Breaking News

Breaking News

ದರ್ಗಾ ಮೆರವಣಿಗೆಯಲ್ಲಿ ಡಿಜೆ ಬಳಕೆ, ದರ್ಗಾ ಸಮಿತಿ ಸೇರಿ ಮೂವರ ವಿರುದ್ಧ ಕೇಸ್ ದಾಖಲು

ರಾಮನಗರದ ಮೋತಿ ನಗರದಲ್ಲಿ ಪೀರಾನ್ ಶಾ ವಲಿ ದರ್ಗಾದ ಮೆರವಣಿಗೆಯ ವೇಳೆ ಡಿಜೆ ಬಳಕೆ ಮಾಡಲಾಗಿದೆ.ಅಕ್ಟೋಬರ್ 28 ರಂದು ರಾತ್ರಿ ಡಿಜೆ ಬಳಸಿ ಮೆರವಣಿಗೆ ಮಾಡಿದ್ದರು. ದರ್ಗಾ ಸಮಿತಿಯ ವಿರುದ್ಧ ರಾಮನಗರದ ಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.ಆಡಳಿತ ಮಂಡಳಿ ಸೇರಿ ದುರ್ಗಾ ಸಮಿತಿಯ ಮೂವರ ವಿರುದ್ಧ ರಾಮನಗರದ ಪುರ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.ರಾಮನಗರದ ಪೀರಾನ್ ಶಾ ವಲಿ ದರ್ಗಾದ ಮೆರವಣಿಗೆಯಲ್ಲಿ ಅನುಮತಿ ಇಲ್ಲದೇ ಡಿಜೆ ಬಳಕೆ ಮಾಡಿದ್ದ ಹಿನ್ನೆಲೆಯಲ್ಲಿ …

Read More »

ಅಕ್ರಮ ಲಕ್ಕಿ ಸ್ಕೀಂ; ಪ್ರಕರಣ ದಾಖಲು

ಕರಪತ್ರಗಳ ಮೂಲಕ ಪ್ರಚಾರ ಮಾಡಿ ಅಕ್ರಮವಾಗಿ ಲಕ್ಕಿಸ್ಕೀಂ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಪಡೆದ ಪುತ್ತೂರು ನಗರ ಪೊಲೀಸರು ಬಿಗ್ ಟಿಕೆಟ್ ಲಕ್ಕಿ ಸ್ಕೀಂ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಪೊಲೀಸರು ಗಸ್ತು ನಿರತರಾಗಿದ್ದ ಸಂದರ್ಭದಲ್ಲಿ ಸಾರ್ವಜನಿಕರು ಕರಪತ್ರ ಹಿಡಿದು ಚರ್ಚಿಸುತ್ತಿರುವುದನ್ನು ಗಮನಿಸಿ ಈ ಬಗ್ಗೆ ಮಾಹಿತಿ ಕಲೆ ಹಾಕಿದರು.ಉಕ್ಕಿನಡ್ಕದ ಮೊಹಮ್ಮದ್ ಶಫೀಕ್, ಪುತ್ತೂರಿನ ಶರೀಫ್, ಆಶೀಕ್ ಎಂಬವರು ಜತೆಗೂಡಿ ನಡೆಸುತ್ತಿರುವ ಅಕ್ರಮ ಸ್ಕೀಂ ಇದಾಗಿದ್ದು, ಗ್ರಾಹಕರಿಂದ 1 ಸಾವಿರ ರೂ. ಸಂಗ್ರಹಿಸುತ್ತಿರುವುದು …

Read More »

ಮಹಿಳೆಗೆ ಕಿರುಕುಳ: ಆರೋಪಿ ಬಂಧನ

ಮಹಿಳೆ ಪೋಟೋಗಳನ್ನು ಎಡಿಟ್‌ ಮಾಡಿ ಆಕೆಯ ಸ್ನೇಹಿತರಿಗೆ ಕಳುಹಿಸಿ ಕಿರುಕುಳ ನೀಡುತ್ತಿದ್ದ ಆರೋಪಿಯನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.ನಗರದ ಶ್ರೀನಿವಾಸನಗರ ಬಡಾವಣೆಯ ನಿವಾಸಿ ಹಾಗೂ ಆಲ್ದೂರು ಹೋಬಳಿ ಯೂತ್‌ ಕಾಂಗ್ರೆಸ್‌ ಮಾಜಿ ಉಪಾಧ್ಯಕ್ಷ ಆದಿತ್ಯ (40) ಬಂಧಿತ ಆರೋಪಿ.ಜಯನಗರ ಬಡಾವಣೆಯ ಮಹಿಳೆ ಜತೆ ಫೋನ್ ನಲ್ಲಿ ಸಂಪರ್ಕ ಹೊಂದಿದ್ದ ಈತ ವಾಟ್ಸಾಪ್‌ ಕಾಲ್‌ ಮಾಡಿ ಕಿರುಕುಳ ನೀಡುತ್ತಿದ್ದಲ್ಲದೇ, ಫೋಟೋಗಳನ್ನು ಪಡೆದು ಎಡಿಟ್‌ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಆಕೆಯ ಸ್ನೇಹಿತರಿಗೆ ಕಳಿಸಿ …

