Breaking News

Breaking News

ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿ ಆತ್ಮಹತ್ಯೆ

ಮಲ್ಪೆ: ಗರಡಿಮಜಲಿನ ಹೊಟೇಲ್‌ ಒಂದರಲ್ಲಿ ಸಪ್ಲೈಯರ್‌ ಆಗಿದ್ದು ಕಳೆದ 2 ತಿಂಗಳಿಂದ ಕೆಲಸ ಇಲ್ಲದೆ ಮನೆಯಲ್ಲಿ ಇದ್ದ ದಿನೇಶ್ (37) ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಖರ್ಚಿಗಾಗಿ ಸ್ವಲ್ಪ ಕೈಸಾಲ ಮಾಡಿದ್ದರು.ಸರಿಯಾದ ಕೆಲಸ ಇಲ್ಲದೆ ಇದ್ದುದರಿಂದ, ಜೀವನದಲ್ಲಿ ಜಿಗುಪ್ಸೆಗೊಂಡು ಡಿ.1ರ ತಡರಾತ್ರಿ ಕೊಡವೂರು ಗ್ರಾಮದ ಮೂಡಬೆಟ್ಟು ಸರಕಾರಿ ಶಾಲೆ ಬಳಿಯ ಮನೆಯ ಛಾವಣಿಗೆ ನೇಣು ಬಿಗಿದುಕೊಂಡಿದ್ದಾರೆ. ಮಲ್ಪೆ ಠಾಣೆಯಲ್ಲಿ ದೂರು ದಾಖಲಾಗಿದೆ.

Read More »

ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

ಬಂಟ್ವಾಳ: ಕುರಿಯಾಳ ಗ್ರಾಮದ ಕುಕ್ಕುರಿ ನಿವಾಸಿ ರಾಜೇಶ ಪೂಜಾರಿ (34) ಬಚ್ಚಲು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಡಿ. 2ರಂದು ಸಂಭವಿಸಿದೆ.ಅವರು ಡಿ. 1ರ ರಾತ್ರಿ 10ರಿಂದ ಡಿ. 2ರ ಮುಂಜಾನೆಯ ಮಧ್ಯೆ ಕೃತ್ಯ ಎಸಗಿದ್ದಾರೆ. ಅವರು ವಿಪರೀತ ಮದ್ಯ ಸೇವನೆಯ ಚಟದಿಂದ ಬೇಸತ್ತು ಅತವಾ ಇನ್ಯಾವುದೇ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆತನ ಅಕ್ಕ ಲಲಿತಾ ಅವರು ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ …

Read More »

ಕೋಟ | 1.51ಲಕ್ಷ ರೂ. ಆನ್‌ಲೈನ್ ವಂಚನೆ : ಪ್ರಕರಣ ದಾಖಲು

ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ ಲಕ್ಷಾಂತರ ರೂ. ವರ್ಗಾವಣೆ ಮಾಡಿ ಆನ್‌ಲೈನ್ ವಂಚನೆ ಎಸಗಿರುವ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ತೆಕ್ಕಟ್ಟೆ ಗ್ರಾಮದ ಮಾಲಾಡಿಯ ರಾಜಾರಾಮ ಶೆಟ್ಟಿ ಎಂಬವರ ಬ್ಯಾಂಕ್ ಖಾತೆಯಿಂದ ಅಪರಿಚಿತರು ನ.25ರಂದು 4 ಬಾರಿ ಒಟ್ಟು 1,51,000 ರೂ.ಗಳನ್ನು ಗಮನಕ್ಕೆ ಬಾರದೇ ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿ ವಂಚನೆ ಎಸಗಿರುವುದಾಗಿ ದೂರಲಾಗಿದೆ.

Read More »

ದೊಡ್ಡಬಳ್ಳಾಪುರ: ನಿಂತಿದ್ದ ಬಸ್‌ಗೆ ಆಟೊ ಡಿಕ್ಕಿ- ಮೂವರಿಗೆ ಗಾಯ

ಮಂಗಳವಾರ ಸಂಜೆ ಗೌರಿಬಿದನೂರು-ದೊಡ್ಡಬಳ್ಳಾಪುರ ರಾಜ್ಯ ಹೆದ್ದಾರಿಯ ಕಂಟನಕುಂಟೆ ಸಮೀಪ ಖಾಸಗಿ ಬಸ್‌ಗೆ ಹಿಂದಿನಿಂದ ಬಂದ ಆಟೊ ಡಿಕ್ಕಿ ಹೊಡೆದು ಆಟೊದಲ್ಲಿ ಪ್ರಯಾಣಿಸುತ್ತಿದ್ದ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.ಅಪಘಾತದಲ್ಲಿ ಗಾಯಗೊಂಡಿರುವ ಚೀಲೇನಹಳ್ಳಿ ನಿವಾಸಿ ಮಾಲ ಎಂಬುವವರು ಸೇರಿದಂತೆ ಮೂವರು ಪ್ರಯಾಣಿಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ದೊಡ್ಡಬಳ್ಳಾಪುರ ಕೈಗಾರಿಕಾ ಪ್ರದೇಶದಿಂದ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಖಾಸಗಿ ಬಸ್, ಕಾರ್ಮಿಕರನ್ನು ಇಳಿಸಲು ಕಂಟನಕುಂಟೆ ಬಳಿ ನಿಲ್ಲಿಸಿದ್ದ ವೇಳೆ ಆಟೊ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಆಟೊ ಸಂಪೂರ್ಣ ಜಖಂಗೊಂಡಿದೆ. ಗ್ರಾಮಾಂತರ …

