Breaking News

Breaking News

ಕರ್ನೂಲ್ ಬಸ್ ದುರಂತದಲ್ಲಿ 12 ಮಂದಿ ಪ್ರಯಾಣಿಕರನ್ನು ರಕ್ಷಿಸಿದ ಬೆಂಗಳೂರಿನ ನೌಕರ.!

ಕರ್ನೂಲ್ ಬಸ್ ಅಗ್ನಿ ದುರಂತದಲ್ಲಿ 20 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಈ ಘಟನೆಗೆ ಇಡೀ ದೇಶವೇ ಮರುಗಿದೆ. ಬಸ್ ಗೆ ಬೆಂಕಿ ಹೊತ್ತಿಕೊಳ್ಳುವ ಸಂದರ್ಭದಲ್ಲಿ ಆಪದ್ಭಾಂಧವಂತೆ ಬಂದ ಬೆಂಗಳೂರಿನ ನೌಕರ 12 ಮಂದಿ ಪ್ರಯಾಣಿಕರನ್ನ ರಕ್ಷಿಸಿದ್ದಾನೆ.ಅಪಘಾತ ಸಂಭವಿಸಿ ಇಡೀ ಬಸ್ ಹೊತ್ತಿ ಉರಿಯುತ್ತಿದೆ . ಈ ಸಂದರ್ಭದಲ್ಲಿ ಕಾರಿನಲ್ಲಿ ತನ್ನ ಸ್ನೇಹಿತರ ಜೊತೆ ಬರುತ್ತಿದ್ದ ಬೆಂಗಳೂರಿನ ನೌಕರ ಕೂಡಲೇ ಸಹಾಯಕ್ಕೆ ಓಡೋಡಿ ಬಂದಿದ್ದಾರೆ. ಕಾರಿನಲ್ಲಿದ್ದ ಸ್ಟೆಪ್ನಿ ಬದಲಿಸುವ ರಾಡ್ …

Read More »

ಶಿವಮೊಗ್ಗದಲ್ಲಿ ಅಮಾನವೀಯ ಘಟನೆ : ಕಾದ ಚಾಕುವಿನಿಂದ ಮಗು ಗಲ್ಲಕ್ಕೆ ಬರೆ ಎಳೆದ ಅಂಗನವಾಡಿ ಸಹಾಯಕಿ!

ಮಕ್ಕಳ ಜಗಳವನ್ನು ಬಿಡಿಸಲು ಹೋಗಿ ಅಂಗನವಾಡಿ ಸಹಾಯಕಿ ಒಬ್ಬಳು ಬೆಂಕಿಯಲ್ಲಿ ಕಾಸಿದ ಚಾಕುವಿ ನಿಂದ ಮಗುವಿನ ಗಲ್ಲಕ್ಕೆ ಎಳೆದಿದ್ದಾರೆ.ಹೌದು ಮಕ್ಕಳ ಜಗಳ ಬಿಡಿಸಲು ಅಂಗನವಾಡಿ ಸಹಾಯಕಿಯೊಬ್ಬಳು ಬೆಂಕಿಯಲ್ಲಿ ಕಾಸಿದ ಚಾಕುವಿ ನಿಂದ ಮಗುವಿನ ಗಲ್ಲಕ್ಕೆ ಬರೆ ಎಳೆದ ಘಟನೆ ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಚಿಕ್ಕಸವಿ ಗ್ರಾಮದಲ್ಲಿ ಗುರುವಾರ ನಡೆದಿದೆ.ಚಿಕ್ಕಸವಿ ಗ್ರಾಮದ ಚಂದ್ರಪ್ಪ ಮತ್ತು ನಂದಿನಿ ದಂಪತಿಯ ಮೂರುವರೆ ವರ್ಷದ ಮಗು ಯೋಧ ಮೂರ್ತಿ, ಬರೆಗೆ ತುತ್ತಾದ ಮಗು. ಚಿಕ್ಕಸವಿ …

Read More »

ಬೆಂಗಳೂರಲ್ಲಿ ಒಂದೇ ಕುಟುಂಬದ ನಾಲ್ವರು ಸಾಮೂಹಿಕ ಆತ್ಮಹತ್ಯೆಗೆ ಯತ್ನ : ಇಬ್ಬರು ಸಾವು ಮತ್ತಿಬ್ಬರ ಸ್ಥಿತಿ ಗಂಭೀರ!

