BigTv News
May 12, 2026
Breaking News
ಎಲೆಕ್ಟ್ರಿಕ್ ವಾಹನಗಳ ಸುರಕ್ಷತೆಯ ಬಗ್ಗೆ ಆತಂಕ ಮೂಡಿಸುವ ಮತ್ತೊಂದು ಘಟನೆ ರಾಜ್ಯ ರಾಜಧಾನಿಯಲ್ಲಿ ನಡೆದಿದೆ. ಮನೆಯೊಳಗೆ ಇ-ಬೈಕ್ ಚಾರ್ಜ್‌ಗೆ ಹಾಕಿ ಮಲಗಿದ್ದ ವೃದ್ಧರೊಬ್ಬರು ಬ್ಯಾಟರಿ ಸ್ಫೋಟಗೊಂಡ ಪರಿಣಾಮ ದಾರುಣವಾಗಿ ಸಾವನ್ನಪ್ಪಿದ್ದಾರೆ. ನಗರದ ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯ ಮರ್ಸಿ ಟೌನ್ ನಿವಾಸಿ ಲೂಥ್ ನಾಥನ್ (62) ಮೃತಪಟ್ಟ ದುರ್ದೈವಿ. ಸೋಮವಾರ ರಾತ್ರಿ ನಾಥನ್ ಅವರು ತಮ್ಮ ಎಲೆಕ್ಟ್ರಿಕ್ ಬೈಕ್ ಅನ್ನು ಮನೆಯ ಹಾಲ್‌ನಲ್ಲಿ ಚಾರ್ಜ್‌ಗೆ ಹಾಕಿ ಅಲ್ಲೇ ಮಲಗಿದ್ದರು. ತಡರಾತ್ರಿ …
Read More »
BigTv News
May 12, 2026
Breaking News
ವೇಶ್ಯಾವಾಟಿಕೆ ದಂದೆ ನಡೆಸುತ್ತಿದ್ದ ಕ್ಯಾಂಟಿನ್ ಮೇಲೆ ಬೆಳ್ತಂಗಡಿ ಪೊಲೀಸರು ದಾಳಿ ಮಾಡಿ ಸಂತ್ರಸ್ತೆಯನ್ನು ರಕ್ಷಿಸಿದ್ದು, ಮೂವರನ್ನು ವಶಕ್ಕೆ ಪಡೆದು ಇಬ್ಬರು ಪ್ರಮುಖ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಬೆಳ್ತಂಗಡಿ ನಗರದ ಕೆ.ಇ.ಬಿ ರಸ್ತೆಯಲ್ಲಿರುವ ಸುಂದರ್ ಶೆಟ್ಟಿ ಮಾಲೀಕತ್ವದ ಕ್ಯಾಂಟಿನ್‌ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿತ್ತು. ಕ್ಯಾಂಟಿನ್ ಮಾಲೀಕ ಪಡಂಗಡಿ ಗ್ರಾಮದ ಪೊಯ್ಯೆಗುಡ್ಡೆ ನಿವಾಸಿ ಸುಂದರ್ ಶೆಟ್ಟಿ (55) ಮತ್ತು ಸ್ನೇಹಿತ ನಾವೂರು ಗ್ರಾಮದ ಉಸ್ಮಾನ್ (38) ಎಂಬುವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ವೇಶ್ಯಾವಟಿಕೆ …
Read More »
BigTv News
May 12, 2026
Breaking News
ಪಿಸ್ತೂಲ್ ಹಿಡಿದು ಹಣೆಗೆ ಗುಂಡು ಹಾರಿಸುವುದಾಗಿ ಬೆದರಿಸಿದ ಆರೋಪದಲ್ಲಿ ಇಂದಾವರದ ಯತೀಶ್ ಎಂಬಾತನ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಉಂಡೇದಾಸರಹಳ್ಳಿಯ ಸಂದೀಪ್ ದೂರು ನೀಡಿದ್ದು, ಬಸವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ‘ಇಂದಾವರ ಪ್ಯಾರಡೈಸ್ ಮಾಲೀಕ ಯತೀಶ್ ಬಳಿ ರೂಮಿಗೆ ಭಾನುವಾರ ವಿಚಾರಿಸಿದಾಗ ಏಕಾಏಕಿ ಆವಾಚ್ಯ ಪದಗಳಿಂದ ಜಾತಿ ನಿಂದನೆ ಮಾಡಿದ್ದಾನೆ. ನಂತರ ರಾತ್ರಿ 8ರ ಸುಮಾರಿಗೆ ರಾಮನಹಳ್ಳಿ ಒಲಂಪಿಯಾ ಹೋಟೇಲ್ ಬಳಿಗೆ ಪಿಸ್ತೂಲ್ ಹಿಡಿದು ಬಂದು ನೇರವಾಗಿ ಹಣೆಗೆ ಗುಂಡು …
Read More »
BigTv News
May 12, 2026
Breaking News
ಬಂಧನಮಂಜೇಶ್ವರ: ಕಳಾಯಿ ಹೊಳೆಯಿಂದ ಮರಳು ಅಕ್ರಮವಾಗಿ ಸಾಗಾಟ ಸಂಬಂಧ ಲಾರಿಯನ್ನು ವಶಪಡಿಸಿಕೊಂಡ ಮಂಜೇಶ್ವರ ಪೊಲೀಸರು ಲಾರಿ ಚಾಲಕ ಮಂಗಳೂರು ಪನೆಲ್ ಪಜೀರ್ ವಂಟೆ ಮಜಲ್ ನಿವಾಸಿ ರಸಾದ್ (18)ನನ್ನು ಬಂಧಿಸಿದ್ದಾರೆ.
