bigtvnews22
October 15, 2025
Breaking News
ಪುಡಿ ರೌಡಿಗಳು ಮತ್ತೆ ಬಾಲ ಬಿಚ್ಚಿದ್ದಾರೆ. ಕ್ಷುಲ್ಲಕ ವಿಚಾರಕ್ಕೆ ವಿಕಾಸ ನಗರದಲ್ಲಿ ವ್ಯಕ್ತಿಯೊಬ್ಬನ ಮೇಲೆ ಗುಂಪೊಂದು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ತಾನು ದುಡಿದ ಹಣ ಕೇಳಿದ್ದಕ್ಕೆ, ಮಾಲೀಕ ಗುಂಪು ಕಟ್ಟಿಕೊಂಡು ಬಂದು ಹಲ್ಲೆ ಮಾಡಿದ್ದಾನಂತೆ.ಮತ್ತೊಂದು ಘಟನೆ ಕಮರಿಪೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತೊರವಿಹಕ್ಕಲ ಏರಿಯಾದಲ್ಲಿ, ಮನೆಗಳಿಗೆ ತೆರಳಿ ಜನರ ಮೇಲೆ ರೌಡಿಗಳು ಹಲ್ಲೆ ಮಾಡಿದ್ದಾರೆ. ಏರಿಯಾದಲ್ಲಿ ಹಿಡಿತ ಸಾಧಿಸಲು ಅಕ್ಕ ಪಕ್ಕದ ನಿವಾಸಿಗಳ ಮೇಲೆ ದಾಳಿ ಮಾಡುತ್ತಿದ್ದಾರೆ. ರಾತ್ರಿ …
Read More »
bigtvnews22
October 15, 2025
Breaking News
ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್ ಸವಾರರಿಬ್ಬರು ಸಾವನ್ನಪ್ಪಿದ್ದಾರೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಚಿತ್ರನಾಯಕನಹಳ್ಳಿ ಗೇಟ್ ಬಳಿ ಅಪಘಾತ ಸಂಭವಿಸಿದೆ.ಘಟನೆಯ ನಂತರ ವಾಹನ ಸಮೇತ ಚಾಲಕ ಪರಾರಿಯಾಗಿದ್ದಾನೆ. ಮೈಲನಹಳ್ಳಿ ಓಬಣ್ಣ(50) ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದಾರೆ.ತಳಕು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ ಎನ್ನಲಾಗಿದ್ದು, ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.
Read More »
bigtvnews22
October 15, 2025
Breaking News, Crime
ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಓರ್ವನನ್ನು ನಗರ ಪೊಲೀಸರು ಬಂಧಿಸಿ ಆತನ ಬಳಿ ಇದ್ದ ಕದ್ದ ಚಿನ್ನಾಭರಣ ಮತ್ತು ನಗದನ್ನು ವಶಪಡಿಸಿಕೊಂಡಿದ್ದಾರೆ.ಪುತ್ತೂರು ತಾಲೂಕಿನ ನಿವಾಸಿ ರೇವತಿ ನೀಡಿದ ದೂರಿನ ಪ್ರಕಾರ, ಅಕ್ಟೋಬರ್ 12 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯ ನಡುವೆ ಅಪರಿಚಿತ ದುಷ್ಕರ್ಮಿಗಳು ಅವರ ಮನೆಗೆ ನುಗ್ಗಿ ಒಂದು ಚಿನ್ನದ ಬಳೆ, ಒಂದು ಜೊತೆ ಚಿನ್ನದ ಕಿವಿಯೋಲೆ, ಒಂದು ಚಿನ್ನದ ಸರ ಮತ್ತು ನಗದು …
Read More »
bigtvnews22
October 15, 2025
Breaking News, Crime
