BigTv News
March 30, 2026
Breaking News
ಬೆಳ್ತಂಗಡಿ: ಹೊಸಗಂಗಡಿ ಗ್ರಾಮದ ಜಿನ್ನಪ್ಪ ಎಂಬುವವರ ಪತ್ನಿ, ಸೇಸಮ್ಮ (58) ಅವರು ಕೀಟನಾಶಕ ಸೇವಿಸಿ ಆತ್ಮಹತ್ಯೆ ಯತ್ನಿಸಿ, ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇದೀಗ ಅವರು ಸಾವನ್ನಪ್ಪಿದ್ದಾರೆ. ಮಾ.17 ರಂದು ರಾತ್ರಿ ಸೇಸಮ್ಮ ಅವರು ಮನೆ ಬಳಿಯ ಸೋಲಾರ್ ಶೆಡ್‌ನಲ್ಲಿ ವಿಷ ಸೇವಿಸಿ ಅಸ್ವಸ್ಥರಾಗಿ ಬಿದ್ದಿದ್ದರು.ಅವರನ್ನು ಮೂಡುಬಿದಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ ಲಾಕ್ ಅಸ್ಪತ್ರೆಗೆ ದಾಖಲಿಸಲಾಗಿತ್ತು. ಮಗ ರಾಘವೇಂದ್ರ ನೀಡಿದ ದೂರಿನಂತೆ ವೇಣೂರು …
Read More »
BigTv News
March 30, 2026
Breaking News
ಕೊಳ್ಳೇಗಾಲ(ಚಾಮರಾಜನಗರ ಜಿಲ್ಲೆ): ಕಾರಿನಲ್ಲಿ 2 ಹುಲಿ ಉಗುರುಗಳನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ತಾಲ್ಲೂಕಿನ ಜಾಗೇರಿ ಗ್ರಾಮದ ಚಂದ್ರು ಎನ್ನುವವರನ್ನು ಅಪರಾಧ ಪತ್ತೆ ದಳದ ಸಿಬ್ಬಂದಿ ಬಂಧಿಸಿದ್ದಾರೆ. ಆರೋಪಿಯು ಉಗುರುಗಳನ್ನು ಬೆಂಗಳೂರಿಗೆ ಸಾಗಿಸುತ್ತಿರುವ ಬಗ್ಗೆ ದೊರೆತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆದಿದೆ. ಸಿಬ್ಬಂದಿ ಎಎಸ್ ತಕೀವುಲ್ಲಾ, ರವಿಕುಮಾರ್, ವೆಂಕಟೇಶ್, ಜಡೇಗೌಡ ಆರೋಪಿಯನ್ನು ಮಾಲು ಸಮೇತ ಬಂಧಿಸಿದ್ದಾರೆ. ಕಾಳ ಸಂತೆಯಲ್ಲಿ ಮಾರುವ ಸಲುವಾಗಿ ಹೋಗುತ್ತಿದ್ದೇನೆ ಎಂದು ಎಂದು ತಪ್ಪೊಪ್ಪಿಕೊಂಡಿದ್ದಾನೆ ಎಂದು …
Read More »
BigTv News
March 30, 2026
Breaking News
ಶಿವಮೊಗ್ಗ: ಟಿಪ್ಪು ನಗರದಲ್ಲಿ ಯುವಕನೊಬ್ಬ ವೃದ್ಧೆ ಮೇಲೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾನೆ. 62 ವರ್ಷದ ವೃದ್ಧೆ ಹಲ್ಲೆಗೊಳಗಾದವರು. ಮಾ.27ರಂದು ಬೆಳಗಿನ ಜಾವ ವೃದ್ಧೆ ಶೌಚಗೃಹದಿಂದ ಹೊರಗೆ ಬಂದಾಗ ಹಿಂಬದಿಯಿಂದ ಬಂದ ಯುವಕ ಆಕೆ ಕೈ ಹಿಡಿದುಕೊಂಡಿದ್ದಾನೆ. ವೃದ್ಧೆ ಬಾಯಿ ಮುಚ್ಚಿ ಹಲ್ಲೆ ಮಾಡಿದ್ದಾನೆ. ಪ್ರತಿರೋಧ ವ್ಯಕ್ತಪಡಿಸಿ ಯುವಕನ ಕೈಗೆ ಕಚ್ಚಿದಾಗ ಕೆರಳಿದ ಆತ ವೃದ್ಧೆ ಮುಖಕ್ಕೆ ಗುದ್ದಿದ್ದಾನೆ. ಘಟನೆಯಲ್ಲಿ ವೃದ್ಧೆಯ ಎರಡು ಹಲ್ಲುಗಳು ಮುರಿದಿವೆ. ಬಾಯಿ ಮತ್ತು ಮೂಗಿನಿಂದ …
Read More »
BigTv News
March 30, 2026
Breaking News
