ಹೊಳೆನರಸೀಪುರ ತಾಲ್ಲೂಕಿನ ಜಕ್ಕವಳ್ಳಿ ಗ್ರಾಮದ ಗಂಗಮಾಳಮ್ಮ ಹಾಗೂ ಬೀರಲಿಂಗೇಶ್ವರ ದೇವಸ್ಥಾನದ ಬೀಗ ಮುರಿದು ₹1.01 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿದೆ.
ದೇವಸ್ಥಾನ ಅರ್ಚಕ ಗಂಗಾನಾಯಕ ಸೆ.3ರಂದು ದೇವಸ್ಥಾನಕ್ಕೆ ಬೀಗ ಹಾಕಿಕೊಂಡು ಹೋಗಿದ್ದು, ಸೆ. 4ರಂದು ಬೆಳಿಗ್ಗೆ ಬಂದು ನೋಡಿದಾಗ, ಬೀರುವಿನಲ್ಲಿಟ್ಟಿದ್ದ ಹಿತ್ತಾಳೆ, ತಾಮ್ರ, ಚಿನ್ನ ಹಾಗೂ ಬೆಳ್ಳಿಯ ಆಭರಣಗಳು ಕಳವಾಗಿದ್ದವು. ಈ ಕುರಿತು ಹೊಳೇನರಸೀಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

