BigTv News
December 23, 2025
Breaking News
ಬೈಂದೂರು: ಗುಡ್ಡಮ್ಮಾಡಿ ಸೇನಾಪುರ ಗ್ರಾಮದ ಕುಂದಾಪುರ ವಿಟ್ಠಲ ಶೇಟ್ (63) ಅವರು ಉಪ್ಪುಂದದ ಮನೆಯಿಂದ ಹೋದವರು ಹೊರಗೆ ಹೋಗದೇ ಕಾಣೆಯಾಗಿರುತ್ತರೆ. ಅವರಿಗೆ ಕಳೆದ 9 ವರ್ಷಗಳಿಂದ ಮಾನಸಿಕ ಕಾಯಿಲೆ ಇದ್ದು ಔಷಧೋಪಚಾರ ನಡೆಯುತ್ತಿತ್ತು. ಆದರೆ ಸುಮಾರು 6 ತಿಂಗಳಿನಿಂದ ಔಷಧ ತಗೆದುಕೊಳ್ಳುತ್ತಿರಲಿಲ್ಲ ಎನ್ನಲಾಗಿದೆ.ಈ ಹಿಂದೆಯೂ ಇದೇ ರೀತಿ ಮನೆಯಿಂದ ಹೋದವರು ಸಂಬಂಧಿಕರ ಮನೆಗೆ ಹೋಗಿ ಬಳಿಕ ಮರಳುತ್ತಿದ್ದರು. ಆದರೆ ಈ ಬಾರಿ ಬಾರದ ಕಾರಣ ಪೊಲೀಸರಿಗೆ ದೂರು ನೀಡಲಾಗಿದ್ದು ಬೈಂದೂರು …
Read More »
BigTv News
December 23, 2025
Breaking News
ಬೆಂಗಳೂರಲ್ಲಿ ಮತ್ತೊಂದು ಭೀಕರವಾದ ಅಪಘಾತ ಸಂಭವಿಸಿದ್ದು, ನೀರಿನ ಟ್ಯಾಂಕರ್ ಗೆ ಆಯಿಲ್ ಟ್ಯಾಂಕರ್ ಡಿಕ್ಕಿಯಾಗಿ ಸ್ಥಳದಲ್ಲೇ ಚಾಲಕ ಸಾವನ್ನಪ್ಪಿದ್ದಾನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಪೇಟೆ ತಾಲೂಕಿನ ಸಾದಪ್ಪನಹಳ್ಳಿ ಬಳಿ ಈ ಅಪಘಾತ ಸಂಭವಿಸಿದೆ.ಹೆದ್ದಾರಿಯಲ್ಲಿ ಟ್ಯಾಂಕರ್ ಸಿಬ್ಬಂದಿ ಗಿಡಗಳಿಗೆ ನೀರು ಹಾಕುತ್ತಿದ್ದ. ಈ ವೇಳೆ ವೇಗವಾಗಿ ಬಂದು ಟ್ಯಾಂಕರ್ ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಆಯಿಲ್ ಟ್ಯಾಂಕರ್ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಹೊಸಕೋಟೆ-ದಾಬಸ್ಪೇಟೆ ನಡುವಿನ ರಾಷ್ಟೀಯ ಹೆದ್ದಾರಿಯಲ್ಲಿ …
Read More »
BigTv News
December 23, 2025
Breaking News
ಬೆಂಗಳೂರಲ್ಲಿ ವಿಚಾರಣೆಗೆ ಎಂದು ಬಂದಿದ್ದ ರೌಡಿಶೀಟರ್ ಗೆ ಕೋರ್ಟ್ ಅವರಣದಲ್ಲೇ ಲಾಂಗ್ ತೋರಿಸಿ ದುಷ್ಕರ್ಮಿಗಳು ಜೀವ ಬೆದರಿಕೆ ಹಾಕಿರುವ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರದಲ್ಲಿ ನಡೆದಿದೆ.ರೌಡಿಶೀಟರ್ ಜಾಲಮಂಗಲ ಅಭಿ ಎಂಬಾತನಿಂದ ಬೆದರಿಕೆ ಹಾಕಲಗಿದ್ದು, ಹಾರೋಹಳ್ಳಿ ಮೂಲದ ಉದಯ್ ಗೆ ರೌಡಿಶೀಟರ್ ಬೆದರಿಕೆ ಹಾಕಿದ್ದಾನೆ.ಅಭಿ ಹಾಗು ಅಭಿಷೇಕ್ ಎಂಬುವವರ ಬಂಧನವಾಗಿದ್ದು, ಕಾರು ಜಪ್ತಿ ಮಾಡಿಕೊಳ್ಳಲಾಗಿದೆ. ರಾಮನಗರದ ಐಜೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »
BigTv News
December 23, 2025
Breaking News
