Breaking News

ಪಾಲಿಕೆಯ ನಿರ್ಧಾರಕ್ಕೆ ಜನರು ತತ್ತರ: 10 ರಿಂದ 25% ಕಟ್ಟಡ ಪರವಾನಗಿ ಟ್ಯಾಕ್ಸ್ ಹಚ್ಚಳ..!

ಹುಬ್ಬಳ್ಳಿ: ರಾಜ್ಯದ ಎರಡನೇ ಅತೀದೊಡ್ಡ ಮಹಾನಗರ ಪಾಲಿಕೆಯಿಂದ ಜನಸಾಮಾನ್ಯರಿಗೆ ಮತ್ತೊಂದು ಆಘಾತ ಎದುರಾಗಿದೆ. ಬಿಜೆಪಿ ಆಡಳಿತದಲ್ಲಿರುವ ಮಹಾನಗರ ಪಾಲಿಕೆಯ ಜನರಿಗೆ ಟ್ಯಾಕ್ಸ್ ಬಿಸಿ ತಟ್ಟುತ್ತಿದೆ. ಕಳೆದ 20 ವರ್ಷಗಳಿಂದ ಬಿಜೆಪಿ ತೆಕ್ಕೆಯಲ್ಲಿರುವ ಮಹಾನಗರ ಪಾಲಿಕೆಯಿಂದ ನಿರಂತರವಾಗಿ ಟ್ಯಾಕ್ಸ್ ಏರಿಕೆಯಾಗುತ್ತಿದೆ.ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಜನತೆಗೆ ಮಹಾನಗರ‌ ಪಾಲಿಕೆಯಿಂದ ಬಿಗ್ ಶಾಕ್ ಎದುರಾಗಿದೆ. ಕಟ್ಟಡ ಪರವಾನಗಿ ಟ್ಯಾಕ್ಸ್ ನಲ್ಲಿ‌ ಹೆಚ್ಚಳ ಮಾಡಿ ಜನಸಾಮಾನ್ಯರಿಗೆ ಮತ್ತಷ್ಟು ಹೊರೆ ಮಾಡಿದೆ. ಶೇ 10 % ರಿಂದ 25 % ರಷ್ಟು ಕಟ್ಟಡ ಪರವಾನಗಿ ಟ್ಯಾಕ್ಸ್ ಹೆಚ್ಚಳದ

ನಿರ್ಧಾರದಿಂದ ಜನಸಾಮಾನ್ಯರು ಮತ್ತಷ್ಟು ತತ್ತರಿಸಿದ್ದಾರೆ… ಪಾಲಿಕೆ ಆಡಳಿತ ಪಕ್ಷದ ವಿರುದ್ಧ ವಿರೋಧ ಪಕ್ಷದ ಅಸಮಾಧಾನಗೊಂಡಿದ್ದಾರೆ. ಕಟ್ಟಡ ಪರವಾನಗಿ ಸೇರಿದಂತೆ ಅಭಿವೃದ್ದಿ‌ ಶುಲ್ಕದ ವಿಚಾರದಲ್ಲಿ ಏಕಾಏಕಿ‌ ಹೆಚ್ಚಳ ಮಾಡಲು ಮುಂದಾದ ಪಾಲಿಕೆ ಆಡಳಿತ ಪಕ್ಷದ ವಿರುದ್ಧ ಆಕ್ರೋಶಗೊಂಡಿದ್ದಾರೆ.ಡಾಂಬರೀಕರಣ, ನಿವೇಶನ ಕ್ಷೇತ್ರಕ್ಕೆ ಪ್ರತಿ ಚದರ ಮೀಟರ್ ಗೆ 126 ರೂ ಶುಲ್ಕ ಹಾಗೂ ಶೇ 10 % ರಷ್ಟು ಟ್ಯಾಕ್ಸ್ ಹೆಚ್ಚಳಕ್ಕೆ ನಿರ್ಧಾರ ಮಾಡಿದ್ದು, ವಸತಿ ಉದ್ದೇಶಿತ ಕಟ್ಟಡಗಳಿಗೆ ಡಾಂಬರೀಕರಣ ಅಭಿವೃದ್ದಿ ಶುಲ್ಕ 715 ರೂ‌ ಪ್ರತಿ ಚದರ್ ಮೀಟರ್ ಗೆ ಶೇ 10% ರಷ್ಟು ಏರಿಕೆ ಮಾಡಿದೆ. ವಾಣಿಜ್ಯ ಹಾಗೂ ಕೈಗಾರಿಕಾ ಉದ್ದೇಶಿತ ಕಟ್ಟಡಗಳಿಗೆ 780 ರೂ ಪ್ರತಿ ಚದರ ಮೀಟರ್ ಗೆ ಶೇ 20% ರಷ್ಟು ಹೊರೆಯಾಗಿದೆ. ವಸತಿ ನಿವೇಶನಗಳಿಗೆ ಶೇ 10% ರಷ್ಟು, ಕೈಗಾರಿಕೆ ಹಾಗೂ ವಾಣಿಜ್ಯ ಉದ್ಯಮದ‌ ನಿವೇಶನಗಳಿಗೆ ಶೇ 20% ರಷ್ಟು ಟ್ಯಾಕ್ಸ್ ಹೆಚ್ಚಳಕ್ಕೆ ನಿರ್ಧಾರ ಮಾಡಲಾಗಿದೆ. ಈಗಿರುವ ಶುಲ್ಕಕ್ಕಿಂತ ಏಕಾಏಕಿ‌ ಶೇಕಡಾ 10 ರಿಂದ 25 ಪ್ರತಿಶತ ಶುಲ್ಕ‌ ಹೆಚ್ಚಳ ಮಾಡಲು ಸಿದ್ದತೆ ಮಾಡಿಕೊಂಡ ಪಾಲಿಕೆಯ ನಡೆ ಸಾಕಷ್ಟು ಸಾರ್ವಜನಿಕ ವಿರೋಧಕ್ಕೆ ಕಾರಣವಾಗಿದೆ.

Share News

About Shaikh BigTv

Check Also

ದೇರಳಕಟ್ಟೆ: ಮೆಡಿಕಲ್‌ ಕಾಲೇಜಿನಲ್ಲಿ Ragging ಪ್ರಕರಣ ದಾಖಲು

ಮಂಗಳೂರು: ದೇರಳಕಟ್ಟೆಯ ಮೆಡಿಕಲ್ ಕಾಲೇಜೊಂದರಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರಾಗಿಂಗ್ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪದಡಿ ಉಳ್ಳಾಲ …

Leave a Reply

Your email address will not be published. Required fields are marked *