Breaking News

Breaking News

BRTS ಬಸ್ ಡಿಕ್ಕಿ ಪಾದಚಾರಿಗೆ ಗುದ್ದಿದ ಚಿಗರಿ

ಸಾಂದರ್ಭಿಕ ಚಿತ್ರ ಧಾರವಾಡ: ರಸ್ತೆ ದಾಟಿ ಹೊರಟಿದ್ದ ಪಾದಚಾರಿಯೊಬ್ಬರಿಗೆ ಬಿಆರ್‌ಟಿಎಸ್‌ ಬಸ್‌ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಧಾರವಾಡದ ಕೋರ್ಟ್‌ ವೃತ್ತದ ಬಳಿ ನಡೆದಿದೆ.ಮಲ್ಲಣ್ಣ ಎಂಬಾತನೇ ಈ ಘಟನೆಯಲ್ಲಿ ಗಾಯಗೊಂಡ ವ್ಯಕ್ತಿ. ಬಿಆರ್‌ಟಿಎಸ್ ಬಸ್ ನಿಲ್ದಾಣದಿಂದ ಈ ವ್ಯಕ್ತಿ ಇಳಿದು ಹೋಗುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಗಾಯಗೊಂಡ ವ್ಯಕ್ತಿಯನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Read More »

ಪುನೀತ್‌ ಹೃದಯಾಗಾತಕ್ಕೂ ಜೀಮ್‌ ಗೂ ಯಾವುದೇ ಸಂಭಂದವಿಲ್ಲ-ಕೃಷ್ಣ ಚಿಕ್ಕತುಂಬಳ

ಹುಬ್ಬಳ್ಳಿ: ನಟ ಪುನೀತ್ ರಾಜ್‍ಕುಮಾರ್ ಅವರ ನಿಧನದ ಬೆನ್ನಲ್ಲೇ ಕೆಲವೊಂದು ಕಿಡಿಗೇಡಿಗಳು ವ್ಯಾಯಾಮ ಶಾಲೆ, ಕುಸ್ತಿ, ಫಿಟನೆಸ್ ಸೆಂಟರ್ ಹಾಗೂ ಜಿಮ್ ಗೆ ಹೋಗುವುದಿಂದ ಹೃದಯಾಘಾತ ಹೆಚ್ಚಾಗುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸುವ ಕೆಲಸ ಮಾಡುತ್ತಿದ್ದು, ಸಾರ್ವಜನಿಕರು ಇದಕ್ಕೆ ತಲೆಕೊಡದೇ ತಜ್ಞರ ಸಲಹೆ ಮೇರೆಗೆ ಆರೋಗ್ಯ ಸಂಬಂಧಿಸಿದ ವ್ಯಾಯಾಮವನ್ನು ವ್ಯವಸ್ಥಿತವಾಗಿ ಮಾಡಬಹುದೆಂದು ಅಂತರರಾಷ್ಟ್ರೀಯ ದೇಹದಾರ್ಢ್ಯ ಪಟು ಮತ್ತು ಚಲನಚಿತ್ರ ನಟ ಕೃಷ್ಣ ಚಿಕ್ಕತುಂಬಳ‌ ಹೇಳಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿ …

Read More »

ಸಿಎಂ ಬೊಮ್ಮಾಯಿ ಒಳ್ಳೆಯ ಕೆಲಸ ಮಾಡ್ತಿದ್ದಾರೆ- ಸಿಎಂ ಬದಲಾಗುವುದಿಲ್ಲ..

ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಧಾರವಾಡ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಅವರು ಬದಲಾವಣೆ ಆಗುವುದಿಲ್ಲ ಎಂಬ ವಿಶ್ವಾಸ ಇದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.ಧಾರವಾಡ ತಾಲೂಕಿನ ಮನಗುಂಡಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರ ಒಳ್ಳೆಯ ಕೆಲಸ ಮಾಡುತ್ತಾರೋ ಅವರು ರಾಜ್ಯದ ಆರ್ಥಿಕ ಪರಿಸ್ಥಿತಿ ಕೆಟ್ಟಾಗಲೇ ಮುಖ್ಯಮಂತ್ರಿ ಆಗಿರುತ್ತಾರೆ. ಬೊಮ್ಮಾಯಿ ಈಗ ಮುಖ್ಯಮಂತ್ರಿ ಆಗಿದ್ದಾರೆ. ಅವರು ಬದಲಾವಣೆ ಆಗುವುದಿಲ್ಲ. ಒಳ್ಳೆಯ …

