Breaking News

Breaking News

ಅತ್ಯಾಚಾರಿಗೆ 20 ವರ್ಷ ಕಾರಾಗೃಹ ಶಿಕ್ಷೆ

ಬೆಳಗಾವಿ: ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದ ಮೂಡಲಗಿ ತಾಲೂಕಿನ ಹುಣಶ್ಯಾಳ ಪಿ.ವೈ. ಗ್ರಾಮದ ದೇವರಾಜ ಅಶೋಕ ಮೇತ್ರಿ (28)ಗೆ 20 ವರ್ಷ ಕಾರಾಗೃಹ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ಜಿಲ್ಲಾ ಪೋಕ್ಸೋ ನ್ಯಾಯಾಲಯ ಮಂಗಳವಾರ ತೀರ್ಪು ಪ್ರಕಟಿಸಿದೆ. 2023ರಲ್ಲಿ ಅತ್ಯಾಚಾರವೆಸಗಿದ ಕುರಿತು ಕುಲಗೋಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ತನಿಖಾಧಿಕಾರಿ ಶ್ರೀಶೈಲ ಬ್ಯಾಕೂಡ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ವಿಶೇಷ ಶೀಘ್ರಗತಿ ನ್ಯಾಯಾಲಯಕ್ಕೆ ದೋಷಾರೋಪಣೆ …

Read More »

ಬೈಂದೂರು: ಜ್ಯುವೆಲ್ಲರಿಗೆ ನುಗ್ಗಿ ಸೊತ್ತು ಕಳವು; ಪ್ರಕರಣ ದಾಖಲು

ಜ್ಯುವೆಲ್ಲರಿಯೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಘಟನೆ ಮಾ.4ರಂದು ಬೆಳಗಿನ ಜಾವ ನಡೆದಿದೆ. ಯಡ್ತರೆ ಗ್ರಾಮದ ಬಂಕೇಶ್ವರದ ಕಾರ್ತಿಕ್ ರಮೇಶ್ ರಾಯ್ಕರ್ ಎಂಬವರ ಬಂಕೇಶ್ವರ ರಸ್ತೆಯಲ್ಲಿರುವ ರವಿಕಲಾ ಜ್ಯುವೆಲ್ಲರ್ಸ್‌ನ ಬೀಗ ಮುರಿದು ಒಳನುಗ್ಗಿದ ಕಳ್ಳರು, ಅಂಗಡಿಗೆ ರಿಪೇರಿಗೆ ಬಂದಿದ್ದ 12 ಗ್ರಾಂ ತೂಕದ ಚಿನ್ನದ ನೆಕ್ಲೆಸ್ ಮತ್ತು 80 ಗ್ರಾಂ ತೂಕದ ಬೆಳ್ಳಿಯ ಆಭರಣಗಳಾದ 3 ಬೆಳ್ಳಿಯ ಚೈನ್, 1 ಬೆಳ್ಳಿಯ ಬ್ರಾಸ್‌ಲೈಟ್, ಬೆಳ್ಳಿಯ …

Read More »

ಕಾಕುಬಾಳು: ₹2.10 ಲಕ್ಷ ಮೌಲ್ಯದ ಪಡಿತರ ಅಕ್ಕಿ ವಶ

ಹೊಸಪೇಟೆ: ತಾಲ್ಲೂಕಿನ ಕಾಕುಬಾಳ ಗ್ರಾಮದ ಜೋಳದ ರಸ್ತೆ ಕರಿಯಮ್ಮನ ಗುಡಿ ಹತ್ತಿರವಿರುವ ಮನೆಯೊಂದರ ಮುಂದೆ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ 2.10 ಲಕ್ಷ ಮೌಲ್ಯದ 60.80 ಕ್ವಿಂಟಲ್‌ ಪಡಿತರ ಅಕ್ಕಿಯನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಜಪ್ತಿ ಮಾಡಿದ್ದಾರೆ.ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದಾಗ ಯಾವುದೇ ಪರವಾನಗಿ ಇಲ್ಲದೆ ಅನಧಿಕೃತವಾಗಿ ಸಂಗ್ರಹಿಸಿಟ್ಟಿದ್ದ ಅಕ್ಕಿ ಮೂಟೆಗಳು ಪತ್ತೆಯಾದವು. ಈ ಕುರಿತು ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. …

