Breaking News

Breaking News

Featured Video Play Icon

ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಾದ ನಂತರ ಸಾವಿರಾರು ಗೋವುಗಳನ್ನ ರಕ್ಷಣೆ ಮಾಡಲಾಗಿದೆ-ಪ್ರಭು ಚವ್ಹಾಣ್

Read More »
Featured Video Play Icon

ಎಂಇಎಸ್ ಪುಂಡಾಟಿಕೆ ಹೀಗೆ ಮುಂದುವರೆದರೆ ರಾಜ್ಯದಲ್ಲಿ ಎಂಇಎಸ್ ಸಂಘಟನೆ ಬ್ಯಾನ್ ಆಗಬೇಕು-ನಟ ಪ್ರೇಮ್

Read More »

ವಾರದ ಹಿಂದೆ ಸ್ಕಿಡ್ ಆಗಿ ಬಿದ್ದಿದ್ದ ಪೊಲೀಸ್ ಚಿಕಿತ್ಸೆ ಫಲಿಸದೆ ನಿಧನ

ಹುಬ್ಬಳ್ಳಿ: ನಗರದ ಗಬ್ಬೂರು ಬೈಪಾಸ್ ಬಳಿಯಲ್ಲಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದ ಪೊಲೀಸ್ ಕಾನ್ಸ್ಟೇಬಲ್, ಬೈಕ್ ಮೇಲಿಂದ ಸ್ಕಿಡ್ ಆಗಿ ಬಿದ್ದ ಪರಿಣಾಮ, ಗಂಭೀರವಾಗಿ ಗಾಯಗೊಂಡು ಚಿಕಿತ್ಸೆಗಾಗಿ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೇ ಇಂದು ಬೆಳಗಿನ ಜಾವ ಸಾವನ್ನಪ್ಪಿದ್ದಾರೆ. ಹುಬ್ಬಳ್ಳಿಯ CAR ಹೆಡ್ ಕ್ವಾಟರ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕಿರಣ ಪಾಟೀಲ ಎಂಬ ಪೊಲೀಸ್, ಅದರಗುಂಚಿಯಿಂದ ಹುಬ್ಬಳ್ಳಿಗೆ ಕರ್ತವ್ಯಕ್ಕೆ ಹಾಜರಾಗುವ ವೇಳೆಯಲ್ಲಿ ಬೈಕ್ ಸ್ಕೀಡ್ ಆಗಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಹುಬ್ಬಳ್ಳಿಯ ಕೀಮ್ಸ್ …

Read More »

ಮಿಲಿಟರಿ ಮ್ಯಾನ್ ಎಂದು ಹೆಸರು ಹೇಳಿ ಸೈಕಲ್ ಅಂಗಡಿಯವನಿಗೆ ವಂಚನೆ

ಹುಬ್ಬಳ್ಳಿ: ಮಿಲಿಟರಿ ಕ್ಯಾಂಟೀನ್‌ಗೆ 20 ಸೈಕಲ್ ಬೇಕಾಗಿದೆ ಎಂದು ನಂಬಿಸಿ, ಆನ್ಲೈನ್‌ಲ್ಲಿ 70 ಸಾವಿರ ರೂ . ವರ್ಗಾಯಿಸಿಕೊಂಡು ವಂಚನೆ ಮಾಡಿರುವ ಘಟನೆ ನಗರದ ಸೈಬರ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಪ್ಪಿಕರ ರಸ್ತೆಯ ದೀಪಕ್ ಸೈಕಲ್ ಅಂಗಡಿಯ ವ್ಯವಸ್ಥಾಪಕ ಸುನೀಲ್ ವಕ್ಕುಂದ ವಂಚನೆಗೆ ಒಳಗಾದವರು. 20 ಸೈಕಲ್‌ಗೆ ಸುನೀಲ್‌ 1.36 ಲಕ್ಷ ರೂ.ಬಿಲ್‌ನ್ನು ವಂಚಕನ ವಾಟ್ಸ್ ಆ್ಯಪ್‌ಗೆ ಕಳುಹಿಸಿದ್ದರು. ನಂತರ ಸೈಕಲ್ ಗಳನ್ನು ಕ್ಯಾಂಟೀನ್ ಬಳಿ ಸಾಗಿಸಿದಾಗ, ಕ್ಯಾಂಟೀನ್ …

Read More »

