Breaking News

ಕಲಾಭಾವನದಿಂದ ಡಿ ಸಿ ಕಚೇರಿಯವರೆಗೆ ಕಾಲ್ನನಡಿಗೆಯಮೂಲಕ ಪ್ರತಿಭಟನೆ…

ಧಾರವಾಡ: ಇಂದಿನ ಬರ ಪರಿಸ್ಥಿತಿಯಲ್ಲಿ ಜನರ ಜೀವನ ನಡೆಸುವುದು ದುಸ್ತರವಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ, ಪಡಿತರದಲ್ಲಿ ಅಕ್ಕಿ ಕಡಿತ, ಶಿಕ್ಷಣ ಆರೋಗ್ಯದ, ದುಬಾರಿ ಆಗಿರುವುದರಿಂದ ಜನರನ್ನು ಬೀದಿಗೆ ಬರುವಂತೆ ಮಾಡಿದೆ. ಇಂತಹ ಕೆಟ್ಟ ಪರಿಸ್ಥಿತಿಯಲ್ಲಿ ಸರ್ಕಾರ ಜನರ ಸಮಸ್ಯೆಗೆ ಸ್ಪಂದಿಸಿ ಸೂಕ್ತ ಪರಿಹಾರ ಒದಗಿಸಿ, ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸುವ ಬದಲು ಜಿಲ್ಲಾ ಆಡಳಿತವು ಬಡ ಜನರ ಆರೋಗ್ಯ ಕಾಪಾಡಲು ಇರುವ ಏಕೈಕ ಸರ್ಕಾರಿ ಆಸ್ಪತ್ರೆಯನ್ನು ಖಾಸಗಿಕರಣದತ್ತ ಕೊಂಡೊಯ್ಯುತ್ತಿರುವುದು ದುರಂತ.

ಇತ್ತೀಚಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ನೋಂದಣಿ ಶುಲ್ಕ, ಬೆಡ್ ಶುಲ್ಕ ಎಕ್ಸ್ ರೇ ಇನ್ನಿತರ ಪರೀಕ್ಷೆಗಳನ್ನು ಮಾಡಲು ಶೇಕಡ 50 ರಷ್ಟು ಶುಲ್ಕವನ್ನು ಹೆಚ್ಚಿನ ನಿಗದಿಪಡಿಸಲಾಗಿದೆ.
ರೇಷನ್ ಕಾರ್ಡ್ ಇದ್ದವರಿಗೆ ಉಚಿತವಾಗಿ ಪರೀಕ್ಷೆ ಮಾಡಲಾಗುತ್ತಿತ್ತು. ಇವಾಗ ಆಸ್ಪತ್ರೆಯಲ್ಲಿ ಶುಲ್ಕವನ್ನು ಭರಿಸುವುದು ಅನಿವಾರ್ಯವಾಗಿದೆ. ಶುಲ್ಕ ಪಾವತಿ ಮಾಡದಿದ್ದಲ್ಲಿ ಯಾವುದೇ ಪರೀಕ್ಷೆ ಮಾಡಲಾಗುವುದಿಲ್ಲ. ಖಾಸಗಿ ಆಸ್ಪತ್ರೆಯ ರೀತಿಯಲ್ಲಿ ಪ್ರತಿಯೊಂದುಕ್ಕೂ ಶುಲ್ಕವನ್ನು ನಿಗದಿಪಡಿಸಲಾಗಿದೆ. ಜಿಲ್ಲಾ ಆಡಳಿತದ ಈ ನಡೆಯು ಖಾಸಗಿಕರಣದತ್ತ ಕೊಂಡೊಯ್ಯುತ್ತಿರುವುದು ಜನವಿರೋಧಿ ಧೋರಣೆಯಾಗಿದೆ ಎಂದು ಸರ್ಕಾರ ನಡೆಯನ್ನು ಖಂಡಿಸಿ ಪ್ರತಿಭಟನೆ ಮಾಡಿದರು.

Share News

About BigTv News

Check Also

ಧಾರವಾಡದಲ್ಲಿ ದಾಳಿ ದಂಧೆ!ಯುವ ಕಾಂಗ್ರೆಸ್ ಮುಖಂಡ ಪೈರೋಜ್‌ಖಾನ ಪಠಾಣ ಮನೆಗೆ ನುಗ್ಗಿ ಹತ್ಯೆ…

Big Breaking:ಮನೆಯೊಳಗೆ ನುಗ್ಗಿ ಯುವ ಕಾಂಗ್ರೆಸ್ ನಾಯಕರ ಕೊಲೆ – ಧಾರವಾಡದಲ್ಲಿ ಆತಂಕ ಧಾರವಾಡ: ನಗರದಲ್ಲಿ ಬೆಚ್ಚಿಬೀಳಿಸುವ ಬರ್ಬರ ಹತ್ಯೆ …

Leave a Reply

Your email address will not be published. Required fields are marked *