ಮಂಗಳೂರು: ಅಪ್ರಾಪ್ತ ವಯಸ್ಸಿನ ಬಾಲಕಿಯೋರ್ವಳು ಆಕೆಯ ಪರಿಚಿತನ ಜತೆ ಇದ್ದಾಗ ಫೋಟೋ ತೆಗೆದು ಅನಂತರ ಬಾಲಕಿಯನ್ನು ಹಿಂಬಾಲಿಸಿ ಆಕೆಯನ್ನು ಬ್ಲ್ಯಾಕ್ ಮೇಲ್ ಮಾಡಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್ ಟಿ ಎಸ್ ಸಿ 2 (ಪೊಕ್ಸೊ ನ್ಯಾಯಾಲಯದ)ದ ನ್ಯಾಯಾಧೀಶ ಮಾನು ಕೆ.ಎಸ್. ಒಟ್ಟಾರೆ 4 ವರ್ಷ, 6 ತಿಂಗಳು ಕಠಿನ ಸಜೆ, ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಬಜಪೆ ಶಾಂತಿಗುಡ್ಡೆ …
Read More »
BigTv News
March 30, 2026
Breaking News
ಶಿವಮೊಗ್ಗ: ಜೋಳ ತುಂಬಿದ್ದ ಲಾರಿಯ ಚಕ್ರಕ್ಕೆ ಸಿಲುಕಿ ಬೈಕ್ ನಲ್ಲಿ ಬರುತ್ತಿದ್ದ ದಂಪತಿ ಧಾರುಣವಾಗಿ ಸಾವನ್ನಪ್ಪಿದ ಘಟನೆ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಎಚ್.ಕೆ.ಜಂಕ್ಷನ್ ಬಳಿ ನಡೆದಿದೆ. ಮೃತರನ್ನು ತರೀಕೆರೆ ತಾಲ್ಲೂಕಿನ ಬರಗೇನಹಳ್ಳಿ ಗೌಳಿಕ್ಯಾಂಪ್ನ ಬಾಬು (30) ಎಂದು ಗುರುತಿಸಲಾಗಿದೆ. ಪತ್ನಿ ಹೆಸರು ತಿಳಿದುಬಂದಿಲ್ಲ. ಜೋಳ ತುಂಬಿದ್ದ ಲಾರಿಯು ಶಿವಮೊಗ್ಗ ತರೀಕೆರೆ ಮಾರ್ಗವಾಗಿ ಹೊರಟಿದ್ದು, ದಂಪತಿ ಸಹ ಹೋಟೆಲ್ ಕೆಲಸ ಮುಗಿಸಿಕೊಂಡು ಬರುವಾಗ ಲಾರಿ ಹಿಂಬದಿಯ ಚಕ್ರಕ್ಕೆ ಸಿಲುಕಿದ್ದಾರೆ. …
Read More »
BigTv News
March 30, 2026
Breaking News
ಬೆಂಗಳೂರು: ನಗರದ ಕೊಡಿಗೆಹಳ್ಳಿ ಫ್ಲೈಓವರ್ ಮೇಲೆ ಇಂದು ಬೆಳಗ್ಗೆ ಸುಮಾರು 6 ಗಂಟೆ ಸುಮಾರಿಗೆ ಭೀಕರ ರಸ್ತೆ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ದೇವನಹಳ್ಳಿ ಕಡೆಯಿಂದ ಬೆಂಗಳೂರಿನತ್ತ ಬರುತ್ತಿದ್ದ ಬೈಕ್ ಸವಾರ ವೇಗವಾಗಿ ಸಂಚರಿಸುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಮುಂಭಾಗದಲ್ಲಿದ್ದ ಕನ್ಸ್ಟ್ರಕ್ಷನ್ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ತೀವ್ರತೆಗೆ ಸವಾರ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾನೆ. ಮೃತನ ಗುರುತು ಇನ್ನೂ ಪತ್ತೆಯಾಗಿಲ್ಲ. ಘಟನೆ ಕುರಿತು …
Read More »
BigTv News
March 29, 2026
Breaking News
ಕುಷ್ಟಗಿ: ಇಲ್ಲಿಯ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಮಹಾರಾಜಾ ಡಾಬಾದಲ್ಲಿ ಗಾಂಜಾ ಸಂಗ್ರಹ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ₹ 50 ಸಾವಿರ ಮೌಲ್ಯದ ಗಾಂಜಾ ಜಪ್ತಿ ಮಾಡಲಾಗಿದ್ದು ಡಾಬಾ ಮಾಲೀಕರಾದ ಅಶೋಕ ಚೌಧರಿ ಮತ್ತು ತೇಜರಾಮ್ ಚೌಧರಿ ಇವರನ್ನು ಬಂಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಇನ್ನೊಬ್ಬ ಆರೋಪಿ ರಣಜಿತ್ ಸಿಂಗ್ ಪರಾರಿಯಾಗಿದ್ದಾನೆ. ಕಡೆಕೊಪ್ಪ ಸೀಮಾಂತರದಲ್ಲಿರುವ ಡಾಬಾದಲ್ಲಿ ಅಕ್ರಮವಾಗಿ ಗಾಂಜಾ ಸಂಗ್ರಹಿಸಿದ್ದಲ್ಲದೇ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದ ಮಾಹಿತಿಯ ಮೇರೆಗೆ ಪಿಎಸ್‌ಐ ಹನುಮಂತಪ್ಪ ತಳವಾರ …
