ಸೆಪ್ಟೆಂಬರ್ 15ರಂದು ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಜಾವಗಲ್ ಪೊಲೀಸ್ ಠಾಣೆ ವ್ಯಾಪ್ತಿಯ ಬಾಳೆತೋಟದಲ್ಲಿ ಮಹಿಳೆಯೊಬ್ಬಳ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಹಸುಗೂಸಿನಲ್ಲೇ ಅಪ್ಪ ಅಮ್ಮನ ಕಳೆದುಕೊಂಡವನಿಗೆ ತಾಯಿಯಂತೆ ಪ್ರೀತಿ ತೋರಿ ಅಕ್ಕೆರೆಯಿಂದ ಆರೈಕೆ ಮಾಡಿದಾಕೆಯ ಮೇಲೆಯೇ 17ರ ಅಪ್ರಾಪ್ತ ಬಾಲಕ ಅತ್ಯಾಚಾರ ಎಸಗಿ ಬಳಿಕ ಹತ್ಯೆ ಮಾಡಿರುವುದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ.ಮೈ ಮೇಲೆ ಗಾಯದ ಗುರುತು ಇದ್ದಿದ್ದರಿಂದ ಸಹಜವಾಗಿಯೇ ಅನುಮಾನ ಮೂಡಿದ್ದು ಜಾವಗಲ್ ಪೊಲೀಸರು ಅನುಮಾನಾಸ್ಪದ ಸಾವು ಕೇಸ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

