Breaking News

Breaking News

ಚಿನ್ನದ ಆಸೆಗಾಗಿ ಮಾವನ ಮಗಳ ಹತ್ಯೆ!

ಚಿನ್ನದ ಮಾಂಗಲ್ಯ ಸರದ ಆಸೆಗಾಗಿ ಮಾವನ ಮಗಳನ್ನೇ ಕೊಲೆ ಮಾಡಿ, ಹೃದಯಾಘಾತ ಎಂದು ಕಥೆ ಹೇಳಿ, ಸತ್ಯ ಗೊತ್ತಾದಂತೆ, ನಾನೂ ಆತ್ಮಹತ್ಯೆಗೆ ಶರಣಾದ ಘಟನೆ ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಡಿಗ್ಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ.ಪೊಲೀಸ್ ತನಿಖೆ ಚುರುಕುಗೊಳ್ಳತ್ತಿದ್ದಂತೆ ಭಯಪಟ್ಕೊಂಡ ಶಿವಮೂರ್ತಿ ಕೊಲೆ ಮಾಡಿದ ಒಂದು ವಾರದಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮನೆಯಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Read More »

ಚಿನ್ನದ ಉದ್ಯಮಿಯನ್ನು ಸುಲಿಗೆ ಮಾಡಿದ ಬೆಂಗಳೂರು ಪೊಲೀಸ್‌!

ಕೋರಮಂಗಲ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್‌ ಲೋಯಿ ರಾಮರೆಡ್ಡಿ, ಹಲಸೂರು ಗೇಟ್‌ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್‌ ಭಜಂತ್ರಿ ಆರೋಪಿಗಳಾಗಿರುವ ಇನ್ಸ್‌ಪೆಕ್ಟರ್‌ ಗಳಾಗಿದ್ದಾರೆ.ಚಿನ್ನದ ವ್ಯಾಪಾರ ಮಾಡುತ್ತಿದ್ದ ಉದ್ಯಮಿಯೊಬ್ಬರನ್ನು ಇವರು ಬೆದರಿಸಿ 10 ಲಕ್ಷ ರೂ. ಸುಲಿಗೆ ಮಾಡಿದ್ದರು. ಇದರಿಂದ ನೊಂದ ಉದ್ಯಮಿ ಪೊಲೀಸ್‌ ಆಯುಕ್ತರ ಬಳಿ ದೂರು ನೀಡಿದ್ದ. ಅಲ್ಲದೇ ತನ್ನನ್ನು ಸುಲಿಗೆ ಮಾಡುತ್ತಿರುವ ಬಗ್ಗೆ ಸಿಸಿಟಿವಿ ಸಾಕ್ಷ್ಯಾಧಾರಗಳನ್ನೂ ಸಹ ಒದಗಿಸಿದ್ದ. ಆರೋಪಗಳು ಪ್ರಥಮ ಮಾಹಿತಿಯಲ್ಲೇ ಧೃಡಪಟ್ಟ ಕಾರಣ ಇವರನ್ನು ಕರ್ತವ್ಯದಿಂದ ಅಮಾನತುಗೊಳಿಸಿ …

Read More »

ಪ್ರೇಯಸಿಯ ಶೀಲದ ಬಗ್ಗೆ ಶಂಕೆ – ಒಂಬತ್ತು ಬಾರಿ ಇರಿದು ಕೊಂದ ಪಾಗಲ್‌ ಪ್ರೇಮಿ!

ತುಮಕೂರು ಜಿಲ್ಲೆಯ ಶಿರಾ ಮೂಲದ ರೇಖಾ ಎಂಬ ಮಹಿಳೆಯನ್ನು ಆರೋಪಿ ಲೋಕೇಶ್ ಕೊಲೆ ಮಾಡಿದ್ದಾನೆ. ಕೌಟುಂಬಿಕ ಕಲಹದ ಹಿನ್ನೆಲೆ ಗಂಡನನ್ನು ಬಿಟ್ಟು ಎರಡು ಮಕ್ಕಳ ಜೊತೆಗೆ ಬೆಂಗಳೂರಿನಲ್ಲಿ ರೇಖಾ ವಾಸವಾಗಿದ್ದರು. ಖಾಸಗಿ ಕಂಪನಿಯಲ್ಲಿ ರೇಖಾ ಕೆಲಸ ಮಾಡುತ್ತಿದ್ದರು.ಸೋಮವಾರ ಸುಂಕದಕಟ್ಟೆ ಬಸ್ ನಿಲ್ದಾಣಕ್ಕೆ ಬರುವಂತೆ ಲೋಕೇಶ್ ರೇಖಾಗೆ ಸೂಚನೆ ನೀಡಿದ್ದನು. ಆಕೆ ತನ್ನ ಮಗಳ ಜೊತೆಗೆ ಬರುತ್ತಿದ್ದಂತೆ ಸಾರ್ವಜನಿಕರ ಮಧ್ಯದಲ್ಲಿಯೇ 9 ಬಾರಿ ಚಾಕು ಇರಿದು ಪರಾರಿಯಾಗಿದ್ದಾನೆ. ಚಿಕಿತ್ಸೆ ಫಲಕಾರಿಯಾಗದೆ ಮೃತಾಪಟ್ಟಿದ್ದಾರೆ. …