ಜಿಲ್ಲೆಯಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇವರಲ್ಲಿ ಇಬ್ಬರು ಸಾವನ್ನಪ್ಪಿದ್ದು, ಮತ್ತಿಬ್ಬರು ಸಾವು ಬದುಕಿನ ನಡುವೆ ಹೋರಾಡುತ್ತಿರುವುದಾಗಿ ತಿಳಿದು ಬಂದಿದೆ.ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಗ್ಗನಹಳ್ಳಿಯಲ್ಲಿ ವಿಷ ಸೇವಿಸಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ.ಇವರಲ್ಲಿ ಇಬ್ಬರು ಸಾವನ್ನಪ್ಪಿದ್ದು, ಮತ್ತಿಬ್ಬರ ಸ್ಥಿತಿ ಗಂಭೀರವಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಹೆಗ್ಗನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಒಂದೇ ಕುಟುಂಬದ ನಾಲ್ವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ತಂದೆ ಹಿರಿಮಗ ಸಾವನ್ನಪ್ಪಿದ್ದರೆ, …

Read More »

ನಟ ಧ್ರುವ ಸರ್ಜಾ ವಿರುದ್ಧ ದೂರು ದಾಖಲು!!

ನಟ ಧ್ರುವ ಸರ್ಜಾ ಅವರ ನಿವಾಸದ ಬಳಿಯಿರುವ ಅಕ್ಕಪಕ್ಕದ ನಿವಾಸಿಗಳಿಗೆ ಅವರ ಅಭಿಮಾನಿಗಳಿಂದ ತೊಂದರೆಯುಂಟಾಗುತ್ತಿದೆ. ಪ್ರತಿನಿತ್ಯ ನಮ್ಮ ಮನೆ ಮುಂದೆ ಅಭಿಮಾನಿಗಳು ದ್ವಿಚಕ್ರ ವಾಹನದ ನಿಲುಗಡೆ ಮಾಡುತ್ತಾರೆ. ಅಲ್ಲದೇ, ಮನೆಯ ಮುಂದೆಯೇ ಧೂಮಪಾನ ಮಾಡುತ್ತಾರೆ. ಮನೆಯ ಗೋಡೆಯ ಮೇಲೆ ಉಗಿಯುತ್ತಾರೆ. ಇದ್ದರಿಂದ ಅಕ್ಕಪಕ್ಕದ ನಿವಾಸಿಗಳಿಗೆ ಪ್ರತಿನಿತ್ಯ ತೊಂದರೆಯಾಗುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಬಗ್ಗೆ ಎಫ್‍ಐಆರ್ ದಾಖಲಿಸಿ ಕ್ರಮ ಜರುಗಿಸುವಂತೆ ದೂರಿನಲ್ಲಿ ತಿಳಿಸಿದ್ದಾರೆ. ಮನೋಜ್(30) ಎಂಬುವರು ನಟ ಧ್ರುವ ಸರ್ಜಾ, …

Read More »

ತಾಯಿಯ ಚಿನ್ನ ಕದ್ದಿದ್ದನ್ನು ಪ್ರಶ್ನಿಸಿದ್ದಕ್ಕೆ ಸ್ನೇಹಿತನ ಹತ್ಯೆ!!

