ನಟ ಧ್ರುವ ಸರ್ಜಾ ಅವರ ನಿವಾಸದ ಬಳಿಯಿರುವ ಅಕ್ಕಪಕ್ಕದ ನಿವಾಸಿಗಳಿಗೆ ಅವರ ಅಭಿಮಾನಿಗಳಿಂದ ತೊಂದರೆಯುಂಟಾಗುತ್ತಿದೆ. ಪ್ರತಿನಿತ್ಯ ನಮ್ಮ ಮನೆ ಮುಂದೆ ಅಭಿಮಾನಿಗಳು ದ್ವಿಚಕ್ರ ವಾಹನದ ನಿಲುಗಡೆ ಮಾಡುತ್ತಾರೆ. ಅಲ್ಲದೇ, ಮನೆಯ ಮುಂದೆಯೇ ಧೂಮಪಾನ ಮಾಡುತ್ತಾರೆ. ಮನೆಯ ಗೋಡೆಯ ಮೇಲೆ ಉಗಿಯುತ್ತಾರೆ. ಇದ್ದರಿಂದ ಅಕ್ಕಪಕ್ಕದ ನಿವಾಸಿಗಳಿಗೆ ಪ್ರತಿನಿತ್ಯ ತೊಂದರೆಯಾಗುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಬಗ್ಗೆ ಎಫ್‍ಐಆರ್ ದಾಖಲಿಸಿ ಕ್ರಮ ಜರುಗಿಸುವಂತೆ ದೂರಿನಲ್ಲಿ ತಿಳಿಸಿದ್ದಾರೆ. ಮನೋಜ್(30) ಎಂಬುವರು ನಟ ಧ್ರುವ ಸರ್ಜಾ, ಅವರ ವ್ಯವಸ್ಥಾಪಕರು, ಕಾರು ಚಾಲಕ ಹಾಗು ಅಭಿಮಾನಿಗಳ ವಿರುದ್ಧ ದೂರು ದಾಖಲಿಸಿದ್ದಾರೆ
bigtvnews | Hubli Dharwad News | Kannada News | Karnataka News Hubli News | News In Hubli | Local news