Read More »

ಅನುಮಾನಾಸ್ಪದವಾಗಿ ಯುವಕ ಸಾವು

ಯುವಕನೊಬ್ಬ ಮಾವಿನ ಮರಕ್ಕೆ ನೇಣು ಬೀಗಿದ ಸ್ಥಿತಿಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಬಂಡಪಲ್ಲಿ ಗ್ರಾಮದಲ್ಲಿ ನಡೆದಿದೆ. ಶ್ರೀನಿವಾಸಪುರ ತಾಲೂಕು ಆರಿಕುಂಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಂಡಪಲ್ಲಿ ಗ್ರಾಮದ ಮಾವಿನ ತೋಟದಲ್ಲಿನ ಮಾವಿನ ಮರಕ್ಕೆ ನೇಣು ಹಾಕಿಕೊಂಡಿರುವುದು ಕಂಡು ಬಂದಿದೆ.ಮೃತ ಯುವಕ ಚಿಂತಾಮಣಿ ತಾಲೂಕು ಗಂಡ್ರಗಾನಹಳ್ಳಿ ಗ್ರಾಮದ ಆದರ್ಶ(33) ಟ್ರ್ಯಾಕ್ಟರ್ ಚಾಲಕನಾಗಿ ಕೆಲಸ ಮಾಡುತ್ತಿದ್ದನೆಂದು ತಿಳಿದು ಬಂದಿದೆ.ಸಂಬಂಧಿಸಿದಂತೆ ನೇಣು ಹಾಕಿಕೊಂಡಿರುವ ಯುವಕನ ಮೃತದೇಹ ಭೂಮಿಗೆ ಸ್ಪರ್ಶವಾಗಿರುವ ಕಾರಣ ಮೃತನ ಪೋಷಕರು …

Read More »

ಮಾಂಸಾಹಾರ ಸೇವಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಸ್ನೇಹಿತನ ಕೊಲೆ!

ಹಬ್ಬದ ದಿವಸ ಮನೆಯಲ್ಲಿ ಮಾಂಸಾಹಾರ ಸೇವಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಸ್ನೇಹಿತನನ್ನು ಕೊಲೆ ಮಾಡಿರುವ ಘಟನೆ ಚಿಕ್ಕಜಾಲದ ನವರತ್ನ ಅಗ್ರಹಾರದಲ್ಲಿ ಸೋಮವಾರ ತಡರಾತ್ರಿ ನಡೆದಿದೆ.ಬಿಹಾರದ ಶಂಭು ತಂತಿ(29) ಕೊಲೆಯಾದವರು.ಕೃತ್ಯ ಎಸಗಿದ ಆರೋಪದ ಅಡಿ ಅಸ್ಸಾಂನ ರಾಜೇಶ್‌ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.ಮೂರು ವರ್ಷಗಳ ಹಿಂದೆ ಕೂಲಿ ಕಾರ್ಮಿಕರಾಗಿ ಶಂಭುತಂತಿ ಹಾಗೂ ರಾಜೇಶ್ ನಗರಕ್ಕೆ ಬಂದಿದ್ದರು. ಚಿಕ್ಕಜಾಲದ ನವರತ್ನ ಅಗ್ರಹಾರದ ಲೆಬರ್‌ ಶೆಡ್‌ನಲ್ಲಿ ಇಬ್ಬರೂ ವಾಸವಾಗಿದ್ದರು. ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸ ಮಾಡಿಕೊಂಡಿದ್ದರು. …

Read More »

ಶಾಲೆಯ ಆವರಣದಲ್ಲಿದ್ದ ಸಂಪ್ ಗೆ ಬಿದ್ದು 3ನೇ ತರಗತಿ ವಿದ್ಯಾರ್ಥಿ ಸಾವು!