ಬೆಂಗಳೂರಿನಲ್ಲಿ ಯುವತಿಯ ವಿಚಾರಕ್ಕೆ ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದಿದೆ. ಚಾಕು ತೋರಿಸಿ ರಸ್ತೆ ಮಧ್ಯೆ ವಿದ್ಯಾರ್ಥಿಗಳು ಪುಂಡಾಟ ಮೆರೆದಿದ್ದಾರೆ. ಆರ್ ಟಿ ನಗರದಲ್ಲಿ ಕಳೆದ ಮೂರು ದಿನಗಳ ಹಿಂದೆ ನಡೆದ ಘಟನೆ ಇದು ಈಗ ತಡವಾಗಿ ಬೆಳಕಿಗೆ ಬಂದಿದೆ.ಯುವತಿಗೆ ಇನ್ಸ್ಟಾಗ್ರಾಮ್ ನಲ್ಲಿ ಮೆಸೇಜ್ ಮಾಡಿದ್ದನ್ನು ಸ್ನೇಹಿತ ಪ್ರಶ್ನಿಸಿದ್ದಾನೆ ಒಂದೇ ಕ್ಲಾಸ್ನಲ್ಲಿ ಸ್ನೇಹಿತ ಮತ್ತು ಯುವತಿ ಕಲಿಯುತ್ತಿದ್ದಾರೆ. ಯುವತಿಗೆ ನಿರಂತರವಾಗಿ ಆರೋಪಿ ಪ್ರಭು ಮೆಸೇಜ್ ಮಾಡುತ್ತಿದ್ದ ಕಾಟ ಕೊಡುತ್ತಿದ್ದ. ಇದನ್ನು ಯುವತಿಯ …
Read More »
bigtvnews22
October 15, 2025
Breaking News, Crime
ಚಂಡೀಗಢ, ಅ. 14 (ಪಿಟಿಐ) ಪಂಜಾಬ್ ಪೊಲೀಸರು ಅಮೃತಸರ ಮೂಲದ ವ್ಯಕ್ತಿಯೊಬ್ಬರನ್ನು ಬಂಧಿಸುವ ಮೂಲಕ ಅಕ್ರಮ ಶಸ್ತ್ರಾಸ್ತ್ರ ಕಳ್ಳಸಾಗಣೆ ಜಾಲವನ್ನು ಭೇದಿಸಿರುವುದಾಗಿ ಹೇಳಿಕೊಂಡಿದ್ದಾರೆ.ಆರೋಪಿ ಅಮರ್‌ಬೀರ್ ಸಿಂಗ್‌ನಿಂದ ಪೊಲೀಸರು ಆರು ಪಿಸ್ತೂಲ್‌ಗಳು, 11 ಮ್ಯಾಗಜೀನ್‌ಗಳು ಮತ್ತು 111 ಲೈವ್ ಕಾರ್ಟ್ರಿಡ್ಜ್ ಗಳನ್ನು ವಶಪಡಿಸಿಕೊಂಡಿದ್ದಾರೆ.ಒಂದು ಪ್ರಮುಖ ಪ್ರಗತಿಯಲ್ಲಿ, ಅಮೃತಸರ ಗ್ರಾಮೀಣ ಪೊಲೀಸರು ಅಮೃತಸರದ ತಾರ್ಸಿಕ್ಕಾ ಪಿಎಸ್‌ನ ಡೈರಿವಾಲ್ ನಿವಾಸಿ ಅಮರ್‌ಬೀರ್ ಸಿಂಗ್ ಅವರನ್ನು ಬಂಧಿಸಿದ್ದಾರೆ ಮತ್ತು 6 ಪಿಸ್ತೂಲ್‌ಗಳು, 11 ಮ್ಯಾಗಜೀನ್‌ಗಳು, .30 …
Read More »
bigtvnews22
October 15, 2025
Breaking News, Crime
ಪತ್ನಿ ಮನೆಯ ಮೂರನೇ ಮಹಡಿಯಿಂದ ಕಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ವೇಳೆ ಪತಿಯ ಮೇಲೆ ಕೋಪಗೊಂಡು, ಮೊಬೈಲ್ ಮನೆಯಲ್ಲಿಯೇ ಬಿಸಾಡಿ ಮೂರನೇ ಮಹಡಿಯಿಂದ ಕೆಳಗೆ ಹಾರಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಪತ್ನಿಯನ್ನು ತಕ್ಷಣ ಆಸ್ಪತ್ರೆಗೆ ಕೊಂಡೊಯ್ದರೂ ಮಾರ್ಗಮಧ್ಯೆ ಅಸುನೀಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ನಗರದ ಪೊಲೀಸರಿಗೆ ಮಾಹಿತಿ ನೀಡಿರುವ ಶಿಖಾ ಅವರ ತಂದೆ ಅನಿಲ್ ಕುಮಾರ್ ತ್ರಿಪಾಠಿ, ‘ದಂಪತಿ ಈ ಹಿಂದೆ …
Read More »
bigtvnews22
October 15, 2025
Breaking News, Crime
-ಕೌಟುಂಬಿಕ ಕಲಹದಿಂದ ಪತ್ನಿಯನ್ನು ಕತ್ತು ಸೀಳಿ ಕೊಲೆ ಮಾಡಿರುವ ಪ್ರಕರಣದಲ್ಲಿ ಆಕೆಯ ಪತಿ ಮತ್ತು ಮಾವನನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್‌ಅಮಟೆ ತಿಳಿಸಿದರು.ಆಲ್ದೂರು ಸಮೀಪದ ಹೊಸಳ್ಳಿ ಗ್ರಾಮದ ನೇತ್ರಾವತಿ ಸಕಲೇಶಪುರದ ನವೀನ್‌ನನ್ನು ಐದು ತಿಂಗಳ ಹಿಂದೆ ಧರ್ಮಸ್ಥಳದಲ್ಲಿ ಮದುವೆಯಾಗಿದ್ದರು. ಕೌಟುಂಬಿಕ ಕಲಹದ ಹಿನ್ನೆಲೆಯಿಂದಾಗಿ ನವೀನ್ ಸಕಲೇಶಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಇಬ್ಬರನ್ನು ಸಖಿ ಕೇಂದ್ರಕ್ಕೆ ಕರೆಸಿ ಕೌನ್ಸಿಲಿಂಗ್ ಕೂಡ ನಡೆಸಲಾಗಿತ್ತು. ಆದರೆ, ಇಬ್ಬರ ನಡುವೆ …
