Breaking News

ರಸ್ತೆ ಬದಿ ತ್ಯಾಜ್ಯ ಎಸೆದವರ ಪತ್ತೆ ಹಚ್ಚಿ ದಂಡ ವಿಧಿಸಿದ ಒಳಮೊಗ್ರು ಗ್ರಾ.ಪಂ.!

ಪುತ್ತೂರು ತಾಲ್ಲೂಕಿನ ಒಳಮೊಗ್ರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆದು ಹೋದವರನ್ನು ಪತ್ತೆ ಹಚ್ಚಿರುವ ಪಂಚಾಯಿತಿಯು ಕಸ ಎಸದವರಿಗೆ ದಂಡ ವಿಧಿಸುವ ಜತೆಗೆ ಕಸವನ್ನು ಅವರಿಂದಲೇ ತೆರವು ಮಾಡಿಸಿದೆ.ತ್ಯಾಜ್ಯ ರಾಶಿಯ ಫೋಟೋವನ್ನು ಸ್ಥಳೀಯ ಸದಸ್ಯೆ ರೇಖಾ ಯತೀಶ್ ಬಿಜತ್ರೆ ಅವರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದರು. ತ್ಯಾಜ್ಯದಲ್ಲಿ ಹುಡುಕಾಡಿದ್ದ ವೇಳೆ ವಿದ್ಯುತ್ ಬಿಲ್ಲೊಂದು ಸಿಕ್ಕಿತ್ತು. ಆ ವಿದ್ಯುತ್ ಬಿಲ್ಲನ್ನು ಮೆಸ್ಕಾಂ ಎಂಜಿನಿಯರ್‌ಗೆ ಕಳುಹಿಸಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಈ ಬಗ್ಗೆ ಮಾಹಿತಿ ನೀಡುವಂತೆ ಕೇಳಿಕೊಂಡಿದ್ದರು. ಇದು ತ್ಯಾಜ್ಯ ಎಸೆದವರ ಪತ್ತೆಗೆ ಸಹಾಯಕವಾಯಿತು.

Share News

About BigTv News

Check Also

ಸತ್ತ ಜಾನುವಾರುಗಳ ಪರಿಹಾರದ ಹಣ ನುಂಗಿದ ಪಾಪಿಗಳು : ರಾಬಕೋವಿ ಹಾಲು ಒಕ್ಕೂಟದ ಮತ್ತಷ್ಟು ಅಕ್ರಮ ಬಯಲು!

ಬಳ್ಳಾರಿ: ರಾಬಕೋವಿ ಹಾಲು ಒಕ್ಕೂಟದಲ್ಲಿ ಮೃತಪಟ್ಟ ಜಾನುವಾರುಗಳ ವಿಮಾ ಪರಿಹಾರದ ಹಣ ದುರುಪಯೋಗಪಡಿಸಿಕೊಂಡು ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆಸಿರುವ ಗಂಭೀರ …

Leave a Reply

Your email address will not be published. Required fields are marked *