Breaking News

Breaking News

ಬೆಂಗಳೂರು | ಯುವತಿಗೆ ಚಾಕು ಇರಿತ : ಆರೋಪಿಯ ಬಂಧನ.

ಲೈಂಗಿಕವಾಗಿ ಸಹಕರಿಸುವಂತೆ ಒತ್ತಾಯಿಸಿ ಪಶ್ಚಿಮ ಬಂಗಾಳ ಮೂಲದ 24 ವರ್ಷದ ಯುವತಿಗೆ ಚಾಕು ಇರಿದಿದ್ದ ಪ್ರಕರಣದಡಿ ಆರೋಪಿಯನ್ನು ಇಲ್ಲಿನ ವೈಟ್‍ಫೀಲ್ಡ್ ಠಾಣೆ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ. ಅನಂತರ ತನ್ನ ಸ್ನೇಹಿತೆಗೆ ಕರೆ ಮಾಡಿದ್ದ ಯುವತಿ, ಆಕೆಯ ನೆರವಿನೊಂದಿಗೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಳು. ಆಸ್ಪತ್ರೆಯಿಂದ ಬಂದ ವರದಿ ಆಧರಿಸಿ ವೈಟ್‍ಫೀಲ್ಡ್ ಠಾಣೆ ಪೊಲೀಸರು ಯುವತಿಯಿಂದ ದೂರು ಪಡೆದು ಪ್ರಕರಣ ದಾಖಲಿಸಿಕೊಂಡಿದ್ದರು.ಆಂಧ್ರಪ್ರದೇಶ ಮೂಲದ ಬಾಬು ಎಂಬಾತ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.

Read More »

ತಾಯಿಯಂತೆ ಸಾಕಿ ಸಲಹಿದಾಕೆ ಮೇಲೆಯೇ ಅತ್ಯಾಚಾರ ಎಸಗಿ ಕೊಂದ 17 ವರ್ಷದ ಹುಡುಗ.

ಸೆಪ್ಟೆಂಬರ್ 15ರಂದು ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಜಾವಗಲ್ ಪೊಲೀಸ್ ಠಾಣೆ ವ್ಯಾಪ್ತಿಯ ಬಾಳೆತೋಟದಲ್ಲಿ ಮಹಿಳೆಯೊಬ್ಬಳ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಹಸುಗೂಸಿನಲ್ಲೇ ಅಪ್ಪ ಅಮ್ಮನ ಕಳೆದುಕೊಂಡವನಿಗೆ ತಾಯಿಯಂತೆ ಪ್ರೀತಿ ತೋರಿ ಅಕ್ಕೆರೆಯಿಂದ ಆರೈಕೆ ಮಾಡಿದಾಕೆಯ ಮೇಲೆಯೇ 17ರ ಅಪ್ರಾಪ್ತ ಬಾಲಕ ಅತ್ಯಾಚಾರ ಎಸಗಿ ಬಳಿಕ ಹತ್ಯೆ ಮಾಡಿರುವುದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ.ಮೈ ಮೇಲೆ ಗಾಯದ ಗುರುತು ಇದ್ದಿದ್ದರಿಂದ ಸಹಜವಾಗಿಯೇ ಅನುಮಾನ ಮೂಡಿದ್ದು ಜಾವಗಲ್ ಪೊಲೀಸರು ಅನುಮಾನಾಸ್ಪದ …

Read More »

ಬೆಂಗಳೂರು | ಪಕ್ಕದ ಬಟ್ಟೆ ಅಂಗಡಿ ಮಾಲೀಕನ ಕೊಲೆಗೆ ಸುಪಾರಿ: ಆರೋಪಿ ಸೆರೆ.

