Breaking News

Breaking News

ಕಾನ್ಸ್‌ಸ್ಟೇಬಲ್ ಗೆ‌ ಪಿ.ಎಚ್.ಡಿ ಪ್ರಧಾನ

ಉಡುಪಿ: ಕರಾವಳಿ ಕಾವಲು ಪೊಲೀಸ್ ಮಲ್ಪೆ ಕೇಂದ್ರ ಕಚೇರಿಯಲ್ಲಿ ಪೊಲೀಸ್ ಹೆಡ್ ಕಾನ್ಸ್‌ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಸಂತೋಷ್ ಶೆಟ್ಟಿ ಅವರಿಗೆ ಮೈಸೂರಿನ ಕರ್ನಾಟಕ ಮುಕ್ತ ವಿಶ್ವ ವಿದ್ಯಾಲಯ ಪಿ.ಎಚ್.ಡಿ. ಪದವಿ ನೀಡಿದೆ. ಸಂತೋಷ್ ಶೆಟ್ಟಿ ಅವರು ಕರ್ನಾಟಕ ಮುಕ್ತ ವಿವಿಯ ಪ್ರೊಫೆಸರ್ ಡಾ. ಮಹಾದೇವಿ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ‘ಮೈಸೂರು ಒಡೆಯರ ಕಾಲದಲ್ಲಿ ಪೊಲೀಸ್ ವ್ಯವಸ್ಥೆ ಒಂದು ಅಧ್ಯಯನ’ ವಿಷಯದ ಕುರಿತ ಮಹಾ ಪ್ರಬಂಧಕ್ಕೆ ಪಿ.ಎಚ್.ಡಿ. ಪದವಿಯನ್ನು ನೀಡಲಾಗಿದೆ.

Read More »

ಪೋನ್ ಕರೆ ಮೂಲಕ ಸಿಎಂ ಇಬ್ರಾಹಿಂಗೆ ಸಮಾಧಾನ ಮಾಡಿದ ಸಿದ್ದರಾಮಯ್ಯ‌

ಬೆಂಗಳೂರು: ಮುನಿಸಿಕೊಂಡಿರುವ ಸಿಎಂ ಇಬ್ರಾಹಿಂಗೆ ವಿಪಕ್ಷನಾಯಕ ಸಿದ್ದರಾಮಯ್ಯ ಕರೆ ಮಾಡಿ ಪಕ್ಷ ಬಿಡದಂತೆ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾದೇವಪ್ಪ ಇಬ್ರಾಹಿಂನನ್ನು ಭೇಟಿ ಮಾಡಿದ್ದನಂತೆ. ನಾವೆಲ್ಲ ಒಟ್ಟಿಗಿದ್ದವರ. ನಾವೆಲ್ಲ ಜಾತ್ಯತೀತ ಪಕ್ಷದಲ್ಲಿರಬೇಕು. ನೊಡೋಣ ವಿಚಾರ ಮಾಡ್ತೇನೆ. ಇಬ್ರಾಹಿಂ ಎಲ್ಲರ ಜೊತೆ ಚರ್ಚೆ ಮಾಡ್ತೇನೆ ಎಂದಿದ್ದಾನಂತೆ ಎಂದಿದ್ದಾರೆ. ಹೊಸಪೇಟೆಗೆ ತೆರಳುವ ಮುನ್ನ ದೂರವಾಣಿ ಮೂಲಕ ಮಾತುಕತೆ ನಡೆಸಿದ ಸಿದ್ದರಾಮಯ್ಯ, ಪಕ್ಷ ಬಿಡಬೇಡ, ಮುಂದೆ ಸ್ಥಾನಮಾನ‌ ಕೊಡೋಣ ಎಂದು ಹೇಳಿದ್ದಾರೆ.