Read More »

ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಪಕ್ಕದ ಬಾವಿಗೆ ಉರುಳಿದ ಲಾರಿ… ತಪ್ಪಿದ ದುರಂತ

ಭಟ್ಕಳ: ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ರಸ್ತೆ ಪಕ್ಕದ ಬಾವಿಗೆ ಉರುಳಿದ ಘಟನೆ ತಾಲೂಕಿನ ವೆಂಕಟಾಪುರ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನಡೆದಿದೆ. ಕುಂದಾಪುರದ ತೆಕ್ಕಟ್ಟೆಯಿಂದ ಅಕ್ಕಿಯನ್ನು ತುಂಬಿಕೊಂಡು ಶಿಗ್ಗಾವಿಗೆ ತೆರಳುತ್ತಿದ್ದ ಲಾರಿಯು ವೆಂಕಟಾಪುರದ ಬಳಿಯಲ್ಲಿ ಬರುತ್ತಿರುವಾಗ ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಪಕ್ಕಕ್ಕೆ ಹೋಗಿದೆ.ಅಲ್ಲಿಯೇ ಇದ್ದ ಬಾವಿಯ ಕಟ್ಟೆಗೆ ಡಿಕ್ಕಿಯಾಗಿ ಮುಂದೆ ಹೋಗಿದ್ದು ಕಟ್ಟೆಗೆ ತಾಗಿಕೊಂಡು ನಿಂತಿದ್ದರಿಂದ ಲಾರಿ ತಲೆಕೆಳಗಾಗಿ ಬಾವಿಯೊಳಕ್ಕೆ ಹೋಗುವುದು ತಪ್ಪಿದ್ದು ಭಾರೀ ಅನಾಹುತ ತಪ್ಪಿದಂತಾಗಿದೆ. ಲಾರಿ …

Read More »

ಹಾರೋಹಳ್ಳಿ: ಪತ್ನಿಗೆ ಮಾನಸಿಕ ಕಿರುಕುಳ- ವ್ಯಕ್ತಿಗೆ ಶಿಕ್ಷೆ

ಪತ್ನಿಗೆ ಮಾನಸಿಕ ಕಿರುಕುಳ, ದೈಹಿಕ ಹಿಂಸೆ ನೀಡಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ವ್ಯಕ್ತಿಯೊಬ್ಬರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಂಟನೇ ಸೆಷನ್ಸ್‌ ನ್ಯಾಯಾಲಯ 2 ವರ್ಷ 6 ತಿಂಗಳು ಶಿಕ್ಷೆ ಮತ್ತು ₹20 ಸಾವಿರ ದಂಡ ವಿಧಿಸಿ ಆದೇಶಿಸಿದೆ.ಪತಿ ಕುಮಾರ್ (27) ಎಂಬುವರ ಪತ್ನಿ 2013ರಲ್ಲಿ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು.ನಂತರ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆತ್ಮಹತ್ಯಗೆ ಯತ್ನಿಸಿದ ಮಹಿಳೆ ಹೇಳಿಕೆಯನ್ನು ದಾಖಲಿಸಿಕೊಂಡಿದ್ದರು. ನಂತರ ಮಹಿಳೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದರು. ಕಗ್ಗಲೀಪುರ …

Read More »

ಬೆಂಗಳೂರಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ವ್ಯಕ್ತಿ ಆತ್ಮಹತ್ಯೆ ಕೇಸ್: ಮೂವರ ವಿರುದ್ಧ FIR ದಾಖಲು

ನಗರದಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ವ್ಯಕ್ತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರ ವಿರುದ್ಧ ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.ಬೆಂಗಳೂರಿನ ವೈಟ್ ಫೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯ ನಿರ್ಮಾಣ ಹಂತದ ಕಟ್ಟಡದಲ್ಲಿ ಮುರಳಿ ಗೋವಿಂದರಾಜು ಎಂಬಾತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.ಈ ಸಂಬಂಧ ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಶಶಿ ನಂಬಿಯಾರ್, ಉಷಾ ನಂಬಿಯಾರ್, ವರುಣ್ ನಂಬಿಯಾರ್ ಎಂಬುವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಡೆತ್ ನೋಟ್ ಬರೆದಿಟ್ಟಿದ್ದಂತ ಮುರಳಿ …