Read More »

ಬೆಳ್ಳಂಬೆಳಗ್ಗೆ‌ ಭ್ರಷ್ಟ ಅಧಿಕಾರಿಗಳಿಗೆ ಲೋಕಾ ಶಾಕ್: ಬೆಂಗಳೂರಿನ 4 ಕಡೆ ಸೇರಿ ರಾಜ್ಯದ ಹಲವೆಡೆ ದಾಳಿ

ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಬೆಳ್ಳಂಬೆಳಗ್ಗೆ ಬಿಸಿಮುಟ್ಟಿಸಿದ್ದು, ಬೆಂಗಳೂರಿನ ನಾಲ್ಕು ಕಡೆ ಸೇರಿ ರಾಜ್ಯದ ಹಲವೆಡೆ ದಾಳಿ ನಡೆಸಿದೆ. ಕೆಆರ್‌ಐಡಿಎಲ್ ಚೀಫ್ ಎಂಜಿನಿಯರ್ ವಸಂತ್ ವಿ ನಾಯಕ್, ಬಿಡಿಎ ವ್ಯಾಪ್ತಿಯ ಆರ್‌ಎಫ್‌ಓ ಡಾಲೇಶ್, ರೈತ ಸೇವಾ ಸಹಕಾರ ಸಂಘದ ಸಿಇಓ ಶಶಿಧರ್ ಮನೆ, ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ ಮಾಡಿದೆ. ಯಾದಗಿರಿಯ ವಿದ್ಯುತ್ ಇಲಾಖೆಯ ಉಪ ವಿದ್ಯುತ್ ಪರಿವೀಕ್ಷಕ ವೀರೇಶ್ ಹಿರೇಮಠ, ಮಂಡ್ಯದ ಲೋಕೋಪಯೋಗಿ ಇಲಾಖೆಯ ಮಂಡ್ಯ ಉಪವಿಭಾಗದ ಎಎಇ ಎಸ್ …

Read More »

ಪೋಕ್ಸೊ ಕೇಸ್‌ನಲ್ಲಿ 71 ವರ್ಷದ ಅಜ್ಜನಿಗೆ 3 ವರ್ಷ ಶಿಕ್ಷೆ

ಉಡುಪಿ: ಖಾಸಗಿ ಮಳಿಗೆಯಲ್ಲಿ 13 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ 71 ವರ್ಷದ ಅಪರಾಧಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗು ಪೋಕ್ಸೊ ನ್ಯಾಯಾಲಯ 3 ವರ್ಷ ಸಾಧಾರಣ ಜೈಲು ಶಿಕ್ಷೆ ಹಾಗೂ 3 ಸಾವಿರ ರೂ. ದಂಡ ವಿಧಿಸಿದೆ. ಲೂಯಿಸ್ ರಂಜಲ್ (71) ಶಿಕ್ಷೆಗೊಳಗಾದವರು. ಕಳೆದ ವರ್ಷ ಜು.12 ರಂದು ಸಂತ್ರಸ್ತ ಬಾಲಕಿ ತಾಯಿಯೊಂದಿಗೆ ನಗರದ ಮಾಲ್ಗೆ ತೆರಳಿದ್ದಾಗ ಆರೋಪಿಯೂ ಬಾಲಕಿಗೆ ಹಿಂದಿನಿಂದ ಬಂದು ಲೈಂಗಿಕವಾಗಿ …

Read More »