Read More »

ಹಳೆ ವೈಷಮ್ಯದಿಂದ ಹರಿಯಿತು ನೆತ್ತರು-ಹಾಡಹಗಲೇ ವ್ಯಕ್ತಿಯ ಬರ್ಬರ ಹತ್ಯೆ

ಬೆಂಗಳೂರು: ಹಾಡಹಗಲೇ ನಡು ರಸ್ತೆಯಲ್ಲಿ ವ್ಯಕ್ತಿಯನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆ‌‌ ಮಾಡಿರುವ ಘಟನೆ ಹೆಣ್ಣೂರು ಪೊಲೀಸ್ (Hennur Police station) ಠಾಣಾ ವ್ಯಾಪ್ತಿಯ ನಾಗವಾರದಲ್ಲಿ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ (Bangalore Rural District) ಮೂಲದ ಶ್ರೀಧರ್ ಮೃತಪಟ್ಟ ವ್ಯಕ್ತಿ ಎಂದು‌ ಗುರುತಿಸಲಾಗಿದೆ. ಇಂದು ಬೆಳಗ್ಗೆ ನಾಗವಾರದಲ್ಲಿ ಹೋಗುವಾಗ ಬೈಕಿನಲ್ಲಿ ಹಿಂಬಾಲಿಸಿಕೊಂಡು ಬಂದ ನಾಲ್ಕೈದು ಮಂದಿ‌ ದುಷ್ಕರ್ಮಿಗಳ ಗುಂಪು ಏಕಾಏಕಿ ಶ್ರೀಧರ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಕುತ್ತಿಗೆ ಹಾಗೂ ತಲೆಭಾಗಕ್ಕೆ …

Read More »

ಭಾವಿಪತಿಯ ಕಿರುಕುಳಕ್ಕೆ ಯುವತಿ ಬಲಿ-2 ತಿಂಗಳ ಹಿಂದೆ ನಿಶ್ಚಿತಾರ್ಥವಾಗಿತ್ತು..!

ಹುಬ್ಬಳ್ಳಿ : ಸುಂದರ ಜೀವನದ ಹೊಂಗನಸು ಹೊತ್ತು ಮದುವೆಯ ನಿಶ್ಚಿತಾರ್ಥ ಮಾಡಿಕೊಂಡಿದ್ದ ಭಾವಿ ಪತಿಯ ಕಿರುಕುಳದಿಂದ ಮನನೊಂದು ಯುವತಿಯೋರ್ವಳು ನೇಣಿಗೆ ಶರಣಾದ ಧಾರುಣ ಘಟನೆ ನಗರದಲ್ಲಿ ನಿನ್ನೆ ತಡರಾತ್ರಿ ನಡೆದಿದೆ.ಅಶೋಕನಗರ ಪೊಲೀಸ್‍ಠಾಣೆ ವ್ಯಾಪ್ತಿಯ ಸಂತೋಷ ನಗರ ನಿವಾಸಿ ಪವಿತ್ರ (25) ನಿನ್ನೆರಾತ್ರಿ ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ನತದೃಷ್ಟೆಯಾಗಿದ್ದಾಳೆ.ನೆರೆಯ ಹಾವೇರಿ ಮೂಲದ ಅಭಿನಂದನ್ ಎಂಬುವವನ ಜೊತೆ ಸೆ.1ರಂದು ಪವಿತ್ರಾಗೆ ಮದುವೆಯ ನಿಶ್ಚಿತಾರ್ಥ ನೆರವೇರಿತ್ತು. ಆದರೆ ಸಂಶಯದ ಪಿಶಾಚಿಯಂತಿದ್ದ …

Read More »

ಪುನೀತ್ ಭಾವಚಿತ್ರದ ಮೇಲಿನ ಧೂಳು ಒರೆಸಿ ಮುತ್ತಿಟ್ಟ ವೃದ್ಧೆ..