ಹಾಸನ : ಕಳೆದ ಕೆಲವು ದಿನಗಳ ಹಿಂದೆ ಶಿವಮೊಗ್ಗ ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕಿಯರು ಮಗುವಿಗೆ ಜನ್ಮ ನೀಡಿದ್ದ ಘಟನೆ ವರದಿಯಾಗಿತ್ತು. ಈ ಘಟನೆ ಮಾಸುವ ಮುನ್ನವೇ ಹಾಸನ ಜಿಲ್ಲೆಯಲ್ಲೂ ಅಂತಹದ್ದೇ ವರದಿಯಾಗಿದೆ.ಅಪ್ರಾಪ್ತ ಬಾಲಕಿಯೊಬ್ಬಳಿಗೆ ನಿತ್ಯ ಚಾಕೋಲೆಟ್ ನೀಡಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಹಿನ್ನೆಲೆಯಲ್ಲಿ ಆಕೆ ಮಗುವಿಗೆ ಜನ್ಮ ನೀಡಿದ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.ಹಾಸನ ಜಿಲ್ಲೆಯ ಖಾಸಗಿ ಶಾಲೆಯೊಂದರಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಬಾಲಕಿಯ …
Read More »
BigTv News
December 23, 2025
Breaking News
ಮಂಗಳೂರು: ಉತ್ತರ ದಕ್ಕೆಯ ಗೋದಾಮು ಬಳಿ ಎಂಡಿಎಂಎ ಮಾರಾಟ ಮಾಡಲು ಯತ್ನಿಸುತ್ತಿದ್ದ ಅರ್ಕುಳ ಫರಂಗಿಪೇಟೆಯ ಮೊಹಮ್ಮದ್ ತೌಹಿದ್ (30) ಎಂಬಾತನನ್ನು ಮಂಗಳೂರು ಉತ್ತರ ಠಾಣೆಯ ಎಸ್‌ಐ ವನಜಾಕ್ಷಿ ಅವರು ಸಿಬಂದಿಯೊಂದಿಗೆ ದಾಳಿ ನಡೆಸಿ ಬಂಧಿಸಿದ್ದಾರೆ. ಅರೋಪಿಯಿಂದ 15.64 ಗ್ರಾಂ ತೂಕದ 1.56 ಲಕ್ಷ ರೂ.ಮೌಲ್ಯದ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ.
Read More »
BigTv News
December 23, 2025
Breaking News
ಇಲ್ಲಿನ ದಿವ್ಯಜ್ಯೋತಿ ಅಂಧ ಮಕ್ಕಳ ಶಾಲೆಯಲ್ಲಿ ಬಾಲಕನ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ.ಮಕ್ಕಳ ಮೇಲೆ ಹಲ್ಲೆ ನಡೆಸಿರುವುದು ಬಾಲ ನ್ಯಾಯ ಕಾಯ್ದೆ ಅನ್ವಯ ಶಿಕ್ಷಾರ್ಹ ಅಪರಾಧ.ಈ ಬಗ್ಗೆ ಕೈಗೊಂಡ ಕ್ರಮದ ಬಗ್ಗೆ ವರದಿ ಸಲ್ಲಿಸುವಂತೆ ಸಂಬಂಧಿಸಿದವರಿಗೆ ಸೂಚಿಸಲಾಗಿದೆ’ ಎಂದು ಆಯೋಗದ ಅಧ್ಯಕ್ಷ ಶಶಿಧರ ಕೋಸುಂಬೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Read More »
BigTv News
December 23, 2025
Breaking News
ಜಿಲ್ಲೆಯಲ್ಲಿ 68 ನಕ್ಸಲ್ ಪ್ರಕರಣಗಳಲ್ಲಿ 39 ಪ್ರಕರಣಗಳು ಕೋರ್ಟ್ ವಿಚಾರಣೆಯಲ್ಲಿದ್ದು, 28 ಪ್ರಕರಣಗಳು ವಿಲೇವಾರಿ ಆಗಿವೆ. 1 ಪ್ರಕರಣದಲ್ಲಿ ಹೆಚ್ಚುವರಿ ಆರೋಪಪಟ್ಟಿ ಸಲ್ಲಿಸಲು ಬಾಕಿ ಇದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.ಮೂವರು ಆರೋಪಿಗಳ ವಿರುದ್ಧ ಹೆಚ್ಚುವರಿ ದಾಖಲಾತಿ ಸಲ್ಲಿಸಲು ಬಾಕಿ ಇದೆ. ಒಂದು ಪ್ರಕರಣ ಸಿಐಡಿ ತನಿಖೆಯಲ್ಲಿದೆ. ಕಳೆದ 6 ತಿಂಗಳಲ್ಲಿ 39 ಪ್ರಕರಣ ಗಳಲ್ಲಿ 11 ಜನ ನಕ್ಸಲ್ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ …
Read More »
BigTv News
December 23, 2025
Breaking News
ಕುಂದಾಪುರ: ಕಾಳಾವರ ಗ್ರಾಮದ ಅರೆಕಲ್ಲು ಜನತಾ ಕಾಲೂನಿ ಹತ್ತಿರದ ಸರಕಾರಿ ಹಾಡಿಯಲ್ಲಿ ಡಿ.20ರಂದು ರಾತ್ರಿ ವೇಳೆ ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಡುತ್ತಿದ್ದ ಮೂವರನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆರಾಕೇಶ್(24), ಮ್ಯಾಕ್ಸಿ ರೋಶನ್(39), ಸತೀಶ್(37) ಬಂಧಿತ ಆರೋಪಿಗಳು.ಉಳಿದಂತೆ ಪ್ರಕಾಶ, ರಾಜೇಶ್ ಮತ್ತು ಸುಜನ್ ಎಂಬವರು ಪೊಲೀಸ್ ದಾಳಿ ವೇಳೆ ಓಡಿ ಹೋಗಿದ್ದಾರೆ ಎಂದು ತಿಳಿದುಬಂದಿದೆ. ಬಂಧಿತರಿಂದ 4,450ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »
BigTv News
December 23, 2025
Breaking News
ಮುಂಬಯಿಯಿಂದ ಕೊಚ್ಚಿಗೆ ಹೋಗುತ್ತಿದ್ದ ಲಾರಿಗೆ 2 ಟೆಂಪೋ ಟ್ರಾವಲೆರ್ ವಾಹನಗಳನ್ನು ಅಡ್ಡವಿರಿಸಿ ಚಾಲಕ ಮತ್ತು ನಿರ್ವಾಹಕನಿಗೆ ಕಬ್ಬಿಣದ ರಾಡ್, ಲಿವರ್, ಸ್ಪಾನರ್‌ನಿಂದ ಹಲ್ಲೆಗೈದು ಪರಾರಿಯಾದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಮೂಳೂರಿನಲ್ಲಿ ರವಿವಾರ ರಾತ್ರಿ ನಡೆದಿದೆ.ಕೇರಳದ ಚಾಲಕ ಯೂನೂಸ್ ಪಿ.ಕೆ. ಮತ್ತು ಕ್ಲೀನರ್ ಮುಹಮ್ಮದ್ ಮದನಿ ನಜರ್ ಹಲ್ಲೆಗೊಳಗಾದರು.ಕೃತ್ಯ ಎಸಗಿದ ಬಳಿಕ ಆರೋಪಿಗಳು ವಾಹನ ಸಹಿತವಾಗಿ ಮಂಗಳೂರಿನತ್ತ ತೆರಳಿದ್ದಾರೆ. ಕೃತ್ಯಕ್ಕೆ ಕಾರಣ ತಿಳಿದುಬಂದಿಲ್ಲ. ಗಾಯಾಳುಗಳು ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. …
Read More »
BigTv News
December 23, 2025
Breaking News
ಉಸಿರಾಟ ಸಮಸ್ಯೆ ಎಂದು ಆಸ್ಪತ್ರೆಗೆ ಬಂದ ರೋಗಿಯ ಮೇಲೆ ವೈದ್ಯರೊಬ್ಬರು ಅಮಾನವೀಯವಾಗಿ ಹಲ್ಲೆ ನಡೆಸಿರುವ ಘಟನೆ ಹಿಮಾಚಲ ಪ್ರದೇಶದಲ್ಲಿ ನಡೆದಿದೆ. ಹಿಮಾಚಲ ಪ್ರದೇಶದ ಶಿಮ್ಲಾದ ಇಂದಿರಾ ಗಾಂಧಿ ವೈದ್ಯಕೀಯ ಕಾಲೇಜಿನಲ್ಲಿ ಭಾನುವಾರ ವೈದ್ಯರೊಬ್ಬರು ರೋಗಿಯ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ.ಶಿಮ್ಲಾ ಜಿಲ್ಲೆಯ ಕುಪ್ವಿ ಉಪವಿಭಾಗಕ್ಕೆ ಉಸಿರಾಟದ ತೊಂದರೆ ಎಂದು ಬಂದಿದ್ದ ತನ್ನ ಬಗ್ಗೆ ವೈದ್ಯರು ಕೆಟ್ಟದಾಗಿ ವರ್ತಿಸಿದ್ದಾರೆ, ಅವಮಾನ ಮಾಡಿದ್ದಾರೆ ಎಂದು ರೋಗಿ ಆರೋಪಿಸಿದ್ದಾರೆ. ಗೌರವದಿಂದ ಮಾತನಾಡಲು ಕೇಳಿದಾಗ …
Read More »