Read More »
bigtvnews22
October 15, 2025
Breaking News, Crime
ಇಲ್ಲಿನ ಪೊಲೀಸ್ ಠಾಣೆ ವ್ಯಾಪ್ತಿ ಸೇರಿ ವಿವಿಧಡೆ ನಡೆದ ಬೈಕ್ ಕಳ್ಳತನ ಪ್ರಕರಣಕ್ಕೆ ಸಂಭಂಧಿಸಿದಂತೆ, ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ತನಿಖೆ ಕೈಗೊಂಡ ಮುಳಗುಂದ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ, ಆತನಿಂದ ₹ 3 ಲಕ್ಷ ಮೌಲ್ಯದ 6 ಬೈಕ್‍ಗಳನ್ನು ವಶಕ್ಕೆ ಪಡೆದಿದ್ದಾರೆ.ಮುಳಗುಂದದಲ್ಲಿ 1, ಗದಗ ಗ್ರಾಮೀಣ ವ್ಯಾಪ್ತಿಯಲ್ಲಿ 3, ಹಾನಗಲ್ ಠಾಣೆ ವ್ಯಾಪ್ತಿಯಲ್ಲಿ 1, ಮುಂಡರಗಿ ವ್ಯಾಪ್ತಿಯಲ್ಲಿ 1 ಒಟ್ಟು 6 ಬೈಕ್ ಗಳ ಕಳ್ಳತನ ಮಾಡಿದ್ದ ಪ್ರಕರಣ ಭೇದಿಸಿದ …
Read More »
bigtvnews22
October 15, 2025
Breaking News, Crime
ತುಮಕೂರಿನಲ್ಲಿ ಜಮೀನು ವಿಚಾರಕ್ಕೆ ಸಂಬಂಧಪಟ್ಟಂತೆ ಭೀಕರವಾದ ಕೊಲೆ ನಡೆದಿದ್ದು, ಜಮೀನು ವಿಚಾರವಾಗಿ ಸಹೋದರರ ನಡುವೆ ಗಲಾಟೆಯಾಗಿದೆ. ಮಚ್ಚು ಹಿಡಿದು ಹೊಡೆದಾಡುವ ದೃಶ್ಯ ಇದೀಗ ವೈರಲ್ ಆಗಿದೆ. ಹೊಡೆದಾಟದಲ್ಲಿ ಶ್ರೀನಿವಾಸ್ ಎನ್ನುವ ವ್ಯಕ್ತಿಯ ಕೊಲೆಯಾಗಿದ್ದು ಗಲಾಟೆ ಸಂಬಂಧಪಟ್ಟಂತೆ ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.ಕೊಲೆ ನಡೆಯುವ ಒಂದು ತಿಂಗಳ ಹಿಂದೆ ಕೂಡ ಒಂದು ಗಲಾಟೆ ನಡೆದಿದೆ. ಕೊಲೆಯಾದ ಶ್ರೀನಿವಾಸ್ ಮತ್ತು ಆತನ ಸಹೋದರ ಕೃಷ್ಣಪ್ಪನ ಮಗ L. ಪ್ರಮೋದ್ ನಡುವೆ ಗಲಾಟೆ …
Read More »
bigtvnews22
October 15, 2025
Breaking News
ಬಿಜೆಪಿ ಶಾಸಕರೊಬ್ಬರಿಗೆ ಮಹಿಳೆಯ ಸೋಗಿನಲ್ಲಿ ಯುವಕನೊಬ್ಬ ಲೈಂಗಿಕ ಕಿರುಕುಳ ಯತ್ನ ನಡೆಸಿರುವ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.ಮಹಾರಾಷ್ಟ್ರದ ಬಿಜೆಪಿ ಶಾಸಕ ಶಿವಾಜಿ ಪಾಟೀಲ್ ಮಹಿಳೆಯೊಬ್ಬರು ತನಗೆ ಅಶ್ಲೀಲ ಮೆಸೇಜ್ ಗಳನ್ನು ಕಳುಹಿಸಿ ವಿಡಿಯೋ ಲೀಕ್ ಮಾಡುವುದಾಗಿ ಬೆದರಿಕೆಯೊಡ್ಡಿ, ಹಣಕ್ಕೆ ಬೇಡಿಕೆ ಇಟ್ಟಿದ್ದಾಗಿ ಪೊಲೀಸರಿಗೆ ದೂರು ನೀಡಿದ್ದರು.ಆರೋಪಿ ಮಹಿಳೆಯಲ್ಲ, ಓರ್ವ ನಿರುದ್ಯೋಗಿ ಯುವಕ ಎಂಬುದು ತನಿಖೆಯಲ್ಲಿ ಬಯಲಾಗಿದೆ. ಶಾಸಕರಿಗೆ ಮಹಿಳೆಯ ಹೆಸರಲ್ಲಿ ಅಶ್ಲೀಲವಾಗಿ ಚಾಟ್ ಮಾಡಿ ಬ್ಲ್ಯಾಕ್ ಮೇಲ್ ಮಾಡಿ ಹಣಕ್ಕೆ …
Read More »