Breaking News

Breaking News

ರಸ್ತೆ ಬದಿ ತ್ಯಾಜ್ಯ ಎಸೆದವರ ಪತ್ತೆ ಹಚ್ಚಿ ದಂಡ ವಿಧಿಸಿದ ಒಳಮೊಗ್ರು ಗ್ರಾ.ಪಂ.!

ಪುತ್ತೂರು ತಾಲ್ಲೂಕಿನ ಒಳಮೊಗ್ರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆದು ಹೋದವರನ್ನು ಪತ್ತೆ ಹಚ್ಚಿರುವ ಪಂಚಾಯಿತಿಯು ಕಸ ಎಸದವರಿಗೆ ದಂಡ ವಿಧಿಸುವ ಜತೆಗೆ ಕಸವನ್ನು ಅವರಿಂದಲೇ ತೆರವು ಮಾಡಿಸಿದೆ.ತ್ಯಾಜ್ಯ ರಾಶಿಯ ಫೋಟೋವನ್ನು ಸ್ಥಳೀಯ ಸದಸ್ಯೆ ರೇಖಾ ಯತೀಶ್ ಬಿಜತ್ರೆ ಅವರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದರು. ತ್ಯಾಜ್ಯದಲ್ಲಿ ಹುಡುಕಾಡಿದ್ದ ವೇಳೆ ವಿದ್ಯುತ್ ಬಿಲ್ಲೊಂದು ಸಿಕ್ಕಿತ್ತು. ಆ ವಿದ್ಯುತ್ ಬಿಲ್ಲನ್ನು ಮೆಸ್ಕಾಂ ಎಂಜಿನಿಯರ್‌ಗೆ ಕಳುಹಿಸಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ತ್ರಿವೇಣಿ …

Read More »

ಹಾಸನ | ಚಿನ್ನಕ್ಕಾಗಿ ಮಹಿಳೆಯ ಕೊಲೆ: ಆತ್ಮಹತ್ಯೆ .

ಅರಸೀಕೆರೆ ತಾಲ್ಲೂಕಿನ ಎಸ್.ಡಿಗ್ಗೇನಹಳ್ಳಿ ಗ್ರಾಮದಲ್ಲಿ ಚಿನ್ನದ ಸರಕ್ಕಾಗಿ ಮಹಿಳೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ ಆರೋಪಿ, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ತೋಟದಿಂದ ಮಧ್ಯಾಹ್ನ ಮನೆಗೆ ವಾಪಸ್‌ ಬಂದು ನೋಡಿದಾಗ, ಅಡುಗೆ ಕೋಣೆಯಲ್ಲಿ ಪತ್ನಿಯ ಶವ ಬಿದ್ದಿತ್ತು. ಈ ಬಗ್ಗೆ ಆ.21ರಂದು ಪಾಲಾಕ್ಷ ಅವರು ಜಾವಗಲ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಶಕುಂತಲ ಕೊಲೆಯಾದ 4 ದಿವಸಗಳ ನಂತರ ಶಿವಮೂರ್ತಿಯೂ ಕೊಟ್ಟಿಗೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದರಿಂದ ಅನುಮಾನ ವ್ಯಕ್ತಪಡಿಸಿರುವ ಪಾಲಾಕ್ಷ ಸೆ.9ರಂದು …

Read More »