ಪುನೀತ್ ಭಾವಚಿತ್ರದ ಮೇಲಿನ ಧೂಳು ಒರೆಸಿ ಮುತ್ತಿಟ್ಟ ವೃದ್ಧೆ ಕೊಪ್ಪಳ: ಪವರ್ ಸ್ಟಾರ್ ಪುನೀತ್ ರಾಜ್​​​ಕುಮಾರ್ (Puneet rajkumar) ಅಕಾಲಿಕ ನಿಧನದಿಂದ ಕೋಟ್ಯಂತರ ಅಭಿಮಾನಿಗಳು ಕಣ್ಣೀರಿಡುತ್ತಿದ್ದಾರೆ. ಪುನೀತ್ ಭೌತಿಕವಾಗಿಲ್ಲದಿದ್ದರೂ ನಾನಾ ರೀತಿಯಲ್ಲಿ ಅಭಿಮಾನ ವ್ಯಕ್ತಪಡಿಸುತ್ತಿದ್ದಾರೆ. ಬಸ್ ಮೇಲಿನ ಪುನೀತ್ ರಾಜಕುಮಾರ್​​ ಅವರ ಭಾವಚಿತ್ರಕ್ಕೆ ವೃದ್ಧೆಯೊಬ್ಬರು (Old women) ಮುತ್ತಿಟ್ಟು, ಸೆರಗಿನಿಂದ ಮುಖ ಸವರಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್​​ ವೈರಲ್ ಆಗಿದೆ. ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣದ ಸಾರಿಗೆ ಸಂಸ್ಥೆಯ ಬಸ್ …

Read More »

ಬಿಟ್ ಕಾಯಿನ್ ಪ್ರಕರಣ ಅಂತ್ಯ ಕಾಣುವವರೆಗೂ ಬಿಡುವುದಿಲ್ಲ : ಡಿಕೆಶಿ

ಬೆಂಗಳೂರು :ಪ್ರಧಾನಿ ಹೇಳಿದ್ದಾರೆ ಎಂಬ ಕಾರಣಕ್ಕೆ ಬಿಟ್ ಕಾಯಿನ್ ಪ್ರಕರಣವನ್ನು ರಾಜ್ಯ ಸರ್ಕಾರ ನಿರ್ಲಕ್ಷಿಸಬಹುದು. ಆದರೆ ಕಾಂಗ್ರೆಸ್ ಈ ವಿಷಯ ತಾರ್ಕಿಕ ಅಂತ್ಯಕಾಣುವವರೆಗೂ ಬಿಡುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ನಿನ್ನೆ ಮುಖ್ಯಮಂತ್ರಿಯವರು ಪ್ರಧಾನಿಯವರನ್ನು ಭೇಟಿ ಮಾಡಿದ ಬಳಿಕ ಬಿಟ್ ಕಾಯಿನ್ ವಿಚಾರವನ್ನು ಬಿಟ್ಟು ಹಾಕುವಂತೆ ಪ್ರಧಾನಿ ಸಲಹೆ ಮಾಡಿದ್ದಾರೆ. ಹಾಗಾಗಿ ಅವರು ಅದನ್ನು ಕೈಬಿಡಬಹುದು. ಇದು …

Read More »

ಕಾಂಗ್ರೇಸ್‌ ನವರು ಆಧಾರ ರಹಿತ ಪ್ರಚಾರ ಮಾಡುತ್ತಿದ್ದಾರೆ; ಟೆಂಗಿನಕಾಯಿ

ಹುಬ್ಬಳ್ಳಿ: ಬಿಟ್ ಕಾಯಿನ್ ಬಗ್ಗೆ ಕಾಂಗ್ರೆಸ್ ಬಹಳ ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡುತ್ತಿದೆ. ಕಾಂಗ್ರೆಸ್ ಪಕ್ಷ ಆಧಾರ ರಹಿತ ಸುಳ್ಳಿನ ಪ್ರಚಾರ ಮಾಡುತ್ತಿದೆ. ಅಲ್ಲದೇ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಆಧಾರ ರಹಿತ ಹೇಳಿಕೆ‌ ನೀಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಹೇಳಿದರು. ನಗರದಲ್ಲಿಂದು ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು, ಹ್ಯಾಕರ್ ಶ್ರೀಕಿಯು ಹ್ಯಾರಿಸ್ ಪುತ್ರ, ರುದ್ರಪ್ಪ ಲಮಾಣಿ ಪುತ್ರನ ಹೆಸರು ಹೇಳಿದ್ದಾನೆ. ಕಾಂಗ್ರೆಸ್ ನವರು ಕುಂಬಳಕಾಯಿ …