ಬಿಜೆಪಿಯಿಂದ ಮಲ್ಲಿಕಾರ್ಜುನ ಹಾವೇರಿಯನ್ನು 6 ವರ್ಷ ಉಚ್ಛಾಟನೆ

ಹುಬ್ಬಳ್ಳಿ:ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಲ್ಲಿಕಾರ್ಜುನ ಹಾವೇರಿಯವರನ್ನು ಬಿಜೆಪಿಯಿಂದ 6 ವರ್ಷ ಉಚ್ಛಾಟನೆ ಮಾಡಿ ಆದೇಶ ಹೊರಿಡಿಸಲಾಗಿದೆ. ಪಕ್ಷದ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ ಸೂಚನೆಯಂತೆ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ, ಮಲ್ಲಿಕಾರ್ಜುನ ಹಾವೇರಿಯನ್ನ ಉಚ್ಛಾಟಿಸಿದ್ದಾರೆ. ಧಾರವಾಡ ದ್ವಿಸದಸ್ಯ ಸ್ಥಾನದ ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಹಾವೇರಿ ಸ್ಪರ್ಧಿಸಿದ್ದರು. ಪಕ್ಷದ ಶಿಸ್ತು ಉಲ್ಲಂಘಿಸಿದ್ದಕ್ಕೆ ಮಲ್ಲಿಕಾರ್ಜುನನನ್ನು ಬಿಜೆಪಿ ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಛಾಟಿಸಲಾಗಿದೆ. …

Read More »

ಮನೆ ಬೀಗ ಮುರಿದು ಹಣ ಮತ್ತು ಚಿನ್ನ ಕದ್ದು ಪರಾರಿಯಾದ ಕಳ್ಳರು

ಹುಬ್ಬಳ್ಳಿ: ಅನ್ಯ ಕೆಲಸದ ನಿಮಿತ್ತವಾಗಿ ಮನೆಗೆ ಬೀಗ ಹಾಕಿ ಹೋದ ಸಮಯದಲ್ಲಿ ಕಳ್ಳರು ಮನೆಗೆ ನುಗ್ಗಿ ನಗ ನಾಣ್ಯ ಕದ್ದು ಪರಾರಿಯಾಗಿರುವ ಘಟನೆ ನಗರದ ಹಳೆ ಹುಬ್ಬಳ್ಳಿಯ ಬಸವನಗರದಲ್ಲಿ ನಡೆದಿದೆ.‌ ಎ.ಎನ್‌. ಪರಮೇಶ್ವರಪ್ಪ ಎಂಬುವವರ ಮನೆಯಲ್ಲಿಯೇ ಕಳ್ಳತನವಾಗಿದ್ದು, ಇವರು ಮನೆಗೆ ಬೀಗ ಹಾಕಿಕೊಂಡು ಹೊರಗಡೆ ಹೋಗಿದ್ದರು. ಈ ವೇಳೆ ಮನೆಯಲ್ಲಿ ಯಾರು ಇಲ್ಲದನ್ನು ಗಮನಿಸಿದ ಕಳ್ಳರು ಮನೆಗೆ ನುಗ್ಗಿ ಮನೆಯಲ್ಲಿದ್ದ 66 ಗ್ರಾಂ ತೂಕದ ಬಂಗಾರದ ಒಡವೆ, 3,700 ಗ್ರಾಂ …

Read More »

ತಮಿಳ್ ತಾಯ್ ವಾಳ್ತ್ ಈಗ ತಮಿಳುನಾಡಿನ ಅಧಿಕೃತ ನಾಡಗೀತೆ

– ಹಾಡುವಾಗ ಎದ್ದು ನಿಲ್ಲುವುದು ಕಡ್ಡಾಯ ಚೆನ್ನೈ: ತಮಿಳು ತಾಯಿಗೆ ವಂದಿಸುವ (ತಮಿಳ್ ತಾಯ್ ವಾಳ್ತ್) ತಮಿಳು ತಾಯಿಯೇ ನಿನಗೆ ವಂದನೆ ಗೀತೆಯನ್ನು ತಮಿಳುನಾಡು ತನ್ನ ನಾಡಗೀತೆಯಾಗಿ ಫೋಷಿಸಿದೆ ಹಾಗೂ ಈ ಗೀತೆ ಹಾಡುವಾಗ ಎಲ್ಲರೂ ಎದ್ದು ಗೌರವ ಕೊಡಬೇಕು ಎಂಬ ಸುತ್ತೋಲೆ ಹೊರಡಿಸಿದೆ. ಇತ್ತೀಚೆಗಷ್ಟೇ ಮದ್ರಾಸ್ ಹೈಕೋರ್ಟ್ ತಮಿಳ್ ತಾಯ್ ವಾಳ್ತ್ ಕೇವಲ ಪ್ರಾರ್ಥನಾ ಗೀತೆಯೇ ಹೊರತು ರಾಷ್ಟ್ರ ಗೀತೆಯಲ್ಲ, ಹೀಗಾಗಿ ಈ ಹಾಡಿನ ವೇಳೆ ಯಾರೂ ಎದ್ದು ನಿಲ್ಲುವ …

Read More »