ತನ್ನ ತಾಯಿಯ ಚಿನ್ನ ಕದ್ದಿದ್ದನ್ನು ಪ್ರಶ್ನಿಸಿದ್ದಕ್ಕೆ ಚಾಕುವಿನಿಂದ ಇರಿದು ಸ್ನೇಹಿತನ ಹತ್ಯೆ ಮಾಡಿರುವಂತಹ ಘಟನೆ ಬೆಂಗಳೂರಿನ ಕೋಣನಕುಂಟೆಯ ಕೃಷ್ಣಪ್ಪ ಲೇಔಟ್​ನಲ್ಲಿ ಅಕ್ಟೋಬರ್ 25ರಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ರಾಹುಲ್​​ನನ್ನು​, ಪ್ರೀತಮ್ ಕೊಲೆ ಮಾಡಿದ್ದಾರೆ. ಸದ್ಯ ​ಆರೋಪಿ ಪ್ರೀತಮ್​ನನ್ನು ಕೋಣನಕುಂಟೆ ಪೊಲೀಸರು ಬಂಧಿಸಿದ್ದಾರೆ.ಕಳೆದ ಶನಿವಾರ ಪ್ರೀತಮ್ ಬ್ಯಾಗ್​ನಲ್ಲೇ ರಾಹುಲ್ ಚಿನ್ನ ನೋಡಿದ್ದ. ನಿನ್ನ ಮಗ ಚಿನ್ನ ಕದ್ದಿದ್ದು ಎಂದು ಪ್ರೀತಮ್ ತಾಯಿಗೆ ರಾಹುಲ್ ಹೇಳಿದ್ದ. ಇದರಿಂದ ಕೋಪಗೊಂಡು ಚಾಕುವಿನಿಂದ …

Read More »

ಆನೇಕಲ್: ಬರ್ತ್​ಡೇ ಪಾರ್ಟಿ ಕೊಲೆಯಲ್ಲಿ ಅಂತ್ಯ; ಸ್ನೇಹಿತರಿಂದಲೇ ಬರ್ತ್ ಡೇ ಬಾಯ್​​ ಹತ್ಯೆ!!

ಅಕ್ಟೋಬರ್ 16ರಂದು ಸಂದೀಪ್​ ಬರ್ತ್​ಡೇ ಇತ್ತು. ಪಾರ್ಟಿಗೆಂದು ಸ್ನೇಹಿತರನ್ನು ಬಾರ್​ಗೆ ಕರೆದುಕೊಂಡು ಹೋಗಿದ್ದರು. ಪಾರ್ಟಿ ಮುಗಿದ ಬಳಿಕ ಸಂದೀಪ್ ಬಿಲ್ ಕಟ್ಟಿದ್ದರು. ಆದರೆ 2ನೇ ಸಲ‌ ಬಿಲ್‌ ಕಟ್ಟುವಂತೆ ಸ್ನೇಹಿತರು ಸಂದೀಪ್​ಗೆ ಒತ್ತಾಯಿಸಿದ್ದಾರೆ. ಹಣ ಇಲ್ಲ ಎಂದಿದ್ದಕ್ಕೆ ಬಾರ್ ಬಳಿ ಸಂತೋಷ್ ಗಲಾಟೆ ಮಾಡಿದ್ದರು. ಇದರಿಂದ ಬೇಸರಗೊಂಡು ಸಂದೀಪ್ ವಾಪಸ್‌ ಊರಿಗೆ ಬಂದಿದ್ದರು.ಅಷ್ಟಕ್ಕೆ ಸುಮ್ಮನಾಗದ ಸಂತೋಷ್ ಹಾಗೂ ಸಾಗರ್​​ ವಾಲಿಬಾಲ್ ಕೋರ್ಟ್ ಬಳಿ ಕರೆಸಿ ಸಂದೀಪ್​ ಮೇಲೆ ಹಲ್ಲೆ ಮಾಡಿದ್ದಾರೆ. …

Read More »

33 ಲಕ್ಷದ ವಿಮೆ, ಅಕ್ರಮ ಸಂಬಂಧ: ಮಗನ ಕೊಂದು ಹೆದ್ದಾರಿಯಲ್ಲಿ ಶವ ಎಸೆದ ತಾಯಿ.

