Breaking News

Breaking News

ಹೊಸನಗರ | ಶಾಲಾ ಆವರಣದಲ್ಲಿ ವ್ಯಕ್ತಿ ಶವ ಪತ್ತೆ

ಹೊಸನಗರ: ತಾಲ್ಲೂಕಿನ ಬೈಸೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾರಿಡಾರ್‌ನಲ್ಲಿ ವ್ಯಕ್ತಿ ಮೃತ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಶನಿವಾರ ಪತ್ತೆಯಾಗಿದೆಮೃತರನ್ನು ಬೈಸೆ ಗ್ರಾಮದ ರಾಕೇಶ್ (28) ಎಂದು ಗುರುತಿಸಲಾಗಿದೆ. ಯುವಕ ರಾಕೇಶ್ ರಾತ್ರಿ ವೇಳೆ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ. ಶನಿವಾರ ಬೆಳಿಗ್ಗೆ ವಿದ್ಯಾರ್ಥಿಗಳು ಶಾಲೆಗೆ ಬಂದಾಗ ಮೃತ ದೇಹ ಕಂಡು ಭಯಗೊಂಡಿದ್ದರು. ಪೊಲೀಸರು ಪರಿಶೀಲಿಸಿ ಕ್ರಮ ಕೈಗೊಂಡಿದ್ದಾರೆ. ರಾಕೇಶ್ ಶುಕ್ರವಾರ ಸಂಜೆ ಮನೆಯಿಂದ ಕಾಣೆಯಾಗಿದ್ದು ಪೋಷಕರು ಹುಡುಕುತ್ತಿದ್ದರು.

Read More »

ವೇಶ್ಯಾವಾಟಿಕೆಗೆ ಅತ್ತೆ ಒತ್ತಾಯ : ಬೀದರ್ ನಲ್ಲಿ ಮಹಿಳೆ ಆತ್ಮಹತ್ಯೆ.!

ಬೀದರ್ : ವೇಶ್ಯಾವಾಟಿಕೆಗೆ ಅತ್ತೆ ಒತ್ತಾಯಿಸಿದ್ದಕ್ಕೆ ವಿವಾಹಿತ ಮಹಿಳೆಯೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೀದರ್ ಜಿಲ್ಲೆಯ ಓಂ ಬಡಾವಣೆಯಲ್ಲಿ ನಡೆದಿದೆ.ಓಂ ಬಡಾವಣೆಯ ಅಂಜನಾಬಾಯಿ ಆತ್ಮಹತ್ಯೆಗೆ ಶರಣಾಗಿರುವ ಮಹಳೆ. ಪತಿ ಮನೆಯವರು ನಿತ್ಯ ಕಿರುಕುಳ ನೀಡುತ್ತಿದ್ದರು ಎನ್ನುವ ಆರೋಪ ಕೇಳಿಬಂದಿದೆ. 2022ರಲ್ಲಿ ಶೇಖರ್ ಜೊತೆಗೆ ಅಂಜನಾಬಾಯಿ ವಿವಾಹವಾಗಿದ್ದರು. ಮದುವೆ ಬಳಿಕ ಅಂಜನಾಬಾಯಿಗೆ ನಿತ್ಯ ಕಿರುಕುಳ ನೀಡಲಾಗುತ್ತಿತ್ತು. ವೇಶ್ಯಾವಾಟಿಕೆ ಮಾಡುವಂತೆ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ. ಇದರಿಂದ ಬೇಸತ್ತ ಮಹಿಳೆ …

Read More »

ಪೊಲೀಸರ ಕರ್ತವ್ಯಕ್ಕೆ ಅಡ್ಡಿ, ಜೀವ ಬೆದರಿಕೆ: ರೌಡಿಶೀಟರ್ ಅರೆಸ್ಟ್

ಬೆಂಗಳೂರು: ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ರೌಡಿಶೀಟರ್ ಪಳನಿ ಅಲಿಯಾಸ್ ಕರ್ಚಿಫ್ ಪಳನಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಶೋಕನಗರ, ಕೋಣನಕುಂಟೆ, ಕೆಎಸ್ ಲೇಔಟ್, ವಿಲ್ಸನ್ ಗಾರ್ಡನ್, ಬೆಳ್ಳಂದೂರು ಮತ್ತು ಇತರೆ ಪೊಲೀಸ್ ಠಾಣೆಗಳಲ್ಲಿ ಕೊಲೆ, ಕೊಲೆ ಯತ್ನ, ಕಳ್ಳತನ ಸೇರಿ 15ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಆರೋಪಿ ಪಳನಿ ಬೇಕಾಗಿದ್ದ. ಕಸವನಹಳ್ಳಿಯ ಸ್ಲಂ ಬೋರ್ಡ್ ಮನೆಯಲ್ಲಿ ವಾಸವಾಗಿದ್ದು, ಸ್ಥಳೀಯರನ್ನು ಬೆದರಿಸುತ್ತಿದ್ದ. ನಾನು ಹಲವು …

