ಹುಬ್ಬಳ್ಳಿ : ಪ್ರಮೋದ್ ಮುತಾಲಿಕ್ ಬಂಧಿಸುವಂತೆ ಆಗ್ರಹಿಸಿ ಜೈ ಭೀಮ ದಲಿತ ಸಂಘಟನೆಯಿಂದ ಹುಬ್ಬಳ್ಳಿಯ ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ
ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ, ತಹಶೀಲ್ದಾರ್ ಗೆ ಮನವಿ ಸಲ್ಲಿಸಿದರು.
ಸಂವಿಧಾನ ರಕ್ಷಣೆಗಾಗಿ ಪ್ರಮೋದ್ ಮುತಾಲಿಕ್ ಬಂಧಿಸುವಂತೆ ಪ್ರತಿಬಟನೆ ರ್ಯಾಲಿ ಮಾಡಲಾಯಿತು. ಎಲ್ಲಾ ವಿಷಯದಲ್ಲಿ ಧರ್ಮ ಎಳೆದು ತರುವುದು ಸರಿಯಲ್ಲ . ದೇಶದ್ರೋಹ ಕಾನೂನು ಅಡಿಯಲ್ಲಿ ಬಂಧಿಸುವಂತೆ ಆಗ್ರಹಿಸಿದರು.
ಸಂವಿಧಾನ ವಿರೋಧಿ ಕಾರ್ಯಕ್ಕೆ ಸರ್ಕಾರ ಬೆಂಬಲ ನೀಡುತ್ತಿದೆ. ಪ್ರಮೋದ್ ಮುತಾಲಿಕ್ ಒಂದೇ ಸಮುದಾಯ ಗುರಿ ಇಟ್ಟು ಮಾತನಾಡುತ್ತಿದ್ದಾರೆ .
ಮುಸ್ಲಿಂ ಸಮಾಜದ ವಿರುದ್ಧ ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿಕೆ ಕೊಟ್ಟಿದ್ದಾರೆ. ಮುತಾಲಿಕ್ ಮಸೀದಿಗೆ ಮುತ್ತಿಗೆ ಹಾಕುತ್ತೇನೆ ಎನ್ನಲು ಈತ ಯಾರು…?
ಧರ್ಮ ಧರ್ಮದ ವಿರುದ್ಧ ಜಗಳ ಹಚ್ಚುತ್ತಿದ್ದಾನೆ . ರಾಮರಾಜ್ಯ ಅಂದರೆ ಇದೇನಾ..? ಬಡವರ ಮೇಲೆ ಗಲಾಟೆ ಮಾಡುವುದು ರಾಮನ ಸೈನ್ಯ ಕೆಲಸವ..? ಬಂಧಿಸಿ ,ಗಡಿಪಾರು ಮಾಡುವಂತೆ ರಾಷ್ಟ್ರಪತಿ ಅವರಿಗೆ ಮನವಿ ಮಾಡುತ್ತೇವೆ. ಸಾಹಿತಿಗಳಿಗೆ ಬೆದರಿಕೆ ಪತ್ರ ಬರೆಯುತ್ತಿದ್ದಾರೆ. ಕ್ರಿಯೆಗೆ ಪ್ರತಿಕ್ರಿಯೆ ಎಂದು ಸಿಎಂ ಹೇಳುತ್ತಿದ್ದಾರೆ ,ಸರ್ಕಾರ ಎಚ್ಛೆತ್ತುಕೊಳ್ಳಬೇಕುಎಂದು ದಲಿತ ಮುಖಂಡ ಶಂಕರ್ ಅಜಮನಿ ಆಕ್ರೋಶ ಹೊರಹಾಕಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

