Breaking News

Breaking News

ಕಾರಿನ ಬೋನೆಟ್‌ನಲ್ಲಿ ಬಚ್ಚಿಟ್ಟು ಸಾಗಿಸುತ್ತಿದ್ದ 10 ಲಕ್ಷ ರೂ. ವಶಕ್ಕೆ

ಮಂಜೇಶ್ವರ: ಕಾರಿನ ಬೋನೆಟ್‌ನಲ್ಲಿ ಬಚ್ಚಿಟ್ಟು ಸಾಗಿಸುತ್ತಿದ್ದ 10 ಲಕ್ಷ ರೂ.ಯನ್ನು ತಲಪಾಡಿಯಿಂದ ಮಂಜೇಶ್ವರ ಪೊಲೀಸರು ವಶಪಡಿಸಿಕೊಂಡಿದ್ದಾರೆ.ಮಂಗಳೂರು ಭಾಗದಿಂದ ಬರುತ್ತಿದ್ದ ಕಾರನ್ನು ತಡೆದು ನಿಲ್ಲಿಸಿ ತಪಾಸಣೆ ಮಾಡಿದಾಗ ದಾಖಲೆ ಪತ್ರಗಳಿಲ್ಲದೆ ಸಾಗಿಸುತ್ತಿದ್ದ 10 ಲಕ್ಷ ರೂ.ಪತ್ತೆಯಾಗಿದೆ.ಹಣವನ್ನು ವಶಪಡಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.ನ.16 ರಂದು ಸಂಜೆ ತಲಪಾಡಿಯಲ್ಲಿ ಪೊಲೀಸರು ನಡೆಸಿದ ವಾಹನ ತಪಾಸಣೆಯಲ್ಲಿ ದಾಖಲೆ ಪತ್ರಗಳಿಲ್ಲದೆ ಸಾಗಿಸುತ್ತಿದ್ದ 13 ಲಕ್ಷ ರೂ. ಪತ್ತೆ ಹಚ್ಚಿ ವಶಪಡಿಸಲಾಗಿತ್ತು. ಸ್ಥಳೀಯಾಡಳಿತ ಚುನಾವಣೆಯ ಹಿನ್ನೆಲೆಯಲ್ಲಿ ಗಡಿ ಪ್ರದೇಶದಲ್ಲಿ ವಾಹನ …

Read More »

ಮೊಬೈಲ್ ಕಳವು ಮಾಡಿ `UPI’ ಮೂಲಕ ಹಣ ದೋಚಿದ ಖದೀಮರು.!

ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ವೃದ್ಧರೊಬ್ಬರ ಮೊಬೈಲ್ ಕಳ್ಳತನ ಮಾಡಿದ ಖದೀಮರು ಅವರ ಯುಪಿಐ ಮೂಲಕ 1.44 ಲಕ್ಷ ರೂ.ದೋಚಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.ದಾವಣಗೆರೆಯ ನಗರ ಸಾರಿಗೆ ಬಸ್ನಲ್ಲಿ ಸಂಚರಿಸುತ್ತಿದ್ದ ವೃದ್ಧರೊಬ್ಬರ ಮೊಬೈಲ್ ಕಳವು ಮಾಡಿದ ಖದೀಮರು ಯುಪಿಐ ಮೂಲಕ ಅವರ ಮೂರು ಬ್ಯಾಂಕ್ ಖಾತೆಗಳಿಂದ 1.44 ಲಕ್ಷ ರೂ.ಗಳನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ.ಸರಸ್ವತಿ ನಗರದ ನಿವಾಸಿಯಾಗಿರುವ ವೃದ್ಧರ ಮೊಬೈಲ್ ಕಳವು ಮಾಡಿರುವ ಖದೀಮರು ಬಳಿಕ ಅವರಲ್ಲಿದ್ದ ಯುಪಿಐ ಆಧಾರಿತ ಆಯಪ್ …

Read More »