Read More »

ಪಾರ್ಟಿ ವೇಳೆ ಸ್ಪಿರೀಟ್ ಕುಡಿದು ಅಸ್ವಸ್ಥರಾಗಿದ್ದ ಇಬ್ಬರು ಯುವಕರು ಸಾವು

ಕೊಪ್ಪಳ: ಪಾರ್ಟಿಯಲ್ಲಿ ಸ್ಪಿರೀಟ್ ಸೇವಿಸಿ ತೀವ್ರವಾಗಿ ಅಸ್ವಸ್ಥರಾಗಿದ್ದ ನಾಲ್ವರಲ್ಲಿ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ. ಕೊಪ್ಪಳ ಜಿಲ್ಲೆಯ ಕೂಕನಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಫೆಬ್ರವರಿ 4೪ರಂದು ಕೂಕನಳ್ಳಿಯಲ್ಲಿ ಪಾರ್ಟಿ ಮಾಡಿದ್ದ ನಾಲ್ಕೈದು ಯುವಕರು ಸ್ಪಿರೀಟ್ ಕುಡಿದಿದ್ದರು. ಸ್ಪಿರೀಟ್ ಸೇವಿಸಿದ್ದ ನಾಲ್ವರು ಯುವಕರು ತೀವ್ರವಾಗಿ ಅಸ್ವಸ್ಥಗೊಂಡಿದ್ದರು. ನಾಲ್ವರನ್ನೂ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿತ್ತು. ಇದೀಗ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಓರ್ವ ಯುವಕ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ …

Read More »

ರಾಜ್ಯದಲ್ಲಿ `ಬೆಚ್ಚಿ ಬೀಳಿಸೋ’ ಘಟನೆ : ಚಿಂದಿ ಆಯುವ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ.!

ಕಲಬುರಗಿ : ರಾಜ್ಯದಲ್ಲಿ ಮತ್ತೊಂದು ಬೆಚ್ಚಿ ಬೀಳಿಸೋ ಘಟನೆ ನಡೆದಿದ್ದು, ಮಹಿಳೆ ಮೇಲೆ ಅನ್ಯಕೋಮಿನ ಯುವಕರು ಅತ್ಯಾಚಾರಕ್ಕೆ ಯತ್ನಿಸಿರುವ ಆರೋಪ ಕೇಳಿಬಂದಿದೆ. ಕಲಬುರಗಿಯ ಸಬ್ ಅರ್ಬನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಚಿಂದಿ ಆಯುವ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಚಿಂದಿ ಆಯುವ ಮಹಿಳೆಯನ್ನು ದುಷ್ಕರ್ಮಿಗಳು ಎಳೆದಾಡುತ್ತಾ ಕಾರಿನಲ್ಲಿ ಹೊತ್ತೊಯ್ಯಲು ಯತ್ನಿಸಲಾಗಿದೆ. ಈ ವೇಳೆ ಮಹಿಳೆ ಕಿರುಚಾಡುತ್ತಿದ್ದಂತೆ ಹಲ್ಲೆಗೈದು ಯುವಕರ ಗ್ಯಾಂಗ್ ಪರಾರಿಯಾಗಿದೆ. ಗಾಯಗೊಂಡ …

Read More »

ಬೆಂಗಳೂರಲ್ಲಿ ಯುವತಿಯರಿಂದ ಕಿರಿಕ್ : ಕುಡಿದ ಮತ್ತಿನಲ್ಲಿ ಕ್ಯಾಬ್ ಚಾಲಕನ ಮೇಲೆ ಹಲ್ಲೆ.!

