ಬೈಂದೂರು: ಗುಡ್ಡಮ್ಮಾಡಿ ಸೇನಾಪುರ ಗ್ರಾಮದ ಕುಂದಾಪುರ ವಿಟ್ಠಲ ಶೇಟ್ (63) ಅವರು ಉಪ್ಪುಂದದ ಮನೆಯಿಂದ ಹೋದವರು ಹೊರಗೆ ಹೋಗದೇ ಕಾಣೆಯಾಗಿರುತ್ತರೆ. ಅವರಿಗೆ ಕಳೆದ 9 ವರ್ಷಗಳಿಂದ ಮಾನಸಿಕ ಕಾಯಿಲೆ ಇದ್ದು ಔಷಧೋಪಚಾರ ನಡೆಯುತ್ತಿತ್ತು. ಆದರೆ ಸುಮಾರು 6 ತಿಂಗಳಿನಿಂದ ಔಷಧ ತಗೆದುಕೊಳ್ಳುತ್ತಿರಲಿಲ್ಲ ಎನ್ನಲಾಗಿದೆ.ಈ ಹಿಂದೆಯೂ ಇದೇ ರೀತಿ ಮನೆಯಿಂದ ಹೋದವರು ಸಂಬಂಧಿಕರ ಮನೆಗೆ ಹೋಗಿ ಬಳಿಕ ಮರಳುತ್ತಿದ್ದರು. ಆದರೆ ಈ ಬಾರಿ ಬಾರದ ಕಾರಣ ಪೊಲೀಸರಿಗೆ ದೂರು ನೀಡಲಾಗಿದ್ದು ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

