ಮಡಿಕೇರಿ: ಮಂಗಳೂರಿನ ಕದ್ರಿ ಉದ್ಯಾನದ ಬಳಿ ಚಿಪ್ಪುಹಂದಿಯ ಚಿಪ್ಪುಗಳನ್ನು ಮಾರಾಟಕ್ಕೆ ಯತ್ನಿಸಿದ ಆರೋಪದ ಮೇರೆಗೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಬೆಂಗಳೂರಿನ ಎಚ್.ಆರ್.ಜಗದೀಶ್ (50), ಬಾಬು (48) ಹಾಗೂ ಕನಕಪುರದ ಸಿದ್ದುನಾಯಕ (38) ಬಂಧಿತರು. ಇವರಿಂದ ಚಿಪ್ಪುಹಂದಿಯ 5,200 ಕೆ.ಜಿ ತೂಕದ ಚಿಪ್ಪು ಹಾಗೂ 1 ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಮಡಿಕೇರಿ ಸಿಐಡಿ ಅರಣ್ಯ ಘಟಕದ ಎಸ್.ಪಿ ಪವನ್ ನೆಜ್ಜೂರು ಅವರ ಮಾರ್ಗದರ್ಶನದಲ್ಲಿ ಮಂಗಳೂರು ಸಿಐಡಿ ಪೊಲೀಸ್ ಅರಣ್ಯ ಸಂಚಾರ ದಳದ ಸಬ್‌ಇನ್‌ಸ್ಪೆಕ್ಟರ್ ಜಿ.ಆರ್. ದಿಲೀಪ್ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