ಶಾಲೆಯ ಆವರಣದಲ್ಲಿದ್ದ ಸಂಪ್ ಗೆ ಬಿದ್ದು ಮೂರನೇ ತರಗತಿ ವಿದ್ಯಾರ್ಥಿ ಸಾವನ್ನಪ್ಪಿರುವ ಘೋರ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಕಡದನಹಳ್ಳಿಯಲ್ಲಿ ನಡೆದಿದೆ.ನರೇಂದ್ರ (9) ಮೃತ ವಿದ್ಯಾರ್ಥಿ. ಕಡದನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ನರೇಂದ್ರ ಇಂದು ಬೆಳಿಗ್ಗೆ ಎಂದಿನಮ್ತೆ ಶಾಲೆಗೆ ಬಂದಿದ್ದ.ಬಳಿಕ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾನೆ. ಬಾಲಕನಿಗಾಗಿ ಶಾಲೆ ಸಿಬ್ಬಂದಿ, ಪೋಷಕರು ಇದೀ ಗ್ರಾಮದಲ್ಲಿ ಹುಡುಕಾಡಿದ್ದರು. ಆದರೆ ಎಲ್ಲಿಯೂ ಬಾಲಕನ ಸುಳಿವು ಸಿಕ್ಕಿರಲಿಲ್ಲ.ಇದೀಗ ಶಾಲೆಯ ಆವರಣದಲ್ಲಿಯೇ ಇದ್ದ ಸಂಪ್ …

Read More »

ಬಸ್ ಢಿಕ್ಕಿಯಾಗಿ ಯುವತಿಗೆ ಗಾಯ

ರಸ್ತೆ ದಾಟುತ್ತಿದ್ದ ಯುವತಿಯೋರ್ವಳಿಗೆ ಬಸ್ ಢಿಕ್ಕಿಯಾದ ಘಟನೆ ನಗರದ ಹಂಪನಕಟ್ಟೆ ಜಂಕ್ಷನ್ ಬಳಿ ಸಂಭವಿಸಿದೆ.ಯುಕ್ತಾ ಕೆ.ಎಸ್. (22) ಗಾಯಗೊಂಡವರು. ಸೋಮವಾರ ಬೆಳಗ್ಗೆ ಕೆಲಸದ ನಿಮಿತ್ತ ವಿಟ್ಲದಿಂದ ಬಸ್‌ನಲ್ಲಿ ಮಂಗಳೂರಿಗೆ ಬಂದು ಮಿಲಾಗ್ರಿಸ್ ನಿಲ್ದಾಣದಲ್ಲಿ ಬಳಿ ಇಳಿದು ಕೆ.ಎಸ್.ರಾವ್ ರಸ್ತೆ ಕಡೆಗೆ ಹೋಗಲೆಂದು ಹಂಪನಕಟ್ಟೆ ಜಂಕ್ಷನ್ ಬಳಿ ರಸ್ತೆ ದಾಟುತ್ತಿದ್ದಾಗ ಅಂಬೇಡ್ಕರ್ ಜಂಕ್ಷನ್ ಕಡೆಯಿಂದ ಸ್ಟೇಟ್‌ಬ್ಯಾಂಕ್ ಕಡೆಗೆ ಬರುತ್ತಿದ್ದ ಬಸ್ ಢಿಕ್ಕಿ ಹೊಡೆಯಿತು.ಯುಕ್ತಾ ಅವರು ಕಾಂಕ್ರೀಟ್ ರಸ್ತೆಗೆ ಬಿದ್ದು ಅವರ ಕಣ್ಣು …

Read More »