Read More »

ಸ್ನೇಹಿತನ ಪತ್ನಿಗೆ ಬಾಳು ಕೊಟ್ಟ ಯುವಕ

ಕೊರೊನಾ ಬಲಿಯಾದ ಸ್ನೇಹಿತನ ಪತ್ನಿಯನ್ನು ವರಿಸುವ ಮೂಲಕ ಆಕೆಗೆ ಬಾಳು ಕೊಟ್ಟು ಆದರ್ಶ ಮೆರೆದ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ. ಹನೂರಿನ ಅಂಬಿಕಾ ಕಳೆದ 8 ವರ್ಷಗಳ ಹಿಂದೆ ಕೊಳ್ಳೇಗಾಲ ತಾಲ್ಲೂಕಿನ ಮುಳ್ಳೂರು ಗ್ರಾಮದ ಚೇತನ್‌ ಕುಮಾರ್‌ ಅವರನ್ನು ಮದುವೆಯಾಗಿದ್ದರು. ಚೇತನ್‌ ಬೆಂಗಳೂರಿನಲ್ಲಿ ಖಾಸಗಿ ಕಾರ್ಖಾನೆಯೊಂದರಲ್ಲಿ ಕೆಲಸದಲ್ಲಿದ್ದರು. ಆದರೆ ಕೊವಿಡ್‌ 2ನೇ ಅಲೆಯಲ್ಲಿ ಚೇತನ್‌ ಮೃತಪಟ್ಟಿದ್ದ. ಚಾಮರಾಜನಗರ ತಾಲ್ಲೂಕಿನ ನಂಜದೇವನಪುರ ಗ್ರಾಮದ ಲೋಕೇಶ್‌ ಗೆಳೆಯನ ಪತ್ನಿಯನ್ನು ಮದುವೆಯಾದ ಯುವಕ. ಲೋಕೇಶ್‌ …

Read More »

ಓಬವ್ವ ಆತ್ಮರಕ್ಷಣೆ ಕಲೆ ತರಬೇತಿ ಕಾರ್ಯಕ್ರಮ ಉದ್ಘಾಟನೆ ಮುಂದೂಡಿಕೆ

ಬೆಂಗಳೂರು: ನಿನ್ನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಹಿಳೆಯರ ಓಬವ್ವ ಆತ್ಮರಕ್ಷಣೆ ಕಲೆ ತರಬೇತಿಗೆ ಚಾಲನೆ ನೀಡಿದ್ದರು. ಇಂದು ರಾಜ್ಯಾಧ್ಯಂತ ವಿದ್ಯುಕ್ತವಾಗಿ ಉದ್ಘಾಟನೆ ಗೊಳ್ಳುವಂತೆ ದಿನಾಂಕ ನಿಗದಿ ಪಡಿಸಲಾಗಿತ್ತು. ಆದ್ರೇ ಗಾನಕೋಗಿಲೆ ಲತಾ ಮಂಗೇಶ್ಕರ್ ಅವರ ನಿಧನದ ಹಿನ್ನಲೆಯಲ್ಲಿ ಎರಡು ದಿನ ಶೋಕಾಚರಣೆಯನ್ನು ರಾಜ್ಯಾಧ್ಯಂತ ಘೋಷಣೆ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ಇಂದು ಉದ್ಘಾಟನೆಗೊಳ್ಳಬೇಕದ್ದಂತ ಓಬವ್ವ ಆತ್ಮರಕ್ಷಣೆ ಕಲೆ ತರಬೇತಿ ಕಾರ್ಯಕ್ರಮ ಫೆಬ್ರವರಿ 8ರ ನಾಳೆಗೆ ಮುಂದೂಡಿಕೆ ಮಾಡಲಾಗಿದೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, …

Read More »

