ಕೋರಮಂಗಲ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಲೋಯಿ ರಾಮರೆಡ್ಡಿ, ಹಲಸೂರು ಗೇಟ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಭಜಂತ್ರಿ ಆರೋಪಿಗಳಾಗಿರುವ ಇನ್ಸ್‌ಪೆಕ್ಟರ್ ಗಳಾಗಿದ್ದಾರೆ.ಚಿನ್ನದ ವ್ಯಾಪಾರ ಮಾಡುತ್ತಿದ್ದ ಉದ್ಯಮಿಯೊಬ್ಬರನ್ನು ಇವರು ಬೆದರಿಸಿ 10 ಲಕ್ಷ ರೂ. ಸುಲಿಗೆ ಮಾಡಿದ್ದರು. ಇದರಿಂದ ನೊಂದ ಉದ್ಯಮಿ ಪೊಲೀಸ್ ಆಯುಕ್ತರ ಬಳಿ ದೂರು ನೀಡಿದ್ದ. ಅಲ್ಲದೇ ತನ್ನನ್ನು ಸುಲಿಗೆ ಮಾಡುತ್ತಿರುವ ಬಗ್ಗೆ ಸಿಸಿಟಿವಿ ಸಾಕ್ಷ್ಯಾಧಾರಗಳನ್ನೂ ಸಹ ಒದಗಿಸಿದ್ದ. ಆರೋಪಗಳು ಪ್ರಥಮ ಮಾಹಿತಿಯಲ್ಲೇ ಧೃಡಪಟ್ಟ ಕಾರಣ ಇವರನ್ನು ಕರ್ತವ್ಯದಿಂದ ಅಮಾನತುಗೊಳಿಸಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಆದೇಶ ಹೊರಡಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