ಹಾಸನ :ದೇವಸ್ಥಾನದ ಆಭರಣ ಕಳವು

ಹೊಳೆನರಸೀಪುರ ತಾಲ್ಲೂಕಿನ ಜಕ್ಕವಳ್ಳಿ ಗ್ರಾಮದ ಗಂಗಮಾಳಮ್ಮ ಹಾಗೂ ಬೀರಲಿಂಗೇಶ್ವರ ದೇವಸ್ಥಾನದ ಬೀಗ ಮುರಿದು ₹1.01 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿದೆ. ದೇವಸ್ಥಾನ ಅರ್ಚಕ ಗಂಗಾನಾಯಕ ಸೆ.3ರಂದು ದೇವಸ್ಥಾನಕ್ಕೆ ಬೀಗ ಹಾಕಿಕೊಂಡು ಹೋಗಿದ್ದು, ಸೆ. 4ರಂದು ಬೆಳಿಗ್ಗೆ ಬಂದು ನೋಡಿದಾಗ, ಬೀರುವಿನಲ್ಲಿಟ್ಟಿದ್ದ ಹಿತ್ತಾಳೆ, ತಾಮ್ರ, ಚಿನ್ನ ಹಾಗೂ ಬೆಳ್ಳಿಯ ಆಭರಣಗಳು ಕಳವಾಗಿದ್ದವು. ಈ ಕುರಿತು ಹೊಳೇನರಸೀಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಅಪ್ರಾಪ್ತ ಬಾಲಕರಿಂದ 6 ವರ್ಷದ ಬಾಲಕಿ ಮೇಲೆ ಗ್ಯಾಂಗ್ ರೇಪ್.!

ಉತ್ತರ ಪ್ರದೇಶದ ಕಾನ್ಪುರದಲ್ಲಿ ಇಬ್ಬರು ಅಪ್ರಾಪ್ತ ಮಕ್ಕಳು 6 ವರ್ಷದ ಮುಗ್ಧ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಮುಗ್ಧ ಬಾಲಕಿ ಮನೆಯ ಹೊರಗೆ ಆಟವಾಡುತ್ತಿದ್ದಳು. ಆಕೆಗೆ 5 ರೂಪಾಯಿ ಆಮಿಷವೊಡ್ಡಿ ತಮ್ಮೊಂದಿಗೆ ಕರೆದುಕೊಂಡು ಹೋಗಿ ಮುಚ್ಚಿದ ಕೋಣೆಯಲ್ಲಿ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ.

Read More »

ಹಾವೇರಿ: ಪ್ರೀತಿ ನಿರಾಕರಿಸಿದ್ದಕ್ಕೆ ಬಾಲಕಿ ಮೇಲೆ ಹಲ್ಲೆ.

ಶಿಗ್ಗಾವಿ ತಾಲ್ಲೂಕಿನ ತಡಸ ಗ್ರಾಮದಲ್ಲಿ ಪ್ರೀತಿ ವಿಚಾರಕ್ಕೆ ಶಾಲಾ ಬಾಲಕಿಯೊಬ್ಬಳಿಗೆ ಜೀವ ಬೆದರಿಕೆಯೊಡ್ಡಿ ಹಲ್ಲೆ ಮಾಡಲಾಗಿದ್ದು, ಈ ಬಗ್ಗೆ ಪ್ರಕರಣ ದಾಖಲಾಗಿದೆ.ಕೃತ್ಯದ ಬಗ್ಗೆ ಬಾಲಕಿಯ ತಾಯಿ ದೂರು ನೀಡಿದ್ದಾರೆ. ಅದರನ್ವಯ ಆರೋಪಿ ಇಮಾಮಹುಸೇನ್ ಮಹಬೂಬಅಲಿ ಮಹಲ್ದಾರ (22) ಎಂಬಾತನನ್ನು ಬಂಧಿಸಲಾಗಿದೆ’ ಎಂದು ತಡಸ ಪೊಲೀಸರು ಹೇಳಿದ.ಬಾಲಕಿಯನ್ನು ಹಿಂದಿನಿಂದ ಹಿಡಿದು ಎಳೆದಾಡಿ ಕೆನ್ನೆ ಹಾಗೂ ಗದ್ದದ ಭಾಗದಲ್ಲಿ ಪರಚಿದ್ದ. ನಂತರ, ಸ್ಥಳದಿಂದ ಪರಾರಿಯಾಗಿದ್ದ. ರಕ್ತ ಸೋರುತ್ತಿದ್ದರಿಂದ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ …

Read More »

ಮೈಸೂರು : ಮಹಡಿಯಿಂದ ತಳ್ಳಿ ಪ್ರಿಯತಮೆಯ ಕೊಲೆಗೆ ಯತ್ನಿಸಿದ ವಿವಾಹಿತ ವ್ಯಕ್ತಿ.