Read More »

ಮುಕಳೆಪ್ಪನದು ನಿಯಮ ಬಾಹಿರ ವಿವಾಹ ನೋಂದಣಿ, ಠಾಣೆ ಮೆಟ್ಟಲೇರಿದ ಪತ್ನಿ!

ಯೂಟ್ಯೂಬರ್ ಕ್ವಾಜಾ ಶಿರಹಟ್ಟಿ ಅಲಿಯಾಸ್ ಮುಕುಳೆಪ್ಪ ವಿವಾಹ ವಿವಾದ ಹೊಸ ತಿರುವು ಪಡೆದುಕೊಂಡಿದೆ. ದಿನಕ್ಕೊಂದು ಸ್ವರೂಪವನ್ನು ಪಡೆಯುತ್ತಿದೆ. ಇದೀಗ ಹಣ ಪಡೆದು ನಿಯಮ ಬಾಹಿರವಾಗಿ ಕ್ವಾಜಾ ಅಲಿಯಾಸ್ ಮುಕಳಪ್ಪ ಹಾಗೂ ಗಾಯತ್ರಿ ವಿವಾಹ ನೊಂದಣಿ ಮಾಡಿರುವ ಆರೋಪ ಹಿನ್ನೆಲೆಯಲ್ಲಿ ಮುಂಡಗೋಡ ಸಬ್ ರಿಜಿಸ್ಟರ್ ಕಚೇರಿಗೆ ಮುತ್ತಿಗೆ ಹಾಕಲಾಗಿದ್ದು, ಹಿಂದೂಪರ ಸಂಘಟನೆ ಹಾಗೂ ಯುವತಿಯ ತಾಯಿ ಶಿವಕ್ಕ ಸಬ್ ರಿಜಿಸ್ಟರ್ ಗೆ ತರಾಟೆ ತೆಗೆದುಕೊಂಡಿದ್ದಾರೆ.ಸಬ್‌ ರಿಜಿಸ್ಟ್ರಾರ್ ವಿರುದ್ಧ ಮುಂಡಗೋಡು ಠಾಣೆಯಲ್ಲಿ ಅಧಿಕೃತ …

Read More »

ಮದುವೆಯಾಗುವುದಾಗಿ ನಂಬಿಸಿ ಬಾಲಕಿಯ ಮೇಲೆ ನಿರಂತರ ಅತ್ಯಾಚಾರ – ಆರೋಪಿಗೆ 30 ವರ್ಷ ಜೈಲು!

ಬಾಲಕಿಗೆ ಮದ್ವೆ ಆಗುವೆ ಎಂದು ಹೇಳಿ ಅತ್ಯಾಚಾರವೆಸಗಿದ ಬೆಳಗಾವಿ ರಾಮದುರ್ಗ ತಾಲೂಕಿನ ಮುಳ್ಳೂರಿನ ಕರಿಯಪ್ಪ ವಿಠ್ಠಪ್ಪ ಅವೂಜಿ ಎಂಬ ಅಪರಾಧಿಗೆ ಪೋಕ್ಸೋ ನ್ಯಾಯಾಲಯ 30 ವರ್ಷ ಕಠಿಣ ಶಿಕ್ಷೆ ಹಾಗೂ 10 ಸಾವಿರ ರೂ ದಂಡ ವಿಧಿಸಿ ಸೋಮವಾರ ತೀರ್ಪು ಪ್ರಕಟಿಸಲಾಗಿದೆ.ಇನ್ನು ಜಿಲ್ಲಾ ಕಾನೂನು ಪ್ರಾಧಿಕಾರದಿಂದ ಸಂತ್ರಸ್ಥೆಗೆ 4 ಲಕ್ಷ ಪರಿಹಾರ ಪಡೆಯುವಂತೆ ಹಾಗೂ ಆ ಹಣವನ್ನು ರಾಷ್ಟ್ರೀಕೃತ ಬ್ಯಾಂಕ್‌ ನಲ್ಲಿ ಐದು ವರ್ಷಗಳವರೆಗೆ ಠೇವಣಿಯಾಗಿ ಇರಿಸುವಂತೆ ಆದೇಶ ನೀಡಲಾಗಿದೆ.