Read More »
BigTv News
May 12, 2026
Breaking News
ಶ್ರೀನಿವಾಸಪುರ: ಪಟ್ಟಣದ ಹೊರವಲಯದಲ್ಲಿ ಗೋವುಗಳನ್ನು ತುಂಬಿಕೊಂಡು ಸಾಗುತ್ತಿದ್ದ ಟಾಟಾ ಎಸ್ಸಿ ಅಡ್ಡಗಟ್ಟಿದ ಪೊಲೀಸರು ವಾಹನ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪಟ್ಟಣ ಹೊರವಲಯದ ಮುಳಬಾಗಿಲು ರಸ್ತೆ ಮಾರ್ಗವಾಗಿ ಬರುತ್ತಿದ್ದ ಟಾಟಾ ಎಸ್ಸಿ ವಾಹನದಲ್ಲಿ 5 ಕರು ಮತ್ತು ಎತ್ತುಗಳನ್ನು ಸಾಗಿಸಲಾಗುತ್ತಿತ್ತು. ಬಾರ್ ಸಮೀಪ ವಾಹನವನ್ನು ನಿಲ್ಲಿಸಿ ಮದ್ಯಪಾನಕ್ಕೆ ತೆರಳಿದ ಸಂದರ್ಭದಲ್ಲಿ ಸಾರ್ವಜನಿಕರ ದೂರಿನ ಮೇರೆಗೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಚಾಲಕನ ಸಹಿತ ವಾಹನವನ್ನು ವಶಪಡಿಸಿಕೊಂಡಿದ್ದು, ತನಿಖೇ ಕೈಗೊಂಡಿದ್ದಾರೆ.
Read More »
BigTv News
May 12, 2026
Breaking News
ಚಿಕ್ಕಬಳ್ಳಾಪುರ: ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಮೊಬೈಲ್ ಕಳ್ಳತನ ಮಾಡುತ್ತಿದ್ದ ಬಾಲಕನನ್ನು ಸಾರಿಗೆ ಇಲಾಖೆ ಅಧಿಕಾರಿಗಳು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ದೇವನಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಕೇಶವ, ಚಿಕ್ಕಬಳ್ಳಾಪುರದಿಂದ ದೇವನಹಳ್ಳಿಗೆ ತೆರಳಲು ಸರ್ಕಾರಿ ಬಸ್ ಹತ್ತುತ್ತಿದ್ದರು. ಈ ವೇಳೆ ಇಬ್ಬರು ಬಾಲಕರು ಮೊಬೈಲ್ ಕಳ್ಳತನ ಮಾಡಿದ್ದಾರೆ. ಈ ಬಗ್ಗೆ ಕೇಶವ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ನಿಲ್ದಾಣದಲ್ಲಿರುವ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸುತ್ತಿದ್ದಾಗ ಮತ್ತಿಬ್ಬರು ಯುವಕರು ತಮ್ಮ ಮೊಬೈಲ್ ಸಹ …
Read More »
BigTv News
May 12, 2026
Breaking News
ಮಡಿಕೇರಿ: ಜೀಪೊಂದು ಪ್ರಪಾತಕ್ಕೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಣ್ಣನೂರು ನಿವಾಸಿ ಬಾಲಕೃಷ್ಣನ್ (50) ಅಪಘಾತದಲ್ಲಿ ಮೃತಪಟ್ಟವರು. ಸೋಮವಾರ ರಾತ್ರಿ ವಿರಾಜಪೇಟೆಯಿಂದ ಕೇರಳ ರಾಜ್ಯದ ಕಣ್ಣೂರಿಗೆ ತೆರಳುತ್ತಿದ್ದಾಗ ಜೀಪು ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಮಗುಚಿ ಬಿದ್ದಿದೆ. ತೀವ್ರವಾಗಿ ಗಾಯಗೊಂಡ ಬಾಲಕೃಷ್ಣನ್ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಪೆರಂಬಾಡಿ ಚೆಕ್ ಪೋಸ್ಟ್‌ನಿಂದ ಸುಮಾರು 5 ಕಿ.ಮೀ ದೂರದಲ್ಲಿರುವ ಪ್ರಪಾತದಲ್ಲಿ ಜೀಪು ಸಹಿತ ಬಾಲಕೃಷ್ಣನ್ …