ತೆರಿಗೆ ವಂಚಿಸಿ ಕಾರು ನೋಂದಣಿ: ಲೋಕಾಯುಕ್ತ ಪೊಲೀಸರಿಂದ ಆರ್‌ಟಿಒ ಕಚೇರಿ ತಪಾಸಣೆ

ಉಡುಪಿ ಆರ್ ಟಿಒ ಕಚೇರಿಯಲ್ಲಿ ತೆರಿಗೆ ಕಡಿಮೆ ಮಾಡಿ ಬಿಎಂಡಬ್ಲ್ಯು ಕಾರೊಂದನ್ನು ನೋಂದಣಿ ಮಾಡಲಾಗಿದೆ.ಇದರಿಂದ ಸರಕಾರಕ್ಕೆ ಸಂದಾಯ ಆಗಬೇಕಾಗಿದ್ದ ಸುಮಾರು 85 ಲಕ್ಷ ರೂ. ತೆರಿಗೆ ವಂಚನೆಯಾಗಿತ್ತು. ನೋಂದಣಿಗೆ ಸಂಬಂಧಿಸಿದಂತೆ ಮಂಗಳೂರು ಆರ್‌ಟಿಒ ಕಚೇರಿಯಲ್ಲೂ ಕೆಲವೊಂದು ಪ್ರಕ್ರಿಯೆಗಳು ನಡೆದಿದೆ ಎನ್ನಲಾಗಿದೆ. ಹಾಗಾಗಿ ಎರಡೂ ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಕಡತಗಳನ್ನು ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಕಡತ ಪರಿಶೀಲನೆಯ ವೇಳೆ ಕೆಲವು ಮಾಹಿತಿಗಳು ಲಭ್ಯವಾಗಿದೆ. ಈ ಬಗ್ಗೆ ಕೇಂದ್ರ ಕಚೇರಿಗೆ …

Read More »

ದರೋಡೆಗೆ ಬಂದ ಕಳ್ಳ ಕಾಲಿ ಕೈಯಲ್ಲಿ ಹಿಂತಿರುಗಿದ; ಸಿಸಿಟಿವಿಯಲ್ಲಿ ಸೆರೆಯಾದ ಭಾವನಾತ್ಮಕ ವಿಡಿಯೋ

ದರೋಡೆ ಮಾಡಲು ಅಂಗಡಿಗೆ ನುಗ್ಗಿದ ಕಳ್ಳನೊಬ್ಬ ಕಾಲಿ ಕೈಯ್ಯಲ್ಲಿ ವಾಪಾಸ್ಸಾಗಿದ ಘಟನೆಯೊಂದು ಪಾಕಿಸ್ಥಾನದಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವೈರಲ್‌ ಆಗುತ್ತಿದೆ.ವಿಡಿಯೋದಲ್ಲಿ ಅಂಗಡಿಯ ಮಾಲಿಕ ಹಾಗು ಆತನ ಪುಟ್ಟ ಮಗಳು ಕೌಂಟರ್‌ನಲ್ಲಿ ಕುಳಿತಿರುವುದನ್ನು ಕಾಣಬಹುದು.ಅದೇ ಸಮಯಕ್ಕೆ ಹೊರಗಿನಿಂದ ಬಂದ ವ್ಯಕ್ತಿಯೊಬ್ಬ ಪಿಸ್ತೂಲನ್ನು ತೋರಿಸಿ, ಅಂಗಡಿ ಮಾಲಿಕನಿಂದ ದೋಚಲು ಶುರು ಮಾಡುತ್ತಾನೆ. ಅಂಗಡಿ ಮಾಲಿಕನಲ್ಲಿ ಮೊಬೈಲ್‌ ಹಾಗು ಹಣ ಕೊಡುವಂತೆ ಹೆದರಿಸಿ, ಆತನಿಗೆ ಹೊಡೆಯುತ್ತಾನೆ.ಆದರೆ ಅಲ್ಲೇ ಕುಳಿತಿದ್ದ ಪುಟ್ಟ …

Read More »

ಪಶ್ಚಿಮದಂಡೆ: ಚೂರಿ ಇರಿತಕ್ಕೆ ಒಬ್ಬ ಬಲಿ; ಮೂವರಿಗೆ ಗಾಯ

ಆಕ್ರಮಿತ ಪಶ್ಚಿಮದಂಡೆಯಲ್ಲಿ ಮಂಗಳವಾರ ನಡೆದ ಇರಿತದ ದಾಳಿಯಲ್ಲಿ ಒಬ್ಬ ಮೃತಪಟ್ಟಿದ್ದು ಇತರ ಮೂವರು ಗಾಯಗೊಂಡಿರುವುದಾಗಿ ಇಸ್ರೇಲ್‍ನ ತುರ್ತು ಸೇವಾ ಏಜೆನ್ಸಿ ಹೇಳಿದೆ.ಪಶ್ಚಿಮ ದಂಡೆಯ ದಕ್ಷಿಣದಲ್ಲಿರುವ ಗುಷ್ ಎಟ್ಜಿಯಾನ್ ಜಂಕ್ಷನ್‍ ನಲ್ಲಿ ಘಟನೆ ನಡೆದಿದ್ದು 30 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದು ಮಹಿಳೆ ಸೇರಿದಂತೆ ಮೂವರು ಗಾಯಗೊಂಡಿದ್ದಾರೆ.ಹುಲ್ಲಹಳ್ಳಿ ಗ್ರಾಮದ ವ್ಯಕ್ತಿ ಒಬ್ಬರು ತೆಂಗಿನ ಕಾಯಿ ಕೀಳುವ ಗುತ್ತಿಗೆಯನ್ನು ಪಡೆದಿದ್ದರು ಎನ್ನಲಾಗಿದೆ. ಹುಣಸನಾಳು ಗ್ರಾಮದ ಕೂಲಿ ಕಾರ್ಮಿಕ ಲಿಂಗರಾಜು ಕಾಯಿ ಕೀಳುವ ವೇಳೆ ಆಕಸ್ಮಿಕವಾಗಿ …