ಗಾನ ಕೋಗಿಲೆ ಲತಾ ಮಂಗೇಶ್ಕರ್‌ ವಿಧಿವಶ : ರಜೆ ಘೋಷಣೆ

ಮುಂಬೈ: ಭಾರತದ ಗಾನ ಕೋಗಿಲೆ ಲತಾ ಮಂಗೇಶ್ಕರ್‌ ಅವರು ಭಾನುವಾರ ಸಂಜೆ ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಸಕಲ ಸರ್ಕಾರಿ ಗೌರವದ ಜೊತೆಗೆ ಲತಾರ ಅಂತ್ಯ ಸಂಸ್ಕಾರವನ್ನು ನಡೆಸಲಾಗಿದೆ. ಲತಾ ಮಂಗೇಶ್ಕರ್ ಅವರ ನಿಧನದಿಂದ ಭಾರತ ಇಂದು ತನ್ನ ಶ್ರೇಷ್ಠ ರತ್ನಗಳಲ್ಲಿ ಒಂದನ್ನು ಕಳೆದುಕೊಂಡಿದೆ.ಭಾರತ ಸರ್ಕಾರವು ಮೆಲೋಡಿ ಕ್ವೀನ್‌ ಎಂದೇ ಪ್ರಸಿದ್ಧವಾದ ಲತಾ ಮಂಗೇಶ್ಕರ್‌ ಸ್ಮರಣಾರ್ಥ ಎರಡು ದಿನಗಳ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಿದೆ. “ಇಂದು ಮತ್ತು ನಾಳೆ ಎರಡು …

Read More »

ಡಾ.ರಾಜ್ ಕುಮಾರ್ ಅವರ ಪುತ್ಥಳಿ ಕಳ್ಳತನ

ಬೆಂಗಳೂರು: ವರನಟ ಡಾ.ರಾಜ್ ಕುಮಾರ್ ಅವರ ನಗರದ ಪಾರ್ಕ್ ನಲ್ಲಿ ನಿರ್ಮಿಸಲಾಗಿದ್ದ, ಕಂಚಿನ ಪುತ್ಥಳಿಯನ್ನೇ ಕಳ್ಳರು ಕದ್ದಿರೋದಾಗಿ ತಿಳಿದು ಬಂದಿದೆ. ಈ ಸಂಬಂಧ ದೂರು ಸ್ವೀಕರಿಸಿದಂತ ಪೊಲೀಸರು ಇಬ್ಬರು ಶಂಕಿತರನ್ನು ಕೂಡ ಬಂಧಿಸಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ನಗರದ ಲುಂಬಿನಿ ಗಾರ್ಡನ್ ನಲ್ಲಿದ್ದಿ ಪ್ರತಿಷ್ಠಾಪಿಸಿದ್ದಂತ ವರನಟ ನಟ ಡಾ.ರಾಜ್ ಕುಮಾರ್ ಅವರ ಕಂಚಿನ ಪುತ್ಥಳಿಯನ್ನು ಕಳ್ಳರು ಕದ್ದಿರೋದು ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಅರಣ್ಯ ಇಲಾಖೆಯ ಅಧಿಕಾರಿ …

Read More »

ಲತಾ ಮಂಗೇಶ್ಕರ್ ನಿಧನ : ಅರ್ಧ ದಿನ ರಜೆ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮಬಂಗಾಳ: ಗಾನ ಕೋಗಿಲೆ ಲತಾ ಮಂಗೇಶ್ಕರ್ ನಿಧನದ ಹಿನ್ನೆಲೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಅರ್ಧ ದಿನ ರಜೆ ಘೋಷಿಸಿದ್ದಾರೆ. ಲತಾ ಮಂಗೇಶ್ಕರ್ ಇಡೀ ದೇಶಕ್ಕೆ ಬೇಕಾದ ಮಹಾನ್ ಚೇತನ. ತಮ್ಮ ಗಾಯನದ ಮೂಲಕ ಎಲ್ಲರ ಹೃದಯಲ್ಲಿಯೇ ಇದ್ದಾರೆ. ಇವರಿಗೆ ಶ್ರದ್ಧಾಂಜಲಿ ಅರ್ಪಿಸಲು ಅರ್ಧ ದಿನ ರಜೆ ಕೊಡಲಾಗಿದೆ ಎಂದು ಟ್ವಿಟರ್ ಮೂಲಕ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

Read More »

ರಾಜ್ಯದಲ್ಲಿ 8,425 ಕೊರೊನಾ ವೈರೆಸ್ ಪತ್ತೆ

ಬೆಂಗಳೂರು : ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 8,425 ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, 47 ಮಂದಿ ಸಾವಿಗೀಡಾಗಿದ್ದಾರೆ. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಸುಧಾಕರ್ ಭಾನುವಾರ ಟ್ವಿಟರ್ ನಲ್ಲಿ ಈ ವಿಷಯ ತಿಳಿಸಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 1 ಲಕ್ಷಕ್ಕಿಂತ ಕಡಿಮೆಗೆ (97.781) ಕುಸಿದಿದೆ. ಇದರಿಂದ ಪಾಸಿಟಿವಿಟಿ ದರ ಶೇ.6.5ಕ್ಕೆ ಇಳಿದಿದೆ.

