ ಕಾಪಾಡಿಕೊಂಡರು.

Read More »

ಶಿಕ್ಷಕರ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ : ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್

ಖಾನಾಪುರ: ತಾಲ್ಲೂಕಿನ ರಾಜವಾಳಾ ಗೌಳಿವಾಡಾ ಶಾಲೆಯ ಶಿಕ್ಷಕರ ವಿರುದ್ಧ ಶನಿವಾರ ಶಾಲೆಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಗೌಳಿವಾಡಾ ಶಾಲೆಯ ಮುಂಭಾಗದಲ್ಲಿ ಶಾಲೆಯ ವಿದ್ಯಾರ್ಥಿಗಳು ನಿಂತು ಶನಿವಾರ ಮಧ್ಯಾಹ್ನ 12ರವರೆಗೆ ಶಾಲೆ ಇದ್ದರೂ ಶಿಕ್ಷಕರು ಬೇಗ ಕೊಠಡಿಗಳಿಗೆ ಬೀಗ ಜಡಿದು ತೆರಳಿದ್ದನ್ನು ಖಂಡಿಸಿದ ದೃಶ್ಯಗಳು ಹರಿದಾಡುತ್ತಿವೆ.1ರಿಂದ 5ನೇ ತರಗತಿಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ, ಶಿಕ್ಷಕರು ನಿಯಮಿತವಾಗಿ ಶಾಲೆಗೆ ಬರುವುದಿಲ್ಲ, ಮಧ್ಯಾಹ್ನ ಬೇಗ ಮನೆಗೆ ತೆರಳುತ್ತಾರೆ, …

Read More »

ರಾಜ್ಯದಲ್ಲಿ 1,001 ಕೊರೊನಾ ಪ್ರಕರಣಗಳು ಪತ್ತೆ

ಬೆಂಗಳೂರು: ರಾಜ್ಯದಲ್ಲಿ ಇಂದು (ಫೆ.20, ಭಾನುವಾರ) 1,001 ಕೊರೊನಾ ಪ್ರಕರಣಗಳು ಪತ್ತೆಯಾಗಿದೆ. ಬೆಂಗಳೂರಿನಲ್ಲಿ ಇಂದು 485 ಜನರಿಗೆ ಕೊರೊನಾ ದೃಢಪಟ್ಟಿದ್ದು, ಕೊರೊನಾದಿಂದ 12 ಜನ ಸಾವಿಗೀಡಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ 39,36,586 ಕೊರೊನಾ ಪ್ರಕರಣಗಳು ಪತ್ತೆಯಾದಂತಾಗಿದೆ. ಈ ಪೈಕಿ 38,84,120 ಜನರು ಚೇತರಿಸಿಕೊಂಡಿದ್ದಾರೆ. ಕಳೆದ 24 ಗಂಟೆಗಳ ಅವಧಿಯಲ್ಲಿ 1,780 ಜನರು ಗುಣಮುಖರಾಗಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿಗೆ 18 …

Read More »