Read More »

ಸಾಕು ನಾಯಿ ಗೀರಿ ರೇಬಿಸ್ ರೋಗಕ್ಕೆ ತುತ್ತಾಗಿದ್ದ ಪೊಲೀಸ್ ಅಧಿಕಾರಿ ಸಾವು.!

ರೇಬೀಸ್ಗೆ ತುತ್ತಾಗಿದ್ದ ಪೊಲೀಸ್ ಇನ್ಸ್ಪೆಕ್ಟರ್ ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದ ಘಟನೆ ಗುಜರಾತ್ ನಲ್ಲಿ ನಡೆದಿದೆ. ಪೊಲೀಸ್ ಇನ್ಸ್ಪೆಕ್ಟರ್ ವನರಾಜ್ ಮಂಜರಿಯಾ ಅವರನ್ನು ಅಹಮದಾಬಾದ್ ನಗರ ಪೊಲೀಸ್ ನಿಯಂತ್ರಣ ಕೊಠಡಿಗೆ ನಿಯೋಜಿಸಲಾಗಿತ್ತು. ಘಟನೆಯ ನಂತರ ಮಂಜರಿಯಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಿಲ್ಲ , ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದ್ದಾರೆ.ಭಾರತದಲ್ಲಿ ರೇಬೀಸ್ ಸಂಬಂಧಿತ ಸಾವುಗಳಲ್ಲಿ ದಾಖಲೆಯ ಶೇಕಡಾ 75 ರಷ್ಟು ಇಳಿಕೆ ಕಂಡುಬಂದಿದ್ದರೂ, ಈ ವರ್ಷದ ಆರಂಭದಲ್ಲಿ ಲ್ಯಾನ್ಸೆಟ್ ಅಧ್ಯಯನವು ದೇಶಾದ್ಯಂತ ಪ್ರತಿ ವರ್ಷ ಕನಿಷ್ಠ 5,726 …

Read More »

ಐಷಾರಾಮಿ ಕಾರು ಕಳ್ಳಸಾಗಣೆ ಪ್ರಕರಣ ; ನಟ ‘ಪೃಥ್ವಿರಾಜ್’ ಮತ್ತು ‘ದುಲ್ಕರ್’ ಮನೆ ಮೇಲೆ ಕಸ್ಟಮ್ಸ್ ದಾಳಿ

ಭೂತಾನ್ ಮೂಲಕ ಐಷಾರಾಮಿ ವಾಹನ ಕಳ್ಳಸಾಗಣೆ ವಿರುದ್ಧ ದೇಶಾದ್ಯಂತ ನಡೆಯುತ್ತಿರುವ ಕ್ರಮದ ಭಾಗವಾಗಿ, ಕಸ್ಟಮ್ಸ್ ಅಧಿಕಾರಿಗಳು ಮಾಲಿವುಡ್‌’ನ ಪ್ರಮುಖ ನಟರಾದ ಪೃಥ್ವಿರಾಜ್ ಸುಕುಮಾರನ್ ಮತ್ತು ದುಲ್ಕರ್ ಸಲ್ಮಾನ್ ಅವರ ಕೊಚ್ಚಿಯ ನಿವಾಸಗಳ ಮೇಲೆ ದಾಳಿ ನಡೆಸುತ್ತಿದ್ದಾರೆ.ಪ್ರಸ್ತುತ ತೇವಾರದಲ್ಲಿರುವ ಪೃಥ್ವಿರಾಜ್ ಅವರ ಮನೆ ಮತ್ತು ಪಣಂಪಲ್ಲಿ ನಗರದಲ್ಲಿರುವ ದುಲ್ಕರ್ ಅವರ ನಿವಾಸದ ಮೇಲೆ ದಾಳಿಗಳು ನಡೆಯುತ್ತಿವೆ. ಅಧಿಕಾರಿಗಳು ಪೃಥ್ವಿರಾಜ್ ಅವರ ತಿರುವನಂತಪುರಂ ಮನೆಗೆ ಭೇಟಿ ನೀಡಿದರು, ಆದರೆ ಅಲ್ಲಿ ಯಾವುದೇ ಅನುಮಾನಾಸ್ಪದ …

Read More »

ದರ್ಶನ್​ಗೆ ಮತ್ತೆ ಸಿಗಲಿಲ್ಲ ಹಾಸಿಗೆ-ದಿಂಬು ಸೌಲಭ್ಯ!