Read More »

ಹಾವೇರಿಯಲ್ಲಿ ಜಿಲ್ಲಾಸ್ಪತ್ರೆ ಸಿಬ್ಬಂದಿಗಳ ಎಡವಟ್ಟು..? : ಹೆರಿಗೆ ವೇಳೆ ಬಿದ್ದು ನವಜಾತ ಶಿಶು ಸಾವು.!

ಹಾವೇರಿಯಲ್ಲಿ ಜಿಲ್ಲಾಸ್ಪತ್ರೆ ಸಿಬ್ಬಂದಿಗಳ ಎಡವಟ್ಟಿಗೆ ನವಜಾತ ಶಿಶು ಸಾವನ್ನಪ್ಪಿದೆ ಎಂಬ ಆರೋಪ ಕೇಳಿಬಂದಿದೆ.ಶೌಚಾಲಯಕ್ಕೆ ಹೋಗುವ ಮಾರ್ಗದಲ್ಲಿ ಮಹಿಳೆಗೆ ಹೆರಿಗೆ ಆಗಿದ್ದು, ಕೆಳಗೆ ಬಿದ್ದು ಪೆಟ್ಟಾದ ಹಿನ್ನೆಲೆ ಮಗು ಮೃತಪಟ್ಟಿದೆ ಎನ್ನಲಾಗಿದೆ. ಹೆರಿಗೆ ಬಂದ ಮಹಿಳೆಗೆ ಆರೈಕೆ ಮಾಡದೇ ಸಿಬ್ಬಂದಿ ನಿರ್ಲಕ್ಷ್ಯ ತೋರಿಸಿದ್ದಾರೆ ಎನ್ನಲಾಗಿದೆ.ಆಸ್ಪತ್ರೆಗೆ ಬಂದ ಗರ್ಭಿಣಿ ಮಹಿಳೆಗೆ ಬೆಡ್ ಕೊಡದೇ 1 ಗಂಟೆ ನೆಲದ ಮೇಲೆ ಕೂರಿಸಿದ್ದಾರೆ ಎಂದು ಮಹಿಳೆ ಕುಟುಂಬದವರು ಆರೋಪಿಸಿದ್ದಾರೆ. ಶೌಚಾಲಯ ಎಲ್ಲಿದೆ ಅಂತ ಅಕ್ಕಪಕ್ಕದವರನ್ನು ಕೇಳಿಕೊಂಡು …

Read More »

ದ್ವೇಷ ಭಾಷಣ ಆರೋಪ… ಹಿಂಜಾವೇ ಮುಖಂಡ ಸೆರೆ

ದ್ವೇಷ ಭಾಷಣ ಮಾಡಿದ ಆರೋಪದಲ್ಲಿ ಅಜೆಕಾರಿನ ರತ್ನಾಕರ ಅಮೀನ್‌ (49) ಅವರನ್ನು ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.ನ. 15ರಂದು ನಗರದ ಜಟ್ಕಾ ನಿಲ್ದಾಣದ ಬಳಿ ಹಿಂದೂ ಜಾಗರಣ ವೇದಿಕೆ ಉಡುಪಿ ತಾಲೂಕು ವತಿಯಿಂದ ಹೊಸದಿಲ್ಲಿ ಬಾಂಬ್‌ ಸ್ಫೋಟದ ಕುರಿತು ಇಸ್ಲಾಮಿಕ್‌ ಭಯೋತ್ಪಾದನೆ ಕೃತ್ಯವನ್ನು ಖಂಡಿಸಿ ನಡೆಸುತ್ತಿದ್ದ ಪ್ರತಿಭಟನೆ ವೇಳೆ ಅವರು ಧರ್ಮಗಳ ನಡುವೆ ದ್ವೇಷ ಉಂಟು ಮಾಡುವ ರೀತಿ ಭಾಷಣ ಮಾಡಿ ಪ್ರಚೋದನಾಕಾರಿ ಹೇಳಿಕೆ ನೀಡಿದ್ದರು.ಈ ಬಗ್ಗೆ ಉಡುಪಿ ನಗರ ಠಾಣೆಯ …

Read More »

ಮಲಗಿದ್ದಲ್ಲೇ ಜೀವಬಿಟ್ಟ ಮೂವರು ಯುವಕರು; ನಿಗೂಢ ಸಾವಿನಿಂದ ಪೋಷಕರ ಆಕ್ರಂದನ!