Read More »
BigTv News
March 29, 2026
Breaking News
ಗಂಗಾವತಿ: ತಾಲ್ಲೂಕಿನ ವಡ್ಡರಹಟ್ಟಿ ಗ್ರಾಮದಲ್ಲಿ ಪಡಿತರ ಅಕ್ಕಿ ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದುದರ ಕುರಿತು ಕನ್ನಡಪರ ಸಂಘಟನೆಗಳ ಮುಖಂಡರು ನೀಡಿದ ಖಚಿತ ಮಾಹಿತಿ ಮೇರೆಗೆ ಶನಿವಾರ ದಾಳಿ ನಡೆಸಿದ ಆಹಾರ ಇಲಾಖೆ ಅಧಿಕಾರಿಗಳು, ಪಡಿತರ ಅಕ್ಕಿ ತುಂಬಿದ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ. ಬೂದಗುಂಪ ಕ್ರಾಸ್‌ನಿಂದ ಗಂಗಾವತಿ ಮಾರ್ಗವಾಗಿ ಬರುತ್ತಿದ್ದ ಲಾರಿ ತಡೆದು ವಿಚಾರಣೆ ನಡೆಸಿ, ಅಕ್ಕಿ ಪರಿಶೀಲಿಸಿದ ಸಮಯದಲ್ಲಿ ಪಡಿತರ ಅಕ್ಕಿ ಎಂದು ಸಾಬೀತಾಗಿದೆ. ಕೂಡಲೇ ಆಹಾರ ಇಲಾಖೆ ಅಧಿಕಾರಿಗಳಿಗೆ ಮಾಹಿತಿ …
Read More »
BigTv News
March 29, 2026
Breaking News
ರಾಯಚೂರು: ಗೊಬ್ಬರ ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಕೆರೆಗೆ ಉರುಳಿ ಬಿದ್ದು ಇಬ್ಬರು ಮೃತಪಟ್ಟಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ನಾಲ್ಕು ಮೈಲ್ ಕ್ಯಾಂಪ್ ಬಳಿ ಈ ಘಟನೆ ನಡೆದಿದೆ. ಜಮೀನಿಗೆ ಗೊಬ್ಬರ ಸಾಗಿಸುತ್ತಿದ್ದ ಟ್ಯಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಪಲ್ಟಿಯಾಗಿದ್ದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವಿರೂಪಾಪುರ ಗ್ರಾಮದ ಸುಕುಮುನಿ (31) ಹಾಗೂ ಅರಳಹಳ್ಳಿ ನಿವಾಸಿ ವಿರೂಪನಗೌಡ (42) ಮೃತ ದುರ್ದೈವಿಗಳು. ಘಟನೆ ಬಗ್ಗೆ ಮಾಹಿತಿ …
Read More »
BigTv News
March 29, 2026
Breaking News
ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಇಂದು ಸಾಲು ಸಾಲು ಅಪಘಾತಗಳು ಸಂಭವಿಸಿದ್ದು, ಸಾವು-ನೋವಿನ ಸಂಖ್ಯೆ ಹೆಚ್ಚಾಗಿದೆ. ಭೀಕರ ಅಪಘಾತ ಬೈಕ್ ಸವಾರರಿಬ್ಬರೂ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಚಿಕ್ಕಬಳ್ಳಾಪುರ ತಾಲೂಕಿನ ಸಾದಲಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಈ ಅಪಘಾತ ನಡೆದಿದೆ. ವೇಗವಾಗಿ ಬಂದ ಕ್ಯಾಂಟರ್ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು ನರಸಿಂಹಪ್ಪ (45) ಮತ್ತು ನಾರಾಯಣಸ್ವಾಮಿ (44) ಎಂದು ಗುರುತಿಸಲಾಗಿದೆ. ಇವರು ಚಿಕ್ಕಬಳ್ಳಾಪುರ …
Read More »