ವ್ಯಾಪಾರದ ವಿಚಾರಕ್ಕೆ ಪಕ್ಕದ ಬಟ್ಟೆ ಅಂಗಡಿ ಮಾಲೀಕನ ಕೊಲೆಗೆ ಸುಪಾರಿ ನೀಡಿದ್ದ ಟೆಕ್ಸ್‌ಟೈಲ್ಸ್‌ ಮಳಿಗೆ ಮಾಲೀಕನನ್ನು ಬಾಗಲಗುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.ಆರೋಪಿ ತನ್ನ ಟೆಕ್ಸ್‌ಟೈಲ್ಸ್‌ ಪಕ್ಕದ ಬಟ್ಟೆ ಅಂಗಡಿ ಮಾಲೀಕ ನೇಮರಾಮ್(42) ಅವರ ಕೊಲೆಗೆ ₹5 ಲಕ್ಷಕ್ಕೆ ಸುಪಾರಿ ನೀಡಿದ್ದ.ಮುದ್ದಣ್ಣ ಲೇಔಟ್ ನಿವಾಸಿ ವೇನರಾಮ್(43) ಬಂಧಿತ.ಸುಪಾರಿ ಪಡೆದ ರಾಜಸ್ಥಾನ ಮೂಲದ ವಿನೋದ್ ಜಾಟ್ ಎಂಬಾತನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.

Read More »

7 ತಿಂಗಳಿಂದ ತಲೆಮರೆಸಿಕೊಂಡಿದ್ದ ಗರುಡ ಗ್ಯಾಂಗ್‌ನ ಸದಸ್ಯನ ಸೆರೆ.

ಕಳೆದ ಏಳು ತಿಂಗಳಿನಿಂದ ಉಡುಪಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಗರುಡ ಗ್ಯಾಂಗ್‌ನ ಸದಸ್ಯನೋರ್ವನನ್ನು ಕಾಪು ಪೊಲೀಸರು ಚಿಕ್ಕಮಗಳೂರಿನಲ್ಲಿ ಬಂಧಿಸಿದ್ದಾರೆ.ಕುಂದಾಪುರ ಮುಸ್ಲಿಂ ಕೇರಿ ನಿವಾಸಿ ಮೊಹಮ್ಮದ್‌ ಆಸೀಫ್ (35) ಬಂಧಿತ ವ್ಯಕ್ತಿ.ಆರೋಪಿಯ ವಿರುದ್ಧ ಕಾಪು ಠಾಣೆ ಮಾತ್ರವಲ್ಲದೇ, ಗಂಗೊಳ್ಳಿ ಠಾಣೆಯಲ್ಲಿ 4, ಬೈಂದೂರು ಠಾಣೆಯಲ್ಲಿ 2 ಹಾಗೂ ಮಂಗಳೂರಿನ ಕಂಕನಾಡಿ ಠಾಣೆಯಲ್ಲಿ 2 ಮತ್ತು ಉಪ್ಪಿನಂಗಡಿ ಠಾಣೆಯಲ್ಲಿ 2 ಪ್ರಕರಣಗಳು ದಾಖಲಾಗಿದ್ದವು.

Read More »

ಬೆಂಗಳೂರಲ್ಲಿ ರೌಡಿಶೀಟರ್ ಗಳ ಮನೆ ಮೇಲೆ ದಾಳಿ: ಇಬ್ಬರು ವಶಕ್ಕೆ.

ಬೆಂಗಳೂರಿನಲ್ಲಿ ರೌಡಿಶೀಟರ್ ಗಳ ಮನೆಗಳ ಮೇಲೆ ದಾಳಿ ನಡೆಸಲಾಗಿದೆ. ಬೆಂಗಳೂರು ಪೂರ್ವ ವಿಭಾಗದ ಪೊಲೀಸರು ದಾಳಿ ನಡೆಸಿದ್ದಾರೆ.ಎಸಿಪಿ ರಂಗಪ್ಪ ನೇತೃತ್ವದ ತಂಡದಿಂದ ದಾಳಿ ನಡೆಸಲಾಗಿದೆ. ಬೆಂಗಳೂರಿನ ಭಾರತೀ ನಗರ, ಹಲಸೂರು, ಶಿವಾಜಿನಗರ, ಹೆಣ್ಣೂರು, ಬಾಣಸವಾಡಿ, ರಾಮಮೂರ್ತಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಳಿ ಮಾಡಲಾಗಿದೆ.ಡಿಸಿಪಿ ದೇವರಾಜ್ ನಿರ್ದೇಶನದಲ್ಲಿ ದಾಳಿ ನಡೆಸಲಾಗಿದ್ದು, ಹಲಸೂರು ರೌಡಿಶೀಟರ್ ಅಪೋಯ್, ಪ್ರಭು ಅವರನ್ನು ವಶಕ್ಕೆ ಪಡೆಯಲಾಗಿದೆ.

