Breaking News

Breaking News

ರಾಜ್ಯದಲ್ಲಿ ಮತ್ತೊಂದು ಪೈಶಾಚಿಕೆ ಕೃತ್ಯ : ಮಗಳ ಮೇಲೆ ತಂದೆಯಿಂದಲೇ ‘ಲೈಂಗಿಕ ದೌರ್ಜನ್ಯ’, ಪೋಕ್ಸೋ ಕೇಸ್ ದಾಖಲು!

ರಾಜ್ಯದಲ್ಲಿ ಮತ್ತೊಂದು ಪವಿಶಾಚಿಕ ಕೃತ್ಯ ನಡೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ, ತಂದೆಯಿಂದಲೇ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆದ ಆರೋಪದಲ್ಲಿ ಪುತ್ತೂರು ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ.15 ವರ್ಷದ ಪುತ್ರಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಆರೋಪಿಸಿ ನೀಡಲಾದ ದೂರಿನ ಮೇರೆಗೆ 40 ವರ್ಷದ ತಂದೆಯ ವಿರುದ್ದ ಪೋಕ್ಸೊ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆರೋಪಿಗೆ …

Read More »

ಅಕ್ರಮ ಜಾನುವಾರು ಸಾಗಾಟ,ಆರೋಪಿಗಳು ಪರಾರಿ

ಪುಂಜಾಲಕಟ್ಟೆ: ಪಿಕಪ್ ವಾಹನವೊಂದರಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಆರೋಪದಲ್ಲಿ ಇಬ್ಬರ ವಿರುದ್ದ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸಿದ್ದಕಟ್ಟೆಯ ಕಿನ್ನಾಜೆ ನಿವಾಸಿಗಳಾದ ರಾಘವೇಂದ್ರ ನಾಯ್ಕ ಮತ್ತು ಯೋಗೀನಾಥ ಎಂಬವರ ಮೇಲೆ ಪ್ರಕರಣ ದಾಖಲಾಗಿದೆ.ಆರೋಪಿಗಳು ಪಿಕಪ್ ವಾಹನದಲ್ಲಿ3 ಗಂಡು ಕರು ಹಾಗೂ 1 ಹಸುವನ್ನು ಕರ್ಪೆದೋಟ – ನೆಕ್ಲಾಜೆ – ಕುಪ್ಪೆಪದವು ಮಾರ್ಗವಾಗಿ ಮಂಗಳೂರು ಕಡೆಗೆ ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಬಗ್ಗೆ ಸ್ಥಳೀಯರು ನೀಡಿದ ಖಚಿತ ಮಾಹಿತಿಯನ್ವಯ ಬಂಟ್ವಾಳ ಗ್ರಾಮಾಂತರ …

Read More »

ಡಿವೈಡರ್‌ಗೆ ಡಿಕ್ಕಿ ಹೊಡೆದ ಕಾರು; ಕ್ಷಣಾರ್ಧದಲ್ಲಿ ಬೆಂಕಿಗಾಹುತಿ!

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಎಚ್‌ಎಎಲ್ ಬಳಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ನಿನ್ನೆ (ಜ.5) ಸಂಜೆ ಭೀಕರ ರಸ್ತೆ ಅಪಘಾತ ನಡೆದಿದೆ. ತಿಪಟೂರು ಕಡೆಯಿಂದ ತುಮಕೂರು ಕಡೆಗೆ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಡಿವೈಡರ್‌ಗೆ ಡಿಕ್ಕಿಯಾಗಿದೆ.ಡಿಕ್ಕಿಯಾದ ತಕ್ಷಣವೇ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲೇ ಬೆಂಕಿ ಕೆನ್ನಾಲಿಗೆಗೆ ಕಾರು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಾಹಿತಿ ಪಡೆದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ …

Read More »

ಅಮ್ಮ ಖರ್ಚಿಗೆ ಎರಡು ಲಕ್ಷ ಕೊಟ್ಟಿಲ್ಲ ಅಂತ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿಕೊಂಡ ಮಗ