ಬೆಂಗಳೂರಿನ ಬನ್ನೇರುಘಟ್ಟ ರಸ್ತೆ ಹುಳಿಮಾವು-ದೇವರಚಿಕ್ಕನಹಳ್ಳಿ ಮುಖ್ಯರಸ್ತೆಯಲ್ಲಿ ಭಾರೀ ಹೈಡ್ರಾಮಾ ನಡೆದಿದ್ದು, ಮದ್ಯ ಸೇವಿಸಿ ಇಬ್ಬರು ಯುವತಿಯರು ಕಿರಿಕ್ ಮಾಡಿದ್ದಾರೆ. ಈ ವೇಳೆ ಇಬ್ಬರು ಯುವತಿಯರನ್ನು ಸ್ಥಳೀಯರು ಬೆನ್ನತ್ತಿ ಹಿಡಿದಿದ್ದಾರೆ. ಲೀಸಾ, ಮ್ಯಾಥ್ಯೂ ಎಂಬ ಯುವತಿಯರ ವಿರುದ್ಧ ಪ್ರಕರಣ ದಾಖಲಾಗಿದೆ. ಯುವತಿಯರು ಎಣ್ಣೆ ಏಟಲ್ಲಿ ಬೀದಿ ರಂಪಾಟ ಮಾಡಿದ್ದಾರೆ. ನಶೆಯಲ್ಲೇ ಇಬ್ಬರು ಯುವತಿಯರು ಬೈಕ್ ಚಾಲನೆ ಮಾಡಿದ್ದಾರೆ. ಈ ವೇಳೆ ಹಿಂದಿನಿಂದ ಕ್ಯಾಬ್ ಬೈಕ್ ಡಿಕ್ಕಿಯಾಗಿದೆ. ಡಿಕ್ಕಿ ಹೊಡೆದಿದ್ದಕ್ಕೆ ಕಾರು ಚಾಲಕ …

Read More »

ಮದುವೆಯಾಗಿದ್ದ ಊರಲ್ಲಿ ಕಳ್ಳತನಕ್ಕೆ ಇಳಿದ ಪೊಲೀಸ್ ಕಾನ್ಸ್ ಟೇಬಲ್ ಸೇರಿ ಐವರು ಅರೆಸ್ಟ್

ಹಾವೇರಿ: ಜಿಲ್ಲೆಯಲ್ಲಿ ತಾನು ಮದುವೆಯಾಗಿದ್ದಂತ ಮಾವನ ಊರಲ್ಲಿ ಪೊಲೀಸ್ ಪೇದೆಯೇ ಕಳ್ಳತನ ಮಾಡಿ ಸಿಕ್ಕಿಹಾಕಿಕೊಂಡಿರುವಂತ ಘಟನೆ ಹಾವೇರಿಯ ಹಿರೇಕೆರೂರಲ್ಲಿ ನಡೆದಿದೆ. ಹಾವೇರಿ ಜಿಲ್ಲೆಯ ಹಿರೇಕೆರೂರು ಠಾಣೆಯ ಪೊಲೀಸರಿಂದ ಪೇದೆ ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಮದುವೆಯಾಗಿದ್ದಂತ ಊರಿನಲ್ಲಿ ಕಾನ್ಸ್ ಟೇಬಲ್ ಪ್ರದೀಪ್ ನಾಯಕ್ ಕಳ್ಳತನಕ್ಕೆ ಇಳಿದಿದ್ದರು. ಕಳ್ಳತನ ಹೆಚ್ಚಾದ ಹಿನ್ನಲೆಯಲ್ಲಿ ಊರಿನ ಗ್ರಾಮಸ್ಥರು ಹಿರೇಕೆರೂರು ಠಾಣೆಯ ಪೊಲೀಸರಿಗೆ ದೂರು ನೀಡಿದ್ದರು. ಈ ದೂರು ಆಧರಿಸಿ ತನಿಖೆ ನಡೆಸಿದಂತ ಪೊಲೀಸರು ಕಾನ್ಸ್ …

Read More »