ತಾಯಿಯೇಮಗನ ಕೊಲೆ ಮಾಡಿ ಹೆದ್ದಾರಿಯಲ್ಲಿ ಶವ ಎಸೆದಿರುವ ಘಟನೆ ಉತ್ತರಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಇದಕ್ಕೆಕಾರಣ 33 ಲಕ್ಷದ ವಿಮೆ ಹಾಗೂ ಆಕೆಗಿರುವ ಅಕ್ರಮ ಸಂಬಂಧ. ಆ ಮಹಿಳೆ ತನ್ನ ಪ್ರಿಯಕರನಿಂದ ತನ್ನ ಮಗನನ್ನು ಕೊಲೆ ಮಾಡಿಸಿ, ಘಟನೆಯನ್ನು ಅಪಘಾತದಂತೆ ಬಿಂಬಿಸಿ , ಶವವನ್ನು ಹೆದ್ದಾರಿಯಲ್ಲಿ ಎಸೆದಿದ್ದಾಳೆ.ಪೊಲೀಸರು ಆರೋಪಿಯನ್ನು ಬಂಧಿಸಿದಾಗ, ಸತ್ಯ ಬೆಳಕಿಗೆ ಬಂದಿದೆ. ಈ ಘಟನೆ ಕಾನ್ಪುರ ದೇಹತ್‌ನ ಅಂಗದ್‌ಪುರ್ ಬರೌರ್ ಗ್ರಾಮದಲ್ಲಿ ನಡೆದಿದೆ.

Read More »

ಬಾಲಕಿ ಹತ್ಯೆ ಕೇಸ್​​: ಆರೋಪಿಗೂ 2ನೇ ಮದುವೆ, ತನಿಖೆ ವೇಳೆ ಇನ್ಸ್ಟಾಗ್ರಾಮ್​ ರೋಮಿಯೋ ಅನ್ನೋದು ಬಯಲು.

ಕುಂಬಳಗೋಡಿನಲ್ಲಿ ಮಲತಂದೆಯಿಂದಲೇ ಬಾಲಕಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿ ತಾಯಿ ಶಿಲ್ಪಾಳಂತೆ ಆರೋಪಿ ದರ್ಶನ್​ಗೂ ಇದು 2ನೇ ಮದುವೆ. ಅಷ್ಟೇ ಅಲ್ಲದೆ, ನಾಲ್ಕೈದು ಹುಡುಗಿಯರೊಂದಿಗೆ ಆರೋಪಿ ಲವ್​​ನಲ್ಲಿದ್ದ.ಕೊಲೆ ಆರೋಪಿ ದರ್ಶನ್​​ ಇನ್ಸ್ಟಾಗ್ರಾಮ್​​ನಲ್ಲಿ​ ಬಣ್ಣಬಣ್ಣದ ಫೋಟೋ ಹಾಕುತ್ತಿದ್ದ. ಹೀಗಾಗಿ ನಾಲ್ಕೈದು ಹುಡುಗಿಯರ ಜೊತೆ ಲವ್​​​ನಲ್ಲೂ ಇದ್ದ. ಲವ್ ಮಾಡುತ್ತಿದ್ದ ಓರ್ವ ಯುವತಿ ಜೊತೆಗೂ ದರ್ಶನ್ ಮದುವೆಯಾಗಿದ್ದ.ಸೋಮವಾರ ನೆಲಮಂಗಲ ಬಳಿ ಒಬ್ಬನೇ ನಿಂತಿದ್ದಾಗ ಸಿಕ್ಕಿಬಿದ್ದಿದ್ದಾನೆ. ತಕ್ಷಣವೇ ಕುಂಬಳಗೋಡು ಪೊಲೀಸರು ಆತನನ್ನ ಬಂಧಿಸಿ ಕರೆತಂದಿದ್ದಾರೆ.