ಮದುವೆಯಾಗಿದ್ದರೂ ಸಹ ಬೇರೊಬ್ಬ ಯುವತಿಯೊಬ್ಬಳನ್ನು ಪ್ರೀತಿಸಿ ಕೈಕೊಟ್ಟು ಎರಡಂತಸ್ತಿನ ಮಹಡಿ ಮೇಲಿಂದ ಪ್ರಿಯತಮೆಯನ್ನು ತಳ್ಳಿ ಕೊಲೆಗೆ ಯತ್ನಿಸಿರುವ ಘಟನೆ ದಟ್ಟಗಳ್ಳಿ ಬಡಾವಣೆಯಲ್ಲಿ ನಡೆದಿದೆ.ಎರಡನೇ ಮಹಡಿಯಿಂದ ಯುವತಿಯನ್ನು ಕೆಳಕ್ಕೆ ತಳ್ಳಿದ್ದಾನೆ. ಮೇಲಿಂದ ಬಿದ್ದ ಯುವತಿ ಗಂಭೀರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತನ್ನನ್ನು ಕೊಲೆ ಮಾಡುವ ಉದ್ದೇಶದಿಂದ ಮಹಡಿ ಮೇಲಿಂದ ಕೆಳಗೆ ತಳ್ಳಿದ್ದಾರೆಂದು ಆರೋಪಿಸಿ ಯುವತಿ ಕುವೆಂಪುನಗರ ಪೊಲೀಸ್‌‍ ಠಾಣೆಗೆ ದೂರು ನೀಡಿದ್ದಾರೆ.

Read More »

ಚಾಲಕನ ನಿಯಂತ್ರಣ ತಪ್ಪಿ ಬೇಕರಿಗೆ ಡಿಕ್ಕಿ ಹೊಡೆದ ಲಾರಿ.

ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ರಸ್ತೆ ಬದಿಯಿದ್ದಂತಹ ಬೇಕರಿಗೆ ಡಿಕ್ಕಿ ಹೊಡೆದಿರುವಂತಹ ಘಟನೆ ಮಲ್ಲೇಶ್ವರಂನ ಲಿಂಕ್‌ ರಸ್ತೆಯಲ್ಲಿ ನಡೆದಿದೆ. ಬೆಳ್ಳಂಬೆಳಗ್ಗೆ 4.30 ರ ಸುಮಾರಿಗೆ ಈ ಘಟನೆ ನಡೆಸಿದ್ದು, ಚಾಲಕನ ನಿಯಂತ್ರಣ ತಪ್ಪಿ ಲಾರಿ ಫುಟ್‌ಪಾತ್‌ ಹತ್ತಿ ಕಾಂಡಿಮೆಂಟ್ ಕಟ್ಟಡಕ್ಕೆ ಡಿಕ್ಕಿ ಹೊಡೆದಿದೆ.ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಲಾರಿಯನ್ನು ತೆರವು ಮಾಡಿದ್ದಾರೆ. ಸದ್ಯ ಲಾರಿ ಚಾಲಕನ ಠಾಣೆಗೆ ಹಾಜರಾಗಿದ್ದು, ಘಟನೆಯ ಬಗ್ಗೆ ಸಂಪೂರ್ಣ ವಿವರಣೆ ನೀಡಿದ್ದಾನೆ ಎಂದು ಹೇಳಲಾಗುತ್ತಿದೆ. ಈ …

Read More »

ಸುಂಟಿಕೊಪ್ಪ; ಪೌರ ಕಾರ್ಮಿಕರ ಧರಣಿ.