Read More »

ಮಾಜಿ ಸಿಎಂ ದೆಹಲಿಗೆ ದೌಡಾಯಿಸಿದ್ಯಾಕೆ ? ಕೆಸರಿ ಪಾಳಯದಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ..

ಹುಬ್ಬಳ್ಳಿ/ಬೆಂಗಳೂರು : ಬಿಟ್ ಕಾಯಿನ್ ಹಗರಣ (Bitcoin Scam) ಸದ್ದು ಮಾಡುತ್ತಿರುವ ಮಧ್ಯದಲ್ಲೇ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ (Jagadeesh Shettar) ದಿಢೀರ್ ದೆಹಲಿಗೆ ತೆರಳಿರುವುದು ರಾಜ್ಯ ಬಿಜೆಪಿ ಪಾಳಯದಲ್ಲಿ ಮಿಂಚಿನ ಸಂಚಲನ ಮೂಡಿಸಿದೆ.l ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ನವದೆಹಲಿಯಿಂದ ವಾಪಸ್ಸಾಗುತ್ತಿದ್ದಂತೆ ಜಗದೀಶ್ ಶೆಟ್ಟರ್ ಹುಬ್ಬಳ್ಳಿಯಿಂದ ದೆಹಲಿಗೆ ತೆರಳಿದ್ದಾರೆ. ಹುಬ್ಬಳ್ಳಿ-ಗಾಜಿಯಾಬಾದ್ ವಿಮಾನದಲ್ಲಿ ಮಧ್ಯಾಹ್ನ 2 ಗಂಟೆಗೆ ಮಾಜಿ ಸಿಎಂ ತೆರಳಿದ್ದಾರೆ. ಹೈಕಮಾಂಡ್ ಬುಲಾವ್ …

Read More »

ಹೊಸೂರು ಸರ್ಕಲ್‌ ಬಳಿ ಭೀಕರ ಅಪಘಾತ,ಪಾದಾಚಾರಿ ಸ್ಥಳದಲ್ಲೇ ಸಾವು.

ಹುಬ್ಬಳ್ಳಿ : ರಸ್ತೆ ದಾಟುತ್ತಿದ್ದ ಪಾದಾಚಾರಿಯ ಮೇಲೆ ಮರಳು ಸಾಗಾಟ ಮಾಡುತ್ತಿದ್ದ ಲಾರಿಯೊಂದು ಹರಿದ ಪರಿಣಾಮ ಪಾದಾಚಾರಿ ಸ್ಥಳದಲ್ಲೇ ಮೃತಪಟ್ಟ ಘಟನೆ ಈಗಷ್ಟೇ ನಡೆದಿದೆ.ಹುಬ್ಬಳ್ಳಿಯ ಗಾಳಿ ದುರ್ಗಮ್ಮ ದೇವಸ್ಥಾನದ ಬಳಿಯಲ್ಲಿ ರಸ್ತೆ ದಾಟುತ್ತಿದ್ದಾಗ ಲಾರಿ ಪಾದಚಾರಿ ಮೇಲೆ ಹರಿದು ಈ ಘಟನೆ ನಡೆದಿದೆ. ಇನ್ನು ಮೃತಪಟ್ಟ ವ್ಯಕ್ತಿ ಯಾರು ಎಂಬ ಮಾಹಿತಿ ಇನ್ನು ಲಭ್ಯವಾಗಿಲ್ಲ.ಸ್ಥಳಕ್ಕೆ ಉತ್ತರ ಸಂಚಾರಿ ಠಾಣೆಯ ಪೊಲೀಸರು ಭೇಟಿ ನೀಡಿದ್ದು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಹುಬ್ಬಳ್ಳಿಯ ಕೀಮ್ಸ್ …

Read More »