Read More »

ಬಿಸಿಲೆ ಘಾಟ್‌ ಘಟನೆ: ಆಂಬುಲೆನ್ಸ್‌ಗೆ ಅಡ್ಡಿ, ಸ್ಕೂಟಿ ಸವಾರನ ಹುಚ್ಚಾಟ!

ಬಿಸಿಲೆ ಘಾಟ್‌ನಲ್ಲಿ ಇತ್ತೀಚೆಗೆ ನಡೆದ ಬಸ್ ಅಪಘಾತದಲ್ಲಿ ಸುಮಾರು 20 ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದರು. ಈ ಗಾಯಾಳುಗಳಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಓರ್ವ ಮಹಿಳೆಯನ್ನು ಪುತ್ತೂರು ಆಸ್ಪತ್ರೆಯಿಂದ ಮಂಗಳೂರಿನ ಆಸ್ಪತ್ರೆಗೆ ತುರ್ತಾಗಿ ಸಾಗಿಸುವ ಕಾರ್ಯವನ್ನು ಆಂಬುಲೆನ್ಸ್ ಸಿಬ್ಬಂದಿ ಕೈಗೊಂಡಿದ್ದರು.ಸ್ಕೂಟಿ ಸವಾರನ ಈ ಬೇಜವಾಬ್ದಾರಿಯುತ ವರ್ತನೆಯನ್ನು ಆಂಬುಲೆನ್ಸ್‌ನ ಸಹ-ಚಾಲಕ ಕಾರ್ತಿಕ್ ಅವರು ತಮ್ಮ ಮೊಬೈಲ್‌ನಲ್ಲಿ ಸಂಪೂರ್ಣವಾಗಿ ದಾಖಲಿಸಿಕೊಂಡಿದ್ದಾರೆ. ಘಟನೆಯ ಕುರಿತು ಪೊಲೀಸರಿಗೆ ದೂರು ನೀಡಲಾಗಿದ್ದು, ತುರ್ತು ಸೇವೆಗೆ ಅಡ್ಡಿಪಡಿಸಿದ ಕಾರಣ ಸ್ಕೂಟಿ …

Read More »

ದೇವನಹಳ್ಳಿ: ಒಂದೇ ಕುಟುಂಬದ ನಾಲ್ವರು ಸಾಮೂಹಿಕ ಆತ್ಮಹತ್ಯೆ ಯತ್ನ; ಇಬ್ಬರ ಸಾವು, ಇನ್ನಿಬ್ಬರ ಸ್ಥಿತಿ ಗಂಭೀರ.

60 ವರ್ಷ ವಯಸ್ಸಿನ ಕುಮಾರಪ್ಪ, ಇವರ ಪತ್ನಿ 55 ವರ್ಷದ ರಮಾ ಮತ್ತು ಗಂಡು ಮಕ್ಕಳಾದ ಅಕ್ಷಯ್ ಹಾಗೂ ಅರುಣ್ ಸಾಮೂಹಿಕವಾಗಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಪೈಕಿ ಹಿರಿಯ ಮಗ ಕ್ರೀಮಿನಾಶಕ ಸೇವಿಸಿ ನಂತರ ನೇಣಿಗೆ ಶರಣಾಗಿದ್ದಾನೆ. ತಂದೆ ಕುಮಾರಪ್ಪ ಹಾಗೂ ಹಿರಿಯ ಮಗ ಅರುಣ್ ಸಾವನ್ನಪ್ಪಿದ್ದು, ಅರಚಾಡುತ್ತಾ ವಿಲವಿಲ ಒದ್ದಾಡುತ್ತಿದ್ದ ತಾಯಿ ರಮಾ ಹಾಗೂ ಕಿರಿಯ ಮಗನನ್ನು ಸ್ಥಳೀಯರು ಆ್ಯಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಬ್ಬರ ಸ್ಥಿತಿಯೂ …

Read More »