ಬೀರಬ್ಬಿಯಲ್ಲಿ ಯುವಕನ ಕೊಲೆ: ಚೀಲದಲ್ಲಿ ಮೃತ ದೇಹ ಪತ್ತೆ

ಹೂವಿನಹಡಗಲಿ : ತಾಲೂಕಿನ ಬೀರಬ್ಬಿ ಗ್ರಾಮದಲ್ಲಿ ಬೀರೇಶ (25) ಎಂಬ ಯುವಕನ ಕೊಲೆ ಮಾಡಿ, ದೇಹವನ್ನು ಕತ್ತರಿಸಿ ಚೀಲದಲ್ಲಿ ತುಂಬಿ ಹಾಕಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಕುರಿ ಕಾಯುವ ಕೆಲಸ ಮಾಡುತ್ತಿದ್ದ ಬೀರೇಶ ಕಳೆದ 15 ದಿನಗಳಿಂದ ಕಾಣೆಯಾಗಿದ್ದರು. ಆದರೆ, ಬುಧವಾರ ಸಂಜೆ ಬೀರೇಶ ಅವರ ಮನೆಯ ಹಿಂಭಾಗದಲ್ಲಿ ಮೃತ ದೇಹ ಪತ್ತೆಯಾಗಿದೆ. ಪ್ರಾಣಿ ಸತ್ತಿರುವ ವಾಸನೆ ಬರುತ್ತಿದೆ ಎಂದು ಸ್ಥಳೀಯರು ಗಮನಿಸಿದಾಗ, ಒಂದು ಚೀಲ ಕಂಡು ಬಂದಿದ್ದು, …

Read More »

ಬೈಕ್‌ಗೆ ಕಾರು ಡಿಕ್ಕಿ ಹೊಡೆದು ಬಳಿಕ ಡಿವೈಡರ್‌ಗೆ ಗುದ್ದಿ ಪಲ್ಟಿ: ಓರ್ವ ಸಾವು, ಮತ್ತೊಬ್ಬರ ಸ್ಥಿತಿ ಗಂಭೀರ

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಹಕ್ಕಿಪಿಕ್ಕಿ ಕಾಲೋನಿ ಸಮೀಪ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ. ಮೃತರನ್ನು ಆಂಧ್ರಪ್ರದೇಶ ಮೂಲದ ಬಶೀರ್ (40) ಎಂದು ಗುರುತಿಸಲಾಗಿದೆ. ಅತಿ ವೇಗದಲ್ಲಿ ಸಂಚರಿಸುತ್ತಿದ್ದ ಕಾರು ಮೊದಲು ಬೈಕ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದು, ಬಳಿಕ ನಿಯಂತ್ರಣ ತಪ್ಪಿ ರಸ್ತೆ ಮಧ್ಯದ ಡಿವೈಡರ್‌ಗೆ ಅಪ್ಪಳಿಸಿ ಪಲ್ಟಿಯಾಗಿದೆ. ಅಪಘಾತದ ತೀವ್ರತೆ ಎಷ್ಟಿತ್ತೆಂದರೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ಮತ್ತೋರ್ವ ವ್ಯಕ್ತಿಯ …

Read More »

ಫೋನ್ ಪೇ ಮೂಲಕ ಲಂಚ ಪಡೆದ ಅಧಿಕಾರಿ ಅರೆಸ್ಟ್

ಹಾವೇರಿ: ಫೋನ್ ಪೇ ಮೂಲಕ ಲಂಚ ಪಡೆದ ಆಹಾರ ನಿರೀಕ್ಷಕ(ಪ್ರಭಾರ)ರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಪಡಿತರ ಚೀಟಿ ಮಾಡಿಸಿಕೊಟ್ಟಿದ್ದಕ್ಕೆ 5000 ರೂ. ಲಂಚ ಪಡೆದ ಆರೋಪದ ಮೇಲೆ ಆಹಾರ ನಿರೀಕ್ಷಕ ವಿಜಯಕುಮಾರ ಗುಡಗೇರಿ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಹಿರೇಲಿಂಗದಹಳ್ಳಿಯ ಬೀರಪ್ಪ ಕಾಶಂಬಿ ಅವರಿಗೆ ವಿಜಯಕುಮಾರ ಪಡಿತರ ಚೀಟಿ ಮಾಡಿಕೊಟ್ಟಿದ್ದರು. ಇದಕ್ಕಾಗಿ ಅವರು ಫೋನ್ ಪೇ ಮೂಲಕ ಲಂಚ ಪಡೆದುಕೊಂಡಿದ್ದರು. ಈ ಬಗ್ಗೆ ದೂರು ಪಡೆದ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ …

Read More »

ಬ್ಯಾಂಕ್‌ ಖಾತೆಯಿಂದ ಹಣ ಲೂಟಿ: ದೂರು

ಬೆಂಗಳೂರು: ಬ್ಯಾಂಕ್ ಖಾತೆಯಿಂದ ಅನಧಿಕೃತವಾಗಿ ಹಣ ಹಿಂಪಡೆದಿರುವ ಬಗ್ಗೆ ಮಂಗಳೂರು ಪೂರ್ವ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. 32 ವರ್ಷ ಪ್ರಾಯದ ದೂರುದಾರರು, ಫೆ.28ರಂದು ತನ್ನ ಮೊಬೈಲ್ ನ ಲ್ಲಿದ್ದ ಸಿಮ್ ಕಾರ್ಡ್ ನಿಷ್ಕ್ರಿಯ ಆಗಿರುವುದನ್ನು ಗಮನಿಸಿ ಏರ್ ಟೆಲ್ ಕಚೇರಿಗೆ ಹೋಗಿ ಅದೇ ಸಂಖ್ಯೆಯ ಸಿಮ್ ಪಡೆದು ಏರ್ ಟೆಲ್ ಕಚೇರಿಯಲ್ಲಿ ತಿಳಿಸಿದಂತೆ 4 ಗಂಟೆಯ ಬಳಿಕ ಆ ಸಿಮ್ ಅನ್ನು ಮೊಬೈಲ್ ಗೆ ಹಾಕಿ ಗೂಗಲ್ ಪೇ …

Read More »

ಸಿಲಿಂಡರ್ ಸ್ಫೋಟ ಎರಡಂತಸ್ತಿನ ಮನೆಗೆ ಹಾನಿ

ಸಂಡೂರು: ತಾಳೂರು ಗ್ರಾಮದಲ್ಲಿ ಎಲ್ಪಿಜಿ ಸಿಲಿಂಡರ್ ಸ್ಫೋಟಗೊಂಡು, ಸುಭಾನಿ ಎಂಬುವವರ ಎರಡಂತಿಸ್ತಿನ ಆರ್‌ಸಿಸಿ ಮನೆ ಜಖಂಗೊಂಡಿದೆ. ಗ್ಯಾಸ್ ಸೋರಿಕೆ ಆಗುತ್ತಿರುವುದನ್ನು ಕಂಡ ಸುಭಾನಿ ಅವರ ಪುತ್ರ ಆಸೀಫ್ ಮನೆಯಲ್ಲಿದ್ದವರನ್ನು ಹೊರಗೆ ತಂದಿದ್ದಾನೆ. ಆದರೂ, ಘಟನೆಯಲ್ಲಿ ಪಕ್ಕದ ಮನೆಯವರಾದ ಮಾಬುಸಾಬ್ (58), ಗೌರಮ್ಮ (36), ವೀರೇಶ್(30) ಗಾಯಗೊಂಡಿದ್ದಾರೆ. ಮತ್ತಿಬ್ಬರಿಗೆ ಸಣ್ಣ ಪ್ರಮಾಣದ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮನೆ ಮೇಲಿದ್ದ ನೀರಿನ ಟ್ಯಾಂಕ್ ಕೂಡ ಹಾನಿಯಾಗಿದೆ. ಸಂಸದ ಈ.ತುಕಾರಾಮ್, ತಹಸೀಲ್ದಾರ್ ಅನಿಲ್ …

Read More »