ಕಾಸರಗೋಡು ಜಿಲ್ಲೆಯ ಉದುಮದಲ್ಲಿ ಪೊಲೀಸ್ ಎಂದು ನಂಬಿಸಿ ಚಿನ್ನದಂಗಡಿಗೆ ಬಂದ ವ್ಯಕ್ತಿಯೊಬ್ಬ 2.65 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಂಚಿಸಿರುವ ಘಟನೆ ನಡೆದಿದೆ. ಆರೋಪಿ ಎರಡು ಬಾರಿ ಅಂಗಡಿಗೆ ಭೇಟಿ ನೀಡಿ, ಹಣ ವರ್ಗಾಯಿಸಿದಂತೆ ನಕಲಿ ಸಂದೇಶ ತೋರಿಸಿ ಚಿನ್ನ ಪಡೆದು ಪರಾರಿಯಾಗಿದ್ದಾನೆ. ತನ್ನನ್ನು ಬೇಕಲ ಠಾಣೆಯ ಸಿವಿಲ್ ಪೊಲೀಸ್ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ ಆರೋಪಿ, ಸರ, ಉಂಗುರ ಹಾಗೂ ಬ್ರೇಸ್ಲೆಟ್ ಸೇರಿ 12.600 ಗ್ರಾಂ ಚಿನ್ನ ಖರೀದಿಸಿದ್ದಾನೆ. ಬಳಿಕ ಬ್ಯಾಂಕ್ ಖಾತೆಗೆ ಹಣ ಜಮೆಯಾಗಿಲ್ಲ ಎಂಬುದು ತಿಳಿದಾಗ ಅಂಗಡಿ ಮಾಲೀಕ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಬೇಕಲ ಪೊಲೀಸರು, ತಿರುವನಂತಪುರ ಮೂಲದ ಮನು ಎಂಬಾತನಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