Read More »

ಆಟೋ ಪಲ್ಟಿ : 2 ಸಾವು, 4 ಜನರಿಗೆ ಗಂಭೀರ ಗಾಯ

ಹೈದರಾಬಾದ್: ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದು, ನಾಲ್ವರ ಸ್ಥಿತಿ ಗಂಭೀರವಾಗಿರುವ ಘಟನೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಮಾಧವರಂ ಬಳಿ ಸಂಭವಿಸಿದೆ. ಮೃತರನ್ನು 37 ವರ್ಷದ ರಾಘವೇಂದ್ರ ಹಾಗೂ 27 ವರ್ಷದ ಅಭಿಷೇಕ್ ಎಂದು ಗುರುತಿಸಲಾಗಿದೆ.ಬೆಂಗಳೂರಿನಿಂದ ರೈಲಿನಲ್ಲಿ ಮಂತ್ರಾಲಯಕ್ಕೆ ತೆರಳಿದ್ದ ಭಕ್ತರು ರೈಲ್ವೆ ನಿಲ್ದಾಣದಿಂದ ಆಟೋದಲ್ಲಿ ರಾಯರ ಮಠಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ. ಈ ವೇಳೆ ಮಾಧವರಂ ಬಳಿ ಆಟೋ ಪಲ್ಟಿಯಾಗಿ ಈ ದುರಂತ ಸಂಭವಿಸಿದೆ. ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, …

Read More »

ಅದ್ದೂರಿಯಾಗಿ ಜರುಗಿದ್ದ ಗ್ರಾಮ ದೇವತೆ ಜಾತ್ರೆ

ಧಾರವಾಡ : ತಾಲ್ಲೂಕಿನ ಲಕ್ಮಾಪುರ ಗ್ರಾಮದಲ್ಲಿ ಶ್ರೀ ದ್ಯಾಮವ್ಬ ಹಾಗೂ ದುರ್ಗಮ್ಮ ಜಾತ್ರೆಯನ್ನು ಗ್ರಾಮಸ್ಥರು ಅದ್ದೂರಿಯಾಗಿ ಆಚರಣೆ ಮಾಡಿದರು. ಗ್ರಾಮದೇವತೆ ಜಾತ್ರೆ ಹಿನ್ನೆಲೆಯಲ್ಲಿ ಮುಂಜಾನೆಯಿಂದಲೇ ಗ್ರಾಮದಲ್ಲಿ‌ ಹಬ್ಬದ ವಾತವರಣ ನಿರ್ಮಾಣವಾಗಿದ್ದು, ಗ್ರಾಮಸ್ಥರೆಲ್ಲರು ಗ್ರಾಮ ದೇವತೆಗೆ ವಿಶೇಷ ಪೂಜೆ ಸಲ್ಲುಸಿದರು. ಮಹಿಳೆಯರೆಲ್ಲರು ಕುಂಭಮೇಳ ಹಾಗೂ ಆರತಿ ತಟ್ಟೆಯೊಂದಿಗೆ ಗ್ರಾಮದ‌ ಮುಖ್ಯ ರಸ್ತೆಯಲ್ಲಿ ದ್ಯಾಮವ್ವ ಮತ್ತು ದುರ್ಗಮ್ಮಾ ದೇವಿಯ ಮೂರ್ತಿಯನ್ನು ಮೆರವಣಿಗೆ ಮಾಡಿದರು. ‌ ಇನ್ನೂ ಇದೇ ವೇಳೆ ಗ್ರಾಮದ ಯುವಕರು ಜಾಂಜ್ …

Read More »