Read More »

ಎಂಡಿಎಂಎ ಮಾರಾಟ; ಓರ್ವನ ಬಂಧನ

ನಗರದ ಮೈದಾನವೊಂದರ ಬಳಿ ಮಾದಕ ಪದಾರ್ಥ ಎಂಡಿಎಂಎ ಮಾರಾಟ ಮಾಡುತ್ತಿದ್ದ ಮಹಮ್ಮದ್ ಫಾಯಿಕ್ ಎಂಬಾತನನ್ನು ಮಂಗಳೂರು ಉತ್ತರ ಠಾಣೆಯ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.ನಗರದ ಗ್ರೀನ್ ಪಾರ್ಕ್ ಮೈದಾನದ ಬಳಿ ವ್ಯಕ್ತಿಯೊಬ್ಬನು ಎಂಡಿಎಂಎ ಮಾರಾಟ ಮಾಡಲು ಬರುತ್ತಿರುವುದಾಗಿ ಮಾಹಿತಿ ಪಡೆದ ಪೊಲೀಸರು ಕಾರ್ಯಾಚರಣೆ ನಡೆಸಿದರು.ಆರೋಪಿಯಿಂದ ಸುಮಾರು 45,000 ರೂ. ಮೌಲ್ಯದ ಎಂಡಿಎಂಎ, ಸಿಗರೇಟ್ ಪ್ಯಾಕೇಟ್, ಮೊಬೈಲ್ ಫೋನನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಫಾಯಿಕ್‌ಗೆ ಮಹಮ್ಮದ್ ಜುನೈದ್ ಎಂಬಾತ ಎಂಡಿಎಂಎ ಮಾರಾಟ ಮಾಡಿರುವುದು ತನಿಖೆಯ ವೇಳೆ …

Read More »

ಅಮ್ರೋಹಾ: ನಿಲ್ಲಿಸಿದ್ದ ಟ್ರಕ್​ಗೆ ಕಾರು ಡಿಕ್ಕಿ, ನಾಲ್ವರು ಎಂಬಿಬಿಎಸ್ ವಿದ್ಯಾರ್ಥಿಗಳು ಸಾವು

ಉತ್ತರ ಪ್ರದೇಶದ ಅಮ್ರೋಹಾದ ದೆಹಲಿ-ಲಕ್ನೋ ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗವಾಗಿ ಬಂದ ಕಾರು ನಿಲ್ಲಿಸಿದ್ದ ಟ್ರಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಎಂಬಿಬಿಎಸ್ ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಬುಧವಾರ ತಡರಾತ್ರಿ ಈ ಅಪಘಾತ ಸಂಭವಿಸಿದೆ.ಡಿಕ್ಕಿಯ ಪರಿಣಾಮ ಎಷ್ಟು ತೀವ್ರವಾಗಿತ್ತೆಂದರೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಅದರಲ್ಲಿದ್ದವರು ಬದುಕುಳಿಯುವ ಯಾವುದೇ ಅವಕಾಶವಿರಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.ಮಾಹಿತಿ ಪಡೆದ ಪೊಲೀಸರು ತಕ್ಷಣ ಸ್ಥಳಕ್ಕೆ ತಲುಪಿ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. ವಿಧಿವಿಜ್ಞಾನ ತಂಡಗಳು ಮತ್ತು ಪೊಲೀಸ್ …

Read More »

ಚಿತ್ರದುರ್ಗ | ಬೈಕ್‌-ಟ್ರ್ಯಾಕ್ಟರ್ ನಡುವೆ ಭೀಕರ ಅಪಘಾತ : ಓರ್ವ ಸಾವು

ಚಲಿಸುತ್ತಿದ್ದ ಬೈಕಿಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರಿನಲ್ಲಿ ಕೊಂಡ್ಲಹಳ್ಳಿಯ ಇಸ್ಲಾಂಪುರ ಸಮೀಪದಲ್ಲಿ ನಡೆದಿದೆ. ತುಮಕೂರ್ಲಹಳ್ಳಿ ಶಿವಶಂಕರ (31) ಮೃತವ್ಯಕ್ತಿ. ಕೊಂಡ್ಲಹಳ್ಳಿ ಕಡೆ ಹೋಗುತ್ತಿದ್ದ ಬೈಕ್‌ಗೆ ಇಸ್ಲಾಂಪುರ ಕಡೆಯಿಂದ ನೆರ್ಲಹಳ್ಳಿ ಕಡೆಗೆ ಹೋಗುತ್ತಿದ್ದ ಟ್ರ್ಯಾಕ್ಟರ್ ವೇಗವಾಗಿ ಬಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲಿದ್ದ ಸವಾರ ಗಂಭೀರವಾಗಿ ಗಾಯಗೊಂಡಿದ್ದ.ಬಳಿಕ ಈತನನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ನಂತರ ವೈದ್ಯರ ಸಲಹೆ ಮೇರೆಗೆ …

Read More »