ಬಳ್ಳಾರಿ ಜೈಲು ಶಿಫ್ಟ್ ಹಾಗೂ ಹಾಸಿಗೆ ದಿಂಬಿಗಾಗಿ ಸಲ್ಲಿಸಿದ್ದ ಅರ್ಜಿ ಸಂಬಂಧ ಇವತ್ತು 64ನೇ ಸಿಟಿ ಸಿವಿಲ್ ಕೋರ್ಟ್​ನಲ್ಲಿ ವಿಚಾರಣೆ ನಡೆಯಿತು. 25ನೇ ತಾರೀಖಿನಂದು ದರ್ಶನ್​ಗೆ ಹಾಸಿಗೆ ದಿಂಬು ನೀಡಬೇಕಾ ಬೇಡ್ವಾ ಎಂಬ ಆದೇಶ ಬರಲಿದೆ. ದರ್ಶನ್​ಗೆ, ಜೈಲು ಮ್ಯಾನುವಲ್ ಪ್ರಕಾರ ಸೌಲಭ್ಯ ನೀಡಲು ಕೋರ್ಟ್ ಆದೇಶ ನೀಡಿದ ಮೇಲೆಯೂ ಯಾವುದೇ ಸೌಲಭ್ಯ ಸಿಗುತ್ತಿಲ್ಲ ಎಂದು ನಟನ ಪರ ವಕೀಲರು ಹೇಳಿದ್ದರು. ಈ ಸಂಬಂಧವಾಗಿ ಮತ್ತೊಮ್ಮ ಎಸ್​ಪಿಪಿ ಹಾಗೂ ದರ್ಶನ್ …

Read More »

ಭಕ್ತರ ವೇಷದಲ್ಲಿ ಮಲೆ ಮಹದೇಶ್ವರ ಬೆಟ್ಟಕ್ಕೆ ಬಂದು ಶ್ರೀಗಂಧ ಕಳ್ಳತನ: ಓರ್ವ ಆರೋಪಿ ಅರೆಸ್ಟ್ .

ಭಕ್ತರ ವೇಷದಲ್ಲಿ ಮಲೆ ಮಹದೇಶ್ವರ ಬೆಟ್ಟಕ್ಕೆ ಬಂದು ಶ್ರೀಗಂಧ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಆರೋಪಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.ತಮಿಳುನಾಡು ಮೂಲದ ಸೆಡೆಯಾನ್ ಬಂಧಿತ ಆರೋಪಿ. ಮಲೆ ಮಹದೇಶ್ವರ ಬೆಟ್ಟದ ಆನೆತಲೆದಿಂಬ ಬಳಿ ಗಂಧದ ತುಂಡುಗಳನ್ನು ಸಾಗಿಸುತ್ತಿದ್ದ ವೇಳೆ ಆರೋಪಿಯನ್ನು ಬಂಧಿಸಲಾಗಿದೆ.

Read More »

ಪ್ರೀತಿಸಿ ಮದುವೆಯಾಗಿ ಬೀದಿಗೆ ಬಿದ್ದ ಪ್ರೇಮಿಗಳು; ಪ್ರೀತಿ ಸಂಕೇತವಾಗಿದ್ದ ತ್ರಿವಳಿ ಶಿಶು ತಾಯಿ ಗರ್ಭದಲ್ಲೇ ಸಾವು!

ಪ್ರೀತಿಸಿ ಮದುವೆಯಾಗಿದ್ದಕ್ಕಾಗಿ ಪೋಷಕರಿಂದ ನಿರ್ಲಕ್ಷ್ಯಕ್ಕೊಳಗಾದ ಜೋಡಿ ಬೀದಿಗೆ ಬಂದಿದ್ದರು. ಗಾರೆ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದ ಜೋಡಿಗೆ, ತಮ್ಮ ಪ್ರೀತಿಯ ಸಂಕೇತವಾಗಿದ್ದ ಗರ್ಭದಲ್ಲಿದ್ದ ತ್ರಿವಳಿ ಕಂದಮ್ಮಗಳಿಗೆ ಸಮರ್ಪಕ ತಪಾಸಣೆ ಹಾಗೂ ಚಿಕಿತ್ಸೆ ದೊರೆಯದೆ ತಾಯಿ ಗರ್ಭದಲ್ಲೇ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಆನೇಕಲ್ ತಾಲೂಕಿನ ಬನ್ನೇರುಘಟ್ಟ ಗೊಲ್ಲಹಳ್ಳಿಯಲ್ಲಿ ಬೆಳಕಿಗೆ ಬಂದಿದೆ.ಬಡತನ, ಅಜ್ಞಾನ ಮತ್ತು ವೈದ್ಯಕೀಯ ಸೇವೆಗಳ ನಿರ್ಲಕ್ಷ್ಯ ಈ ದುರಂತಕ್ಕೆ ಕಾರಣವಾಗಿದೆ.

Read More »