ಈ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ನಗರದ ನನ್ನಿವಾಳ ರಸ್ತೆಯಲ್ಲಿ ನಡೆದಿದೆ. 34 ವರ್ಷದ ಮಹೇಶ್ ಪೆಟ್ರೋಲ್​ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದು, ಚಳ್ಳಕೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗ್ತಿದೆ.ಚಳ್ಳಕೆರೆಯ ಮಹೇಶ್ ತಾಯಿ ಗಂಗಮ್ಮ ಜಮೀನು ಮಾರಾಟ ಮಾಡಿದ್ದರು. ಕಳೆದ ವಾರ ಕಾರು ಖರೀದಿ ಮಾಡಬೇಕು ಅಂತ ಮಹೇಶ್,​ ತಾಯಿ ಗಂಗಮ್ಮ ಬಳಿ 4 ಲಕ್ಷ ರೂಪಾಯಿ ಹಣ ಪಡೆದಿದ್ದ. ಮತ್ತೆ 2 ಲಕ್ಷ ಹಣಕ್ಕೆ ಡಿಮ್ಯಾಂಡ್​​ ಮಾಡಿದ್ದ. ಆದ್ರೆ ಹಣ …

Read More »

ರೈಲಿಗೆ ತಲೆಕೊಟ್ಟು ನಿವೃತ್ತ ಎಎಸ್‌ಐ ಆತ್ಮಹತ್ಯೆ

ಮೈಸೂರು: ನಗರದ ಕುಕ್ಕರಹಳ್ಳಿ ಬಳಿಯ ರೈಲ್ವೆ ಗೇಟ್ ಬಳಿ ರೈಲಿಗೆ ತಲೆಕೊಟ್ಟು ನಿವೃತ್ತ ಎಎಸ್‌ಐ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಬೋಗಾದಿಯ ನಿವಾಸಿ, ನಿವೃತ್ತ ಎಎಸ್‌ಐ ಲವಕುಶ(60)ಮೃತರು. ನಗರದ ಕೆ.ಆರ್.ಪೊಲೀಸ್ ಠಾಣೆಯಲ್ಲಿ ಎಎಸ್‌ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು ಮೂರು ತಿಂಗಳ ಹಿಂದೆಯಷ್ಟೇ ನಿವೃತ್ತರಾಗಿದ್ದರು.ಭಾನುವಾರ ಬೆಳಗ್ಗೆ ಮನೆಯಿಂದ ಹೊರ ಬಂದವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ. ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ನದಿಗೆ ಹಾರಿ ಯುವತಿ ಆತ್ಮಹತ್ಯೆ: ಪ್ರೇಮ ವಂಚನೆ ಕಾರಣ?

ಮಂಗಳೂರು : ಯುವತಿಯೊಬ್ಬಳು ಗುರುಪುರ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ(ಜ5)ರಂದು ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಯುವತಿ ಮೂಡಬಿದಿರೆಯ ಕಡೆಪಲ್ಲ ನಿವಾಸಿ ನವ್ಯಾ(20) ಎಂದು ತಿಳಿದುಬಂದಿದೆ.ಸ್ನೇಹಿತೆಯೊಂದಿಗೆ ಸ್ಕೂಟರ್ ನಲ್ಲಿ ಬಂದು ಸೇತುವೆ ಬಳಿ ಬಂದು ಏಕಾಏಕಿ ನಿಲ್ಲಿಸಿ ನದಿಗೆ ಹಾರಿದ್ದಾಳೆ.ಸ್ನೇಹಿತೆ ಕೈ ಹಿಡಿದು ಎಳೆದರೂ ಬದುಕಿಸಲು ಸಾಧ್ಯವಾಗಲಿಲ್ಲ. ವಿಷಯ ತಿಳಿದ ಕೂಡಲೇ ಪೊಲೀಸರು , ಅಗ್ನಿ ಶಾಮಕ ದಳದ ಸಿಬಂದಿ ಆಗಮಿಸಿ ಶವವನ್ನು ಮೇಲಕ್ಕೆತ್ತಿದ್ದಾರೆ. ಬಜ್ಪೆ ಪೊಲೀಸ್ …