ಮುಂಬೈನಲ್ಲಿ ವ್ಯಕ್ತಿಯೊಬ್ಬ ಒತ್ತೆಯಾಳಾಗಿ ಇಟ್ಟುಕೊಂಡಿದ್ದ 17 ಮಕ್ಕಳ ರಕ್ಷಣೆ

ಮುಂಬೈನಲ್ಲಿ ಒಬ್ಬ ವ್ಯಕ್ತಿ ಒತ್ತೆಯಾಳಾಗಿ ಇಟ್ಟಿದ್ದ ಕನಿಷ್ಠ 17 ಮಕ್ಕಳನ್ನು ರಕ್ಷಿಸಲಾಗಿದೆ. ಅಪಹರಣಕಾರ ರೋಹಿತ್ ಆರ್ಯ ಎಂದು ಗುರುತಿಸಲ್ಪಟ್ಟ ರೋಹಿತ್ ಆರ್ಯನನ್ನು ನಂತರ ಬಂಧಿಸಲಾಯಿತು.ನಾನು ರೋಹಿತ್ ಆರ್ಯ. ಆತ್ಮಹತ್ಯೆಯಿಂದ ಸಾಯುವ ಬದಲು, ನಾನು ಒಂದು ಯೋಜನೆಯನ್ನು ರೂಪಿಸಿದ್ದೇನೆ ಮತ್ತು ಇಲ್ಲಿ ಕೆಲವು ಮಕ್ಕಳನ್ನು ಒತ್ತೆಯಾಳಾಗಿ ಇರಿಸಿದ್ದೇನೆ.ನನಗೆ ಹೆಚ್ಚಿನ ಬೇಡಿಕೆಗಳಿಲ್ಲ; ನನಗೆ ತುಂಬಾ ಸರಳವಾದ ಬೇಡಿಕೆಗಳು, ನೈತಿಕ ಬೇಡಿಕೆಗಳು, ಮತ್ತು ಕೆಲವು ಪ್ರಶ್ನೆಗಳಿವೆ. ನಾನು ಕೆಲವು ಜನರೊಂದಿಗೆ ಮಾತನಾಡಲು, ಅವರಿಗೆ ಪ್ರಶ್ನೆಗಳನ್ನು …

Read More »

ಹೆಂಡ್ತಿಗೆ ದೆವ್ವ ಹಿಡಿದಿದೆಂದು ಪತಿ ಈ ರೀತಿ ನಡೆದುಕೊಳ್ಳುವುದಾ, ಕೇರಳದಲ್ಲಿ ಕರುಳು ಹಿಂಡುವ ಘಟನೆ

ತಾನು ಹೇಳಿದ ಹಾಗೇ ಕೇಳದ ಪತ್ನಿ ಮೇಲೆ ಕೆರಳಿದ ಪತಿಯೊಬ್ಬ ಬಿಸಿ ಸಾಂಬಾರ್ ಸುರಿದು ಹಲ್ಲೆ ಮಾಡಿರುವ ಘಟನೆ ಕೇರಳದ ಕೊಲ್ಲಮ್‌ ಜಿಲ್ಲೆಯಲ್ಲಿ ನಡೆದಿದೆ. ಗಾಯಗೊಂಡ ಪತ್ನಿಯನ್ನು ಚಡಯಮಂಗಲಂ ಸಮೀಪದ ವೈಕ್ಕಲ್‌ನ ರೆಜಿಲಾ ಗಫೂರ್ (36) ಎಂದು ಗುರುತಿಸಲಾಗಿದೆ.ಸದ್ಯ ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆಯ ಪತಿ ಸಜೀರ್ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಎಫ್‌ಐಆರ್‌ ಪ್ರಕಾರ, ಬುಧವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಸಜೀರ್‌ ತನ್ನ ಪತ್ನಿ …

Read More »

ಗ್ರಂಥಪಾಲಕ ರಾಮಚಂದ್ರಯ್ಯ ಆತ್ಮಹತ್ಯೆ: ಕಳಲುಘಟ್ಟ ಪಿಡಿಒ ಗೀತಾಮಣಿ ಅಮಾನತು

ನೆಲಮಂಗಲ ತಾಲ್ಲೂಕು, ಕಳಲುಘಟ್ಟ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗೀತಾಮಣಿ ಅವರನ್ನು ಅಮಾನತು ಮಾಡಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ಎಸ್‌.ಅನುರಾಧ ಅವರು ಆದೇಶ ಹೊರಡಿಸಿದ್ದಾರೆ.ಗೋವೆನಹಳ್ಳಿ ಗ್ರಾಮದ ರಾಮಚಂದ್ರಯ್ಯ ಅವರು ಅ.27 ರಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು.ರಾಮಚಂದ್ರಯ್ಯ ಅವರ ಸಾವಿಗೆ ಪಿಡಿಒ ಗೀತಾಮಣಿ ಕಾರಣ. ಸುಮಾರು ಮೂರು ತಿಂಗಳಿಂದ ವೇತನ ಪಾವತಿಸದೇ ಹಾಗೂ ಅವರು ಹಾಜರಾತಿ ತೋರಿಸಲು ಬಯೋ ಮೆಟ್ರಿಕ್ ಕೊಡದೆ ಕಿರುಕುಳ ನೀಡಿದ್ದರಿಂದ ಮನನೊಂದು ಆತ್ಮಹತ್ಯೆ …

Read More »