ಪತ್ನಿಗೆ ಗುಂಡು: ಪತಿಗೆ ನೆರವಾಗಿದ್ದ ಮತ್ತೊಬ್ಬ ಆರೋಪಿ ಸೆರೆ

ಬೆಂಗಳೂರು: ಪತ್ನಿಗೆ ಪಿಸ್ತೂಲ್‌ನಿಂದ ಗುಂಡು ಹಾರಿಸಿ ಕೊಲೆ ಮಾಡಿದ್ದ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯನ್ನು ಮಾಗಡಿ ರಸ್ತೆ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.ಉತ್ತರಪ್ರದೇಶದ ಅಭಿಮನ್ಯು ಸಿಂಗ್‌ ಬಂಧಿತ ಆರೋಪಿ. ಪತಿ ಬಾಲಮುರುಗನ್‌ ಅವರಿಗೆ ಪಿಸ್ತೂಲ್‌ ಖರೀದಿಸಲು ಅಭಿಮನ್ಯು ಸಿಂಗ್ ನೆರವು ನೀಡಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿತ್ತು ಎಂದು ಪೊಲೀಸರು ಹೇಳಿದರು. ಡಿ.23ರ ಸಂಜೆ ಪತ್ನಿ ಭುವನೇಶ್ವರಿಗೆ ಗುಂಡು ಹಾರಿಸಿ ಪತಿ ಬಾಲಮುರುಗನ್ ಕೊಲೆ ಮಾಡಿದ್ದರು. ‘ಆಭರಣ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅಭಿಮನ್ಯು …

Read More »

ರಷ್ಯಾದಲ್ಲಿ ಚಾಕುವಿನಿಂದ ಇರಿದು ದಾಳಿ: ನಾಲ್ವರು ಭಾರತೀಯ ವಿದ್ಯಾರ್ಥಿಗಳು ಸೇರಿದಂತೆ ಹಲವರಿಗೆ ಗಾಯ

ರಷ್ಯಾದ ಬಾಷ್ಕೊರ್ಟೋಸ್ತಾನ್ ಗಣರಾಜ್ಯದ ವಿಶ್ವವಿದ್ಯಾಲಯವೊಂದರಲ್ಲಿ ಶನಿವಾರ ನಡೆದ ಚಾಕುವಿನಿಂದ ಇರಿತದ ದಾಳಿಯಲ್ಲಿ ನಾಲ್ವರು ಭಾರತೀಯ ವಿದ್ಯಾರ್ಥಿಗಳು ಸೇರಿದಂತೆ ಕನಿಷ್ಠ ಆರು ಜನರು ಗಾಯಗೊಂಡಿದ್ದಾರೆ ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.ಪ್ರಾಥಮಿಕ ವರದಿಗಳ ಪ್ರಕಾರ, ಚಾಕುವಿನಿಂದ ಶಸ್ತ್ರಸಜ್ಜಿತ ಹದಿಹರೆಯದ ಯುವಕನೊಬ್ಬ ಬಾಷ್ಕೊರ್ಟೋಸ್ತಾನ್ ಗಣರಾಜ್ಯದ ಉಫಾದಲ್ಲಿರುವ ಸ್ಟೇಟ್ ಮೆಡಿಕಲ್ ಯೂನಿವರ್ಸಿಟಿಯ ವಸತಿ ನಿಲಯಕ್ಕೆ ಪ್ರವೇಶಿಸಿದ್ದಾನೆ. ಅಲ್ಲಿ ವಾಸಿಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿ ಹಲವರನ್ನು ಇರಿದಿದ್ದಾನೆ ಎಂದು ಆಂತರಿಕ ಸಚಿವಾಲಯ ತಿಳಿಸಿದೆ. “ದಾಳಿಕೋರನು …

Read More »

ಮಂಗಳೂರು| ಶಾಸಕ ವೇದವ್ಯಾಸ ಕಾಮತ್‌ರ ಪತ್ನಿಯ ಅವಹೇಳನ ಪ್ರಕರಣ: ಆರೋಪಿ ಸೆರೆ

ಶಾಸಕ ವೇದವ್ಯಾಸ ಕಾಮತ್ ಮತ್ತವರ ಪತ್ನಿಯ ವಿರುದ್ಧ ಅಧಿವೇಶನದಲ್ಲಿ ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ. ಶಿವಲಿಂಗೇ ಗೌಡ ಹೇಳಿದ್ದಾರೆ ಎನ್ನಲಾದ ಮಾತನ್ನು ಉಲ್ಲೇಖಿಸಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಾಕಿದ್ದ ವ್ಯಕ್ತಿಯನ್ನು ಬಂದರು ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮದ ನಿವಾಸಿ ಶರಣ್ ರೈ (29) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಇಂತಹ ಹೇಳಿಕೆಯಿಂದ ಶಾಸಕರ ಪತ್ನಿಯ ಬಗ್ಗೆ ಸಮಾಜದಲ್ಲಿ ಅಗೌರವ ಉಂಟಾಗಿದೆ. ಮಹಿಳೆಯರ ಬಗ್ಗೆ ಕೀಳು …

Read More »