Read More »

ಕರ್ತವ್ಯ ಲೋಪ, ಭ್ರಷ್ಟಾಚಾರ, ಲೈಂಗಿಕ ಕಿರುಕುಳ ಆರೋಪ : ಬೇಲೂರು ಬಿಇಒ ಸಸ್ಪೆಂಡ್.

ಕರ್ತವ್ಯ ಲೋಪ ಆರೋಪ ಹಿನ್ನೆಲೆಯಲ್ಲಿ ಬೇಲೂರು ಬಿಇಒ ರಾಜೇಗೌಡನನ್ನು ಅಮಾನತುಗೊಳಿಸಲಾಗಿದೆ. ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿ ಮಲ್ಲಿಕಾರ್ಜುನ ರಾಮಚಂದ್ರಪ್ಪ ಈ ಕುರಿತು ಆದೇಶ ಹೊರಡಿಸಿದ್ದಾರೆ. ಹಾಸನ ಜಿಲ್ಲೆಯ ಡಿಡಿಪಿಐ ವರದಿ ಆಧರಿಸಿ ಬಿಇಒ ರಾಜೇಗೌಡನನ್ನು ಅಮಾನತು ಗೊಳಿಸಲಾಗಿದೆ.ಇತ್ತೀಚಿಗೆ ಶಾಸಕ ಎಚ್ ಕೆ ಸುರೇಶ್ ಜೊತೆಗೆ ರಾಜೇಗೌಡ ವಾಗ್ವಾದ ನಡೆಸಿದ್ದ ಇದೀಗ ಬೇಲೂರು ಬಿಇಓ ರಾಜೇಗೌಡನನ್ನ ಅಮಾನತುಗೊಳಿಸಲಾಗಿದೆ.

Read More »

ಮಲಗಿದ್ದ ಗಂಡನಿಗೆ ಚಾಕುವಿನಿಂದ ಇರಿದು ಕೊಂದ ಹೆಂಡತಿ!

ಹೈದರಾಬಾದ್​ನ ಕೋಕಾಪೇಟ್‌ನಲ್ಲಿ ಮಹಿಳೆಯೊಬ್ಬಳು ತನ್ನ ಪತಿಯನ್ನು ಕೊಂದ ಭೀಕರ ಘಟನೆ ಜಗಳದ ಸಮಯದಲ್ಲಿ ಪತ್ನಿ ತನ್ನ ಪತಿಗೆ ಚಾಕುವಿನಿಂದ ಇರಿದಿದ್ದಾಳೆ ಎಂದು ಹೇಳಲಾಗಿದೆ. ಇದರಿಂದ ಆತ ಕಿರುಚಿಕೊಂಡಿದ್ದಾರೆ. ಆ ಕಿರುಚಾಟ ಕೇಳಿ, ನೆರೆಹೊರೆಯವರು ಸ್ಥಳಕ್ಕೆ ಧಾವಿಸಿ ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು.ವೈದ್ಯರು ಚಿಕಿತ್ಸೆ ನೀಡಿದರೂ ಚಿಕಿತ್ಸೆ ಪಡೆಯುತ್ತಿದ್ದಾಗ ಅವರು ಸಾವನ್ನಪ್ಪಿದ್ದಾರೆ. ದಂಪತಿಗಳು ಅಸ್ಸಾಂ ಮೂಲದವರು ಎಂದು ಪೊಲೀಸರು ಗುರುತಿಸಿದ್ದಾರೆ. ತನಿಖೆ ನಡೆಯುತ್ತಿದೆ ನಡೆದಿದೆ. ಆ ದಂಪತಿಗಳ ನಡುವೆ …

Read More »

ಅನೈತಿಕ ಸಂಬಂಧಕ್ಕಾಗಿ ಯುವಕನ ಕೊಲೆ: ಇಬ್ಬರ ಬಂಧನ.