ಬೆಳಗಾವಿಯ ಆಜಾದ್ ನಗರದಲ್ಲಿ ಮೂವರು ಯುವಕರು ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಮೃತರನ್ನು 22 ವರ್ಷದ ಸರ್ಫರಾಜ್ ಹರಪ್ಪನಹಳ್ಳಿ, ರಿಹಾನ್ ಮತ್ತು ಮೋಹಿನ್ ನಲಬಂದ ಸಾವನ್ನಪ್ಪಿದ್ದಾರೆ. 19 ವರ್ಷದ ಶಹಾನವಾಜ್ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಮನೆಯಲ್ಲಿ ಮಲಗಿದ್ದವರು ನಿಗೂಢವಾಗಿ ಮೃತಪಟ್ಟಿದ್ದು ಮಕ್ಕಳನ್ನು ಕಳಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಸೊಳ್ಳೆ ಬತ್ತಿ ಹೊಗೆ ಮತ್ತು ಚಳಿ ಕಾಯಿಸಲು ಹಾಕಿದ ಬೆಂಕಿ ಹೊಗೆಯಿಂದ ಉಸಿರುಗಟ್ಟಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಮಾಳಮಾರುತಿ ಠಾಣೆ ಪೋಲೀಸರು …

Read More »

ಶಬರಿಮಲೆಗೆ ತೆರಳುತ್ತಿದ್ದ ಮಂಡ್ಯದ ಅಯ್ಯಪ್ಪ ಮಾಲಾಧಾರಿಗಳ ಬಸ್‌ ಪಲ್ಟಿ; ಪವಾಡಸದೃಶ ಪಾರಾದ 33 ಮಂದಿ

ಶಬರಿಮಲೆಗೆ ತೆರಳುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದ್ದು, ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲೂಕಿನ ಯಾಲದಹಳ್ಳಿ ಕೊಪ್ಪಲು ಗ್ರಾಮದ 33 ಮಾಲಾಧಾರಿಗಳು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೇರಳದ ಕೊಟ್ಟಾಯಂ ಜಿಲ್ಲೆಯ ಎರುಮೇಲಿ ಬಳಿ ಅಪಘಾತ ಸಂಭವಿಸಿದೆ. ಯಾಲದಹಳ್ಳಿ‌ಕೊಪ್ಪಲು ಗ್ರಾಮದ 33 ಮಂದಿ ಅಯ್ಯಪ್ಪನ ಮಾಲೆ ಧರಿಸಿ ಸ್ವಾಮಿ ದರ್ಶನಕ್ಕೆ ಶಬರಿಮಲೆಗೆ ತೆರಳುತ್ತಿದ್ದರು. ಈ ವೇಳೆ ಕೇರಳದ ಏರಿಮಲೈ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದೆ. …

Read More »

ಅಪ್ಪನ ಮೇಲೆ ಹಲ್ಲೆ: ವ್ಯಕ್ತಿ ಕೊಂದ ಪುತ್ರ

ಬೆಂಗಳೂರು: ಅಪ್ಪನ ಮೇಲೆ ಹಲ್ಲೆ ಮಾಡಿದ್ದಕ್ಕೆ ಸಿಟ್ಟಿಗೆದ್ದ ಪುತ್ರ, ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿರುವ ಘಟನೆ ನಗರದ ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ‌ನಾರಾಯಣಸ್ವಾಮಿ(55) ಕೊಲೆಯಾದವರು.ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಜಯ್​ ಎಂಬಾತನನ್ನು ಬಂಧಿಸಿದ್ದಾರೆ.ಅಜಯ್ ತಂದೆ ಮುನಿವೆಂಕಟಪ್ಪ ಮತ್ತು ನಾರಾಯಣಸ್ವಾಮಿ ಅವರು ಮದ್ಯದ ಅಮಲಿನಲ್ಲಿ ನ.11ರಂದು ಗಲಾಟೆ ಮಾಡಿಕೊಂಡಿದ್ದರು. ತಂದೆಯ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಕೋಪಗೊಂಡಿದ್ದ ಅಜಯ್, ನಾರಾಯಣಸ್ವಾಮಿ ಅವರ ಮೇಲೆ ತೀವ್ರ ಹಲ್ಲೆ ಮಾಡಿದ್ದ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ …

Read More »