Breaking News

ಮದುವೆಯಾಗಿದ್ದ ಊರಲ್ಲಿ ಕಳ್ಳತನಕ್ಕೆ ಇಳಿದ ಪೊಲೀಸ್ ಕಾನ್ಸ್ ಟೇಬಲ್ ಸೇರಿ ಐವರು ಅರೆಸ್ಟ್

ಹಾವೇರಿ: ಜಿಲ್ಲೆಯಲ್ಲಿ ತಾನು ಮದುವೆಯಾಗಿದ್ದಂತ ಮಾವನ ಊರಲ್ಲಿ ಪೊಲೀಸ್ ಪೇದೆಯೇ ಕಳ್ಳತನ ಮಾಡಿ ಸಿಕ್ಕಿಹಾಕಿಕೊಂಡಿರುವಂತ ಘಟನೆ ಹಾವೇರಿಯ ಹಿರೇಕೆರೂರಲ್ಲಿ ನಡೆದಿದೆ. ಹಾವೇರಿ ಜಿಲ್ಲೆಯ ಹಿರೇಕೆರೂರು ಠಾಣೆಯ ಪೊಲೀಸರಿಂದ ಪೇದೆ ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಮದುವೆಯಾಗಿದ್ದಂತ ಊರಿನಲ್ಲಿ ಕಾನ್ಸ್ ಟೇಬಲ್ ಪ್ರದೀಪ್ ನಾಯಕ್ ಕಳ್ಳತನಕ್ಕೆ ಇಳಿದಿದ್ದರು. ಕಳ್ಳತನ ಹೆಚ್ಚಾದ ಹಿನ್ನಲೆಯಲ್ಲಿ ಊರಿನ ಗ್ರಾಮಸ್ಥರು ಹಿರೇಕೆರೂರು ಠಾಣೆಯ ಪೊಲೀಸರಿಗೆ ದೂರು ನೀಡಿದ್ದರು. ಈ ದೂರು ಆಧರಿಸಿ ತನಿಖೆ ನಡೆಸಿದಂತ ಪೊಲೀಸರು ಕಾನ್ಸ್ ಟೇಬಲ್ ಪ್ರದೀಪ್ ನಾಯಕ್ ಸೇರಿದಂತೆ ಐವರು ಕಳ್ಳರನ್ನು ಬಂಧಿಸಿದ್ದಾರೆ.

Share News

About BigTv News

Check Also

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ; ಕಾಮುಕನಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ₹50,000 ದಂಡ ವಿಧಿಸಿದ ಮಂಗಳೂರು ಕೋರ್ಟ್!

ಮಂಗಳೂರು: ಕಡಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2021ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಜೀವ ಬೆದರಿಕೆ ಹಾಕಿದ ಪ್ರಕರಣದಲ್ಲಿ …

Leave a Reply

Your email address will not be published. Required fields are marked *