ಸುಂಟಿಕೊಪ್ಪ ಗ್ರೇಡ್-1 ಗ್ರಾಮ ಪಂಚಾಯಿತಿಯ ಪೌರ ಕಾರ್ಮಿಕರು ತಮ್ಮ ಸೇವೆಯ ಅನುಮೋದನೆಗಾಗಿ ಹಾಗೂ ಕನಿಷ್ಠ ವೇತನಕ್ಕಾಗಿ ಆಗ್ರಹಿಸಿ ಬುಧವಾರ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ಸಾಂಕೇತಿಕವಾಗಿ ಧರಣಿ ನಡೆಸಿದರು.ಒಂದು ವೇಳೆ ಇದಕ್ಕೂ ಸಿಇಒ ನಿರ್ಲಕ್ಷ್ಯ ತೋರಿದ್ದಲ್ಲಿ ಮುಂದಿನ ದಿನಗಳಲ್ಲಿ ಅನಿರ್ದಿಷ್ಟಾವಧಿಯವರೆಗೆ ಎಲ್ಲ ಕೆಲಸ ಸ್ಥಗಿತಗೊಳಿಸಿ, ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಧರಣಿ ವೇಳೆ, ರಂಗಸ್ವಾಮಿ, ಗಾಯತ್ರಿ, ಮಣಿಕಂಠ, ಮುನಿಸ್ವಾಮಿ, ರಾಮಚಂದ್ರ, ವಿಶ್ವ, ರವಿ, ರಾಜ, ಮುರುಗೇಶ್, ರಮೇಶ, ಸಣ್ಣ …

Read More »

ಮಕ್ಕಳನ್ನು ಅಪಹರಿಸಿ ಭಿಕ್ಷಾಟನೆಗೆ ಕಳಿಸುತ್ತಿದ್ದವನಿಗೆ 28 ವರ್ಷ ಜೈಲು

ಸ್ಥಳೀಯರಾದ ಅಂಕುರ್ ಪಾಂಡೆ ಎನ್ನುವವರು ಮಿಶ್ರಾ, ಮಕ್ಕಳಿಗೆ ಹೊಡೆಯುತ್ತಿರುವುದನ್ನು ಮತ್ತು ಕೆಲ ವಸ್ತುಗಳನ್ನು ಮಾರಾಟ ಮಾಡುವಂತೆ ಬಲವಂತ ಮಾಡುತ್ತಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ವಿಷಯ ತಿಳಿದ ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿದಾಗ ಮಕ್ಕಳ ಮೇಲೆ ಹಲ್ಲೆಯಾಗಿರುವುದನ್ನು ಕಂಡು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ತನಿಖೆಯ ವೇಳೆ ಮಕ್ಕಳನ್ನು ಅಪಹರಣ ಮಾಡಿರುವುದನ್ನು ಮಿಶ್ರಾ ಒಪ್ಪಿಕೊಂಡಿದ್ದನು. 2023ರ ಆ.27ರಂದು ಮಿಶ್ರಾ ವಿರುದ್ಧ ಎಫ್‌ಐಆರ್‌ ದಾಖಲಾಗಿತ್ತು. ಪೊಲೀಸರು ತನಿಖೆ ನಡೆಸಿ ಚಾರ್ಜ್‌ಶೀಟ್‌ ಸಲ್ಲಿಸಿದ್ದು, ನ್ಯಾಯಾಲಯ …

Read More »

ಬೀದರ್ : ಅಪ್ರಾಪ್ತೆಯ ಅತ್ಯಾಚಾರ; ಆರೋಪಿ ಬಂಧನ.

ಮನೆಯಲ್ಲಿ ಆಟವಾಡುತಿದ್ದ 6 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಮಾಡಿದ ಘಟನೆ ಬಸವಕಲ್ಯಾಣ ತಾಲೂಕಿನಲ್ಲಿ ನಡೆದಿದ್ದು, ಮಂಗಳವಾರ ಪ್ರಕರಣ ದಾಖಲಾಗಿದೆ.ಘಟನೆಯಿಂದ ಆಘಾತಕ್ಕೆ ಒಳಗಾಗಿದ್ದ ಪಾಲಕರು ಸೆ.9 ರಂದು ದೂರು ನೀಡಿದ್ದು, ಮುಡಬಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

Read More »