ಮಾರುಕಟ್ಟೆಗೆ ಹೋಗಿದ್ದ ಬಾಲಕಿಯ ಮೇಲೆ ಗ್ಯಾಂಗ್‌ರೇಪ್

ಕೋಲ್ಕತ್ತಾ: 15 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಪಶ್ಚಿಮ ಬಂಗಾಳದ ಪುರ್ಬಾ ಬರ್ಧಮಾನ್ ಜಿಲ್ಲೆಯಲ್ಲಿ 9ನೇ ತರಗತಿ ವಿದ್ಯಾರ್ಥಿನಿ ಮಾರುಕಟ್ಟೆಗೆ ಹೋಗುವಾಗ ಈ ಘಟನೆ ನಡೆದಿದೆ. ಈ ಸಂಬಂಧ ಪರಿಚಯಸ್ತ ಆಟೋ ಚಾಲಕನನ್ನು ಬಂಧಿಸಲಾಗಿದ್ದು, ಮತ್ತೊಬ್ಬ ಆರೋಪಿ ಪರಾರಿಯಾಗಿದ್ದಾನೆ. ಘಟನೆಯ ದಿನ, ವಿದ್ಯಾರ್ಥಿನಿ ಮಾರುಕಟ್ಟೆಗೆ ನಡೆದುಕೊಂಡು ಹೋಗುತ್ತಿರುವುದನ್ನು ನೋಡಿದ ಆಟೋ ಚಾಲಕ ಅವಳನ್ನು ಮಾರುಕಟ್ಟೆಗೆ ಬಿಡುತ್ತೇನೆ ಎಂದು ನಂಬಿಸಿದ್ದಾನೆ. ನಂತರ ದಾರಿಯಲ್ಲಿ ಆಟೋದ …

Read More »

ದೇಶದಲ್ಲಿ 62 ಲಕ್ಷಕ್ಕೂ ಅಧಿಕ ಕೋವಿಡ್ ಡೋಸ್ ವ್ಯರ್ಥ

ನವದೆಹಲಿ: ಭಾರತದಲ್ಲಿ 62 ಲಕ್ಷಕ್ಕೂ ಅಧಿಕ ಕೋವಿಡ್ ಲಸಿಕೆ ವ್ಯರ್ಥವಾಗಿದೆ. ಅದರಲ್ಲಿ ಅರ್ಧದಷ್ಟು ಉತ್ತರಪ್ರದೇಶ, ಮಧ್ಯಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳೆಂದು ಎಂದು ವರದಿಯಾಗಿದೆ. ಮಧ್ಯಪ್ರದೇಶದಲ್ಲಿ ಅತೀ ಹೆಚ್ಚು 16.48 ಲಕ್ಷ, ಉತ್ತರ ಪ್ರದೇಶದಲ್ಲಿ 12.60 ಲಕ್ಷ ಮತ್ತು ರಾಜಸ್ಥಾನದಲ್ಲಿ 6.86 ಲಕ್ಷ ಕೋವಿಡ್ ಡೋಸ್ ವ್ಯರ್ಥವಾಗಿದೆ. ಈ ಮೂರು ರಾಜ್ಯಗಳನ್ನು ತೆಗೆದುಕೊಂಡರೆ ಒಟ್ಟಾರೆಯಾಗಿ 36 ಲಕ್ಷದಷ್ಟು ನಷ್ಟವಾಗಿದೆ. ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ್ದ ಕೇಂದ್ರ ಆರೋಗ್ಯ ಖಾತೆಯ ರಾಜ್ಯ ಸಚಿವೆ ಭಾರತಿ ಪ್ರವೀಣ್ …

Read More »

ಶಿವಸೇನೆ, ಎಂಇಎಸ್ ಹೈಡ್ರಾಮಾ.. ಆರಕ್ಕೂ ಅಧಿಕ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು

ಬೆಳಗಾವಿ: ಪೊಲೀಸರು ನಿಷೇಧಾಜ್ಞೆ ಹೇರಿ, ಪ್ರತಿಭಟನೆಗಳಿಗೆ ಅವಕಾಶ ನಿರಾಕರಿಸಿದ್ದಾರೆ. ಈ ನಡುವೆ ಬೆಳಗಾವಿಯ ಶಿವಾಜಿ ಉದ್ಯಾನವನದ ಬಳಿ ಶಿವಸೇನೆ, ಎಂಇಎಸ್ ಮುಖಂಡರು ಹೈಡ್ರಾಮಾ ನಡೆಸಿದ್ದರಿಂದ ಆರಕ್ಕೂ ಅಧಿಕ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಎಂಇಎಸ್ ಮುಖಂಡ ಶಿವಾಜಿ ಸುಂಟ್ಕರ್, ಶಿವಸೇನೆ ಜಿಲ್ಲಾಧ್ಯಕ್ಷ ಪ್ರಕಾಶ್ ಶಿರೋಳಕರ ಸೇರಿ ಹಲವರು ಶಿವಾಜಿ ಗಾರ್ಡನ್ ಬಳಿ ಪ್ರತಿಭಟನೆ ನಡೆಸಲು ಆಗಮಿಸಿದ್ದರು. ಇಂದು ನಿಷೇಧಾಜ್ಞೆ ಜಾರಿ ಹಿನ್ನೆಲೆ ಪ್ರತಿಭಟನೆ ನಡೆಸದಂತೆ ಪೊಲೀಸರು ಹೇಳಿದರೂ ಕೂಡ ನಾವು …

Read More »