ಹುಕ್ಕೇರಿ ತಾಲ್ಲೂಕಿನ ಶಹಾಬಂದರ ಗ್ರಾಮದಲ್ಲಿ ಬುಧವಾರ ರಾತ್ರಿ ಯುವಕನ ಕೊಲೆ ಮಾಡಿದ ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ. ಅನೈತಿಕ ಸಂಬಂಧ ಶಂಕೆಯಿಂದ ಈ ಕೊಲೆ ನಡೆದಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ.ಶಹಾಬಂದರದ ಬಸವರಾಜ ಬುಕನಟ್ಟಿ, ವಿಠ್ಠಲ ಬುಕನಟ್ಟಿ ಬಂಧಿತರು.ಮದ್ಯ ಸೇವಿಸಿದ ಅಮಲಿನಲ್ಲಿ ಸಿಕ್ಕಿಬಿದ್ದ ಬಸವರಾಜ ಬಳಿ ಇದ್ದ ಬ್ಯಾಗ್‌ನಲ್ಲಿ ಎರಡು ಹರಿತವಾದ ಆಯುಧ ಸಿಕ್ಕಿವೆ’ ಎಂದು ಹೇಳಿದರು.

Read More »

ಗದಗ ಭೀಕರ ಅಪಘಾತಕ್ಕೆ ಇಬ್ಬರು ಪೊಲೀಸ್ ಸಿಬ್ಬಂದಿ ಬಲಿ, ಕ್ಷಣಾರ್ಧದಲ್ಲಿ ನಡೆದ ದುರಂತ! ನಿರ್ವಾಹಕ ಬಿಚ್ಚಿಟ್ಟ ಭೀಕರ ಘಟನೆ.

ಗದಗ ತಾಲೂಕಿನ ಹರ್ಲಾಪೂರ ಗ್ರಾಮದ ಬಳಿ ಸಂಭವಿಸಿದ ರಾಷ್ಟ್ರೀಯ ಹೆದ್ದಾರಿ 67ರಲ್ಲಿ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿ ಸೇರಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದರು. ಕೊಪ್ಪಳದಿಂದ ಗದಗ ಕಡೆಗೆ ಬರುತ್ತಿದ್ದ ಕಾರು ಏಕಾಏಕಿ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ.ಮೃತರನ್ನು ಪೊಲೀಸ್ ಸಿಬ್ಬಂದಿಗಳಾದ ಅರ್ಜುನ ನೆಲ್ಲೂರ (29) ಮತ್ತು ವೀರೇಶ ಉಪ್ಪಾರ (31) ಹಾಗೂ ಸಹ ಪ್ರಯಾಣಿಕ ರವಿ ನೆಲ್ಲೂರ (43) ಎಂದು ಗುರುತಿಸಲಾಗಿದೆ. ಘಟನೆಯ ದಿನ ವೀರೇಶ …

Read More »

ಅಂಕೋಲಾ | ಬಸ್-ಟ್ಯಾಂಕರ್ ಡಿಕ್ಕಿ: ಇಬ್ಬರು ಸಾವು, 9 ಮಂದಿಗೆ ಗಂಭೀರ ಗಾಯ.

ರಾಷ್ಟ್ರೀಯ ಹೆದ್ದಾರಿ-63ರಲ್ಲಿ ತಾಲ್ಲೂಕಿನ ಕಂಚಿನಬಾಗಿಲು ಬಳಿ ಸಾರಿಗೆ ಸಂಸ್ಥೆಯ ಬಸ್ ಹಾಗೂ ಟ್ಯಾಂಕರ್ ನಡುವೆ ಗುರುವಾರ ಮುಖಾಮುಖಿ ಡಿಕ್ಕಿ ಸಂಭವಿಸಿ ಇಬ್ಬರು ಮೃತಪಟ್ಟಿದ್ದಾರೆ.ಮಕ್ಕಿಗದ್ದೆಯಿಂದ ಅಂಕೋಲಾ ಕಡೆ ತೆರಳುತ್ತಿದ್ದ ಪ್ರಯಾಣಿಕರಿದ್ದ ಬಸ್‌ ಹಿಂದಿಕ್ಕುವ ಭರದಲ್ಲಿ ಟ್ಯಾಂಕರ್ ಬಸ್‌ಗೆ ಬಡಿದಿದ್ದು, ಟ್ಯಾಂಕರ್ ಚಾಲಕ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ಮೂಲದ ಶರಣಪ್ಪ ಕೋಳೂರು (30), ಬಸ್ಸಿನಲ್ಲಿದ್ದ ಕೇಣಿ ಗ್ರಾಮದ ಭಾಸ್ಕರ ಪಾಂಡುರಂಗ ಗಾಂವ್ಕರ್ (50) ಮೃತಪಟ್ಟಿದ್ದಾರೆ.

Read More »