ಬೆಂಗಳೂರು: ನಡುರಸ್ತೆಯಲ್ಲಿ ಹೊತ್ತು ಉರಿದಿದ್ದ ಬಿಎಂಟಿಸಿ ಬಸ್ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ಘಟನೆಗೆ ಟೆಕ್ನಿಕಲ್ ಎಡವಟ್ಟೇ ಕಾರಣ ಅಂತಿದ್ದ ಬಿಎಂಟಿಸಿ ಈಗ ಉಲ್ಟಾ ಹೊಡೆದಿದೆ. ನಿಗಮದಿಂದ 5 ಸಿಬ್ಬಂದಿಗೆ ಬಿಎಂಟಿಸಿ ನೊಟೀಸ್ ನೀಡಿದೆ.
ಸಿಬ್ಬಂದಿಯ ಕರ್ತವ್ಯ ಲೋಪವೇ ಈ ಘಟನೆಗೆ ಕಾರಣ ಎಂದಿದೆ. ಈ ಘಟನೆಗೆ ಸೂಕ್ತ ಉತ್ತರ ಕೊಡಬೇಕು, ಇಲ್ಲದಿದ್ದಲ್ಲಿ 13 ಲಕ್ಷ ರೂ ದಂಡ ಕಟ್ಟಬೇಕು ಎಂದು ಸೂಚನೆ ನೀಡಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