Read More »
BigTv News
May 12, 2026
Breaking News
ಹನಗೋಡು: ಹೋಬಳಿಯ ತುಂಡು ಹೆಬ್ಬಳ್ಳ ಗ್ರಾಮದಲ್ಲಿ ಮನೆ ಹಿಂಭಾಗದ ಹಿತ್ತಲಿನಲ್ಲಿ ಬೆಳೆದಿದ್ದ ಗಾಂಜಾ ಗಿಡವನ್ನು ಅಬಕಾರಿ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಈ ವೇಳೆ ಆರೋಪಿ ಪರಾರಿಯಾಗಿದ್ದಾನೆ. ಕಡನುಗನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ತುಂಡು ಹೆಬ್ಬಳ್ಳ ನಿವಾಸಿ ಚಿನ್ನಂಕ ಭೋವಿ ಪುತ್ರ ರಾಜು ಭೋವಿ ಮನೆ ಹಿತ್ತಲಿನಲ್ಲಿ ಗಾಂಜಾ ಗಿಡ ಪತ್ತೆಯಾಗಿದ್ದು, ಆರೋಪಿ ತಲೆಮರೆಸಿಕೊಂಡಿದ್ದಾನೆ. ರಾಜಭೋವಿ ತನ್ನ ಮನೆ ಹಿತ್ತಲಿನಲ್ಲಿ ಗಾಂಜಾ ಗಿಡ ಬೆಳೆದಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಅಬಕಾರಿ …
Read More »
BigTv News
May 12, 2026
Breaking News
ಬೆಂಗಳೂರಲ್ಲಿ ಪುಂಡರ ಅಟ್ಟಹಾಸ ಮಿತಿ ಮೀರಿದ್ದು, ಮಾದಕದ ಅಮಲಿನಲ್ಲಿದ್ದ ಪುಂಡರ ಗುಂಪೊಂದು ಸಾರ್ವಜನಿಕರ ಮೇಲೆ ಮಾರಕಾಸ್ತ್ರ ಬೀಸಿ ಹಣ ಹಾಗೂ ಮೊಬೈಲ್ ದೋಚಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮೇ 5 ರಂದು ಜೆ.ಜೆ ನಗರ ವ್ಯಾಪ್ತಿಯಲ್ಲಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮಾರಕ ಆಯುಧಗಳನ್ನ ಹಿಡಿದು ಎಂಟ್ರಿ ಕೊಟ್ಟ ಐದಾರು ಯುವಕರ ಗುಂಪೊಂದು ದಾರಿಯಲ್ಲಿ ಹೋಗುತ್ತಿದ್ದವರನ್ನು ಅಡ್ಡಗಟ್ಟಿ ಮನಬಂದಂತೆ ಹಲ್ಲೆ ನಡೆಸಿದೆ. ಮಾದಕ ಪದಾರ್ಥಗಳನ್ನ ಸೇವಿಸಿ ಕಿಕ್ಕೇರಿಸಿಕೊಂಡಿದ್ದ ಆರೋಪಿಗಳು, …
Read More »
BigTv News
May 12, 2026
Breaking News
ಬೀದರ್ ತಾಲ್ಲೂಕಿನ ಬೆನಕನಳ್ಳಿಯಲ್ಲಿ ಆಕಸ್ಮಿಕ ಬೆಂಕಿಗೆ ಸೋಮವಾರ ನಾಲ್ಕು ಅಂಗಡಿಗಳು ಆಹುತಿಯಾಗಿವೆ. ಗ್ರಾಮದ ಭವಾನಿ ಮಂದಿರ ಹಿಂಭಾಗದಲ್ಲಿನ ಅಜಯಸಿಂಗ್ ಜಯಸಿಂಗ್ ಚವಾಣ್ ಅವರ ಜನರಲ್ ಸ್ಟೋರ್, ಕಿರಾಣಿ ಅಂಗಡಿ, ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಐಸ್‍ಕ್ರೀಂ ಆಯಂಡ್ ಜ್ಯೂಸ್ ಸೆಂಟರ್‌ನಲ್ಲಿದ್ದ ಸಾಮಗ್ರಿಗಳು ಸುಟ್ಟು ಹೋಗಿವೆ. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ನಿಯಂತ್ರಣಕ್ಕೆ ತಂದರು. ತಹಶೀಲ್ದಾರ್ ರವೀಂದ್ರ ದಾಮಾ ಹಾಗೂ ಇತರ ಅಧಿಕಾರಿಗಳು ಮಂಗಳವಾರ …
Read More »