Read More »

ರಾಷ್ಟ್ರೀಯ ಹೆದ್ದಾರಿಯಲ್ಲೇ ಅಕ್ರಮ ಚೆಕ್​ಪೋಸ್ಟ್​: ಹಗಲು ದರೋಡೆಗೆ ಬೆಚ್ಚಿದ ಲೋಕಾಯುಕ್ತ

ಬೀದರ್​ ಜಿಲ್ಲೆ ಹುಮನಾಬಾದ್​ನ ರಾಷ್ಟ್ರೀಯ ಹೆದ್ದಾರಿ ಮೇಲೆ ಅನಧಿಕೃತವಾಗಿ ಚೆಕ್​ ಪೋಸ್ಟ್​ ನಿರ್ಮಿಸಿ, ಗಂಟೆಗೆ 8ರಿಂದ 10 ಸಾವಿರ ರೂ. ಸಂಗ್ರಹಿಸುವ ಹಗಲು ದರೋಡೆ ದಂಧೆಯೂ ಲೋಕಾಯುಕ್ತ ಅಧಿಕಾರಿಗಳ ಪರಿಶೀಲನೆ ವೇಳೆ ಬಹಿರಂಗವಾಗಿದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್​.ಪಾಟೀಲ್​ ಸೂಚಿಸಿದರು.4 ಜಿಲ್ಲೆಗಳಲ್ಲಿ ಲೋಕಾಯುಕ್ತ ತಂಡ ನಿರಂತರ ಪರಿಶೀಲನೆ ನಡೆಸುತ್ತಿದ್ದು, ಸೋಮವಾರದ ತಪಾಸಣೆ ವೇಳೆ ರಾಷ್ಟ್ರೀಯ ಹೆದ್ದಾರಿ ಮೇಲೆ ಸರ್ಕಾರಿ ಅಲ್ಲದ, ವಾಹನವನ್ನು ನಿಲ್ಲಿಸಿ, ಅನಧಿಕೃತವಾಗಿ ಹಣ ಸಂಗ್ರಹಿಸುವುದು ಪತ್ತೆಯಾಗಿದೆ. ದೂರದಲ್ಲಿ …

Read More »

ಹುಬ್ಬಳ್ಳಿಯಲ್ಲಿ ವೈನ್ ಶಾಪ್ ಸಮೀಪ ಭಾರೀ ಅಗ್ನಿ ಅವಘಡ – ಪೆಟ್ ಸಾರಾಯಿ ಪ್ಯಾಕೆಟ್‌ಗಳಿಗೆ ಬೆಂಕಿ, ಕಾರುಗಳು ಭಸ್ಮ

ನಗರದ ಕಾರವಾರ ರಸ್ತೆಯಲ್ಲಿರುವ ಶೆಟ್ಟಿ ವೈನ್ ಶಾಪ್ ಸಮೀಪ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಬಾರಿನಲ್ಲಿ ಬಳಸಿದ ಬಳಿಕ ಹಿಂಭಾಗದಲ್ಲಿ ಸಂಗ್ರಹಿಸಿಟ್ಟಿದ್ದ ಸಾರಾಯಿ ವೈನ್ ಪೆಟ್ ಪ್ಯಾಕೆಟ್‌ಗಳಿಗೆ ಏಕಾಏಕಿ ಬೆಂಕಿ ತಗುಲಿ ಹೊತ್ತಿ ಉರಿದಿದೆ.ಬೆಂಕಿಯ ತೀವ್ರತೆಯಿಂದ ಸಮೀಪದ ಗ್ಯಾರೇಜ್‌ನಲ್ಲಿ ನಿಲ್ಲಿಸಿದ್ದ ಹಲವು ಕಾರುಗಳಿಗೆ ಬೆಂಕಿ ವ್ಯಾಪಿಸಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಹಾಗೂ ವಾಹನಗಳು ಸುಟ್ಟು ಭಸ್ಮವಾಗಿವೆ ಎಂದು ತಿಳಿದುಬಂದಿದೆ.ಘಟನೆಯ ಮಾಹಿತಿ ಪಡೆದ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ …

Read More »

ರೋಗಿ ನರಳಾಡಿ ಪ್ರಾಣಬಿಟ್ಟರು, ಮೊಬೈಲ್ ನಲ್ಲಿ ಬ್ಯುಸಿಯಾದ ವೈದ್ಯ : ಸಾರ್ವಜನಿಕರಿಂದ ಆಕ್ರೋಶ!

ಚಿಕ್ಕಮಗಳೂರು : ರೋಗಿಗಳು ಆಸ್ಪತ್ರೆಗೆ ಬಂದರೆ ವೈದ್ಯರು ತಕ್ಷಣ ಅವರನ್ನು ಪರಿಶೀಲಿಸಿ ಚಿಕಿತ್ಸೆ ಕೊಡಿಸಿ ಪ್ರಾಣ ಉಳಿಸುವ ಕೆಲಸ ಮಾಡಬೇಕು. ಆದರೆ ಇಲ್ಲಿ ಒಬ್ಬ ವೈದ್ಯ ರೋಗಿ ಬಂದು ಆಸ್ಪತ್ರೆಯಲ್ಲಿ ನರಳಾಡುತ್ತಿದ್ದರು ಕೂಡ ನಿರ್ಲಕ್ಷ ವಹಿಸಿದ್ದು, ವೈದ್ಯ ಮತ್ತು ಸಿಬ್ಬಂದಿಗಳ ನಿರ್ಲಕ್ಷಕ್ಕೆ 60 ವರ್ಷದ ವೃದ್ಧ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರಲ್ಲಿ ನಡೆದಿದೆ.ಹೌದು ವೈದ್ಯ ಮತ್ತು ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ ರೋಗಿ ಬಲಿಯಾಗಿದ್ದಾರೆ. ರೋಗಿಯು ನೋವಿನಿಂದ ನರಳಾಡುತ್ತಿದ್ದರೆ, ಮತ್ತೊಂದೆಡೆ ಫೋನಲ್ಲಿ ವೈದ್ಯ ಬಿಜಿಯಾಗಿದ್ದಾನೆ. …

Read More »

ಮುಳಬಾಗಿಲು: ಮನೆಗೆ ನುಗ್ಗಿ ಆಭರಣ, ನಗದು ಕಳವು

ಮನೆಗೆ ಬೀಗ ಹಾಕಿ ಉರುಸ್ ನೋಡಲು ಹೋಗಿದ್ದ ವೇಳೆ ಮನೆ ಕಬ್ಬಿಣದ ಕಿಟಕಿ ಸರಳು ಕತ್ತರಿಸಿ ಆಭರಣ ಮತ್ತು ನಗದು ಕಳವು ಮಾಡಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.ಮಾರುತಿ ನಗರದ ಧನಂಜಯ ತಮ್ಮ ಕುಟುಂಬದೊಂದಿಗೆ ಹೈದರ್‌ವಲ್ಲಿ ದರ್ಗಾ ಬಳಿ ಉರುಸ್ ನೋಡಲು ಹೋಗಿದ್ದರು.ಈ ಸಂದರ್ಭದಲ್ಲಿ ಅಪರಿಚಿತರು ಒಳನುಗ್ಗಿ 5 ಗ್ರಾಂ ಬಂಗಾರ, 250 ಗ್ರಾಂ ಬೆಳ್ಳಿ ಆಭರಣ ಮತ್ತು ₹90 ಸಾವಿರ ನಗದು ಕಳವು ಮಾಡಿದ್ದಾರೆ. ಮುಳಬಾಗಿಲು ನಗರ ಠಾಣೆಯಲ್ಲಿ …

Read More »