BigTv News
May 30, 2026
Breaking News
ಐಪಿಎಲ್ ಫೈನಲ್ ಪಂದ್ಯಕ್ಕೂ ಮುನ್ನ ಸಾಮಾಜಿಕ ಜಾಲತಾಣದಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಬೆಂಬಲಿಸಿದ್ದ ಯುವತಿಯೊಬ್ಬಳ ಹಳೆಯ ವಿಡಿಯೊವನ್ನು ಹಂಚಿಕೊಂಡ ಆರ್‌ಸಿಬಿ ಅಭಿಮಾನಿಯೊಬ್ಬ ಅಸಭ್ಯವಾಗಿ ಮಾತನಾಡಿ ಅತ್ಯಾಚಾರದ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಹೈದರಾಬಾದ್ ತಂಡ ಎಲಿಮಿನೇಟರ್ ಪಂದ್ಯದಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದ ಬಳಿಕ, ಯುವತಿಯ ಹಳೆಯ ವಿಡಿಯೊವನ್ನು ಕೆಲವರು ಟ್ರೋಲ್ ಮಾಡಲು ಆರಂಭಿಸಿದ್ದರು. ಈ ವೇಳೆ ಸಂಜು ಎಂಬಾತ ವಿಡಿಯೊ ಹಂಚಿಕೊಂಡು ಅವಹೇಳನಕಾರಿ ಹಾಗೂ ಬೆದರಿಕೆ …
Read More »
BigTv News
May 30, 2026
Breaking News
ಹಾವೇರಿ ಜಿಲ್ಲೆಯ ವ್ಯಕ್ತಿಯೊಬ್ಬರು ಡಿಜಿಟಲ್ ಅರೆಸ್ಟ್ ವಂಚನೆಗೆ ಒಳಗಾಗಿ ₹21.50 ಲಕ್ಷ ಕಳೆದುಕೊಂಡಿದ್ದಾರೆ. ಸಿಬಿಐ ಹಾಗೂ ಇಡಿ ಅಧಿಕಾರಿಗಳೆಂದು ನಕಲಿ ಪರಿಚಯಿಸಿಕೊಂಡ ವಂಚಕರು, ಪಹಲ್ಗಾಮ್ ದಾಳಿಯ ಉಗ್ರನಿಗೆ ಆಧಾರ್ ಕಾರ್ಡ್ ನೀಡಿ ಹಣ ವರ್ಗಾವಣೆಗೆ ಸಹಾಯ ಮಾಡಿದ್ದೀರಿ ಎಂದು ಬೆದರಿಸಿದ್ದಾರೆ. ವಂಚಕರು ವಿಡಿಯೊ ಕರೆ ಮೂಲಕ ನಕಲಿ ದಾಖಲೆಗಳನ್ನು ತೋರಿಸಿ, ನಿಮ್ಮ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ನಂಬಿಸಿದ್ದಾರೆ. ಹಣ ನೀಡಿದರೆ ಪ್ರಕರಣದಿಂದ ಹೆಸರು ಕೈಬಿಡುತ್ತೇವೆ ಎಂದು ಹೇಳಿ, ವಿವಿಧ …
Read More »
BigTv News
May 30, 2026
Breaking News
ಬೆಂಗಳೂರು: ರಾಜಾಜಿನಗರದ ಎಚ್‌ಡಿಎಫ್‌ಸಿ ಬ್ಯಾಂಕ್ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದ 22 ವರ್ಷದ ಭದ್ರತಾ ಸಿಬ್ಬಂದಿ ಪಿಂಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಬಿಹಾರ ಮೂಲದ ಪಿಂಟು ಜಿಐಎಸ್ ಸೆಕ್ಯೂರಿಟಿ ಏಜೆನ್ಸಿ ಮೂಲಕ ಕೆಲಸ ಮಾಡುತ್ತಿದ್ದು, ಬ್ಯಾಂಕ್ ಕಟ್ಟಡದ ರೈಲಿಂಗ್‌ಗೆ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ. ಸುಬ್ರಹ್ಮಣ್ಯನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Read More »
BigTv News
May 30, 2026
Breaking News
