
ಹುಬ್ಬಳ್ಳಿ : ಸುಂದರ ಜೀವನದ ಹೊಂಗನಸು ಹೊತ್ತು ಮದುವೆಯ ನಿಶ್ಚಿತಾರ್ಥ ಮಾಡಿಕೊಂಡಿದ್ದ ಭಾವಿ ಪತಿಯ ಕಿರುಕುಳದಿಂದ ಮನನೊಂದು ಯುವತಿಯೋರ್ವಳು ನೇಣಿಗೆ ಶರಣಾದ ಧಾರುಣ ಘಟನೆ ನಗರದಲ್ಲಿ ನಿನ್ನೆ ತಡರಾತ್ರಿ ನಡೆದಿದೆ.
ಅಶೋಕನಗರ ಪೊಲೀಸ್‍ಠಾಣೆ ವ್ಯಾಪ್ತಿಯ ಸಂತೋಷ ನಗರ ನಿವಾಸಿ ಪವಿತ್ರ (25) ನಿನ್ನೆರಾತ್ರಿ ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ನತದೃಷ್ಟೆಯಾಗಿದ್ದಾಳೆ.
ನೆರೆಯ ಹಾವೇರಿ ಮೂಲದ ಅಭಿನಂದನ್ ಎಂಬುವವನ ಜೊತೆ ಸೆ.1ರಂದು ಪವಿತ್ರಾಗೆ ಮದುವೆಯ ನಿಶ್ಚಿತಾರ್ಥ ನೆರವೇರಿತ್ತು. ಆದರೆ ಸಂಶಯದ ಪಿಶಾಚಿಯಂತಿದ್ದ ಅಭಿನಂದನ್ ಭಾವಿಪತ್ನಿ ಪವಿತ್ರಾಳ ಮೇಲೆ ಶಂಕೆ ವ್ಯಕ್ತಪಡಿಸಿದ್ದ ಎನ್ನಲಾಗಿದೆ.
ಕಳೆದವಾರ ದಾಂಡೇಲಿಯಲ್ಲಿ ಫ್ರೀ ವೆಡ್ಡಿಂಗ್ ಶೂಟ್‍ಗೆ ಪವಿತ್ರಾಳನ್ನು ಕರೆದುಕೊಂಡು ಹೋಗಿದ್ದ ಅಭಿನಂದನ್. ಅಲ್ಲಿಂದ ಮರಳಿ ಬಂದು ಪವಿತ್ರಾಗೆ ವಿಪರೀತ ಕಿರುಕುಳ ನೀಡಿದ್ದ ಎಂದು ಮೃತ ಯುವತಿಯ ಕುಟುಂಬ ಸದಸ್ಯರು ಆರೋಪಿಸಿದ್ದಾರೆ.
ಅಭಿನಂದನ್ ವಿಪರೀತ ಕಿರುಕುಳ ತಾಳಲಾರದೇ ಜೀವನದಲ್ಲಿ ಜಿಗುಪ್ಸೆಗೊಂಡು ಪವಿತ್ರಾ ನೇಣಿಗೆ ಶರಣಾಗಿದ್ದಾಳೆ ಎಂಬುದು ಕುಟುಂಬ ಸದಸ್ಯರ ಗಂಭೀರ ಆರೋಪವಾಗಿದ್ದು, ಈ ಸಂಬಂಧ
ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