ಕಡೂರಿನ ರೈಲಿನಲ್ಲಿ ಎರಡು ಕೆಜಿ ಗಾಂಜಾ ವಶಪಡಿಸಿಕೊಂಡಿದ್ದು, ಮತ್ತೊಂದಿ ಪ್ರಕರಣದಲ್ಲಿ ಗಾಂಜಾ ವ್ಯಸನಿಯನ್ನು ಬಂಧಿಸಲಾಗಿದೆ. ಯಶವಂತಪುರಕ್ಕೆ ಸಂಚರಿಸುತ್ತಿದ್ದ ರೈಲಿನಲ್ಲಿ ಸಾಗಿಸುತ್ತಿದ್ದ 2 ಕೆಜಿ ಗಾಂಜಾವನ್ನು ಶನಿವಾರ ಕಡೂರು ರೈಲ್ವೆ ನಿಲ್ದಾಣದಲ್ಲಿ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಪರಾರಿಯಾಗಿದ್ದಾರೆ. ಕಡೂರು ಅಬಕಾರಿ ಇಲಾಖೆ ಮತ್ತು ರೈಲ್ವೆ ಪೊಲೀಸರು ಜಂಟಿಯಾಗಿ ಬೀರೂರು ರೈಲ್ವೆ ನಿಲ್ದಾಣದಿಂದ ರೈಲಿನಲ್ಲಿ ಪರಿಶೀಲನೆ ನಡೆಸುತ್ತಿದ್ದರು. 2 ಕೆಜಿಯಷ್ಟು ಗಾಂಜಾ ಚೀಲವನ್ನು ಪತ್ತೆ ಮಾಡಿದ್ದರಿಂದ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಶಂಕಿಸಲಾಗಿದೆ. ಕಾರ್ಯಾಚರಣೆಯಲ್ಲಿ ಕಡೂರು …
Read More »
BigTv News
May 30, 2026
Breaking News
ವಿಜಯಪುರ ನಗರದ ರಾಂಪೂರೆ ಕಾಲೊನಿಯಲ್ಲಿ ಯುವ ಕ್ಯಾಷಿಯರ್ ಲಕ್ಷ್ಮೀಕಾಂತ್ ಬಸವರಾಜ ಮಠಪತಿ (22) ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ನಡೆದಿದೆ. ಖಾಸಗಿ ಮಾಲ್‌ನ ವ್ಯವಸ್ಥಾಪಕ ಕಿರುಕುಳ ನೀಡುತ್ತಿದ್ದನೆಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಹಣದ ದುರುಪಯೋಗದ ಆರೋಪ ಮಾಡಿ ವ್ಯವಸ್ಥಾಪಕ ಕಿಶೋರ್ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು ಎಂದು ಮೃತನ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಕುರಿತು ಯುವಕ ತನ್ನ ಕುಟುಂಬದವರೊಂದಿಗೆ ಮಾತನಾಡಿದ್ದು, ಸಹೋದರನಿಗೆ ಧ್ವನಿ ಸಂದೇಶವನ್ನೂ ಕಳುಹಿಸಿದ್ದಾನೆ ಎನ್ನಲಾಗಿದೆ. ಪ್ರಕರಣ ಗಾಂಧಿಗಂಜ್ ಪೊಲೀಸ್ …
Read More »
BigTv News
May 30, 2026
Breaking News
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಕಾಟಗಾಳಿ ಗ್ರಾಮದಲ್ಲಿ ಅಕ್ರಮವಾಗಿ ಕಂಟ್ರಿ ಪಿಸ್ತೂಲ್ ತಯಾರಿಸುತ್ತಿದ್ದ ಜಾಲವನ್ನು ಪೊಲೀಸರು ಭೇದಿಸಿ 13 ಆರೋಪಿಗಳನ್ನು ಬಂಧಿಸಿದ್ದಾರೆ. ಕಾರ್ಯಾಚರಣೆಯಲ್ಲಿ 9 ಕಂಟ್ರಿ ಪಿಸ್ತೂಲ್‌ಗಳು, ಜೀವಂತ ಗುಂಡುಗಳು, ಮದ್ದು ಹಾಗೂ ವಿವಿಧ ಶಸ್ತ್ರಾಸ್ತ್ರ ತಯಾರಿಕಾ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಮುಖ ಆರೋಪಿ ಮಾರುತಿ ಶ್ರೀಕಾಂತ್ ಸುತಾರ 2024ರಿಂದ ತನ್ನ ಮನೆಯಲ್ಲಿ ಪಿಸ್ತೂಲ್ ತಯಾರಿಸಿ ಮಾರಾಟ ಮಾಡುತ್ತಿದ್ದನೆಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಜೊತೆಗೆ ಮದ್ದು-ಗುಂಡು ಪೂರೈಕೆದಾರರು, ಖರೀದಿದಾರರು ಹಾಗೂ ಶಸ್ತ್ರಾಸ್ತ್ರಗಳ …
Read More »
BigTv News
May 30, 2026
Breaking News
ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನೆಯೊಂದರಿಂದ 7 ಲಕ್ಷ ರೂ. ನಗದು ಕಳವು ಮಾಡಿದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 5.13 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಮೇ 26ರಂದು ಕಾಶಿಪುರದ ಲಕ್ಕಪ್ಪ ಲೇಔಟ್‌ನ ಮನೆಯಲ್ಲಿ ಕಳ್ಳತನ ನಡೆದಿದ್ದು, ದೂರು ದಾಖಲಾದ ಬಳಿಕ ವಿಶೇಷ ಪೊಲೀಸ್ ತಂಡ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸಿತ್ತು. ತನಿಖೆಯಲ್ಲಿ ಶಿವಮೊಗ್ಗದ ಟಿಪ್ಪುನಗರ ನಿವಾಸಿಗಳಾದ ಮೊಹಮ್ಮದ್ ಸಲೀಂ (27) ಹಾಗೂ ಮೊಹಮ್ಮದ್ …
Read More »
BigTv News
May 30, 2026
Breaking News
ಕಾಸರಗೋಡು ಜಿಲ್ಲೆಯ ಉದುಮದಲ್ಲಿ ಪೊಲೀಸ್ ಎಂದು ನಂಬಿಸಿ ಚಿನ್ನದಂಗಡಿಗೆ ಬಂದ ವ್ಯಕ್ತಿಯೊಬ್ಬ 2.65 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಂಚಿಸಿರುವ ಘಟನೆ ನಡೆದಿದೆ. ಆರೋಪಿ ಎರಡು ಬಾರಿ ಅಂಗಡಿಗೆ ಭೇಟಿ ನೀಡಿ, ಹಣ ವರ್ಗಾಯಿಸಿದಂತೆ ನಕಲಿ ಸಂದೇಶ ತೋರಿಸಿ ಚಿನ್ನ ಪಡೆದು ಪರಾರಿಯಾಗಿದ್ದಾನೆ. ತನ್ನನ್ನು ಬೇಕಲ ಠಾಣೆಯ ಸಿವಿಲ್ ಪೊಲೀಸ್ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ ಆರೋಪಿ, ಸರ, ಉಂಗುರ ಹಾಗೂ ಬ್ರೇಸ್ಲೆಟ್ ಸೇರಿ 12.600 ಗ್ರಾಂ ಚಿನ್ನ ಖರೀದಿಸಿದ್ದಾನೆ. ಬಳಿಕ …
Read More »
BigTv News
May 30, 2026
Breaking News
ಬಾಕಿ ಇರುವ ಹಣ ಪಾವತಿ ಸಲು ಹೇಳಿದ ಕಾರಣಕ್ಕೆ ಬೆಳ್ತಂಗಡಿ ತಾಲ್ಲೂಕಿನ ತೆಕ್ಕಾರಿನ ಯುವ ಕನನ್ನು ಕೆದಿಲದ ಮೂವರು ರಿಕ್ಷಾದಲ್ಲಿ ಅಪಹರಿಸಿ ಸಜಿಪದ ಗುಡ್ಡಕ್ಕೆ ಕರೆದೊ ಯ್ದು ಹಲ್ಲೆ ನಡೆಸಿರುವ ಬಗ್ಗೆ ಪುತ್ತೂರು ನಗರ ಠಾಣೆಗೆ ದೂರು ದಾಖಲಾಗಿದೆ. ಕಾಸರಗೋಡಿನಲ್ಲಿ ಬೇಕರಿ ನಡೆಸುತ್ತಿರುವ ತೆಕ್ಕಾರಿನ ಮಹಮ್ಮದ್ ಇರ್ಷಾದ್ (26) ಹಲ್ಲೆಗೊಳಗಾದವರು. ‘ಮೇ 25ರಂದು ಕಾಸರಗೋಡಿನಿಂದ ಬೆಳ್ತಂಗಡಿಯ ತೆಕ್ಕಾರಿನ ಮನೆಗೆ ಬಂದಿದ್ದ ನಾನು, ಮನೆಯಲ್ಲಿದ್ದ ಅಕ್ಕ ಸೈನಾಜ್ ಅವರನ್ನು ಅವರ ಕರುವೇಲು …
Read More »
BigTv News
May 30, 2026
Breaking News
ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಗೋವಿಂದಪುರದಲ್ಲಿ ಜಮೀನು ವಿವಾದದ ಹಿನ್ನೆಲೆ ಒಂದೇ ಕುಟುಂಬದ ಐದು ಮಂದಿ ಸೇರಿದಂತೆ ಆರು ಮಂದಿಯನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಹತ್ತು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ಉತ್ತರ ವಲಯ ಐಜಿಪಿ ಸಂದೀಪ್ ಪಾಟೀಲ್ ತಿಳಿಸಿದ್ದಾರೆ. ಸುಮಾರು 25 ಎಕರೆ ಜಮೀನು ವಿವಾದದಿಂದ ಉಂಟಾದ ದ್ವೇಷದ ಹಿನ್ನೆಲೆಯಲ್ಲಿ ಆರೋಪಿಗಳು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದವರ ಮೇಲೆ ದಾಳಿ ನಡೆಸಿ ಗುಂಡು …
Read More »